ಕ್ಯಾಮೆರಾದಲ್ಲಿ ಕೇವಲ 5 ಸೆಕೆಂಡ್‌ನಲ್ಲಿ ಆರೋಗ್ಯ ಪರೀಕ್ಷೆ

Posted By:

ನೀವು ಏನಾದ್ರೂ ಆರೋಗ್ಯ ಸರಿಯಿದ್ದರೂ, ಸರಿಯಿಲ್ಲವೆಂದು ಹೇಳಿ ಕಂಪೆನಿಗೆ ಚಕ್ಕರ್‌ ಹಾಕುವ ಆಭ್ಯಾಸ ಮಾಡಿಕೊಂಡಿದ್ದೀರಾ? ಹಾಗಾದ್ರೆ ಇನ್ನು ಮುಂದೆ ನಿಮ್ಮ ಕಳ್ಳಾಟ ನಡೆಯಲ್ಲ. ಕಳ್ಳಾಟವನ್ನು ಬ್ರೇಕ್‌ ಮಾಡಲು ಹೊಸ ಕ್ಯಾಮೆರಾ ಸಾಫ್ಟ್‌ವೇರ್‌ ಬರಲಿದೆ.

ಸಾಫ್ಟ್‌ವೇರ್‌ ಯುಗದಲ್ಲಿ ಏನೇನೋ ಹೊಸ ಹೊಸ ಸಾಫ್ಟ್‌ವೇರ್‌ ಬರುತ್ತಿರುತ್ತವೆ. ಇದಕ್ಕೆ ಈಗ ಹೊಸ ಸೇರ್ಪಡೆಯಾಗಿ ಕ್ಯಾಮೆರಾದ ಕಣ್ಣಿನಿಂದಲೇ ಮನುಷ್ಯನ ದೇಹದ ಆರೋಗ್ಯ ಪತ್ತೆ ಹಚ್ಚುವ ಕ್ಯಾಮೆರಾ ಬರುತ್ತಿದ್ದು, ನಿಮ್ಮ ಮುಖವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಕೇವಲ 5 ಸೆಕೆಂಡ್‌ನಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿದೆಯೋ ? ಇಲ್ವೋ? ಎಂಬುದರ ವರದಿ ನೀಡಲಿದೆಯಂತೆ.

ಕ್ಯಾಮೆರಾದಲ್ಲಿ ಕೇವಲ 5 ಸೆಕೆಂಡ್‌ನಲ್ಲಿ ಆರೋಗ್ಯ ಪರೀಕ್ಷೆ

ಜಪಾನಿನ Fujitsu ಟೆಕ್ನಾಲಜಿ ಸಂಸ್ಥೆ ಈ ಸಾಫ್ಟ್‌ವೇರ್‌ನ್ನು ನಿರ್ಮಾಣ ಮಾಡುತ್ತಿದ್ದು ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಈ ಸಾಫ್ಟ್‌ವೇರ್‌ ಅಪ್ಲಿಕೇಶನ್‌ ಇದ್ದರೆ, ನಿಮ್ಮ ಮುಖವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಕೇವಲ 5 ನಿಮಿಷದಲ್ಲಿ ಹೃದಯ ಬಡಿತ ಲೆಕ್ಕವನ್ನು ಸಹ ನೀಡುತ್ತದೆಯಂತೆ.

ಮುನುಷ್ಯನ ಮುಖ ಹೊಳೆಯಲು ದೇಹದ ರಕ್ತದ ಹರಿವೇ ಮುಖ್ಯ ಕಾರಣ ಎನ್ನುವ ವೈಜ್ಞಾನಿಕ ಸಂಶೋಧನೆಯ ಆಧಾರದ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನ ರೂಪುಗೊಳ್ಳುತ್ತಿದೆ ಎಂದು Fujitsu ಟೆಕ್ನಾಲಜಿ ತಿಳಿಸಿದೆ. ಆದರೆ ಸದ್ಯ ಈ ತಂತ್ರಜ್ಞಾನದ ಬಗ್ಗೆ ಪ್ರಯೋಗ ನಡೆಯುತ್ತಿದ್ದು, ಏಪ್ರಿಲ್‌ 2014ಕ್ಕೆ ಈ ಸಾಫ್ಟ್‌ವೇರ್‌ ಮಾರುಕಟ್ಟೆಗೆ ಬರಲಿದೆ ಎಂದು ಕಂಪೆನಿ ಹೇಳಿದೆ.

ಲಿಂಕ್‌ : ಶೂ ಮೊಬೈಲ್‌ ಚಾರ್ಜರ್‌ ನೋಡಿದ್ದೀರಾ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot