ಪ್ಯೂಜಿಪಿಲ್ಮ್‌ X-T4 ಫ್ಲ್ಯಾಗ್‌ಶಿಪ್ X ಸರಣಿಯ ಮಿರರ್‌ಲೆಸ್ ಕ್ಯಾಮೆರಾ ಬಿಡುಗಡೆ!

|

ಟೆಕ್ನಾಲಜಿ ಮುಂದುವರೆದಂತೆ ಕ್ಯಾಮೆರಾ ಲೋಕ ಇಂದು ಸಾಕಷ್ಟು ಕಲರ್‌ಫುಲ್‌ ಆಗಿದೆ. ಟೆಕ್‌ ವಲಯದಲ್ಲಿ ಭಿನ್ನ ವಿಭಿನ್ನ ಮಾದರಿಯ ಕ್ಯಾಮೆರಾಗಳು ಲಭ್ಯವಿವೆ. ವೃತ್ತಿಪರ ಕ್ಯಾಮೆರಾಗಳಿಂದ ಹಿಡಿದು ಹವ್ಯಾಸ ಕ್ಯಾಮೆರಾಗಳವರೆಗೂ, ವೈವಿಧ್ಯಮಯವಾದ ಕ್ಯಾಮೆರಾಗಳನ್ನ ನಾವಿಂದು ಕಾಣಬಹುದಾಗಿದೆ. ಇನ್ನು ನಿಮಗೆಲ್ಲಾ ತಿಳಿದರುವ ಹಾಗೇ ಹಲವು ಕಂಪೆನಿಗಳು ತಮ್ಮ ಹೊಸ ಮಾದರಿಯ ಕ್ಯಾಮೆರಾಗಳನ್ನ ಪರಿಚಯಿಸಿವೆ. ಇವುಗಳಲ್ಲಿ ಫ್ಯೂಜಿಫಿಲ್ಮ್‌ ಕಂಪೆನಿ ಕೂಡ ಒಂದಾಗಿದ್ದು, ಆಕರ್ಷಕ ಕ್ಯಾಮೆರಾ ಫೀಚರ್ಸ್‌ಗಳಿಂದ ಜಾಗತಿಕವಾಗಿ ಬ್ರ್ಯಾಂಡ್‌ ಎನಿಸಿಕೊಂಡಿದೆ. ಸದ್ಯ ಇದೇ ಫ್ಯೂಜಿಫಿಲ್ಮ್‌ ಕಂಪೆನಿ ತನ್ನ ಹೊಸ ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ.

ಪ್ಯೂಜಿಪಿಲ್ಮ್‌

ಹೌದು, ಪ್ಯೂಜಿಪಿಲ್ಮ್‌ ಕಂಪೆನಿ ತನ್ನ X-T4 ಫ್ಲ್ಯಾಗ್‌ಶಿಪ್ X ಸರಣಿಯ ಮಿರರ್‌ಲೆಸ್ ಕ್ಯಾಮೆರಾವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಕ್ಯಾಮೆರಾವನ್ನು ಫ್ಯೂಜಿಫಿಲ್ಮ್ ಇಂಡಿಯಾ ಆನ್‌ಲೈನ್ ಈವೆಂಟ್ ಮೂಲಕ ಬಿಡುಗಡೆ ಮಾಡಿದ್ದು, ಯೂಟ್ಯೂಬ್ ಲೈವ್ ಫೀಡ್ ಮೂಲಕ ಘೋಷಣೆ ಮಾಡಲಾಗಿದೆ. ಇನ್ನು ಈ ಹೊಸ X-T4 ಹೆಚ್ಚು ಜನಪ್ರಿಯವಾದ X-T3 ಅನ್ನು ಮೀರಿಸಲಿದೆ. ಇದಲ್ಲದೆ ಈ ಕ್ಯಾಮೆರಾದಲ್ಲಿ ಇನ್-ಬಾಡಿ ಇಮೇಜ್ ಸ್ಟೆಬಿಲೈಸೇಶನ್ (IBIS) ಅನ್ನು ನೀಡಲಾಗಿದೆ. ಇನ್ನು ಈ ಕ್ಯಾಮೆರಾ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಫ್ಯೂಜಿಫಿಲ್ಮ್‌

ಸದ್ಯ ಫ್ಯೂಜಿಫಿಲ್ಮ್‌ ಕಂಪೆನಿ ಬಿಡುಗಡೆ ಮಾಡಿರುವ X-T4 ಕ್ಯಾಮೆರಾ ಸಂಪೂರ್ಣ ಅಭಿವ್ಯಕ್ತಿಗೊಳಿಸುವ LCD ಡಿಸ್‌ಪ್ಲೇಯನ್ನ ಹೊಂದಿದೆ. ಇದಲ್ಲದೆ 26.1 ಮೆಗಾಪಿಕ್ಸೆಲ್ BSIX-ಟ್ರಾನ್ಸ್ CMOS 4 ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಈ ಕ್ಯಾಮೆರಾ ಎಕ್ಸ್-ಪ್ರೊಸೆಸರ್ 4 ಇಮೇಜ್ ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಕ್ಯಾಮೆರಾ ಹೊಸದಾಗಿ ಅಭಿವೃದ್ಧಿಪಡಿಸಿದ ಫೋಕಲ್ ಪ್ಲೇನ್ ಶಟರ್ ಅನ್ನು ಸಹ ಹೊಂದಿದೆ. ಇನ್ನು ಈ ಕ್ಯಾಮೆರಾ 15fps ಬರ್ಸ್ಟ್ ಶೂಟಿಂಗ್ ಸಾಧಿಸಲು ಅನುವು ಮಾಡಿಕೊಡುತ್ತದೆ ಮತ್ತು ಅದರ ಶಟರ್ ಬಿಡುಗಡೆಯ ಸಮಯವನ್ನು ಕೇವಲ 0.035 ಸೆಕೆಂಡುಗಳವರೆಗೆ ಇರಿಸುತ್ತದೆ ಎಂದು ಹೇಳಲಾಗ್ತಿದೆ.

ಕ್ಯಾಮೆರಾ

ಇನ್ನು ಈ ಕ್ಯಾಮೆರಾ X-T3 ಗೆ ಹೋಲಿಸಿದರೆ ಇದು 30% ರಷ್ಟು ನಿಶ್ಯಬ್ದವಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ವೀಡಿಯೊದ ವಿಷಯದಲ್ಲಿ, X-T4 4K ವಿಡಿಯೋ 60fps ಮತ್ತು 1080p ವಿಡಿಯೋವನ್ನು 240fps ವರೆಗೆ ರೆಕಾರ್ಡ್ ಮಾಡಬಹುದು. ಇನ್ನು ಕ್ಯಾಮೆರಾ ಮೇಲಿನ ಸ್ಕ್ರೀನ್‌ನಲ್ಲಿ ಸ್ಟಿಲ್ / ಮೂವಿ ಮೋಡ್ ಡಯಲ್ ಸಹ ಇದೆ, ಇದು ಸ್ಟಿಲ್ ಇಮೇಜ್‌ಗಳು ಮತ್ತು ವೀಡಿಯೊಗಳ ವಿಭಿನ್ನ ಸೆಟ್ಟಿಂಗ್‌ಗಳನ್ನು ಅನ್ವಯಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಫ್ಯೂಜಿಫಿಲ್ಮ್

ಫ್ಯೂಜಿಫಿಲ್ಮ್ X-T4 63 ಹವಾಮಾನ-ಮೊಹರು ಬಿಂದುಗಳನ್ನು ಹೊಂದಿದೆ, ಇದು X-T3 ನಂತೆಯೇ ಧೂಳು ಮತ್ತು ತೇವಾಂಶ ನಿರೋಧಕತೆಯ ಸುಧಾರಿತ ಮಟ್ಟವನ್ನು ನೀಡುತ್ತದೆ. ಈ ಕ್ಯಾಮೆರಾವು X-T ಸರಣಿಯಲ್ಲಿ ಐದು-ಅಕ್ಷದ IBIS ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿದ್ದು, ಇದು 6.5-ಸ್ಟಾಪ್ ಪ್ರಯೋಜನವನ್ನು ನೀಡುತ್ತದೆ. ಜೊತೆಗೆ ಇದು ಕ್ರೀಡೆ ಮತ್ತು ಇತರ ಸಕ್ರಿಯ ಶೂಟಿಂಗ್ ಸಂದರ್ಭಗಳಿಗೆ ಉತ್ತಮ ಆಯ್ಕೆಯಾಗಿದೆ. ಇದಲ್ಲದೆ ಈ ಕ್ಯಾಮೆರಾದಲ್ಲಿ ಬ್ಯಾಟರಿ ‘NPW235' ನೀಡಲಾಗಿದ್ದು, ಬಳಕೆದಾರರಿಗೆ XT-3 ನಲ್ಲಿ 390 ಕ್ಕೆ ಹೋಲಿಸಿದರೆ ಪ್ರತಿ ಚಾರ್ಜ್‌ಗೆ ಅಂದಾಜು 500 ಫ್ರೇಮ್‌ಗಳನ್ನು ಶೂಟ್ ಮಾಡಲು ಅವಕಾಶ ನೀಡಿದೆ.

ಫ್ಯೂಜಿಫಿಲ್ಮ್

ಇನ್ನು ಫ್ಯೂಜಿಫಿಲ್ಮ್ ಇಂಡಿಯಾ X-T4 ಬೆಲೆ ಕೇವಲ ಬಾಡಿ ಲೆವೆಲ್‌ಗೆ 1,54,999 ರೂ. ಫ್ಯೂಜಿನಾನ್ XF18-55 MMF 2.8-4 ಕಿಟ್ ಲೆನ್ಸ್‌ನೊಂದಿಗೆ ಬಂಡಲ್ ಬೆಲೆ ರೂ. 1,84,999 ಆಗಿದ್ದರೆ, ಫ್ಯೂಜಿನಾನ್ XF 16-80MMF 4 ROISWR ಹೊಂದಿರುವ ಬಂಡಲ್ ಬೆಲೆ ರೂ. 1,99,999 ರೂ. ಆಗಿದೆ. ಇದಲ್ಲದೆ ಗ್ರಾಹಕರು V90 64GB UHS-2 ಮೆಮೊರಿ ಕಾರ್ಡ್ ಮತ್ತು BC-W235 ಡ್ಯುಯಲ್ ಬ್ಯಾಟರಿ ಚಾರ್ಜರ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದರ ಒಟ್ಟು ಮೌಲ್ಯ ರೂ. 18,500 ಆಗಿದೆ ಎನ್ನಲಾಗ್ತಿದೆ.

Best Mobiles in India

English summary
Fujifilm India had an online event where top-level executives made the announcement through a YouTube live feed.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X