ಫ್ಯೂಜಿಫಿಲ್ಮ್‌ನಿಂದ ಇನ್ಸಟಾಕ್ಸ್‌ಮಿನಿ 11 ಕ್ಯಾಮೆರಾ ಲಾಂಚ್‌ ‌!

|

ಇತ್ತೀಚಿನ ದಿನಗಳಲ್ಲಿ ಕ್ಯಾಮೆರಾ ಪ್ರಪಂಚ ಸಾಕಷ್ಟು ವಿಶಾಲವಾಗಿದೆ, ವೈವಿಧ್ಯಮಯ ಕ್ಯಾಮೆರಾಗಳಿಂದ ಸಿಕ್ಕಾಪಟ್ಟೆ ಕಲರ್‌ಫುಲ್‌ ಆಗಿದೆ. ಪ್ರಸ್ತುತ ಕ್ಯಾಮೆರಾ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಆಕರ್ಷಕ ಫೀಚರ್ಸ್‌ಗಳನ್ನ ಒಳಗೊಂಡ ಭಿನ್ನ ವಿಭಿನ್ನ ಮಾದರಿಯ ಕ್ಯಾಮೆರಾಗಳು ಲಭ್ಯವಿವೆ. ಜಾಗತಿಕವಾಗಿ ಪ್ರಸಿದ್ದಿ ಪಡೆದಿರುವ ಕಂಪೆನಿಗಳು ಕ್ಯಾಮೆರಾ ಪ್ರಪಂಚದಲ್ಲಿ ತಮ್ಮದೇ ಆದ ಬ್ರ್ಯಾಂಡ್‌ ಮೌಲ್ಯವನ್ನು ಹೊಂದಿದ್ದು, ಇವುಗಳಲ್ಲಿ ಫ್ಯೂಜಿಫಿಲ್ಮ್‌ ಕಂಪೆನಿ ಕೂಡ ಒಂದಾಗಿದೆ, ಈಗಾಗ್ಲೆ ಹಲವು ಮಾದರಿಯ ಕ್ಯಾಮೆರಾಗಳನ್ನ ಪರಿಚಯಿಸಿರುವ ಕಂಪೆನಿ ಇದೀಗ ಹೊಸ ಮಾದರಿಯ ಕ್ಯಾಮೆರಾವನ್ನ ಪರಿಚಯಿಸಿದೆ.

ಹೌದು

ಹೌದು ವಿಶ್ವ ಪ್ರಸಿದ್ದ ಕ್ಯಾಮೆರಾ ಕಂಪೆನಿಯಾದ ಫ್ಯೂಜಿಫಿಲ್ಮ್‌ ತನ್ನ ಹೊಸ ಇನ್ಸಟಾಕ್ಸ್‌ ಮಿನಿ 11 ಇನ್ಸಸ್ಟಂಟ್‌ ಕ್ಯಾಮೆರಾವನ್ನು ಪರಿಚಯಿಸಿದೆ. ಇದು ಇನ್ಸಟಾಕ್ಸ್ ಮಿನಿ 9 ಕ್ಯಾಮೆರಾದ ಮುಂದುವರೆದ ಆವೃತ್ತಿಯಾಗಿದ್ದು, ಹೊಸತನದ ಫೀಚರ್ಸ್‌ಗಳನ್ನ ಇದರಲ್ಲಿ ನೀಡಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ಸಟಾಕ್ಸ್ ಮಿನಿ 11 , ಇನ್ಸಟಾಕ್ಸ್ ಮಿನಿ 9 ರಲ್ಲಿ ಇರುವಂತೆಯೆ ಇನ್ಸ್ಟಾಕ್ಸ್ ಮಿನಿ ಇನ್ಸ್ಟಂಟ್ ಫಿಲ್ಮ್ ಮತ್ತು 2 ಎಲಿಮೆಂಟ್ 60mm ಲೆನ್ಸ್ ಅನ್ನು ಒಳಗೊಂಡಿದೆ.

ಇನ್ಸಟಾಕ್ಸ್ ಮಿನಿ 11 ವಿನ್ಯಾಸ

ಇನ್ಸಟಾಕ್ಸ್ ಮಿನಿ 11 ವಿನ್ಯಾಸ

ಈ ಕ್ಯಾಮೆರಾದ ಪ್ರಮುಖ ವಿನ್ಯಾಸವೆಂದರೆ ಮೂಲೆಗಳ ಅಂಚಿನಲ್ಲಿ ದುಂಡಗಿನ ಬಾಡಿ ವಿನ್ಯಾಸವನ್ನ ಹೊಂದಿರುವುದಾಗಿದೆ. ಇನ್ನು ಮಿನಿ 9ಗೆ ಹೊಲಿಸಿದರೆ ಈ ಕ್ಯಾಮೆರಾ ವಿನ್ಯಾಸ ಹೆಚ್ಚು ಆಧುನಿಕವಾಗಿದೆ. ಅಲ್ಲದೆ ಈ ಕ್ಯಾಮೆರಾದಲ್ಲಿ ಸೆಲ್ಫಿ ಮೋಡ್‌ ಅನ್ನು ಹೊಸದಾಗಿ ಸೇರಿಸಲಾಗಿದ್ದು, ನಿಮಗೆ ಬೇಕು ಎನಿಸಿದಾಗ ಅದನ್ನು ಸಕ್ರಿಯಗೊಳಿಸಿಕೊಳ್ಳುವ ಅವಕಾಶವನ್ನು ಸಹ ನೀಡಲಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಕ್ಯಾಮೆರಾ ಸುಲಭ ಬಳಕೆಗೆ ಸಹಕಾರಿಯಾಗಿದ್ದು, ಶಟರ್‌ ವೇಗ ಕೂಡ ಉತ್ತಮ ವಾಗಿದೆ.

ಕ್ಯಾಮೆರಾ ಫೋಕಸ್‌ ರೇಂಜ್‌

ಕ್ಯಾಮೆರಾ ಫೋಕಸ್‌ ರೇಂಜ್‌

ಇನ್ಸಟಾಕ್ಸ್ ಮಿನಿ 11 ಕ್ಯಾಮೆರಾ ಉತ್ತಮ ವಿನ್ಯಾಸವನ್ನು ಹೊಂದಿದ್ದು, ಇದರ ಬಾಡಿ ವಿನ್ಯಾಸ "ರೌಂಡರ್" ಮಾದರಿಯಲ್ಲಿದೆ. ಅಲ್ಲದೆ ಇದು ಸ್ವಲ್ಪ ಹಗುರವಾದ ಕ್ಯಾಮೆರಾ ಆಗಿದ್ದು, ಲೆನ್ಸ್‌ನ ಕೊನೆ ಅಂಚಿನಲ್ಲಿ ಸೆಲ್ಫಿ ಮಿರರ್‌ ಅನ್ನು ನೀಡಲಾಗಿದೆ. ಜೊತೆಗೆ ಈ ಕ್ಯಾಮೆರಾದಲ್ಲಿ ನೀವು ಸೆಲ್ಫಿ ಮೋಡ್ ಐಡೆಂಟಿಟಿ ಮಾಡುವ ಅವಕಾಶ ನೀಡಲಾಗಿದ್ದು, ಲೆನ್ಸ್ ಬ್ಯಾರೆಲ್‌ನ ಮುಂಭಾಗದಲ್ಲಿ ಸೆಲ್ಫಿ ಮೋಡ್‌ ಅನ್ನು ಸಕ್ರಿಯಗೊಳಿಸಬಹುದಾಗಿದೆ. ಜೊತೆಗೆ ಫೋಕಸ್ ರೇಂಜ್‌ ಅನ್ನು ಕೇವಲ 0.3 ಮೀಟರ್‌ಗೆ ಇಳಿಸಬಹುದಾಗಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಈ ಕ್ಯಾಮೆರಾದಲ್ಲಿ ಫ್ಯೂಜಿ ಆಟೋ ಎಕ್ಸ್‌ಪೋಸರ್ ಅನ್ನು ಸೇರಿಸಲಾಗಿದ್ದು, ಇದು ಸುತ್ತಲೂ ಇರುವ ಬೆಳಕಿನ ಮಟ್ಟವನ್ನು ಆಧರಿಸಿ ಸ್ವಯಂಚಾಲಿತವಾಗಿ ಶಟರ್ ವೇಗ ಮತ್ತು ಫ್ಲ್ಯಾಷ್ ಔಟ್‌ಪುಟ್‌ ಅನ್ನು ಹೊಂದಿಸುತ್ತದೆ. ಇನ್ನು ಈ ಕ್ಯಾಮೆರಾದ ಟ್ವೀಕ್‌ಗಳು ಎರಡು ಸ್ಟಿಕ್ಕರ್‌ಗಳ ರೂಪದಲ್ಲಿ ಬದಲಾಯಿಸಬಹುದಾದ ಶಟರ್ ಬಟನ್ ಅನ್ನು ಒಳಗೊಂಡಿದೆ. ಅಲ್ಲದೆ ಇದು ಬಳಕೆದಾರರಿಗೆ ಕ್ಯಾಮೆರಾದಲ್ಲಿ ಕಸ್ಟಮೈಸ್ ಮಾಡಲು ಅವಕಾಶ ನೀಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ಸಟಾಕ್ಸ್ ಮಿನಿ 11 ಇನ್ಸಟಂಟ್‌ ಕ್ಯಾಮೆರಾ ಆಸ್ಟ್ರೇಲಿಯಾ ಡಾಲರ್‌ $ 70 (3297.ರೂ )ಬೆಲೆಯನ್ನು ಹೊಂದಿದ್ದು, ಮಾರ್ಚ್‌ ತಿಂಗಳಲ್ಲಿ ಮಾರಾಟವಾಗಲಿದೆ. ಇನ್ನು ಈ ಕ್ಯಾಮೆರಾ ಸ್ಕೈ ಬ್ಲೂ, ಲಿಲಾಕ್ ಪರ್ಪಲ್, ಐಸ್ ವೈಟ್, ಚಾರ್ಕೋಲ್ ಗ್ರೇ ಮತ್ತು ಬ್ಲಶ್ ಪಿಂಕ್ 5 ಬಣ್ಣಗಳಲ್ಲಿ ಖರೀದಿಸಲು ಲಭ್ಯವಿರುತ್ತದೆ

Most Read Articles
Best Mobiles in India

English summary
The Instax Mini 11 looks pretty much like its predecessor, the very popular Instax Mini 9, but adds a few tweaks and comes in five fun colors – Blush Pink, Sky Blue, Charcoal Gray, Ice White and Lilac Purple.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more