ಗ್ಯಾಲಾಕ್ಸಿ ನೋಟ್ 8 ಸ್ಮಾರ್ಟ್‌ಫೋನ್ ಹೇಗಿರಲಿದೆ?..ಫೀಚರ್ಸ್ ಏನು?
ಗ್ಯಾಲಾಕ್ಸಿ ನೋಟ್ 8 ಸ್ಮಾರ್ಟ್‌ಫೋನ್ ಹೇಗಿದೆ? ಬೆಲೆ ಏಕೆ ಹೆಚ್ಚು?
ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್ 8 ಸ್ಮಾರ್ಟ್‌ಫೋನ್ ಖರೀದಿಸಲು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ. ಹಾಗೂ ಒಂದು ಕೆಟ್ಟ ಸುದ್ದಿ.! ಹೌದು, ಗ್ಯಾಲಾಕ್ಸಿ ನೋಟ್ 8 ಸ್ಮಾರ್ಟ್‌ಪೋನ್ ಬೆಲೆ ಎಸ್8 ಗಿಂತಲೂ ಹೆಚ್ಚು ದುಬಾರಿಯಾಗಿರಲಿದೆ. ಇದರ ಜೊತೆಗೆ ಸ್ಮಾರ್ಟ್‌ಫೋನ್ ಫೀಚರ್ಸ್ ಏನು ಎಂಬ ಮಾಹಿತಿ ಸಹ ಹೊರಬಿದ್ದಿದೆ.!!
ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್ 8 ಆಗಸ್ಟ್ 26ಕ್ಕೆ ಬಿಡುಗಡೆಯಾಗುತ್ತಿದ್ದು, ಸ್ಮಾರ್ಟ್‌ಫೋನ್ ಹೊಂದಿರುವ ಫೀಚರ್ಸ್ ಈಗಾಗಲೇ ವಿಶ್ವದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರಿ ಹವಾ ಎಬ್ಬಿಸಿದೆ. ಇದೇ ಮೊದಲ ಸಾರಿ ಹಲವು ವಿಶೇಷತೆಗಳನ್ನು ಗ್ಯಾಲಾಕ್ಸಿ ನೋಟ್ 8 ಹೊತ್ತು ಬರುತ್ತಿದ್ದು, ಗ್ಯಾಲಾಕ್ಸಿ ನೋಟ್ 8 ಸ್ಮಾರ್ಟ್‌ಫೋನ್ ಹೇಗಿದೆ? ಬೆಲೆ ಏಕೆ ಹೆಚ್ಚು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಅದ್ಬುತವಾಗಿರಲಿದೆ ಡಿಸ್‌ಪ್ಲೇ!!
ಸ್ಯಾಮ್‌ಸಂಗ್ ಕಂಪೆನಿ ಇದೀಗ ಬಿಗ್ ಡಿಸ್‌ಪ್ಲೇ ಕಡೆಗೆ ಮುಖಮಾಡಿದ್ದು, ಇದೇ ಮೊದಲ ಬಾರಿಗೆ 6 ಇಂಚ್‌ಗಿಂತಲೂ ಹೆಚ್ಚಿನದಾದ ಡಿಸ್‌ಪ್ಲೇ ಪರಿಚಯಿಸುತ್ತಿದೆ. ಗ್ಯಾಲಾಕ್ಸಿ ನೋಟ್ 8 ಫೋನ್ 6.3 ಇಂಚ್ ಇನ್ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿದ್ದು ಪ್ರಮುಖವಾಗಿ ಮಲ್ಟಿಮೀಡಿಯಾಗಾಗಿಯೇ ಡಿಸ್‌ಪ್ಲೇ ರೂಪುಗೊಂಡಿದೆ.!!

RAM ಮತ್ತು ಆಂತರಿಕ ಮೆಮೊರಿ.!!
ಎಸ್ 8 ಹೊಂದಿದ್ದಕ್ಕಿಂತ ಎರಡುಪಟ್ಟು RAM ಅನ್ನು ಗ್ಯಾಲಾಕ್ಸಿ ನೋಟ್ 8 ಸ್ಮಾರ್ಟ್‌ಫೋನ್ ಹೊಂದಿರಲಿದೆ. 8GB RAM ಮತ್ತು 128GB ಆಂತರಿಕ ಮೆಮೊರಿಯನ್ನು ಸ್ಮಾರ್ಟ್‌ಫೋನ್ ಹೊಂದಿದ್ದು, ಇದರ ಜೊತೆಗೆ 256GBವರೆಗೂ ಮೆಮೊರಿಯನ್ನು ಹೆಚ್ಚಿಸುವ ಆಯ್ಕೆ ಸಿಗಲಿದೆ.!!

ಪ್ರೊಸೆಸರ್ ಯಾವುದು?
ಪ್ರಸ್ತುತ ಅತ್ಯಾಧುನಿಕ ಚಿಪ್‌ಸೆಟ್ ಕ್ವಾಲ್ಕಮ್ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 835 ಚಿಪ್‌ಸೆಟ್ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್ 8 ನಲ್ಲಿರಲಿದೆ.! ಮೊದಲೇ ಹೈ ಎಂಡ್ ರೂಪದಲ್ಲಿ ಹೊರಬರುತ್ತಿರುವ ನೋಟ್ 8 ಕಾರ್ಯನಿರ್ವಹಣೆಯ ಮೇಲೇ ಹೆಚ್ಚು ಕುತೋಹಲ ಗರಿಗೆದರಿದೆ.!!

ಡ್ಯುವೆಲ್ ಕ್ಯಾಮೆರಾ ಇರಲಿದೆಯಾ?
ಪ್ರಸ್ತುತ ಯಾವುದೇ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಸಹ ಡ್ಯುವೆಲ್ ಕ್ಯಾಮೆರಾ ಹೊಂದಿಲ್ಲ. ಆದರೆ, ಇತರ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಸ್ಯಾಮ್‌ಸಂಗ್ ನೋಟ್ 8 ಮೂಲಕ ಡ್ಯುವೆಲ್ ಕ್ಯಾಮೆರಾ ಪರಿಚಯಿಸುತ್ತಿದೆ ಎಂದು ಹೇಳಲಾಗಿದೆ.!!

ಬೆಲೆ ಮತ್ತು ಇತರ ವಿಶೇಷತೆಗಳು!!
ಬಿಡುಗಡೆಯಾಗುತ್ತಿರುವ ನೋಟ್ 8 ಸ್ಮಾರ್ಟ್‌ಫೋನ್ ಪ್ರಸ್ತುತ ಲಭ್ಯವಿರುವ ಬಹುತೇಕ ಎಲ್ಲಾ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಬೆಳಕಿನ ವೇಗದ ಫಿಂಗರ್‌ಪ್ರಿಂಟ್ ಫೀಚರ್, ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ ಫೀಚರ್ ಎಲ್ಲವೂ ನೋಟ್ 8 ನಲ್ಲಿರಲಿವೆ. ಹಾಗಾಗಿಯೇ, ಬೆಲೆ ಹೆಚ್ಚಿದ್ದು, 70,000 ದಿಂದ 80,000 ರೂಪಾಯಿಗಳಾಗಿರಲಿದೆ.!!


Click it and Unblock the Notifications