ಬೆಂಗಳೂರಿನಲ್ಲಿ ಬಿಡುಗಡೆಯಾಗಲಿವೆ ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+!

|

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಸ್ಮಾರ್ಟ್‌ಫೋನ್‌ಗಳು ಆಗಸ್ಟ್ 20 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗುತ್ತಿವೆ. ಬೆಂಗಳೂರಿನಲ್ಲಿರುವ ಸ್ಯಾಮ್‌ಸಂಗ್ ಒಪೇರಾ ಹೌಸ್‌ನಲ್ಲಿ ನಡೆಯಲಿರುವ ಮೊಬೈಲ್ ಬಿಡುಗಡೆ ಕಾರ್ಯಕ್ರಮಕ್ಕಾಗಿ ಕಂಪನಿಯು ಅಧಿಕೃತ ಆಹ್ವಾನಗಳನ್ನು ಕಳುಹಿಸಿದ್ದು, ಆಗಸ್ಟ್ 20 ರಂದು ಮಧ್ಯಾಹ್ನ 12 ಗಂಟೆಯಿಂದ ಮೊಬೈಲ್ ಬಿಡುಗಡೆ ಸಮಾರಂಭ ಪ್ರಾರಂಭವಾಗಲಿದೆ.

ಬೆಂಗಳೂರಿನಲ್ಲಿ ಬಿಡುಗಡೆಯಾಗಲಿವೆ ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+!

'ಬೆಂಗಳೂರಿನ ಸ್ಯಾಮ್‌ಸಂಗ್ ಒಪೇರಾ ಹೌಸ್‌ನಲ್ಲಿ ನಿಮ್ಮನ್ನು ನೋಡೋಣ' ಎಂಬ ವಿಶೇಷ ಆಹ್ವಾನವನ್ನು ಕಂಪೆನಿ ನೀಡಿದ್ದು, ದೇಶದಲ್ಲಿ ಗ್ಯಾಲಕ್ಸಿ ನೋಟ್ 10, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+ ಉಡಾವಣಾ ಕೊಡುಗೆಗಳನ್ನು ಬಹಿರಂಗಪಡಿಸುತ್ತದೆ. ಈಗಾಗಲೇ ತಿಳಿದಿರುವಂತೆ ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಬಹಿರಂಗಪಡಿಸಿದೆ ಮತ್ತು ಮಾರಾಟವು ಆಗಸ್ಟ್ 23 ರಿಂದ ಪ್ರಾರಂಭವಾಗಲಿದೆ.

ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10, ಗ್ಯಾಲಕ್ಸಿ ನೋಟ್ 10+ ಬೆಲೆಗಳನ್ನು ಸ್ಯಾಮ್‌ಸಂಗ್ ಅಧಿಕೃತವಾಗಿ ಪ್ರಕಟಿಸಿದ್ದು, 8 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10 ಬೆಲೆ ಭಾರತದಲ್ಲಿ 69,999 ರೂ.ಗಳಿಂದ ಪ್ರಾರಂಭವಾಗಿದೆ. 12 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10+ ಬೆಲೆ 79,999 ರೂ. ಹಾಗೂ 12 ಜಿಬಿ RAM ಮತ್ತು 512 ಜಿಬಿ ಸಂಗ್ರಹದೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+ ಬೆಲೆ 89,999 ರೂ.ಗಳಾಗಿವೆ.

ಬೆಂಗಳೂರಿನಲ್ಲಿ ಬಿಡುಗಡೆಯಾಗಲಿವೆ ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+!

ಇನ್ನು ಭಾರತದಲ್ಲಿ ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+ ಅನ್ನು ಮೊದಲೇ ಬುಕ್ ಮಾಡಲು ಸ್ಯಾಮ್‌ಸಂಗ್ ಕೊಡುಗೆಗಳನ್ನು ಸಹ ಪ್ರಾರಂಭಿಸಿದೆ. ಯಾವುದೇ ಪೋನನ್ನು ಮೊದಲೇ ಆರ್ಡರ್ ಮಾಡಿದ ಎಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹಾಗೂ ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್‌ನಿಂದ 6,000 ಕ್ಯಾಶ್‌ಬ್ಯಾಕ್ ಸಿಗಲಿದೆ. ಫೋನ್ ಬುಕ್ಕಿಂಗ್ ಜೊತೆಗೆ 19,990 ರೂಪಾಯಿಗಳ ಗ್ಯಾಲಕ್ಸಿ ವಾಚ್ ಆಕ್ಟಿವ್ ಅನ್ನು 9,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.

ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+: ತಿಳಿಯಲೇಬೇಕಾದ 5 ವಿಷಯಗಳು!ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+: ತಿಳಿಯಲೇಬೇಕಾದ 5 ವಿಷಯಗಳು!

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 6.3-ಇಂಚಿನ ಎಫ್‌ಹೆಚ್‌ಡಿ + ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ, ಆದರೆ ಗ್ಯಾಲಕ್ಸಿ ನೋಟ್ 10+ 6.8-ಇಂಚಿನ ಕ್ಯೂಹೆಚ್‌ಡಿ + ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಎರಡೂ ಮಾದರಿಗಳು ಎಕ್ಸಿನೋಸ್ 9825 SoC ನಿಂದ 12GB RAM ಮತ್ತು 512GB ಆಂತರಿಕ ಸಂಗ್ರಹಣೆಯನ್ನು ಹೊಂದಿವೆ. ಈ ಸಾಧನಗಳು ಆಂಡ್ರಾಯ್ಡ್ 9 ಪೈ ಓಎಸ್‌ನಲ್ಲಿ ಕಸ್ಟಮ್ ಒನ್ ಯುಐ ಮೂಲಕ ರನ್ ಆಗಲಿದ್ದು, ಜೊತೆಗೆ ಅತ್ಯುತ್ತಮ ಫ್ಲಾಗ್‌ಶಿಪ್ ಫೀಚರ್ಸ್‌ಗಳನ್ನು ಹೊಂದಿರುವುದನ್ನು ನಾವು ನೋಡಬಹುದು.

Best Mobiles in India

English summary
Galaxy Note 10, Galaxy Note 10+ India Launch Event Set for August 20. the Samsung Galaxy Note 10 price in India is set at Rs. 69,999 for the sole 8GB RAM + 256GB storage variant. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X