Home
ಸುದ್ದಿಜಾಲ

ಹೊಸ ವರ್ಷಕ್ಕೆ ಜಿಯೋ ಧಮಾಕಾ ಆಫರ್‌! Redmi ಫೋನ್‌ ಜೊತೆ 150GB 5G ಡೇಟಾ ಉಚಿತ.. ಯಾವ ಪ್ಲ್ಯಾನ್?

ಹೊಸ ಫೋನ್ ಖರೀದಿಸಿದಾಗ ಸಿಗುವ ಖುಷಿಯೇ ಬೇರೆ. ಅದೇ ಸಮಯದಲ್ಲಿ, ಹೊಸ ಸ್ಮಾರ್ಟ್‌ಫೋನ್‌ನೊಂದಿಗೆ ಉಚಿತ ಇಂಟರ್ನೆಟ್ ಸಹ ಸಿಕ್ಕರೆ, ಅದು ಕೇಕ್ ಜೊತೆ ಐಸ್‌ ಸಿಕ್ಕಂತೆ. ಹೌದು, ರೆಡ್ಮಿ ತನ್ನ ಅಭಿಮಾನಿಗಳಿಗೆ ಈ ರೀತಿಯ ಸಿಹಿಸುದ್ದಿಯೊಂದನ್ನು ನೀಡಿದೆ. ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾದ ರೆಡ್ಮಿ ನೋಟ್ 14 (Redmi Note 14) ಜೊತೆಗ 150GB ವರೆಗೆ ಉಚಿತ ಡೇಟಾ ಲಭ್ಯವಿದೆ. ಜಿಯೋ ಬಳಕೆದಾರರು ಈ ಆಫರ್‌ನ ಲಾಭ ಪಡೆಯಬಹುದು. ಬನ್ನಿ, ಈ ಆಫರ್‌ ಪಡೆಯುವುದು ಹೇಗೆ? ಅನ್ನೋದನ್ನು ತಿಳಿಯೋಣ.

ರೆಡ್ಮಿ ಕಂಪನಿಯು ರಿಲಯನ್ಸ್ ಜಿಯೋ (Reliance Jio) ಜೊತೆ ಪಾಲುದಾರಿಕೆ ಹೊಂದಿದೆ. ಜಿಯೋ (Jio) ಮತ್ತು ರೆಡ್ಮಿ (Redmi) ಒಪ್ಪಂದದ ಅಡಿಯಲ್ಲಿ, ಈ ಮೊಬೈಲ್ ಬಳಕೆದಾರರು ಪ್ರತಿ ತಿಂಗಳು 10GB 5G ಡೇಟಾವನ್ನು ಇಡೀ ವರ್ಷ ಪಡೆಯಬಹುದು. ಈ ಯೋಜನೆಯು ಡಿಸೆಂಬರ್ 13 ರಿಂದ ಪ್ರಾರಂಭವಾಗಿದೆ. ನೀವು ಮೇ 31, 2025 ರವರೆಗೆ ಇದರ ಪ್ರಯೋಜನ ಪಡೆಯಬಹುದು. ರೆಡ್ಮಿ ನೋಟ್ 14 ಫೋನಿನಲ್ಲಿ ಉಚಿತ ಜಿಯೋ 5G ಡೇಟಾ ಪಡೆಯಲು ಹೀಗೆ ಮಾಡಿ.

ಧಮಾಕಾ ಆಫರ್‌! Redmi ಫೋನ್‌ ಜೊತೆ 150GB 5G ಡೇಟಾ ಉಚಿತ.. ಯಾವ ಪ್ಲ್ಯಾನ್?

ರೆಡ್ಮಿ ನೋಟ್ 14 ಫೋನಿನಲ್ಲಿ ಉಚಿತ 5G ಡೇಟಾ

ಜಿಯೋ ಬಳಕೆದಾರರು ರೆಡ್ಮಿ ನೋಟ್ 14 ಫೋನಿನಲ್ಲಿ 150GB 5G ಡೇಟಾವನ್ನು ಉಚಿತವಾಗಿ ಪಡೆಯಬಹುದು. ಈ ಹೆಚ್ಚುವರಿ ಡೇಟಾವನ್ನು ವೋಚರ್ ರೂಪದಲ್ಲಿ ನೀಡಲಾಗುತ್ತದೆ. ಇದನ್ನು ಮೈಜಿಯೋ (MyJio) ಆಪ್‌ನಲ್ಲಿ ಕ್ರೆಡಿಟ್ ಮಾಡಲಾಗುತ್ತದೆ. ಈ 150GB ಡೇಟಾವನ್ನು ಒಟ್ಟು 15 ವೋಚರ್‌ಗಳ ರೂಪದಲ್ಲಿ ನೀಡಲಾಗುತ್ತದೆ. ಪ್ರತಿ ವೋಚರ್ 10GB ಡೇಟಾ ಲಭ್ಯವಿರುತ್ತದೆ. ಜಿಯೋ ಗ್ರಾಹಕರು ಪ್ರತಿ ತಿಂಗಳು 1 ವೋಚರ್ ರಿಡೀಮ್ ಮಾಡಿಕೊಳ್ಳಲು ಮತ್ತು ಹೆಚ್ಚುವರಿ 10GB ಡೇಟಾವನ್ನು ಉಚಿತವಾಗಿ ಬಳಸಬಹುದು.

ಉಚಿತ ಜಿಯೋ 5G ಡೇಟಾ ಪಡೆಯುವುದು ಹೇಗೆ?

ಕಂಪನಿಯು ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರ ಈ ಆಫರ್‌ ನೀಡುತ್ತಿದೆ. ರೆಡ್ಮಿ ನೋಟ್ 14 5G ಫೋನಿನಲ್ಲಿ 150GB ಉಚಿತ ಡೇಟಾವನ್ನು ನೀಡುತ್ತಿದೆ. ನಿಯಮಗಳ ಪ್ರಕಾರ, ಉಚಿತ ಇಂಟರ್ನೆಟ್ ಪಡೆಯಲು ಜಿಯೋ ಪ್ರೈಮ್ ಸದಸ್ಯರಾಗಿರಬೇಕಿದೆ. ಪ್ರತಿ ತಿಂಗಳು ಉಚಿತ 10GB 5G ಡೇಟಾವನ್ನು ಪಡೆಯಲು, ನಿಮ್ಮ ಜಿಯೋ ಸಂಖ್ಯೆಗೆ 349 ರೂ.ಗಳ ರೀಚಾರ್ಜ್ ಸಹ ಮಾಡಬೇಕಿದೆ.

ಮುಖ್ಯವಾಗಿ, ಉಚಿತ 150GB ಡೇಟಾವು ರೆಡ್ಮಿ ನೋಟ್ 14 ಫೋನಿನಲ್ಲಿ ಮಾತ್ರವಲ್ಲದೆ, ಈ ಸರಣಿಯ Redmi Note 14 Pro ಮತ್ತು Redmi Note 14 Pro+ 5G ಫೋನ್‌ಗಳಲ್ಲಿಯೂ ಲಭ್ಯವಿದೆ. ಈ ಫೋನ್‌ನಲ್ಲಿ ಬಳಸುವ ಮೊದಲ ಸಿಮ್ ಜಿಯೋ ಆಗಿರಬೇಕು. ಈ ಆಫರ್‌ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ರೆಡ್ಮಿ ನೋಟ್ 14 5G ಬೆಲೆ ತಿಳಿಯಲು ಮುಂದೆ ಓದಿ.

ಈ ಸುದ್ದಿ ಓದಿದ್ದೀರಾ?: ನ್ಯೂ ಇಯರ್ ಧಮಾಕಾ! ಬರೋಬ್ಬರಿ 24,000 ರೂ. ಇಳಿಕೆ.. ಕಡಿಮೆ ಬೆಲೆಗೆ ದುಬಾರಿ ಫೋನ್.. ಖರೀದಿ ಎಲ್ಲಿ?

ರೆಡ್ಮಿ ನೋಟ್ 14 5G ಬೆಲೆ

  • 6GB RAM + 128GB ಸ್ಟೋರೇಜ್ = 18,999 ರೂ.
  • 8GB RAM + 128GB ಸ್ಟೋರೇಜ್ = 19,999 ರೂ.
  • 8GB RAM + 256GB ಸ್ಟೋರೇಜ್ = 21,999 ರೂ.

ರೆಡ್ಮಿ ನೋಟ್ 14 5G ಫೋನ್ 6GB RAM ಮತ್ತು 8GB RAM ಹೊಂದಿದೆ. ಇದರ ಬೆಲೆ 18,999 ರೂ.ನಿಂದ ಪ್ರಾರಂಭವಾಗುತ್ತದೆ. ಇದರಲ್ಲಿ 6GB RAM + 128GB ಸ್ಟೋರೇಜ್ ಲಭ್ಯವಿದೆ. ಈ ಫೋನಿನ 8GB RAM ರೂಪಾಂತರವು 128GB ಸ್ಟೊರೇಜ್ ಹೊಂದಿದೆ. ಇದರ ಬೆಲೆ 18,999 ರೂ. ಮತ್ತು 256GB ಸ್ಟೋರೇಜ್ ಬೆಲೆ 21,999 ರೂ. ಆಗಿದೆ. ನೀವು, ಐಸಿಐಸಿಐ ಮತ್ತು ಹೆಚ್‌ಡಿಬಿ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಈ ಫೋನ್ ಕೊಂಡರೆ, 1000 ರೂ. ಡಿಸ್ಕೌಂಟ್ ಲಭ್ಯವಿದೆ.

ಧಮಾಕಾ ಆಫರ್‌! Redmi ಫೋನ್‌ ಜೊತೆ 150GB 5G ಡೇಟಾ ಉಚಿತ.. ಯಾವ ಪ್ಲ್ಯಾನ್?

ರೆಡ್ಮಿ ನೋಟ್‌ 14 5G ವೈಶಿಷ್ಟ್ಯಗಳು

6.67 ಇಂಚಿನ ಡಿಸ್ಪ್ಲೇ

ರೆಡ್ಮಿ ನೋಟ್‌ 14 5G ಮೊಬೈಲ್ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 2100 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಮತ್ತು 1080 × 2400 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಪಡೆದಿದೆ. ಹಾಗೆಯೇ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ.

ಮೀಡಿಯಾಟೆಕ್ ಪ್ರೊಸೆಸರ್

ರೆಡ್ಮಿ ನೋಟ್‌ 14 5G ಫೋನನ್ನು ಮೀಡಿಯಾಟೆಕ್ ಡೈಮೆನ್ಸಿಟಿ 7025 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ರೆಡ್ಮಿ ಫೋನ್ ಆಂಡ್ರಾಯ್ಡ್‌ 14 ಹೈಪರ್ ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ.

50 ಮೆಗಾಪಿಕ್ಸೆಲ್ ಕ್ಯಾಮೆರಾ

ರೆಡ್ಮಿ ನೋಟ್‌ 14 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಅದ್ಭುತ ಬ್ಯಾಟರಿ ಬ್ಯಾಕಪ್

ರೆಡ್ಮಿ ನೋಟ್‌ 14 5G ಮೊಬೈಲ್ 5110mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಈ ಫೋನ್‌ ಫ್ಯಾಂಟಮ್ ಪರ್ಪಲ್, ಟೈಟಾನ್ ಬ್ಲಾಕ್, ಮಿಸ್ಟಿಕ್ ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
Free Jio 5G Data Available in Redmi Note 14 series: know price and offer details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+