Home
ಸುದ್ದಿಜಾಲ

ಸ್ಥಳದಲ್ಲಿಯೇ ಫೋಟೋ ಪ್ರಿಂಟ್‌ ಮಾಡಲಿದೆ ಈ ಕ್ಯಾಮೆರಾ! ಬೆಲೆ ಎಷ್ಟು?

ಕ್ಯಾಮೆರಾ ಮಾರುಕಟ್ಟೆಯಲ್ಲಿ ಫ್ಯೂಜಿಫಿಲ್ಮ್‌ ಕಂಪೆನಿ ಭಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ತನ್ನ ಪ್ಯಾಕೆಟ್‌ ಸೈಜ್‌ ಮಿನಿ ಕ್ಯಾಮೆರಾಗಳ ಮೂಲಕ ಟೆಕ್‌ವಲಯದಲ್ಲಿ ಹೊಸ ಟ್ರೆಂಡ್‌ ಅನ್ನೇ ಸೆಟ್‌ ಮಾಡಿದೆ. ಇದೀಗ ಅದೇ ಸಾಲಿನಲ್ಲಿ ಹೊಸ ಇನ್‌ಸ್ಟಾಕ್ಸ್‌ ಮಿನಿ 12 ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ. ಈ ಕ್ಯಾಮೆರಾ ಮೂಲಕ ಸ್ಥಳದಲ್ಲೇ ಫೋಟೋ ಪ್ರಿಂಟ್‌ ತೆಗೆಯುವುದಕ್ಕೆ ಅವಕಾಶ ನೀಡಲಾಗಿದೆ.

ಹೌದು, ಫ್ಯೂಜಿಫಿಲ್ಮ್ ಇನ್‌ಸ್ಟಾಕ್ಸ್ ಮಿನಿ 12 ಕ್ಯಾಮೆರಾ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ನೀವು ಫೋಟೋ ತೆಗೆದ ಸ್ಥಳದಲ್ಲಿಯೇ ಕ್ಷಣಾರ್ಧದಲ್ಲಿ ಫೋಟೋ ಪ್ರಿಂಟ್‌ ತೆಗೆಯಲು ಅವಕಾಶ ನೀಡಿರುವುದು ಇದರ ಮೇನ್‌ ಹೈಲೈಟ್‌ ಆಗಿದೆ. ಹಾಗಾದರೆ ಫ್ಯೂಜಿಫಿಲ್ಮ್‌ ಇನ್‌ಸ್ಟಾಕ್ಸ್‌ ಮಿನಿ 12 ಕ್ಯಾಮೆರಾ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಥಳದಲ್ಲಿಯೇ ಫೋಟೋ ಪ್ರಿಂಟ್‌ ಮಾಡಲಿದೆ ಈ ಕ್ಯಾಮೆರಾ! ಬೆಲೆ ಎಷ್ಟು?

ಫ್ಯೂಜಿಫಿಲ್ಮ್‌ ಇನ್‌ಸ್ಟಾಕ್ಸ್‌ ಮಿನಿ 12 ಕ್ಯಾಮೆರಾ ಹೇಗಿದೆ?

ಫ್ಯೂಜಿಫಿಲ್ಮ್ ಇನ್‌ಸ್ಟಾಕ್ಸ್ ಮಿನಿ 12 ಪ್ರವಾಸ ಪ್ರಿಯರಿಗೆ ಸೂಕ್ತವಾಗಿದೆ. ನೀವು ಪ್ರವಾಸ ಮಾಡುವಾಗ ಸುಂದರ ಚಿತ್ರಗಳನ್ನು ಸೆರೆಹಿಡಿಯುವುದಕ್ಕೆ ಬೆಸ್ಟ್‌ ಚಾಯ್ಸ್‌ ಇದಾಗಿದೆ. ಇದನ್ನು ಪ್ರಮುಖವಾಗಿ ಕ್ಲೋಸ್-ಅಪ್ ಶಾಟ್‌ಗಳು ಮತ್ತು ಸೆಲ್ಫಿಗಳನ್ನು ತೆಗೆದುಕೊಳ್ಳಲು ಇಷ್ಟಪಡುವವರಿಗೆ ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಕ್ಯಾಮೆರಾ ಒಂದು ರೀತಿಯ ಬಲೂನ್‌ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಗ್ರಾಹಕರನ್ನು ಆಕರ್ಷಿಸಿದೆ.

ಫ್ಯೂಜಿಫಿಲ್ಮ್‌ ಇನ್‌ಸ್ಟಾಕ್ಸ್‌ ಮಿನಿ 12 ಕ್ಯಾಮೆರಾ 'ಕ್ಲೋಸ್-ಅಪ್ ಮೋಡ್' ಅನ್ನು ಹೊಂದಿದೆ. ಇದರಿಂದ ನೀವು ಒಮ್ಮೆ ಲೆನ್ಸ್‌ ಅನ್ನು ತಿರುಗಇಸುವ ಮೂಲಕ ಕ್ಲೋಸ್‌ ಮೋಡ್‌ ಅನ್ನು ಆಕ್ಟಿವ್‌ ಮಾಡಬಹುದು. ಇದಲ್ಲದೆ ಈ ಫೀಚರ್ಸ್‌ನಿಂದಾಗಿ ನೀವು ಕ್ಲೋಸ್-ಅಪ್ ಶಾಟ್‌ಗಳು ಮತ್ತು ಸೆಲ್ಫಿಗಳಲ್ಲಿ ಅತ್ಯುತ್ತಮ ಅನುಭವವನ್ನು ನೀಡಲಿದೆ. ಜೊತೆಗೆ ಫ್ಯೂಜಿಫಿಲ್ಮ್‌ನ ಈ ಕ್ಯಾಮೆರಾದಲ್ಲಿ ವ್ಯೂಫೈಂಡರ್‌ ವ್ಯೂ ಫಿಲ್ಡ್‌ ಆಯ್ಕೆಯನ್ನು ನೀಡಲಾಗಿದೆ. ಅಲ್ಲದೆ ಫೋಟೋ ಶೂಟ್‌ ಮಾಡುವಾಗ ಫೋಟೋದ ಸಂಯೋಜನೆಯನ್ನು ಪರಿಶೀಲಿಸಲು ಸೆಲ್ಫಿ ಮಿರರ್‌ ಅನ್ನು ಬಳಸಬಹುದಾಗಿದೆ.

ಸ್ಥಳದಲ್ಲಿಯೇ ಫೋಟೋ ಪ್ರಿಂಟ್‌ ಮಾಡಲಿದೆ ಈ ಕ್ಯಾಮೆರಾ! ಬೆಲೆ ಎಷ್ಟು?

ಫ್ಯೂಜಿಫಿಲ್ಮ್ ಇನ್‌ಸ್ಟಾಕ್ಸ್ ಮಿನಿ 12 ಕ್ಯಾಮೆರಾ 'ಸ್ವಯಂಚಾಲಿತ ಎಕ್ಸ್‌ಪೋಸರ್' ಫಂಕ್ಷನ್‌ ಅನ್ನು ಹೊಂದಿದೆ. ಇದರಿಂದ ನೀವು ಶಟರ್‌ ಅನ್ನು ಒತ್ತಿದ ತಕ್ಷಣವೆ ಬೆಳಕಿನ ಪ್ರಮಾಣವನ್ನು ಆಟೋಮ್ಯಾಟಿಕ್‌ ಡಿಟೆಕ್ಟ್‌ ಮಾಡಲಿದೆ. ಅಲ್ಲದೆ ಅದಕ್ಕೆ ಅನುಗುಣವಾಗಿ ಶಟರ್‌ ವೇಗ ಮತ್ತು ಫ್ಲ್ಯಾಷ್ ಲೆವೆಲ್‌ ಅನ್ನು ಉತ್ತಮಗೊಳಿಸಲಿದೆ. ಈ ಕ್ಯಾಮೆರಾ ಔಟ್‌ಸೈಡ್‌ ಬ್ರೈಟ್‌ನೆಸ್‌ ಮತ್ತು ಲೋ ಲೈಟ್‌ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳಲಿದೆ. ಇದರಿಂದ ನೀವು ಯಾವುದೇ ಸ್ಥಳದಲ್ಲಿ ಫೋಟೋ ಕ್ಲಿಕ್ಕಿಸಿದರೂ ಕೂಡ ನಿಮಗೆ ಸಹಾಯಕಾರಿಯಾಗಿದೆ.

ಫ್ಯೂಜಿಫಿಲ್ಮ್‌ ಇನ್‌ಸ್ಟಾಕ್ಸ್‌ ಮಿನಿ 12 ಕ್ಯಾಮೆರಾ ಇನ್‌ಸ್ಟಾಕ್ಸ್ ಸರಣಿಯಲ್ಲಿನ ಮೊದಲ ಎಂಟ್ರಿ ಲೆವೆಲ್‌ ಕ್ಯಾಮೆರಾ ಎನಿಸಿಕೊಂಡಿದೆ. ಫ್ಯೂಜಿಫಿಲ್ಮ್ ಹೇಳುವಂತೆ ಈ ಕ್ಯಾಮೆರಾದಲ್ಲಿ ಬಳಕೆದಾರರು ಶಟರ್ ಬಟನ್ ಒತ್ತಿದ ಐದು ಸೆಕೆಂಡುಗಳಲ್ಲಿ ಫೋಟೋಗಳನ್ನು ಪ್ರಿಂಟ್‌ ಮಾಡಬಹುದಾಗಿದೆ. ಅಲ್ಲದೆ ಮುದ್ರಿತ ಫೋಟೋದಲ್ಲಿ ಚಿತ್ರವು ಸಂಪೂರ್ಣವಾಗಿ ಗೋಚರಿಸುವ ಮೊದಲು ಸರಿಸುಮಾರು 90 ಸೆಕೆಂಡುಗಳ ಕಾಲವನ್ನು ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಅಂದರೆ ನೀವು ಫೋಟೋ ಕ್ಲಿಕ್ಕಿಸಿದ ಕ್ಷಣಾರ್ಧದಲ್ಲಿಯೇ ನಿಮ್ಮ ಫೋಟೋವನ್ನು ಪ್ರಿಂಟ್‌ ತೆಗೆದುಕೊಳ್ಳಬಹುದಾಗಿದೆ. ಇದು ನಿಮ್ಮ ಪ್ರವಾಸದ ಅನುಭವವನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ ಸಹಕಾರಿಯಾಗಿದೆ ಎಂದು ಹೇಳಬಹುದಾಗಿದೆ.

ಸ್ಥಳದಲ್ಲಿಯೇ ಫೋಟೋ ಪ್ರಿಂಟ್‌ ಮಾಡಲಿದೆ ಈ ಕ್ಯಾಮೆರಾ! ಬೆಲೆ ಎಷ್ಟು?

ಫ್ಯೂಜಿಫಿಲ್ಮ್‌ ಇನ್‌ಸ್ಟಾಕ್ಸ್‌ ಮಿನಿ 12 ಕ್ಯಾಮೆರಾ 9,499ರೂ. ಬೆಲೆಯನ್ನು ಹೊಂದಿದೆ. ಇದನ್ನು ನೀವು ಭಾರತದಲ್ಲಿ ಪ್ರಸ್ತುತ ಫ್ಲಿಪ್‌ಕಾರ್ಟ್, ಅಮೆಜಾನ್, ನೈಕಾ ಮತ್ತು ಇನ್‌ಸ್ಟಾಕ್ಸ್ ವೆಬ್‌ಸೈಟ್‌ನಂತಹ ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಸಬಹುದಾಗಿದೆ. ಇದು ನಿಮಗೆ ನೇರಳೆ, ನೀಲಿ, ಗುಲಾಬಿ, ಪುದೀನ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Fujifilm has added another product to its instant camera lineup known as Instax.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+