ನಿಮಗೆ ಸೃಜನಾತ್ಮಕ ಬರವಣಿಗೆಯ ಕಲೆ ಇದೆಯೇ? ಹಾಗಾದರೆ, ನೀವು ನಮ್ಮಲ್ಲಿ ಹಣಗಳಿಸಬಹುದು!!

Written By:

ನಾವು ಕನ್ನಡ ಗಿಜ್‌ಬಾಟ್‌ಗಾಗಿ (ಟೆಕ್ನಾಲಜಿ ಆಧಾರಿತ ಆನ್ಲೈನ್ ​​ವೆಬ್ಸೈಟ್) ಹವ್ಯಾಸಿ ಬರಹಗಾರರನ್ನು ಎದುರುನೋಡುತ್ತಿದ್ದು, ತಂತ್ರಜ್ಞಾನ, ಗ್ಯಾಜೆಟ್‌ಗಳು, ಸ್ಮಾರ್ಟ್‌ಫೋನ್ ಹಾಗೂ ಇತ್ಯಾದಿ ವಿಷಯಗಳ ಬಗ್ಗೆ ಅತ್ಯುತ್ತಮ ಲೇಖನಗಳನ್ನು ಬರೆದು ಕಳುಹಿಸುವವರನ್ನು ನಮ್ಮ ವೆಬ್‌ಸೈಟ್ ಹವ್ಯಾಸಿ ಬರಹಗಾರರನ್ನಾಗಿ ಸೇರಿಸಿಕೊಳ್ಳುತ್ತಿದ್ದೇವೆ.!!

ಕನ್ನಡ ಭಾಷೆಯಲ್ಲಿ ಅತ್ಯುತ್ತಮ ಹಿಡಿತ ಹೊಂದಿರುವ ಹಾಗೂ ಇಂಗ್ಲೀಷ್ ಅನ್ನು ತಿಳಿದಿರುವ ಬರಹಗಾರರನ್ನು ನಾವು ಹವ್ಯಾಸಿ ಬರಹಗಾರರನ್ನಾಗಿ ಆಯ್ದುಕೊಳ್ಳಲಿದ್ದು, ಹಾಗಾದರೆ, ಗಿಜ್‌ಬಾಟ್‌ನಲ್ಲಿ ನೀವು ಹವ್ಯಾಸಿ ಬರಹಗಾರರಾಗಲು ಏನು ಮಾಡಬೇಕು? ಇರುವ ನಿಬಂಧನೆಗಳು ಯಾವುವು ಎಂಬುದನ್ನು ಈ ಕೆಳಗೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅರ್ಥಪೂರ್ಣ ವಿಷಯಗಳನ್ನು ಹೊಂದಿರಬೇಕು!!

ಅರ್ಥಪೂರ್ಣ ವಿಷಯಗಳನ್ನು ಹೊಂದಿರಬೇಕು!!

ನೀವು ಬರೆಯಲು ಆಯ್ಕೆಮಾಡುವ ಇಂಗ್ಲೀಷ್ ಲೇಖನಗಳು ಅಥವಾ ನಾವೆ ನಿಮಗೆ ನೀಡಬಹುದಾದ ಇಂಗ್ಲೀಷ್ ಲೇಖನಗಳನ್ನು ಆಕರ್ಷಕವಾದ ಅರ್ಥಪೂರ್ಣ ಮಾಹಿತಿಯುಕ್ತ ವಿಷಯಗಳನ್ನಾಗಿ ಬರೆಯುವ ಕಲೆ ನಿಮ್ಮಲ್ಲಿರಬೇಕು.! ಯಾವುದೇ ವ್ಯಾಕರಣದ ದೋಷಗಳಿಲ್ಲದೆ ಅರ್ಥ ಮತ್ತು ಸ್ಪಷ್ಟತೆ ಇರುವ ಲೇಖನ ಬರಹಗಾರರನ್ನು ನಾವು ಎದುರುನೋಡುತ್ತಿದ್ದೇವೆ.!!

ಕೃತಿಚೌರ್ಯ ಕಟ್ಟುನಿಟ್ಟು!!

ಕೃತಿಚೌರ್ಯ ಕಟ್ಟುನಿಟ್ಟು!!

ನಾವು ಬರಹಗಾರನ ಸಮಗ್ರತೆಯನ್ನು ಪ್ರೀತಿಸುವುದರಿಂದ ಇತರರ ಲೇಖನಗಳನ್ನು ಕದ್ದು ಅಥವಾ ಮಾರ್ಪಾಡು ಮಾಡುವವರನ್ನು ಖುದ್ದಾಗಿ ನಿಷೇಧಿಸಲಾಗಿದೆ. ಇತರ ವೆಬ್‌ಸೈಟ್‌ಗಳಿಂದ ನೇರವಾಗಿ ವಿಷಯವನ್ನು ನಕಲಿಸುವುದನ್ನು ತಪ್ಪಿಸಲು ನಮ್ಮ ತಂಡ ಕೃತಿಚೌರ್ಯ ವಿಷಯವನ್ನು ಕಟ್ಟುನಿಟ್ಟಾಗಿಸಿದೆ.!!

ಲೇಖನದ ಸ್ವರೂಪ ಹೇಗಿರಬೇಕು?

ಲೇಖನದ ಸ್ವರೂಪ ಹೇಗಿರಬೇಕು?

ನೀವು ಬರೆಯಬೇಕಾದ ಪ್ರತಿ ಲೇಖನವು ಕನಿಷ್ಟ 700 ಪದಗಳನ್ನು ಹೊಂದಿರಬೇಕು.! ನೀವು ಹವ್ಯಾಸಿ ಬರಹಗಾರರಾಗಿ ಪ್ರತಿದಿನ ಕನಿಷ್ಠ ಮೂರು ಲೇಖನಗಳನ್ನು ಬರೆಯುವಹಾಗಿದ್ದರೆ ಒಳ್ಳೆಯದು. ಏಕೆಂದರೆ ನಿಮ್ಮ ಅತ್ಯುತ್ತಮ ಕೆಲಸದ ಜೊತೆಗೆ ನೀವು ಹೆಚ್ಚು ಹಣಗಳಿಸಲು ಇದು ಉತ್ತಮ ಅಲ್ಲವೇ.?

How to save WhatsApp Status other than taking screenshots!! Kannada
ಬೇರೆ ಬೇರೆ ವಿಷಯಗಳು!!

ಬೇರೆ ಬೇರೆ ವಿಷಯಗಳು!!

ಲೇಖನಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತಹ ಆಡುಭಾಷೆಯಲ್ಲಿಯೇ ಬರೆಯಲು ಇಲ್ಲಿ ಅವಕಾಶವಿದೆ. ಆದರೆ, ಎಸ್ಎಂಎಸ್ ಭಾಷೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ!! ಇನ್ನು ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನಗಳು ಪುನರಾವರ್ತನೆ ಆಗಿಲ್ಲ ಎಂಬುದನ್ನು ದೃಢೀಕರಿಸಿಕೊಳ್ಳುವುದು ಉತ್ತಮ.!!

ಬರವಣಿಗೆಯಿಂದ ನಿಮಗೇನು ಲಾಭ?

ಬರವಣಿಗೆಯಿಂದ ನಿಮಗೇನು ಲಾಭ?

ನಿಮ್ಮ ಬರವಣಿಗೆ ಕೌಶಲ್ಯಗಳನ್ನು ತೋರಿಸಲು ಮತ್ತು ಯೋಗ್ಯ ಪ್ರಮಾಣದ ಆದಾಯವನ್ನು ಮಾಡಲು ನೀವು ಸರಿಯಾದ ವೇದಿಕೆ ಹುಡುಕುತ್ತಿದ್ದರೆ ಅದಕ್ಕೆ ಉತ್ತಮ ಸಂಭಾವನೆ ನೀಡಲು ನಾವು ಸಿದ್ದರಿದ್ದೇವೆ. ನಿಮ್ಮ ಲೇಖನಗಳು ಉತ್ತಮವಾಗಿದ್ದರೆ ನೀವು ಹೆಚ್ಚು ಪ್ರೋತ್ಸಾಹವನ್ನು ಸಹ ನಿರೀಕ್ಷಿಸಬಹುದು.! ಹಾಗಾಗಿ, ನಮ್ಮನ್ನು ಇಲ್ಲಿ ಸಂಪರ್ಕಿಸಿ: Bhaskar.nj@oneindia.co.inಮತ್ತು s.manjunath@oneindia.co.in

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How To Launch Your Freelance Writing Career in gizbot.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot