Home
ಸುದ್ದಿಜಾಲ

ಭವಿಷ್ಯದ ಸ್ಮಾರ್ಟ್‌ಪೋನ್‌ಗಳು ಹೀಗೆಲ್ಲಾ ಇರುತ್ತವಂತೆ!!

By Bhaskar N J

ಈ 10 ರಿಂದ 20 ವರ್ಷಗಳ ಹಿಂದೆ ಮೊಬೈಲ್‌ಗಳನ್ನೇ ಆಶ್ಚರ್ಯವಾಗಿ ನೋಡುತ್ತಿದ್ದ ಪ್ರತಿಯೊರ್ವರು ಇಂದು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ. ಪ್ರಸ್ತುತ ಸಮಯದಲ್ಲಿ ಮೊಬೈಲ್ ತಂತ್ರಜ್ಞಾನ ಬೆಳಕಿನ ವೇಗದಲ್ಲಿ ಬದಲಾಗುತ್ತಿದೆ. ಮುಂದಿನ ಕೇವಲ ಹತ್ತು ವರ್ಷಗಳಲ್ಲಿ ಸ್ಮಾರ್ಟ್‌ಫೋನ್ ಪ್ರಪಂಚವು ಯಾರು ಊಹಿಸಲಾಗದಷ್ಟು ಬದಲಾಗುತ್ತದೆ ಎನ್ನುತ್ತಿದೆ ಟೆಕ್ ಪ್ರಪಂಚ.!

ಹೌದು, ಕೃತಕ ಬುದ್ದಿ ಮತ್ತೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಸ್ಮಾರ್ಟ್‌ಫೋನ್ ಅನ್ನು ಆವರಿಸಿಕೊಂಡಿರುತ್ತವಂತೆ. ಕಂಪ್ಯೂಟರ್ ಬಳಕೆಯನ್ನೇ ಮುಗಿಸುವಷ್ಟು ತಂತ್ರಜ್ಞಾನವನ್ನು ಭವಿಷ್ಯದ ಸ್ಮಾರ್ಟ್‌ಫೋನ್‌ಗಳು ಹೊಂದಿರುತ್ತವಂತೆ. ಇದಕ್ಕೆ ಪೂರಕವಾಗಿ, ಇಂಟರ್‌ನೆಟ್ ಪ್ರಪಂಚ ಕೂಡ ಮಿಂಚಿನಂತೆ ಬದಲಾಗಿಬಿಡುತ್ತದೆ ಎಂದು ತಂತ್ರಜ್ಞಾನ ಪ್ರಪಂಚ ಊಹಿಸಿದೆ.

ಭವಿಷ್ಯದ ಸ್ಮಾರ್ಟ್‌ಪೋನ್‌ಗಳು ಹೀಗೆಲ್ಲಾ ಇರುತ್ತವಂತೆ!!

ನಾವು ಈಗ ನೋಡುತ್ತಿರುವ ಸ್ಮಾರ್ಟ್‌ಫೋನ್‌ಗಳು ಇನ್ನು ಹತ್ತು ವರ್ಷಗಳಲ್ಲಿ ಮೂಲೆಗೆ ಸೇರುತ್ತವೆ ಎಂದು ತಂತ್ರಜ್ಞಾನ ಪ್ರಪಂಚದ ದಿಗ್ಗಜರು ಹೇಳುತ್ತಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಭವಿಷ್ಯದ ಸ್ಮಾರ್ಟ್‌ಪೋನ್‌ಗಳು ಹೇಗೆ ಬದಲಾಗಬಹುದು? ಏನೆಲ್ಲಾ ತಂತ್ರಜ್ಞಾನಗಳನ್ನು ಹೊಂದಬಹುದು ಎಂದು ತಂತ್ರಜ್ಞಾನ ಪ್ರಪಂಚ ಊಹಿಸಿರುವುದನ್ನು ನಾವಿಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.!

ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್!

ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್!

ಮಡುಚುವ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್ ತಂತ್ರಜ್ಞಾನದ ಬಗ್ಗೆ ಈಗಾಗಲೇ ಅಭಿವೃದ್ದಿ ನಡೆಯುತ್ತಿದೆ. ಎಲ್‌ಜಿ, ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸಂಶೋಧನೆ ನಡೆಸುತ್ತಿವೆ. ಈಗಾಗಲೇ ಸ್ವಲ್ಪಮಟ್ಟಿನ ಯಶಸ್ಸನ್ನು ಸಹ ಈ ತಂತ್ರಜ್ಞಾನ ಪಡೆದುಕೊಂಡಿರುವುದು ಭವಿಷ್ಯದಲ್ಲಿ ಮಡುಚಬಹುದಾದ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್ ಆಸೆಯನ್ನು ಹೊತ್ತಿದೆ.

ಪಾರದರ್ಶಕ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ!

ಪಾರದರ್ಶಕ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ!

ಸ್ಮಾರ್ಟ್‌ಫೋನ್ ತಂತ್ರಜ್ಞಾನದಲ್ಲಿ ಬಹುಬೇಗ ಬದಲಾವಣೆ ಕಾಣುವ ತಂತ್ರಜ್ಞಾನ ಎಂದು ಹೇಳಲಾಗುತ್ತಿರುವ ಪಾರದರ್ಶಕ ಡಿಸ್‌ಪ್ಲೇ ಕಲ್ಪನೆಯೇ ಅತ್ಯದ್ಬುತವಾಗಿದೆ.ಸ್ಮಾರ್ಟ್‌ಫೋನ್ ಒಂದು ಬದಿಯಿಂದ ಮತ್ತೊಂದು ಬದಿಯನ್ನು ಪಾರದರ್ಶಕವಾಗಿ ನೋಡಬಹುದಾದ ಪಾರದರ್ಶಕ ಡಿಸ್‌ಪ್ಲೇ ಇನ್ನೆನು ಕೆಲವೇ ವರ್ಷಗಳಲ್ಲಿ ಕಾಲಿಡುತ್ತದೆ ಎಂದರೆ ಆಶ್ಚರ್ಯವೇನಿಲ್ಲ.!

ವೈರ್‌ಲೆಸ್ ಚಾರ್ಜಿಂಗ್!

ವೈರ್‌ಲೆಸ್ ಚಾರ್ಜಿಂಗ್!

ಭವಿಷ್ಯದ್ಲಲಿ ಸ್ಮಾರ್ಟ್‌ಪೋನ್ ಸೇರಿದಂತೆ ಎಲ್ಲಾ ಸ್ಮಾರ್ಟ್‌ ಡಿವೈಸ್‌ಗಳು ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ನಂಬಲಾರದ ರೀತಿಯಲ್ಲಿ ಹೊಂದುತ್ತವೆ ಎಂದು ಹೇಳಲಾಗಿದೆ. ಮನೆಯಲ್ಲಿನ ಪವರ್ ಸ್ಟೇಷನ್ ಇಂದ ಎಲ್ಲಾ ಸ್ಮಾರ್ಟ್‌ ಡಿವೈಸ್‌ಗಳು ವೈರ್‌ಲೆಸ್ ಸಿಗ್ನಲ್‌ಗಳಿಂದ ಚಾರ್ಜ್ ಆಗುತ್ತವೆ. ಮನೆಯ ಯಾವುದೇ ಸ್ಥಳದಲ್ಲಿ ಚಾರ್ಜ್ ಸ್ವಯಂಚಾಲಿತ ಆಗುವ ಸಾಮರ್ಥ್ಯ ಅವುಗಳಿಗೆ ಇರಲಿದೆಯಂತೆ.

ಸ್ಮಾರ್ಟ್‌ವಾಚ್ ಪ್ರೊಜೆಕ್ಟರ್!

ಸ್ಮಾರ್ಟ್‌ವಾಚ್ ಪ್ರೊಜೆಕ್ಟರ್!

ಈಗ ಇರುವ ಸ್ಮಾರ್ಟ್‌ವಾಚ್‌ಗಳೇ ಮುಂದೆ ಮತ್ತಷ್ಟು ಬದಲಾಗುತ್ತವೆ. ಕೇವಲ ಒಂದು ಸ್ಮಾರ್ಟ್‌ವಾಚ್ ಸ್ಮಾರ್ಟ್‌ಫೋನ್ ರೀತಿಯ ಕಾರ್ಯನಿರ್ವಹಣೆಯನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್ ಹೊರಸೂಸುವ ಪಾರದರ್ಶಕ ಬೆಳಕಿನ ಪರದೆಯ ಮೂಲಕವೇ ಸ್ಮಾರ್ಟ್‌ಫೋನ್‌ನಲ್ಲಿ ನಿರ್ವಹಿಸಬಹುದಾದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಟೆಕ್ ಪ್ರಪಂಚ ಈ ತಂತ್ರಜ್ಞಾನ ಅಭಿವೃದ್ದಿಯತ್ತ ಹೆಚ್ಚು ಒಲವು ತೋರಿದೆ.

3D ಸ್ಮಾರ್ಟ್‌ಫೋನ್ ಡಿಸ್‌ಪ್ಲೇ!

3D ಸ್ಮಾರ್ಟ್‌ಫೋನ್ ಡಿಸ್‌ಪ್ಲೇ!

ಥಿಯೇಟರ್‌ಗಳಲ್ಲಿ ಸಿನಿಮಾಗಳನ್ನು 3D ಅನುಭವದಲ್ಲಿ ನೋಡುವ ರಿತಿಯಲ್ಲಿಯೇ, ಭವಿಷ್ಯದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿಯೇ 3D ಅನುಭವ ನೀಡುವ ಡಿಸ್‌ಪ್ಲೇ ತಯಾರಾಗಲಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಸಹಾಯದಿಂದ ಭವಿಷ್ಯದ ಸ್ಮಾರ್ಟ್‌ಫೋನ್‌ಗಳೆಲ್ಲವೂ 3D ಸ್ಮಾರ್ಟ್‌ಫೋನ್‌ಗಳಾಗಿರಲಿವೆ ಎಂದು ಟೆಕ್ ಪ್ರಪಂಚ ಊಹಿಸಿ ಅಭಿವೃದ್ದಿಯತ್ತ ದೃಷ್ಟಿಯನ್ನು ಹಾಯಿಸಿದೆ.

ಫೋನ್ ಬ್ಯಾಟರಿ ಖಾಲಿಯಾಗುವುದೇ ಇಲ್ಲ!

ಫೋನ್ ಬ್ಯಾಟರಿ ಖಾಲಿಯಾಗುವುದೇ ಇಲ್ಲ!

ಇನ್ನು ಹತ್ತು ವರ್ಷಗಳಲ್ಲಿ ಬ್ಯಾಟರಿ ಖಾಲಿಯಾಗುವುದೇ ಇಲ್ಲದ ಸ್ಮಾರ್ಟ್‌ಫೋನ್ ತಂತ್ರಜ್ಞಾನ ಅಭಿವೃದ್ದಿಯಾಗುತ್ತದೆ. ಕೇವಲ ಸೋಲಾರ್ ಪವರ್ ಮೂಲಕವೇ ಸ್ಮಾರ್ಟ್‌ಫೋನ್ ಸ್ವಯಂ ಚಾರ್ಜ್ ಆಗುವ ತಂತ್ರಜ್ಞಾನ ಬೆಳವಣಿಗೆಯಾಗಲಿದೆಯಂತೆ. ಈಗಾಗಲೇ ಈ ತಂತ್ರಜ್ಞಾನದ ಅಭಿವೃದ್ದಿಗಾಗಿ ಟೆಕ್ ಪ್ರಪಂಚ ಶ್ರಮಿಸುತ್ತಿರುವ ಬಗ್ಗೆ ಮಾಹಿತಿಗಳಿವೆ.

5G ಪ್ರಪಂಚ!

5G ಪ್ರಪಂಚ!

ಭವಿಷ್ಯದಲ್ಲಿ ಜಗತ್ತಿನ ಬಹುತೇಕ ವ್ಯವಹಾರ ಕಾರ್ಯಗಳು ಆನ್‌ಲೈನ್‌ನಲ್ಲಿಯೇ ನಡೆಯುವುದರಿಂದ ಕೆವಲ ಇನ್ನೈದು ವರ್ಷಗಳಲ್ಲಿ ಪ್ರಪಂಚವೇ ಡೇಟಾ ಮೂಲಕ ಆವೃತವಾಗಲಿದೆ ಪ್ರತಿಯೊಂದು GB ಡೇಟಾದ ಬೆಲೆ 1 ರೂಪಾಯಿಗಳಿಗಿಂತ ಕಡಿಮೆಯಾಗುತ್ತದೆಯಂತೆ. 5G ತಂತ್ರಜ್ಞಾನ ಅಭಿವೃದ್ದಿಯಾದರೆ ಇದು ಸಾಧ್ಯವಾಗಲಿದೆ ಎನ್ನುತ್ತಿವೆ ವರದಿಗಳು.!

Best Mobiles in India

English summary
It's been a while since smartphones have been exciting, but that may all change in the near future with the new smartphone technologies. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+