Home
ಸುದ್ದಿಜಾಲ

ಆಹಾರದಲ್ಲಿರುವ ಕ್ಯಾಲೋರಿ ಕಂಡುಹಿಡಿಯುತ್ತಂತೆ ಈ ಗ್ಯಾಜೆಟ್

By Shwetha

ಆರೋಗ್ಯವಾಗಿರಲು ಉತ್ತಮ ಆಹಾರದೊಂದಿಗೆ ಆಹಾರದಲ್ಲಿರುವ ಕ್ಯಾಲೋರಿಯನ್ನು ಕೂಡ ನಾವು ಲೆಕ್ಕಹಾಕುವುದು ಅತ್ಯಗತ್ಯವಾಗಿದೆ. ದೇಹದ ಅಪರಿಮಿತ ತೂಕವು ಕಾಯಿಲೆಗಳ ವಾಸಸ್ಥಾನವಾಗಿ ಪರಿಣಮಿಸುತ್ತದೆ ಆದ್ದರಿಂದ ಆಹಾರವನ್ನು ತೆಗೆದುಕೊಳ್ಳುವಾಗ ಅದರ ಕ್ಯಾಲೋರಿಯತ್ತ ಕೂಡ ನಾವು ಗಮನ ಕೊಡಬೇಕಾದ್ದು ಮುಖ್ಯ.

ರೆಡಿಯಾಗಿ ಸಿಗುವ ಆಹಾರವನ್ನೇ ನಾವು ಹೆಚ್ಚು ತಿನ್ನುವುದರಿಂದ ಮತ್ತು ಫಾಸ್ಟ್ ಫುಡ್ ಕಲ್ಪನೆ ಈಗೀಗ ನಮ್ಮ ಜೀವನದಲ್ಲಿ ಹೆಚ್ಚಾಗಿರುವುದರಿಂದ ಕ್ಯಾಲೋರಿ ಲೆಕ್ಕ ಹಾಕುವ ಪುರುಸೊತ್ತು ಕೂಡ ನಮ್ಮಲ್ಲಿರುವುದಿಲ್ಲ. ಹಾಗಿದ್ದರೆ ನಾವು ತಿನ್ನುವ ಆಹಾರದಲ್ಲಿ ಕ್ಯಾಲೋರಿ ತುಲನೆ ಮಾಡುವುದು ಹೇಗೆ?

ಕ್ಯಾಲೋರಿ ಲೆಕ್ಕ ಹಾಕುವ ವಿಶೇಷ ಗ್ಯಾಜೆಟ್

ಅದಕ್ಕಾಗಿ ಇಂದಿನ ಲೇಖನದಲ್ಲಿ ಅತಿ ವಿಶಿಷ್ಟವಾದ ಕ್ಯಾಲೋರಿ ಲೆಕ್ಕ ಹಾಕುವ ಗ್ಯಾಜೆಟ್ ಕುರಿತಾದ ವರದಿಯನ್ನು ನಾವು ನಿಮ್ಮ ಮುಂದಿಡುತ್ತಿದ್ದು ಇದರ ಪ್ರಯೋಜನವನ್ನು ನಿಮಗೆ ತಿಳಿಯಬಹುದಾಗಿದೆ. ಒಂದು ಆಪಲ್ ಅನ್ನು ನೀವು ಖರೀದಿಸಿದರೆಂದರೆ ಈ ಗ್ಯಾಜೆಟ್ ಬಳಸಿ ಅದರಲ್ಲಿರುವ ಸಿಹಿ, ಅದನ್ನು ಯಾವುದರಿಂದ ತಯಾರಿಸಲಾಗಿದೆ ಮುಂತಾದ ಎಲ್ಲಾ ಮಾಹಿತಿಯನ್ನು ನಿಮಗೆ ತಿಳಿದುಕೊಳ್ಳಬಹುದಾಗಿದೆ.

ಇದೊಂದು ಪಾಕೆಟ್ ಗಾತ್ರದ ಮೊಲೆಕ್ಯುಲರ್ ಸೆನ್ಸರ್ ಆಗಿದ್ದು ಇದರ ಪೇಟೆಂಟ್ ಹಕ್ಕನ್ನು ಕನ್ಸ್ಯೂಮರ್ ಫಿಸಿಕ್ಸ್ ಇಂಕ್ ಪಡೆದುಕೊಂಡಿದೆ. ನೀವು ತಿನ್ನುವ ವಸ್ತುವಿನ ಬಳಿ ಈ ಗ್ಯಾಜೆಟ್ ಅನ್ನು ಇಟ್ಟು ಎರಡು ಸೆಕೆಂಡುಗಳ ಕಾಲ ಬಟನ್ ಅನ್ನು ಒತ್ತಿ ಹಿಡಿಯಬೇಕು. ಈ ಸಾಮಾಗ್ರಿ ವಸ್ತುವನ್ನು ಕೂಡಲೇ ಪರಿಶೀಲಿಸಿ ಬಳಕೆದಾರರ ಸ್ಮಾರ್ಟ್‌ಫೋನ್‌ಗೆ ಕ್ಲೌಡ್ ಮೂಲಕ ಇದರೆಲ್ಲಾ ಮಾಹಿತಿಯನ್ನು ಕಳುಹಿಸುತ್ತದೆ. ನಂತರ ನಿಮಗೆ ಬೇಕಾದ್ದ ಮಾಹಿತಿಯನ್ನು ಪರದೆಯಲ್ಲಿ ಇದು ತೋರಿಸುತ್ತದೆ.

ಡಿಸೆಂಬರ್ 2014 ಕ್ಕೆ ಈ ಗ್ಯಾಜೆಟ್ ನಿಮ್ಮ ಬಳಿ ಬರಲಿದೆ. ಈ ಗ್ಯಾಜೆಟ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡಲು ಕೆಳಗಿನ ವೀಡಿಯೋವನ್ನು ನೋಡಿ.

<center><iframe width="100%" height="398" src="//www.youtube.com/embed/BrtGSEwfIJY" frameborder="0" allowfullscreen></iframe></center>

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+