ಫ್ರೀಡಂ 251 ಬುಕ್‌ ಮಾಡಿದವರ ಹಣ ವಾಪಸ್‌: ಮುಂದೇನು?

By Suneel
|

ರಿಂಗಿಂಗ್‌ ಬೆಲ್ಸ್‌ ಕಂಪನಿಯ ಫ್ರೀಡಂ 251 ಸ್ಮಾರ್ಟ್‌ಫೋನ್‌ ಬಗೆಗೆ ಇಂದು ಸಹ ಒಂದಲ್ಲಾ ಒಂದು ರೀತಿಯ ವಿವಾದಾತ್ಮಕ ವಿಷಯ ಹರಿದಾಡುತ್ತಲೇ ಇದೆ. ಅಂತೆಯೇ ಇಂದು ರಿಂಗಿಂಗ್‌ ಬೆಲ್ಸ್‌ ಕಂಪನಿಯ ಫ್ರೀಡಂ 251 ಸ್ಮಾರ್ಟ್‌ಫೋನ್‌ ಮೊದಲ ಹಂತದಲ್ಲಿ 30 ಸಾವಿರ ಫೋನ್‌ಗಳಿಗೆ ಬುಕಿಂಗ್‌ ಸ್ವೀಕಾರ ಮಾಡಿ ಅದಕ್ಕೆ ಪಡೆದಿದ್ದ ಹಣವನ್ನು ವಾಪಾಸು ಮಾಡಲಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ರಿಂಗಿಂಗ್ ಬೆಲ್ಸ್ ಹಣ ಹಿಂದಿರುಗಿಸಲು ಕಾರಣವಾದರೂ ಏನು ? ಏಕೆ? ಎಂಬಿತ್ಯಾದಿ ವಿಶೇಷ ಮಾಹಿತಿಗಳನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಫ್ರೀಡಂ 251

ಫ್ರೀಡಂ 251

ನೋಯ್ಡಾ ಕಂಪನಿ ಮೂಲದ ವ್ಯವಸ್ಥಾಪಕ ನಿರ್ದೇಶಕರಾದ ಮೋಹಿತ್‌ ಗೋಯೆಲ್‌ ಫ್ರೀಡಂ 251 ಸ್ಮಾರ್ಟ್‌ಫೋನ್‌ ಬುಕ್‌‌ ಮಾಡಿರುವ 30 ಸಾವಿರ ಗ್ರಾಹಕರ ಹಣವನ್ನು ಹಿಂದಿರುಗಿಸಿ ಸ್ಮಾರ್ಟ್‌ಫೋನ್‌ ನೀಡಿದಾಗ ಹಣ ಪಡೆಯಲಿದೆ ಎಂದು ಹೇಳಿದ್ದಾರೆ ಎಂದು ABP ನ್ಯೂಸ್‌ ವಾಹಿನಿಯ ಪ್ರಕಾರ ವರದಿ ಹೊರಬಿದ್ದಿದೆ.

ಫ್ರೀಡಂ 251 : ಮುಂದೇನು?

ಫ್ರೀಡಂ 251 : ಮುಂದೇನು?

ಕಂಪನಿ 30 ಸಾವಿರ ಸ್ಮಾರ್ಟ್‌ಫೋನ್‌ ಅನ್ನು ಒಂದೇ ದಿನದಲ್ಲಿ ಬುಕ್‌ ಪಡೆದಿತ್ತು. ಆದರೆ ಈಗ ಕಂಪನಿ 7 ಕೋಟಿ ಸ್ಮಾರ್ಟ್‌ಫೋನ್‌ ರಿಜಿಸ್ಟ್ರೇಶನ್‌ ಪಡೆದಿದೆ. ಆದ್ದರಿಂದ ಬುಕ್‌ ಮಾಡಿದವರ ಹಣ ವಾಪಸು ಮಾಡಿ ಮೊದಲು ಬಂದವರಿಗೆ ಮೊದಲು ಸೇವೆ ಸಲ್ಲಿಸಲಾಗುವುದು ಎಂದು ABP ನ್ಯೂಸ್‌ ವಾಹಿನಿ ಪ್ರಕಾರ ಹೇಳಲಾಗಿದೆ.

ಫ್ರೀಡಂ 251 : ಮುಂದೇನು?

ಫ್ರೀಡಂ 251 : ಮುಂದೇನು?

ರಿಂಗಿಂಗ್ ಬೆಲ್ಸ್‌ ಅಧ್ಯಕ್ಷರಾದ ಅಶೋಕ್‌ ಚಂದ್‌ ರವರು ಶುಕ್ರವಾರ "ಫ್ರೀಡಂ 251 ಸ್ಮಾರ್ಟ್‌ಫೋನ್‌ ಗ್ರಾಹಕರು ತಮ್ಮ ಕೈಗೆ ಮೊಬೈಲ್‌ ತಲುಪಿದ ನಂತರವೇ ಹಣ ನೀಡಲಿ" ಎಂದು ಮಾಹಿತಿ ಪ್ರಕಟಿಸಿದ್ದಾರೆ.

ಫ್ರೀಡಂ 251

ಫ್ರೀಡಂ 251

ಕಂಪನಿ ಇನ್ನುಮುಂದೆ 'ಯಾರು ಸ್ಮಾರ್ಟ್‌ಫೋನ್‌ ಬುಕ್‌ ಮಾಡಿದ್ದಾರೋ ಅವರಿಗೆ "ಕ್ಯಾಶ್‌ ಆನ್‌ ಡಿಲಿವರಿ" ಮಾದರಿಯನ್ನು ಅನುಸರಿಸಲಿದೆ. ಇದು ಭರವಸೆ ಹಾಗೂ ಪಾರದರ್ಶಕತೆಯನ್ನು ಉಂಟುಮಾಡಲು ಸಹಾಯವಾಗಲಿದೆ ಎಂದು ಅಶೋಕ್‌ ಚಂದ್‌'ರವರು ಹೇಳಿದ್ದಾರೆ.

ಫ್ರೀಡಂ 251

ಫ್ರೀಡಂ 251

ಕಂಪನಿ ಜೂನ್‌ 30ರೊಳಗೆ 25 ಲಕ್ಷ ಮೊಬೈಲ್‌ಗಳನ್ನು ಮೊದಲ ಹಂತದಲ್ಲಿ ನೀಡಲು ಯೋಜನೆ ರೂಪಿಸಿದೆ ಎಂದು ABP ನ್ಯೂಸ್‌ ಪ್ರಕಾರ ಹೇಳಲಾಗಿದೆ.

ಫ್ರೀಡಂ 251

ಫ್ರೀಡಂ 251

ರಿಂಗಿಂಗ್ ಬೆಲ್ಸ್‌ ಕಂಪನಿಯು ವಿಶ್ವದ ಅಗ್ಗದ ಸ್ಮಾರ್ಟ್‌ಫೋನ್‌ ನೀಡುತ್ತಿರುವ ಹಿನ್ನೆಲೆಯಿಂದ ಮಾನನಷ್ಟ ಮೊಕದ್ದಮೆ ಮತ್ತು ಎಫ್ಐಆರ್‌ ಮೊಕದ್ದಮೆಗಳನ್ನು ಎದುರಿಸುತ್ತಿದೆ.

ಫ್ರೀಡಂ 251

ಫ್ರೀಡಂ 251

"ಉನ್ನತ ಟೆಕ್ನಾಲಜಿ ಗ್ಯಾಜೆಟ್‌ ಮೂಲಕ 'ಹಳ್ಳಿ, ಒಳನಾಡು ಪ್ರದೇಶಗಳು ಮತ್ತು ನಗರಗಳ ಸರ್ಕಾರಿ ಉಪಕ್ರಮಗಳ ನಡುವಿನ ಅಂತರವನ್ನು ಹೋಗಲಾಡಿಸುವುದು' ನಮ್ಮ ಉದ್ದೇಶವಾಗಿತ್ತು" ಎಂದು ಅಶೋಕ್‌ ಚಂದ್‌ ಹೇಳಿದ್ದಾರೆ.

ಫ್ರೀಡಂ 251

ಫ್ರೀಡಂ 251

"ಫ್ರೀಡಂ 251 ಸ್ಮಾರ್ಟ್‌ಫೋನ್‌ ತಯಾರಿಕೆಗೂ, ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸರ್ಕಾರದ ಯೋಜನೆಯು ಅಲ್ಲ. "ಮೇಕ್‌ ಇನ್‌ ಇಂಡಿಯಾ" ಅಭಿಯಾನದ ಜೊತೆಯು ಯಾವುದೇ ಸಂಬಂಧವಿಲ್ಲ" ಎಂದು ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ (DIPP) ಕಾರ್ಯದರ್ಶಿ, ಅಮಿತಾಭ್‌ ಕಂಟ್‌ ಟ್ವಿಟರ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಫ್ರೀಡಂ 251

ಫ್ರೀಡಂ 251

ಸ್ಮಾರ್ಟ್‌ಫೋನ್‌ಗಳಿಗೆ ಸ್ಮಾರ್ಟ್‌ಫೋನ್‌ಗಳಿಗೆ "ರೀಸೈಕಲ್ ಬಿನ್"‌ ಪಡೆಯುವುದು ಹೇಗೆ?

"ಫ್ರೀಡಂ 251" ಬಗ್ಗೆ ಹೊಸ ಸಂಶಯ ಮೂಡಿಸಿದ ಕಾಂಗ್ರೆಸ್‌ ಸಂಸದ

"ಫ್ರೀಡಂ 251" ಗೆ ಎದುರಾಳಿಯಾಗಿ "ಫ್ರೀಡಂ 651": ವಂಚನೆ

ಫ್ರೀಡಂ 251 ಬ್ಲಾಕ್ ಸೈಟ್ ತೆರೆದು ಫೋನ್ ಖರೀದಿಸಿಫ್ರೀಡಂ 251 ಬ್ಲಾಕ್ ಸೈಟ್ ತೆರೆದು ಫೋನ್ ಖರೀದಿಸಿ

 ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
Freedom 251 Makers Refund Pre-Booking Money, What Next? Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X