ಫ್ಯೂಜಿಫಿಲ್ಮ್‌ನಿಂದ ಹೊಸ ಕ್ಯಾಮೆರಾ ಬಿಡುಗಡೆ! ಹೈ ಸ್ಪೀಡ್‌ ಪ್ರೊಸೆಸರ್‌ ವಿಶೇಷ!

|

ಭಾರತದ ಕ್ಯಾಮೆರಾ ಮಾರುಕಟ್ಟೆಯಲ್ಲಿ ಫ್ಯೂಜಿಫಿಲ್ಮ್‌ ಕ್ಯಾಮೆರಾಗಳಿಗೆ ಸಾಕಷ್ಟು ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಪ್ಯೂಜಿಫಿಲ್ಮ್‌ ಬ್ರ್ಯಾಂಡ್‌ ಕೂಡ ಹಲವು ಆಕರ್ಷಕ ಕ್ಯಾಮೆರಾಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಭಾರತದಲ್ಲಿ ಹೊಸ ಫ್ಯೂಜಿಫಿಲ್ಮ್‌ X-H2 ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ. ಇದು ಮಿರರ್‌ಲೆಸ್‌ ಡಿಜಿಟಲ್‌ ಕ್ಯಾಮೆರಾ ಆಗಿದೆ. ಇನ್ನು ಈ ಕ್ಯಾಮೆರಾ ಮಿರರ್‌ಲೆಸ್ ಡಿಜಿಟಲ್ ಕ್ಯಾಮೆರಾಗಳ X ಸರಣಿಯ ಶ್ರೇಣಿಯನ್ನು ಸೇರುತ್ತದೆ.

ಫ್ಯೂಜಿಫಿಲ್ಮ್‌

ಹೌದು, ಫ್ಯೂಜಿಫಿಲ್ಮ್‌ ಭಾರತದಲ್ಲಿ ಹೊಸ ಫ್ಯೂಜಿಫಿಲ್ಮ್‌ X-H2 ಮಿರರ್‌ಲೆಸ್‌ ಡಿಜಿಟಲ್‌ ಕ್ಯಾಮೆರಾ ಪರಿಚಯಿಸಿದೆ. ಇದು ಫ್ಯೂಜಿಫಿಲ್ಮ್‌ ಸ್ವಾಮ್ಯದ ಕಲರ್‌ ರಿಪ್ರೊಡಕ್ಷನ್‌ ಟೆಕ್ನಾಲಜಿಯನ್ನು ಹೊಂದಿದ್ದು, ಸ್ಟಿಲ್‌ಗಳು ಮತ್ತು ವೀಡಿಯೊಗಳೆರಡರಲ್ಲೂ ಅತ್ಯುತ್ತಮವಾದ ಚಿತ್ರದ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಇನ್ನು ಈ ಕ್ಯಾಮೆರಾದಲ್ಲಿ ಇನ್‌ಬಿಲ್ಟ್‌ 8K/30P ರೆಕಾರ್ಡಿಂಗ್ ಸಾಮರ್ಥ್ಯವನ್ನು ನೀಡಲಾಗಿದೆ. ಇದರಿಂದ ಸ್ಟಿಲ್‌ ಇಮೇಜ್‌ಗಳು ಮತ್ತು ಫಿಲ್ಮ್‌ಗಳಲ್ಲಿ ಗುಣಮಟ್ಟವನ್ನು ಕಾಣಬಹುದಾಗಿದೆ. ಹಾಗಾದ್ರೆ ಈ ಕ್ಯಾಮೆರಾ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫ್ಯೂಜಿಫಿಲ್ಮ್‌ X-H2

ಫ್ಯೂಜಿಫಿಲ್ಮ್‌ X-H2 ಮಿರರ್‌ಲೆಸ್‌ ಡಿಜಿಟಲ್‌ ಕ್ಯಾಮೆರಾ ಶೂಟಿಂಗ್‌ಗೆ ಸಹಾಯ ಮಾಡುವ ಫೀಚರ್ಸ್‌ಗಳು ಮತ್ತು ಇಂಟರ್‌ಫೇಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಆಟೋ-ಫೋಕಸ್ ಡೀಪ್ ಲರ್ನಿಂಗ್ ಟೆಕ್ನಾಲಜಿ ಆಧಾರದ ಮೇಲೆ ಕಂಟೆಂಟ್‌ ಅನ್ನು ಆಟೋ ಫೋಕಸ್‌ ಮಾಡಲಿದೆ. ಅಲ್ಲದೆ ಸ್ಟಿಲ್ ಇಮೇಜ್‌ಗಳು ಮತ್ತು ಫಿಲ್ಮ್‌ಗಳಲ್ಲಿ ಕಂಟೆಂಟ್ ರಚನೆಗಾಗಿ X ಸರಣಿಯ ಸಾಮರ್ಥ್ಯವನ್ನು ಹೆಚ್ಚಿಸಲು ಇದರಲ್ಲಿ ಇನ್‌ಬಿಲ್ಟ್‌ 8K/30P ರೆಕಾರ್ಡಿಂಗ್ ಅನ್ನು ನೀಡುತ್ತದೆ.

ಫ್ಯೂಜಿಫಿಲ್ಮ್‌ X-H2

ಫ್ಯೂಜಿಫಿಲ್ಮ್‌ X-H2 ಕ್ಯಾಮೆರಾ ಬ್ಯಾಕ್-ಇಲ್ಯುಮಿನೇಟೆಡ್ 40.2 MP 'X-Trans CMOS 5 HR ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ ಇದು ಹೈ-ಸ್ಪೀಡ್ 'X-ಪ್ರೊಸೆಸರ್ 5' ವೇಗವನ್ನು ಪಡೆದುಕೊಂಡಿದೆ. ಇನ್ನು ಈ ಕ್ಯಾಮೆರಾ ಫ್ಯೂಜಿಫಿಲ್ಮ್‌ ಸ್ವಾಮ್ಯದ ಕಲರ್‌ ರಿಪ್ರೊಡಕ್ಷನ್‌ ಟೆಕ್ನಾಲಜಿಯನ್ನು ಹೊಂದಿದ್ದು, ಸ್ಟಿಲ್‌ಗಳು ಮತ್ತು ವೀಡಿಯೊಗಳೆರಡರಲ್ಲೂ ಅತ್ಯುತ್ತಮವಾದ ಚಿತ್ರದ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ.

ಕ್ಯಾಮೆರಾ

ಇದಲ್ಲದೆ ಈ ಕ್ಯಾಮೆರಾ ತನ್ನ ಚಿತ್ರದ ಗುಣಮಟ್ಟದಲ್ಲಿ ಹೊಸ ಸೆನ್ಸಾರ್‌ ವರ್ಧನೆಯು ಕನಿಷ್ಟ ಗುಣಮಟ್ಟದ ISO125, ಗರಿಷ್ಠ ಎಲೆಕ್ಟ್ರಾನಿಕ್ ಶಟರ್ ವೇಗ 1/180000 ಸೆಕೆಂಡುಗಳು ಇರಲಿದೆ ಎನ್ನಲಾಗಿದೆ. ಇದರಲ್ಲಿ ದೃಶ್ಯ ಅಭಿವ್ಯಕ್ತಿಗಳನ್ನು ಸುಧಾರಿಸಲು ಪಿಕ್ಸೆಲ್ ಶಿಫ್ಟ್ ಮಲ್ಟಿ ಶಾಟ್‌ನಂತಹ ಅಪ್ಡೇಟ್‌ ಫೀಚರ್ಸ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ನೀವು ಫೋಟೋ ಇಲ್ಲವೇ ವೀಡಿಯೋ ರೆಕಾರ್ಡಿಂಗ್‌ನಲ್ಲಿ ಅತ್ಯುತ್ತಮವಾದ ಚಿತ್ರವನ್ನು ಸೆರೆಹಿಡಿಯಲು ಅನುಕೂಲವಾಗಲಿದೆ.

ಕ್ಯಾಮೆರಾ

ಈ ಕ್ಯಾಮೆರಾ ಉನ್ನತ ಮಟ್ಟದ ಪ್ರಾಡಕ್ಟ್‌ ಆಗಿದ್ದು, ಜಾಗತಿಕವಾಗಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಗ್ರಾಹಕರ ಬಹುಮುಖ ಬೇಡಿಕೆಗಳನ್ನು ಪೂರೈಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುವ ಮೂಲಕ ಗ್ರಾಹಕರ ಅನುಭವವನ್ನು ಮರುವ್ಯಾಖ್ಯಾನಿಸುವುದು ನಮ್ಮ ಗುರಿಯಾಗಿದೆ ಎಂದು ಫ್ಯೂಜಿಫಿಲ್ಮ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕೋಜಿ ವಾಡಾ ಹೇಳಿದ್ದಾರೆ. ಅಂದರೆ ಈ ಕ್ಯಾಮೆರಾ ವೃತ್ತಿಪರ ಫೋಟೋಗ್ರಫಿಗೆ ಸೂಕ್ತವಾದ ವಿನ್ಯಾಸವನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಫ್ಯೂಜಿಫಿಲ್ಮ್‌ X-H2 ಕ್ಯಾಮೆರಾ ಭಾರತದ ಮಾರುಕಟ್ಟೆಯಲ್ಲಿ 1,99,999ರೂ. ಬೆಲೆಯನ್ನು ಪಡೆದುಕೊಂಡಿದೆ. ಇದು ಡಿಜಿಟಲ್ ಕ್ಯಾಮೆರಾ ಲೆನ್ಸ್ ಕಿಟ್ ಜೊತೆಗೆ 2,44,999 ರೂ. ಬೆಲೆಗೆ ಬರಲಿದೆ.

ಕ್ಯಾನನ್‌

ಇನ್ನು ಇತ್ತೀಚಿಗೆ ಕ್ಯಾನನ್‌ ಕಂಪೆನಿ ಕೂಡ ಭಾರತದಲ್ಲಿ ಹೊಸ ಕ್ಯಾನನ್‌ EOS R6 Mark II ಕ್ಯಾಮೆರಾ ಬಿಡುಗಡೆ ಮಾಡಿದೆ. ಇದು 24.2-ಮೆಗಾಪಿಕ್ಸೆಲ್ ಫುಲ್‌-ಫ್ರೇಮ್ CMOS ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ ಇದು ಇನ್-ಬಾಡಿ 5-ಆಕ್ಸಿಸ್ ಸೆನ್ಸರ್ ಸ್ಟೆಬಿಲೈಸೇಶನ್ ಮತ್ತು 3.69 ಮಿಲಿಯನ್-ಡಾಟ್ ರೆಸಲ್ಯೂಶನ್ ಹೊಂದಿರುವ OLED ಎಲೆಕ್ಟ್ರಾನಿಕ್ ವ್ಯೂಫೈಂಡರ್ ಅನ್ನು ಒಳಗೊಂಡಿದೆ.

ಕ್ಯಾನನ್‌ EOS R6 Mark II ಕ್ಯಾಮೆರಾ

ಕ್ಯಾನನ್‌ EOS R6 Mark II ಕ್ಯಾಮೆರಾ 24.2-ಮೆಗಾಪಿಕ್ಸೆಲ್ ಫುಲ್‌-ಫ್ರೇಮ್ CMOS ಸೆನ್ಸಾರ್‌ ಅನ್ನು ಹೊಂದಿದೆ. ಇದರ ISO ರೇಂಜ್‌ 100 ರಿಂದ 1,02,400 ಸ್ಟಿಲ್‌ಗಳಿಗೆ ಮತ್ತು 100 ರಿಂದ 25,600 ವೀಡಿಯೊಗಳಿಗೆ ಹೊಂದಿದೆ. ಇದರ ಬರ್ಸ್ಟ್ ಶೂಟಿಂಗ್ ಸಾಮರ್ಥ್ಯವನ್ನು ಸುಧಾರಿಸಲಾಗಿದ್ದು, ಎಲೆಕ್ಟ್ರಾನಿಕ್ ಶಟರ್ ಬಳಸುವಾಗ AE/AF ಟ್ರ್ಯಾಕಿಂಗ್‌ನೊಂದಿಗೆ 20fps ನಿಂದ 40fps ಗೆ ಹೋಗುತ್ತದೆ. ಮೆಕಾನಿಕಲ್‌ ಶಟರ್ ಬಳಸುವಾಗ ಸ್ಟಿಲ್‌ಗಳ ಬರ್ಸ್ಟ್ ರೇಟ್‌ 12fps ಆಗಿರಲಿದೆ.

Best Mobiles in India

English summary
Fujifilm X-H2 mirrorless digital camera launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X