ಸ್ಥಗಿತವಾಗಲಿದೆ ಉಚಿತ ಕರೆ, ಡೇಟಾ..! ಟ್ರಾಯ್‌ನಿಂದ ಸಮಾಲೋಚನೆ..!

By Gizbot Bureau
|

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಇತರೆ ನೆಟ್‌ವರ್ಕ್‌ಗಳಿಗೆ ಮಾಡಿದ ಕರೆಗಳಿಗಾಗಿ ಮೊಬೈಲ್ ಫೋನ್ ಕಂಪನಿಗಳು ಪಾವತಿಸಬೇಕಾದ ಶುಲ್ಕವನ್ನು ಒಂದು ವರ್ಷ ವಿಳಂಬಗೊಳಿಸಿದೆ. ಐಯುಸಿ ಎಂದು ಕರೆಯಲ್ಪಡುವ ಈ ಶುಲ್ಕಗಳು ಜನವರಿ 1, 2020ರಿಂದ ಜಾರಿಯಾಗಬೇಕಿತ್ತು. ಮೊಬೈಲ್ ಕರೆಗಳು ಮತ್ತು ಡೇಟಾಗೆ ಕನಿಷ್ಠ ಅಥವಾ ಮೂಲ ಬೆಲೆಯನ್ನು ಸೂಚಿಸಲು ಟೆಲಿಕಾಂ ನಿಯಂತ್ರಕ ಮಾತುಕತೆ ಪ್ರಾರಂಭಿಸಿದ್ದು, ಈ ಕ್ರಮದಿಂದ ಭಾರತದಲ್ಲಿನ ಮೊಬೈಲ್ ಬಳಕೆದಾರರಿಗೆ ಉಚಿತ ಕರೆ ಯುಗ ಅಂತ್ಯವಾಗುವ ಸಾಧ್ಯತೆಯಿದೆ. ಟ್ರಾಯ್‌ನ ಹೊಸ ನಿರ್ದೇಶನಗಳ ಒಂದಿಷ್ಟು ಮಾಹಿತಿ ಇಲ್ಲಿದೆ.

ಏರ್‌ಟೆಲ್, ವೊಡಾಫೋನ್-ಐಡಿಯಾಗೆ ಒಳ್ಳೆಯ ಸುದ್ದಿ

ಏರ್‌ಟೆಲ್, ವೊಡಾಫೋನ್-ಐಡಿಯಾಗೆ ಒಳ್ಳೆಯ ಸುದ್ದಿ

ನಿಮಿಷಕ್ಕೆ 6 ಪೈಸೆ ಇಂಟರ್ಕನೆಕ್ಟ್ ಯೂಸ್ ಚಾರ್ಜ್ (ಐಯುಸಿ) ಜಾರಿಯ ವಿಸ್ತರಣೆಗೆ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಎರಡೂ ಪ್ರಬಲ ಲಾಬಿ ನಡೆಸುತ್ತಿವೆ. ವಿಶ್ಲೇಷಕರ ಪ್ರಕಾರ, ವೊಡಾಫೋನ್-ಐಡಿಯಾಗೆ ಇದರಿಂದ ಹೆಚ್ಚಿನ ಲಾಭವಾಗಲಿದೆ.

ರಿಲಾಯನ್ಸ್‌ ಜಿಯೋಗೆ ಕೆಟ್ಟ ಸುದ್ದಿ

ರಿಲಾಯನ್ಸ್‌ ಜಿಯೋಗೆ ಕೆಟ್ಟ ಸುದ್ದಿ

ಐಯುಸಿ ಜಾರಿಯ ವಿಸ್ತರಣೆಯಿಂದ ರಿಲಾಯನ್ಸ್ ಜಿಯೋಗೆ ತಾತ್ಕಾಲಿಕ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಐಯುಸಿಯ ಅತಿದೊಡ್ಡ ಪಾವತಿದಾರ..?

ಐಯುಸಿಯ ಅತಿದೊಡ್ಡ ಪಾವತಿದಾರ..?

ರಿಲಾಯನ್ಸ್‌ ಜಿಯೋ ಐಯುಸಿಯ ಅತಿದೊಡ್ಡ ಪಾವತಿದಾರ ಕಂಪನಿಯಾಗಿದೆ. ಪ್ರಸ್ತುತ, ರಿಲಾಯನ್ಸ್ ಜಿಯೋ ಕಂಪನಿ ಏರ್‌ಟೆಲ್ ಮತ್ತು ವೊಡಾಫೋನ್ - ಐಡಿಯಾ ಎರಡಕ್ಕೂ ಐಯುಸಿಯ ನಿವ್ವಳ ಪಾವತಿಸುತ್ತಿದೆ.

ಐಯುಸಿ ಪಾವತಿಸಬೇಕು

ಐಯುಸಿ ಪಾವತಿಸಬೇಕು

ಟೆಲಿಕಾಂ ಆಪರೇಟರ್‌ಗಳು ತಮ್ಮ ಪ್ರತಿಸ್ಪರ್ಧಿಗಳ ನೆಟ್‌ವರ್ಕ್‌ಗೆ ಹೊರಹೋಗುವ ಪ್ರತಿ ಕರೆಗೆ ನಿಮಿಷಕ್ಕೆ 6 ಪೈಸೆ ಪಾವತಿಸುತ್ತಾರೆ. ಐಯುಸಿ ವಿಸ್ತರಣೆ ಎಂದರೆ, ಪಾವತಿಯನ್ನು ಮುಂದುವರೆಸುವುದಾಗಿದೆ.

ಡಿಸೆಂಬರ್ 31, 2020 ರವರೆಗೆ ಮಾನ್ಯ

ಡಿಸೆಂಬರ್ 31, 2020 ರವರೆಗೆ ಮಾನ್ಯ

ಟ್ರಾಯ್ ನಿರ್ಧಾರದ ಪ್ರಕಾರ, ಐಯುಸಿ ಶುಲ್ಕಗಳು 2020ರ ಡಿಸೆಂಬರ್ 31 ರವರೆಗೆ ಮಾನ್ಯವಾಗಿರುತ್ತವೆ. ಐಯುಸಿ ಶುಲ್ಕಗಳನ್ನು ಜನವರಿ 1, 2021 ರಿಂದ ಶೂನ್ಯವಾಗಿಸಲು ಉದ್ದೇಶಿಸಲಾಗಿದೆ.

ಐಯುಸಿ ವಿಸ್ತರಣೆ ಎಂದರೆ ಏನು..?

ಐಯುಸಿ ವಿಸ್ತರಣೆ ಎಂದರೆ ಏನು..?

ಉಚಿತ ಕರೆಗಳನ್ನು ಒದಗಿಸುವ ಟೆಲಿಕಾಂ ಆಪರೇಟರ್ ನೆಟ್‌ವರ್ಕ್‌ನ ಹೊರ ಹೋಗುವ ಪ್ರತಿ ಕರೆಗೆ ನಿಮಿಷಕ್ಕೆ 6 ಪೈಸೆ ಭಾರ ಹೊರಬೇಕಾಗುತ್ತದೆ. ಇದನ್ನು ಚಂದಾದಾರರಿಂದ ಮರುಪಡೆಯಲು ಕಂಪನಿಯು ಮೊಬೈಲ್ ಕರೆ ಯೋಜನೆಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.

ಮೂಲ ಬೆಲೆ ನಿಗದಿ..?

ಮೂಲ ಬೆಲೆ ನಿಗದಿ..?

ಭಾರ್ತಿ ಏರ್‌ಟೆಲ್, ವೊಡಾಫೋನ್-ಐಡಿಯಾ ಮತ್ತು ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ಗಳಲ್ಲಿ ಕರೆ ದರಗಳು ಮತ್ತು ಡೇಟಾಗೆ ಕನಿಷ್ಠ ಮೂಲ ಬೆಲೆಗಳನ್ನು ನಿಗದಿಪಡಿಸಲು ಟ್ರಾಯ್‌ ಬಯಸುತ್ತಿದೆ. ಪ್ರಸ್ತುತ, ಟೆಲಿಕಾಂ ಕರೆ ಮತ್ತು ಡೇಟಾ ದರಗಳನ್ನು ನಿಯಂತ್ರಿಸಲಾಗುವುದಿಲ್ಲ. ಆದರೂ, ಟೆಲಿಕಾಂ ವಲಯದ ಆರೋಗ್ಯ ಸುಧಾರಿಸಲು ಕರೆಗಳು ಮತ್ತು ಮೊಬೈಲ್ ಇಂಟರ್‌ನೆಟ್‌ಗೆ ಕನಿಷ್ಠ ದರ ನಿಗದಿಪಡಿಸಲು ಖಾಸಗಿ ಟೆಲಿಕಾಂಗಳು ಸರ್ವಾನುಮತದಿಂದ ಟ್ರಾಯ್‌ನ್ನು ಸಂಪರ್ಕಿಸಿವೆ.

ದರ ಹೆಚ್ಚಾಗಬಹುದು..!

ದರ ಹೆಚ್ಚಾಗಬಹುದು..!

ಮೊಬೈಲ್ ಕರೆಗಳು ಮತ್ತು ಡೇಟಾಗೆ ಕನಿಷ್ಠ ಬೆಲೆ ನಿಗದಿಪಡಿಸುವುದರಿಂದ ಸುಂಕದ ಹೆಚ್ಚಳಕ್ಕೆ ಕಾರಣವಾಗಬಹುದು, ಏಕೆಂದರೆ ಉದ್ಯಮವು ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ (ಎಆರ್‌ಪಿಯು) ತಿಂಗಳಿಗೆ 300 ರೂ.ಗಳನ್ನು ತಲುಪಬೇಕೆಂಬ ಗುರಿ ಹೊಂದಿದೆ, ಕಳೆದ ಎರಡು ವರ್ಷಗಳಿಂದ ಇದು 125 ರೂ. ಇದೆ.

Best Mobiles in India

Read more about:
English summary
Free Voice Calls For Mobile Users In India Are Done And Dusted

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X