Subscribe to Gizbot

ಫ್ರೀ ಲಾನ್ಸ್ ಕೆಲಸ ಹುಡುಕುತ್ತಿರುವವರಿಗೆ ಮಾತ್ರ !

Posted By: Varun
ಫ್ರೀ ಲಾನ್ಸ್ ಕೆಲಸ ಹುಡುಕುತ್ತಿರುವವರಿಗೆ ಮಾತ್ರ !

 

ಫ್ರೀಲಾನ್ಸ್ ಕೆಲಸ ಹುಡುಕುತ್ತಿರುವವರಿಗೆ ಹಾಗು ಕೆಲಸ ಮಾಡಲು ಇಷ್ಟ ಪಡುವವರಿಗಾಗಿ ಶುಕ್ರವಾರ ಸಂತೋಷದ ಸುದ್ದಿಯೊಂದು ಬಂದಿದೆ.

ಅದೇನೆಂದರೆ,ಹೊರ ಗುತ್ತಿಗೆ ಸೇವಾದಾರ Freelancer.com ಭಾರತದ ಉದ್ಯೋಗಿಗಳನ್ನ ಗಮನದಲ್ಲಿಟ್ಟುಕೊಂಡು ತನ್ನ ಫ್ರೀಲಾನ್ಸ್ ವೆಬ್ಸೈಟ್ ಅನ್ನ ಇಂದುಅಧೀಕೃತವಾಗಿ ಘೋಷಿಸಿತು.ಡಿಸೈನಿಂಗ್, ಐ.ಟಿ, ವಿಷಯಾಧಾರಿತ ಬರವಣಿಗೆ,ಎಂಜಿನಿಯರಿಂಗ್ ವಿಷಯಗಳ ಫ್ರೀ ಲಾನ್ಸಿಂಗ್ ಅವಕಾಶ ದೊರೆಯಲಿದೆ, ಈ ವೆಬ್ ಸೈಟ್ ಮೂಲಕ.

ಫ್ರೀಲಾನ್ಸ್ ಅನ್ವೇಷಿ ಮತ್ತು ಉದ್ಯೋಗದಾತ ನಡುವೆ ಪರಸ್ಪರ ಒಪ್ಪಂದದ ಆಧಾರದ ಮೇಲೆ, ಭರವಸೆಯ ಖಾತೆಯಲ್ಲಿ ಕನಿಷ್ಠ ಖಾತರಿಯ ಹಣವನ್ನ ಉದ್ಯೋಗದಾತನ ಹತ್ತಿರ ತೆಗೆದುಕೊಳ್ಳುತ್ತದೆ. ಕೆಲಸ ಮುಗಿದ ಮೇಲೆ, ಪಾವತಿ ನೇರವಾಗಿ ಅಸೈನೀ ಆಫ್ ಖಾತೆಗೆ, ಒಪ್ಪಂದದ ಪದಗಳು ಮತ್ತು ಒಪ್ಪಂದದ ಪ್ರಕಾರ ಪಾವತಿಸಲಾಗುತ್ತದೆ.

2011 ರಲ್ಲೇ 200 ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳನ್ನ ಹೊಂದಿದ್ದು 2012 ರ ಕೊನೆಗೆ 2 ಮಿಲಿಯನ್ ಬಳಕೆದಾರರನ್ನು ತಲಪುವ ಗುರಿ ಹೊಂದಿದೆ. ವೆಬ್ಸೈಟ್ ನೋಂದಣಿ Freelancer.in ನಲ್ಲಿ ಕೆಲಸಗಾರ ಹಾಗು ಮಾಲೀಕರಿಗೆ ಉಚಿತವಾಗಿದ್ದು, ಅಸೈನೀ ಮಾಡಿದ ಪ್ರತಿ ಪಾವತಿಗೆ ಶೇಕಡ 10 ಕಮಿಷನ್ ತೆಗೆದುಕೊಳ್ಳಲಿದ್ದು ಹಣ ಪಾವತಿಗಾಗಿ HSBC ಬ್ಯಾಂಕ್ ನೊಂದಿಗೆ ಕೂಡ ಒಪ್ಪಂದ ಮಾಡಿಕೊಂಡಿದೆ.

ವೀಕೆಂಡ್ ಬರ್ತಾ ಇದೆ, http://www.freelancer.in/ ಗೆ ನೋಂದಣಿ ಮಾಡಿ ನೋಡಿ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot