ನಿಮ್ಮ ಮಕ್ಕಳ ಆನ್‌ಲೈನ್ ಆಕ್ಟಿವಿಟಿ ಮೇಲೆ ಕಣ್ಣಿಡಲು ಈ ಅಪ್ಲಿಕೇಶನ್‌ಗಳು ಸೂಕ್ತ!

|

ಪ್ರಸ್ತುತ ದಿನಗಳಲ್ಲಿ ಕೊರೊನ ಕಾರಣದಿಂದಾಗಿ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಇದೇ ಕಾರಣಕ್ಕೆ ಚಿಕ್ಕಮಕ್ಕಳಿಂದ ಹಿಡಿದು ಯುವಜನತೆಯ ವರೆಗೂ ಹೆಚ್ಚಿನ ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌, ಇಲ್ಲವೇ ಲ್ಯಾಪ್‌ಟಾಪ್‌ಗಳನ್ನು ಬಳಸುತ್ತಿದ್ದಾರೆ. ಆನ್‌ಲೈನ್‌ ತರಗತಿಗಳ ಮೂಲಕ ಮನೆಯಲ್ಲಿಯೇ ಇದ್ದು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆದರೆ ಮುಂದುವರೆದ ಟೆಕ್ನಾಲಜಿಯ ಪರಿಣಾಮ ಆನ್‌ಲೈನ್‌ ಕ್ಲಾಸ್‌ ಜೊತೆಗೆ ಚಿಕ್ಕಮಕ್ಕಳು ಸ್ಮಾರ್ಟ್‌ಫೋನ್‌ ಬಳಕೆಗೆ ಅಡಿಕ್ಟ್‌ ಆಗುತ್ತಿದ್ದಾರೆ.

ಮೊಬೈಲ್‌

ಹೌದು, ಆನ್‌ಲೈನ್‌ ತರಗತಿಗಳ ಕಾರಣಕ್ಕಾಗಿ ಮಕ್ಕಳು ಕೂಡ ಮೊಬೈಲ್‌, ಲ್ಯಾಪ್‌ಟಾಪ್‌ಗಳನ್ನು ಬಳಕೆಮಾಡುತ್ತಿದ್ದಾರೆ. ಆದರೆ ತಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ನಲ್ಲಿ ಏನು ಮಾಡುತ್ತಿದ್ದಾರೆ. ಆನ್‌ಲೈನ್‌ ತರಗತಿ ನಂತರ ಏನನ್ನು ವೀಕ್ಷಿಸುತ್ತಾರೆ. ಎನ್ನುವುದರ ಬಗ್ಗೆ ಗಮನಹರಿಸುವುದಕ್ಕೆ ಹೆಚ್ಚಿನ ಜನರಿಗೆ ಸಮಯವೇ ಸಿಗುವುದಿಲ್ಲ. ಆದರೂ ಚಿಂತೆಯಿಲ್ಲ. ನೀವು ಗಮನಿಸದೇ ಹೋದರೂ ನಿಮ್ಮ ಮಕ್ಕಳ ಸ್ಮಾರ್ಟ್‌ಫೋನ್‌ ಆಕ್ಟಿವಿಟಿ ಮೇಲೆ ಕಂಟ್ರೋಲ್‌ ಅನ್ನು ಹೊಂದುವುದಕ್ಕೆ ಹಲವು ಅವಕಾಶಗಳಿವೆ. ಅವು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಂಡೋಸ್ 10

ವಿಂಡೋಸ್ 10

ನಿಮ್ಮ ಮಕ್ಕಳು ವಿಂಡೋಸ್‌ 10 ಅನ್ನು ಬಳಸುತ್ತಿದ್ದರೆ. ಇದರಲ್ಲಿ ನಿಮ್ಮ ಮಕ್ಕಳ ಮೇಲೆ ಪೇರೆಂಟ್ ಕಂಟ್ರೋಲ್‌ ಅನ್ನು ಆನ್ ಮಾಡಲು, ವಿಂಡೋಸ್ ಸರ್ಚ್‌ ಬಾರ್‌ಗೆ ಹೋಗಿ ಮತ್ತು ‘Family Option' ಎಂದು ಟೈಪ್ ಮಾಡಿ. ನಂತರ ತೆರೆಯುವ ವಿಂಡೋದಲ್ಲಿ, ನಿಮ್ಮ ಮಗುವಿಗೆ ಖಾತೆಯನ್ನು ಕ್ರಿಯೆಟ್‌ ಮಾಡಲು ‘View family settings' ಗೆ ನ್ಯಾವಿಗೇಟ್ ಮಾಡಿ. ನಿಮ್ಮ ಫ್ಯಾಮಿಲಿ ಗ್ರೂಪಿಗೆ ಆ ಖಾತೆಯನ್ನು ಸೇರಿಸಿದ ನಂತರ, ನೀವು ಪೇರೆಂಟ್ ಕಂಟ್ರೋಲ್‌ ಅನ್ನು ಕಾನ್ಫಿಗರ್ ಮಾಡಬಹುದು.ಇದರ ಮೂಲಕ ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್‌ನಲ್ಲಿ ವೆಬ್‌ನಲ್ಲಿ ಸರ್ಫ್ ಮಾಡುವಾಗ ನಿಮ್ಮ ಮಕ್ಕಳು ಯಾವ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು ಎಂಬುದನ್ನು ನೀವು ಆಯ್ಕೆ ಮಾಡಬಹುದು. ನಿಮ್ಮ ಮಕ್ಕಳು ಪಿಸಿಯನ್ನು ಯಾವಾಗ ಮತ್ತು ಎಷ್ಟು ಸಮಯವನ್ನು ಬಳಸಬಹುದು ಎಂಬುದನ್ನು ನೀವು ಸೆಟ್‌ ಮಾಡಬಹುದು.

ಮ್ಯಾಕ್ ಓಎಸ್

ಮ್ಯಾಕ್ ಓಎಸ್

ಮ್ಯಾಕ್‌ನಲ್ಲಿ, ನಿಮ್ಮ ಮಕ್ಕಳ ಮೇಲೆ ಪೇರೆಂಟ್ ಕಂಟ್ರೋಲ್‌ ಹೊಂದುವುದಕ್ಕೆ ಮ್ಯಾಕ್‌ ನಲ್ಲಿ ಸೆಟ್ಟಿಂಗ್ಸ್‌ಗಳಿಗೆ ಹೋಗಿ ಮತ್ತು 'ಸ್ಕ್ರೀನ್ ಟೈಮ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ, 'ವಿಷಯ ಮತ್ತು ಗೌಪ್ಯತೆ' ಆಯ್ಕೆಮಾಡಿ ಮತ್ತು ಆ ಆಯ್ಕೆಯನ್ನು ಆನ್ ಮಾಡಿ. ಇಲ್ಲಿಂದ, ನೀವು 'ವಯಸ್ಕರ ವೆಬ್‌ಸೈಟ್‌ಗಳನ್ನು ಮಿತಿಗೊಳಿಸಬಹುದು', ಅಥವಾ 'ಅನುಮತಿಸಲಾದ ವೆಬ್‌ಸೈಟ್‌ಗಳನ್ನು ಮಾತ್ರ' ಪ್ರದರ್ಶಿಸಲು ಕಂಪ್ಯೂಟರ್ ಅನ್ನು ಸೆಟ್‌ ಮಾಡಬಹುದು.

ಓಪನ್ ಡಿಎನ್ಎಸ್ ಫ್ಯಾಮಿಲಿಶೀಲ್ಡ್

ಓಪನ್ ಡಿಎನ್ಎಸ್ ಫ್ಯಾಮಿಲಿಶೀಲ್ಡ್

ಇದರಲ್ಲಿ ಅಶ್ಲೀಲತೆ ಪ್ರದರ್ಶಿಸುವ ವೆಬ್‌ಸೈಟ್‌ಗಳನ್ನ ಬಂದ್‌ ಮಾಡಬಹುದು. ಫಿಶಿಂಗ್ ಮತ್ತು ಮಾಲ್ವೇರ್ ವಿಭಾಗಗಳ ಅಡಿಯಲ್ಲಿ ಬರುವ ಇತರ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಈ ಫ್ರೀ ಡಿವೈಸ್‌ ಅನ್ನು ಮೊದಲೇ ಕಾನ್ಫಿಗರ್ ಮಾಡಲಾಗಿದೆ. ಇದು URL ಗಳ ಪಟ್ಟಿಯನ್ನು 24/7 ನವೀಕರಿಸಲಾಗಿರುವುದರಿಂದ, ನಿಮ್ಮ ರಕ್ಷಣೆ ಯಾವಾಗಲೂ ನವೀಕೃತವಾಗಿರುತ್ತದೆ. ನಿಮ್ಮ ಮನೆಯ ಸೆಟಪ್ ಅನ್ನು ಅವಲಂಬಿಸಿ, ಓಪನ್ ಡಿಎನ್ಎಸ್ ವೆಬ್‌ಸೈಟ್ ನಿಮ್ಮ ಹೋಮ್ ರೂಟರ್‌ಗಳು, ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಫ್ಯಾಮಿಲಿಶೀಲ್ಡ್ ಅನ್ನು ಸೆಟ್‌ ಮಾಡಬಹುದು.

ಕಿಡ್‌ಲಾಗರ್

ಕಿಡ್‌ಲಾಗರ್

ನಿಮ್ಮ ಮಕ್ಕಳು ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಕಣ್ಣಿಡಲು ಕಿಡ್‌ಲೋಗರ್ ಅಪ್ಲಿಕೇಶನ್‌ ಉತ್ತಮ ಆಯ್ಕೆಯಾಗಿದೆ. ಇದು ವಿಂಡೋಸ್, ಮ್ಯಾಕ್ ಮತ್ತು ಆಂಡ್ರಾಯ್ಡ್‌ನೊಂದಿಗೆ ಕೆಲಸ ಮಾಡುತ್ತದೆ. ನಿಮ್ಮ ಮಗು ಪಿಸಿಯಲ್ಲಿ ಎಷ್ಟು ಸಮಯ ಕೆಲಸ ಮಾಡುತ್ತಿತ್ತು ಎಂಬುದನ್ನು ಇದು ನಿಮಗೆ ತಿಳಿಸುತ್ತದೆ. ಆಂಡ್ರಾಯ್ಡ್, ವಿಂಡೋಸ್ ಮತ್ತು ಮ್ಯಾಕ್‌ನಲ್ಲಿ ಯಾವ ಅಪ್ಲಿಕೇಶನ್‌ಗಳನ್ನು ಬಳಸಲಾಗಿದೆ ಮತ್ತು ಯಾವ ವೆಬ್‌ಸೈಟ್‌ಗಳನ್ನು ಭೇಟಿ ಮಾಡಲಾಗಿದೆ ಎಂಬ ವಿವರವನ್ನು ಫೋಷಕರು ಪಡೆದುಕೊಳ್ಳಬಹುದಾಗಿದೆ.

Qustodio

Qustodio

Qustodio ಎಂಬುದು ಆಂಡ್ರಾಯ್ಡ್, ಐಒಎಸ್, ವಿಂಡೋಸ್, ಮ್ಯಾಕ್ ಮತ್ತು Chromebook ಗಾಗಿ ಲಭ್ಯವಿರುವ ಪ್ರಬಲ ಪೋಷಕರ ನಿಯಂತ್ರಣ ಅಪ್ಲಿಕೇಶನ್ ಆಗಿದೆ. ಇದರ ವೆಬ್‌ಸೈಟ್‌ನಲ್ಲಿ ಉಚಿತ ಖಾತೆಯನ್ನು ರಚಿಸಿ, ಮತ್ತು ನೀವು ಒಂದೇ ಡಿವೈಸ್‌ ಅನ್ನು ಉಚಿತವಾಗಿ ಶಾಶ್ವತವಾಗಿ ರಕ್ಷಿಸಬಹುದು. ವಿಂಡೋಸ್ 10 ಮತ್ತು ಮ್ಯಾಕ್‌ನಲ್ಲಿ, ವಯಸ್ಕ ವೆಬ್‌ಸೈಟ್‌ಗಳು, ಆಟಗಳು ಮತ್ತು ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ನೀವು ಸ್ಮಾರ್ಟ್ ವೆಬ್ ಫಿಲ್ಟರ್‌ಗಳನ್ನು ಸಹ ಇದರಲ್ಲಿ ಪಡೆದುಕೊಳ್ಳಬಹುದಾಗಿದೆ.

Best Mobiles in India

Read more about:
English summary
Free online tools to monitor children and control their online activity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X