ಫ್ಯೂಜಿಫಿಲ್ಮ್‌X-T4 ಮಿರರ್‌ಲೆಸ್‌ ಕ್ಯಾಮೆರಾ ಬಿಡುಗಡೆ!

|

ಕ್ಯಾಮೆರಾ ಪ್ರಪಂಚ ಇಂದು ಸಾಕಷ್ಟು ಕಲರ್‌ಫುಲ್‌ ಆಗಿದೆ. ವೈವಿಧ್ಯ ಮಾದರಿಯ ಹಲವು ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಇಂದು ಲಭ್ಯವಿವೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ಯಾಮೆರಾಗಳಲ್ಲಿ ಹಲವು ಬ್ರ್ಯಾಂಡ್‌ ಕಂಪೆನಿಗಳು ಕೂಡ ಪ್ರಸಿದ್ದಿಯನ್ನ ಪಡೆದಿದ್ದು, ಅವುಗಳಲ್ಲಿ ಫ್ಯೂಜಿಫಿಲ್ಮ್‌ಕಂಪೆನಿ ಕೂಡ ಒಂದಾಗಿದೆ. ಈಗಾಗ್ಲೆ ಹಲವು ಮಾದರಿಯ ಕ್ಯಾಮೆರಾಗಳನ್ನ ಮಾರುಕಟ್ಟೆಗೆ ಪರಿಚಯಿಸಿರುವ ಫ್ಯೂಜಿಫಿಲ್ಮ್‌ ಕಂಪೆನಿ ಇದೀಗ ಹೊಸ ಮಿರರ್‌ಲೆಸ್‌ ಡಿಜಿಟಲ್‌ ಕ್ಯಾಮೆರಾವನ್ನ ಮಾರುಕಟ್ಟೆಗೆ ಲಾಂಚ್‌ ಮಾಡಿದೆ.\

ಹೌದು

ಹೌದು, ಕ್ಯಾಮೆರಾ ಮಾರುಕಟ್ಟೆಯಲ್ಲಿ ವಿಶ್ವಪ್ರಸಿದ್ಧಿಯನ್ನ ಪಡೆದುಕೊಂಡಿರುವ ಫ್ಯೂಜಿಫಿಲ್ಮ್‌ ಕಂಪೆನಿ ಹೊಸ X-T4 ಮಿರರ್‌ಲೆಸ್‌ ಡಿಜಿಟಲ್‌ ಕ್ಯಾಮೆರಾವನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಕಾಂಪ್ಯಾಕ್ಟ್ ಮತ್ತು ಲೈಟ್‌ವೇಟ್‌ ಬಾಡಿ ಹೊಂದಿರುವ ಮಿರರ್‌ಲೆಸ್‌ ಡಿಜಿಟಲ್‌ ಕ್ಯಾಮೆರಾಗಳ X ಆವೃತ್ತಿಯ ಹೊಸ ಕ್ಯಾಮೆರಾ ಆಗಿದೆ. ಈ ಕ್ಯಾಮೆರಾವು ಸೆಂಟ್ರಲ್‌ ವ್ಯೂಫೈಂಡರ್ ಶೈಲಿಯನ್ನು ಹೊಂದಿದೆ. ಇದಲ್ಲದೆ ಈ ಇದು ವಿಶ್ವದ ಅತಿ ವೇಗದ 15Fps ಬರ್ಸ್ಟ್ ಮೋಡ್ ಶೂಟಿಂಗ್ ಮತ್ತು 0.02 ಸೆಕೆಂಡುಗಳಷ್ಟು ವೇಗದ ಹೈ-ಸ್ಪೀಡ್ AF ಕಾರ್ಯದಕ್ಷತೆಯನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಫ್ಯೂಜಿಫಿಲ್ಮ್‌X-T4 ಕ್ಯಾಮೆರಾ

ಫ್ಯೂಜಿಫಿಲ್ಮ್‌X-T4 ಕ್ಯಾಮೆರಾ

ಫ್ಯೂಜಿಫಿಲ್ಮ್‌ X-T4 ಕ್ಯಾಮೆರಾ 26.1 ಮೆಗಾಪಿಕ್ಸೆಲ್‌ BSI X- ಟ್ರಾನ್ಸ್‌ CMOS 4 ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಕ್ಯಾಮೆರಾ ಹೈಸ್ಪೀಡ್‌ ಇಮೇಜ್‌ ಪ್ರೊಸೆಸಿಂಗ್‌ ಎಂಜಿನ್‌ X-ಪ್ರೊಸೆಸರ್‌4 ಅನ್ನು ಹೊಂದಿದೆ. ಜೊತೆಗೆ ಇದರಲ್ಲಿ ಹೊಸದಾಗಿ ಅಭಿವೃದ್ಧಿ ಪಡಿಸಿರುವ ಫೋಕಲ್‌ ಪ್ಲೇನ್‌ ಶಟರ್‌ ಅನ್ನು ಬಳಸಲಾಗಿದೆ, ಅಲ್ಲದೆ 15fps ಬರ್ಸ್ಟ್‌ ಮೋಡ್‌ ಶೂಟಿಂಗ್‌ಗಾಗಿ ಹೆಚ್ಚಿನ ಕಾರ್ಯದಕ್ಷತೆಯ ಮೋಟಾರ್‌ ಅನ್ನು ಅಳವಡಿಸಲಾಗಿದೆ.

ವಿನ್ಯಾಸ

ವಿನ್ಯಾಸ

ಈ ಕ್ಯಾಮೆರಾ ಡಿಜಿಟಲ್‌ ಮಿರರ್‌ಲೆಸ್‌ ಕ್ಯಾಮೆರಾ ಆಗಿದ್ದು, ಉತ್ತಮ ವಿನ್ಯಾಸವನ್ನ ಹೊಂದಿದೆ. ಇದು ದೂಳು ಮತ್ತು ತೇವಾಂಶ ನಿರೋಧಕ ವ್ಯವಸ್ಥೆಯನ್ನ ಹೊಂದಿದ್ದು, ಐದು-ಆಕ್ಷಿಸ್‌ IBIS ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿದ್ದು. ಇದಲ್ಲದೆ ಇದು 6.5-ಸ್ಟಾಪ್ ಉಪಯೋಗವನ್ನು ನೀಡುತ್ತದೆ. ಸ್ಪೋರ್ಟ್ಸ, ಮತ್ತು ಇತರೆ ಶೂಟಿಂಗ್‌ ಸಂಧರ್ಭಗಳಲ್ಲಿ ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಇದರಲ್ಲಿ ಒಟ್ಟು 35 ಇಂಟರ್‌ ಚೇಂಜ್‌ ಲೆನ್ಸ್‌ಗಳನ್ನ ನೀಡಲಾಗಿದೆ. ಜೊತೆಗೆ ಇದು ದೀರ್ಘಕಾಲ ಬಾಳಿಕೆ ಬರುವ NP-W235 ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಾಗಿದ್ದು, ಇದು ವೃತ್ತಿಪರ ಛಾಯಾಗ್ರಾಹಕರಿಗೆ ಒಂದು ಚಾರ್ಜ್‌ಗೆ ಅಂದಾಜು 500 ಫ್ರೇಮ್‌ಗಳನ್ನು ಶೂಟ್ ಮಾಡಲು ಅವಕಾಶ ನೀಡುತ್ತದೆ.

ವಿಶೇಷತೆ

ವಿಶೇಷತೆ

ಈ ಕ್ಯಾಮೆರಾದಲ್ಲಿ ಯಾವುದೇ ಶಟರ್ ಬಿಡುಗಡೆಯ ಸಮಯ ಕೇವಲ 0.035 ಸೆಕೆಂಡುಗಳವರೆಗೆ ಮಾತ್ರ ಇರಲಿದೆ. ಇನ್ನು X-T4 ಕ್ಯಾಮೆರಾದಲ್ಲಿ 4K ವಿಡಿಯೋ 60fps ಮತ್ತು 1080p ವಿಡಿಯೋವನ್ನು 240 fps ವರೆಗೆ ರೆಕಾರ್ಡ್ ಮಾಡಬಹುದಾಗಿದೆ. ಇನ್ನು ಈ ಕ್ಯಾಮೆರಾದಲ್ಲಿ 10x ಸ್ಲೋ ಮೋಷನ್‌, ಸ್ನಾಪ್‌ ಆಕ್ಷನ್‌, ಫಾಸ್ಟ್‌ ಮೂವಿಂಗ್‌ ಸಬ್ಜೆಕ್ಟ್‌ ಅನ್ನು ಸೆರೆಹಿಡಯಬಹುದಾಗಿದೆ. ಅಷ್ಟೇ ಅಲ್ಲ ಕ್ಯಾಮೆರಾದ ಮೇಲ್ಬಾಗದಲ್ಲಿ ಸ್ಟಿಲ್ / ಮೂವಿ ಮೋಡ್ ಡಯಲ್ ಸಹ ಇದ್ದು, ಇದು ಸ್ಟಿಲ್ ಇಮೇಜ್‌ಗಳು ಮತ್ತು ವೀಡಿಯೊಗಳ ವಿಭಿನ್ನ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಫ್ಯೂಜಿಫಿಲ್ಮ್X-T4 18-55 mm ಲೆನ್ಸ್ ಕಿಟ್‌ನೊಂದಿಗೆ ಬರಲಿದ್ದು, ಈ ಕ್ಯಾಮೆರಾದ ಬೆಲೆ $ 2,099 (ಅಂದಾಜು 1,50,200 ರೂ.) ಆಗಿದೆ. ಇನ್ನು ಈ ಕ್ಯಾಮೆರಾಗಳು ಇದೇ ವರ್ಷ ಏಪ್ರಿಲ್‌ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗ್ತಿದೆ.

Best Mobiles in India

English summary
Fujifilm X-T4 boasts of a central viewfinder style that has been adopted by the X-T series.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X