Subscribe to Gizbot

"ಫ್ರೀಡಂ 251" ಗೆ ಎದುರಾಳಿಯಾಗಿ "ಫ್ರೀಡಂ 651": ವಂಚನೆ

Written By:

ಫೇಕ್‌ ನ್ಯೂಸ್ ಅನ್ನೋದು ಎಷ್ಟು ಬೇಗ ಜನರನ್ನು ತಲುಪುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ "ಫ್ರೀಡಂ 651" ಸ್ಮಾರ್ಟ್‌ಫೋನ್‌ ಈಗ ಲಾಂಚ್‌ ಆಗುತ್ತಿದೆ. ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಇದು "ಫ್ರೀಡಂ 251" ಸ್ಮಾರ್ಟ್‌ಫೋನ್‌ ಅನ್ನು ನೇರವಾಗಿ ಗೇಲಿ ಮಾಡುತ್ತಿದೆ. ಬೇಕಾದ್ರೆ "ಫ್ರೀಡಂ 651" ಸ್ಮಾರ್ಟ್‌ಫೋನ್‌ ಬಗ್ಗೆ ನೀವೇ ಓದಿ ನೋಡಿ.

ಕೋಪ ಅಂತು ಖಂಡಿತ ಬರಲ್ಲಾ. ನಗುವನ್ನು ತಡೆಯೋಕೆ ಆಗಲ್ಲಾ. ಯಾಕಂದ್ರೆ ಫ್ರೀಡಂ 251 ಯಾವ ರೀತಿ ಜನ್ನ ಮನ್ನಣೆ ಪಡೆಯಿತೋ ಅದೇ ರೀತಿಯಲ್ಲಿ ಫ್ರೀಡಂ 651 ಜನರ ಕೈ ಸೇರುವ ಹುಸಿ ಭರವಸೆ ನೀಡುತ್ತಿದೆ. ಫೋನ್‌ ಡ್ರೋನ್‌ ಮೂಲಕ ನಿಮ್ಮ ಕೈ ಸೇರಲಿದೆಯಂತೆ.. ಅದು ಹೇಗೆ ಎಂದು ಒಮ್ಮೆ ಲೇಖನ ಓದಿ ನೋಡಿ. ಆದ್ರೆ ನೆನಪಿರಲಿ ಇದು ಫ್ರೀಡಂ 251 ಸ್ಮಾರ್ಟ್‌ಫೋನ್‌ ಅನ್ನು ಗೇಲಿ ಮಾಡುತ್ತಿರುವ ಫ್ರೀಡಂ 651. ವಂಚನೆಗೆ ಮರುಳಾಗದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಫ್ರೀಡಂ 651ಫ್ರೀಡಂ 251 ಸ್ಮಾರ್ಟ್‌ಫೋನ್‌ ಬರುತ್ತೋ ಇಲ್ವೋ ಗೊತ್ತಿಲ್ಲಾ ಅಂತಾರೆ ಜನ. ಯಾಕಂದ್ರೆ ಸಂಶಯಗಳ ನಡುವೆ ಫ್ರೀಡಂ 251 ಇದೆ. ಆದರೆ ಈಗ ಹೊಸದಾಗಿ ಫ್ರೀಡಂ 651 ಸ್ಮಾರ್ಟ್‌ಫೋನ್‌ ಬೆಲೆ ರೂ.651 ಕ್ಕೆ ಲಾಂಚ್‌ ಆಗುತ್ತಿದ್ದು, ಡ್ರೋನ್‌ ಮೂಲಕ ಎಲ್ಲರ ಕೈ ಸೇರಲಿದೆ ಎಂದು ಹೇಳುತ್ತಿದೆ.

ಫ್ರೀಡಂ 651

ಫ್ರೀಡಂ 251 ಸ್ಮಾರ್ಟ್‌ಫೋನ್‌ ಬರುತ್ತೋ ಇಲ್ವೋ ಗೊತ್ತಿಲ್ಲಾ ಅಂತಾರೆ ಜನ. ಯಾಕಂದ್ರೆ ಸಂಶಯಗಳ ನಡುವೆ ಫ್ರೀಡಂ 251 ಇದೆ. ಆದರೆ ಈಗ ಹೊಸದಾಗಿ ಫ್ರೀಡಂ 651 ಸ್ಮಾರ್ಟ್‌ಫೋನ್‌ ಬೆಲೆ ರೂ.651 ಕ್ಕೆ ಲಾಂಚ್‌ ಆಗುತ್ತಿದ್ದು, ಡ್ರೋನ್‌ ಮೂಲಕ ಎಲ್ಲರ ಕೈ ಸೇರಲಿದೆ ಎಂದು ಹೇಳುತ್ತಿದೆ.

http://www.freedom651.com/

ಈಗಲೇ ಖರೀದಿ ಬೇಡ

ಈಗಲೇ ಖರೀದಿ ಬೇಡ

ಅಂದಹಾಗೆ ಫ್ರೀಡಂ 651 ಸ್ಮಾರ್ಟ್‌ಫೋನ್‌ ಅನ್ನು ಈಗಲೇ ಖರೀದಿ ಮಾಡಬಾರದಂತೆ, ಯಾಕಂದ್ರೆ ಫೋನ್‌ ಡ್ರೋನ್‌ ಮೂಲಕ ತಲುಪುವುದು 2026 ರ ಜೂನ್‌ 30 ಕ್ಕೆ ಆದ್ದರಿಂದ ಈಗಲೇ ಖರೀದಿ ಮಾಡಬೇಡಿ ಎಂದು ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.

ಮಂಗಳ ಗ್ರಹದಿಂದ ವಿವಿಧ ಭಾಗಗಳ ಆಮದು

ಮಂಗಳ ಗ್ರಹದಿಂದ ವಿವಿಧ ಭಾಗಗಳ ಆಮದು

ಫ್ರೀಡಂ 651 ಸ್ಮಾರ್ಟ್‌ಫೋನ್‌ ತಯಾರಿಕೆಗೆ ಫೈಯರ್‌ವರ್ಕ್ಸ್‌ ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಿದ್ದು, ಫೋನ್‌ ತಯಾರಿಕೆಗೆ ಮಂಗಳ ಗ್ರಹದಿಂದ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದೆ. ದಯವಿಟ್ಟು ನಂಬಬೇಡಿ ಅಂತ ಹೇಳಲೇ ಬೇಕಾಗಿಲ್ಲಾ.

ಫ್ರೀಡಂ ಟು ಫ್ಲಾಂಟ್‌

ಫ್ರೀಡಂ ಟು ಫ್ಲಾಂಟ್‌

ಫ್ರೀಡಂ 651 ಸ್ಮಾರ್ಟ್‌ಫೋನ್‌ ಸಂಪೂರ್ಣವಾಗಿ ಮಂಗಳ ಗ್ರಹದಲ್ಲಿನ ವಸ್ತುಗಳಿಂದ ತಯಾರಿಸಿದ ಫೋನ್‌. ಹೀಗೆ ಹೇಳಲು ಕಾರಣವಿದೆ. 2025ಕ್ಕೆ ಹೇಗಿದ್ರು ಮಾನವರು ಮಂಗಳ ಗ್ರಹಕ್ಕೆ ಹೋಗಿ ಜೀವಿಸುವ ಕನಸನ್ನು ಕಾಣುತ್ತಿದ್ದಾರೆ. ಅಲ್ಲಿ ಕಡಿಮೆ ಬೆಲೆಯಲ್ಲಿ ಫ್ರೀಡಂ 651 ಸ್ಮಾರ್ಟ್‌ಫೋನ್‌ ಅನ್ನು ಕೊಂಡು ಬಳಕೆ ಮಾಡಬಹುದಾಗಿದೆ ಎಂದು ವೆಬ್‌ಸೈಟ್‌ ಹೇಳಿದೆ.

ಫ್ರೀಡಂ ಟು ಶೂಟ್‌

ಫ್ರೀಡಂ ಟು ಶೂಟ್‌

ಫ್ರೀಡಂ 651 ಸ್ಮಾರ್ಟ್‌ಫೋನ್‌ ಆಕ್ಚುಲಿ ಟಚ್‌ಲೆಸ್‌ ಟೆಕ್ನಾಲಜಿ ಆಗಿದೆ. ಆದ್ರೂ ಸಹ 3 MP ಮುಂಭಾಗ ಕ್ಯಾಮೆರಾ ಮತ್ತು 3.2 MP ಹಿಂಭಾಗ ಕ್ಯಾಮೆರಾ.

ಯಾವುದೇ ಚಾರ್ಜರ್‌ ಬಳಸಿ

ಯಾವುದೇ ಚಾರ್ಜರ್‌ ಬಳಸಿ

ಫ್ರೀಡಂ 651 ಸ್ಮಾರ್ಟ್‌ಫೋನ್‌ಗೆ ನೀವು ಸ್ವತಂತ್ರವಾಗಿ ಯಾವುದೇ ಚಾರ್ಜರ್‌ ಬಳಸಬಹುದು. ಇದನ್ನು ಬಿಟ್ಟು ಇನ್ಯಾವುದೇ ಸ್ಮಾರ್ಟ್‌ಫೋನ್‌ ನಿಮಗೆ ಇಂತಹ ಅವಕಾಶ ನೀಡುವುದಿಲ್ಲ.

ಅನ್ವೇಷಣೆ

ಅನ್ವೇಷಣೆ

ಮಂಗಳ ಗ್ರಹಕ್ಕೆ ಹೋಗಲು ಮತ್ತು ಸ್ಮಾರ್ಟ್‌ಫೋನ್‌ ತಲುಪಲು ಇನ್ನು ಸಮಯವಿರುವುದರಿಂದ ನೀವು ಎಲ್ಲಾ ಕಡೆ ಅನ್ವೇಷಣೆ ಮಾಡಿ ಎಂದು ಹೇಳಲಾಗಿದೆ.

 ಡಿಸ್‌ ಕನೆಕ್ಟ್‌ಗೆ ಉತ್ತಮ ಅವಕಾಶ

ಡಿಸ್‌ ಕನೆಕ್ಟ್‌ಗೆ ಉತ್ತಮ ಅವಕಾಶ

ಎಲ್ಲಾ ಫೋನ್‌ಗಳಲ್ಲೂ ಕನೆಕ್ಟ್‌ ಮಾಡಲು ಅವಕಾಶ ಇರುತ್ತೇ. ಆದರೆ ಈ ಫೋನ್‌ನಲ್ಲಿ ನೀವು ಇತರರನ್ನು ಡಿಸ್‌ಕನೆಕ್ಟ್‌ ಮಾಡಲು 27 ಭಾಷೆಯ ವಾಯ್ಸ್‌ ಕರೆಯ ಫೀಚರ್‌ ಇದೆಯಂತೆ.

 ಸರ್ವೀಸ್‌ ಸೆಂಟರ್‌

ಸರ್ವೀಸ್‌ ಸೆಂಟರ್‌

ಹೇಗಿದ್ರು ಮಂಗಳ ಗ್ರಹಕ್ಕೆ ಹೋಗೋ ಕನಸು ಹಲವು ಜನರಿಗೆ ಇದೆ. ಅವರಿಗೆ ಮಾತ್ರ ಸರ್ವೀಸ್‌ ಸೆಂಟರ್ ಬಹುಬೇಗ ಸಿಗುತ್ತೆ. ಯಾಕಂದ್ರೆ ಸರ್ವೀಸ್‌ ಸೆಂಟರ್‌ ಮಂಗಳ ಗ್ರಹದಲ್ಲಿ ಮಾತ್ರವಂತೆ.

ಫ್ರೀಡಂ 251

ಫ್ರೀಡಂ 251

4 ಕಾರಣಗಳು: Freedom 251 ದೊಡ್ಡ ಮೋಸ ಆಗಿದೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Freedom 251 gets tough competition, Rs 651 phone to launch soon. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot