ಸ್ಯಾಮ್ ಸಂಗ್ ಪೋನ್ ಗಳ ಮೇಲೆ ಫ್ಲಿಪ್ ಕಾರ್ಟ್ ನಲ್ಲಿ ಇಂದಿನಿಂದ ಭಾರೀ ಆಫರ್..!

By Gizbot Bureu

  ಸ್ಯಾಮ್ ಸಂಗ್ ನ ಭಾರೀ ರಿಯಾಯಿತಿ ಮಾರಾಟ ಕಾರ್ನಿವಲ್ ಸೇಲ್ ಆರಂಭವಾಗಿದೆ. ಆದರೆ ಈ ಬಾರಿಯ ಮಾರಾಟವಿರುವುದು ಫ್ಲಿಪ್ ಕಾರ್ಟ್ ನಲ್ಲಿ. ಸ್ಯಾಮ್ ಸಂಗ್ ಕಾರ್ನಿವಲ್ ಸೇಲನ್ನು ಮಾಮೂಲಾಗಿ ಅಮೇಜಾನ್ ಇಂಡಿಯಾದಲ್ಲಿ ಮಾಡುತ್ತಿತ್ತು. ಆದರೆ ಈ ಬಾರಿ ಫ್ಲಿಪ್ ಕಾರ್ಟ್ ನಲ್ಲಿ ಈ ಮಾರಾಟ ವಿದ್ದು ಇಂದು ಈ ಮಾರಾಟ ಪ್ರಕ್ರಿಯೆ ಆರಂಭವಾಗಿದೆ.

  ಅಂಗಾಂಗ ರವಾನೆಗೆ ಐಐಎಸ್ಸಿಯಿಂದ ಡ್ರೋನ್ ಸಾಧನ ಆವಿಷ್ಕಾರ..!

  ಜೂನ್ 12 ರಿಂದ ಜೂನ್ 14 ರ ಮಧ್ಯರಾತ್ರಿ ವರೆಗೆ ಈ ಭಾರೀ ರಿಯಾಯಿತಿ ಮಾರಾಟಗಳು ನಡೆಯಲಿದೆ. ಮೂರು ದಿನಗಳ ಸೇಲ್ ನಲ್ಲಿ ಫ್ಲಿಪ್ ಕಾರ್ಡ್ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ. ಸ್ಯಾಮ್ ಸಂಗ್ ವಸ್ತುಗಳ ಮೇಲೆ ಬ್ಯಾಂಕ್ ಆಫರ್ ಗಳು ಮತ್ತು ಸ್ಪೆಷಲ್ EMI ಸ್ಕೀಮ್ ಗಳು ಕೂಡ ಲಭ್ಯವಿದೆ. ಸ್ಯಾಮ್ ಸಂಗ್ ಫೋನ್ ಗಳು, ಟ್ಯಾಬ್ಲೆಟ್ಸ್, ಆಕ್ಸಸರೀಸ್ ಗಳು, ಸ್ಮಾರ್ಟ್ ಬ್ಯಾಂಡ್ ಗಳು. ಮಾನಿಟರ್ಸ್ ಮತ್ತು ಟಿವಿಗಳ ಮೇಲೆ ಭರ್ಜರಿ ಕೊಡುಗೆಗಳಿದೆ.

  ಸ್ಯಾಮ್ ಸಂಗ್ ಪೋನ್ ಗಳ ಮೇಲೆ ಫ್ಲಿಪ್ ಕಾರ್ಟ್ ನಲ್ಲಿ ಇಂದಿನಿಂದ ಭಾರೀ ಆಫರ್..!

  ಸ್ಯಾಮಸಂಗ್ ಕಾರ್ನಿವಲ್ ಸೇಲ್ ಗಾಗಿ, ಫ್ಲಿಪ್ ಕಾರ್ಟ್ HDFC ಬ್ಯಾಂಕ್ ಜೊತೆಗೆ ಗ್ರಾಹಕರಿಗೆ 10 ಶೇಕಡಾದವರೆಗೆ ರಿಯಾಯಿತಿಯನ್ನು ನೀಡಲು ಒಪ್ಪಿಕೊಂಡಿದೆ. HDFC ಬ್ಯಾಂಕಿನ ಡೆಬಿಟ್ ಇಲ್ಲವೇ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡುವವರಿಗೆ ಈ ರಿಯಾಯಿತಿ ಲಭ್ಯವಾಗಲಿದೆ. ಆದರೆ ಕೆಲವು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಇನ್ನು ಕಂತಿನಲ್ಲಿ ಖರೀದಿಸಲು ಕೂಡ ಅವಕಾಶವಿರುತ್ತದೆ. ಹಾಗಾದ್ರೆ ಯಾವೆಲ್ಲ ಸ್ಯಾಮ್ ಸಂಗ್ ವಸ್ತುಗಳು ಭರ್ಜರಿ ರಿಯಾಯಿತಿಯಲ್ಲಿ ದೊರೆಯುತ್ತಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.

  ಸ್ಯಾಮ್ ಸಂಗ್ ಪೋನ್ ಗಳ ಮೇಲೆ ಫ್ಲಿಪ್ ಕಾರ್ಟ್ ನಲ್ಲಿ ಇಂದಿನಿಂದ ಭಾರೀ ಆಫರ್..!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸ್ಯಾಮ್ ಸಂಗ್ ಫೋನ್ ಗಳ ಬೆಲೆಗಳ ಪಟ್ಟಿ

  • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 8+ 12,000 ರೂಪಾಯಿಯ ಭರ್ಜರಿ ರಿಯಾಯತಿ ಮಾರಾಟದಲ್ಲಿದೆ, ಅದೇ ರೀತಿ ಗ್ಯಾಲಕ್ಸಿ ಎಸ್ 8 ಕೂಡ 12,000 ರುಪಾಯಿಯ ರಿಯಾಯಿತಿ ಮಾರಾಟದಲ್ಲಿದೆ. ರಿಯಾಯತಿಯ ನಂತರ ಗ್ಯಾಲಕ್ಸಿ ಎಸ್ 8 ಫೋನಿನ ಬೆಲೆ 37,990 ರುಪಾಯಿಗಳು ಮತ್ತು ಗ್ಯಾಲಕ್ಸಿ ಎಸ್ 8+ ನ ಬೆಲೆ 43,990 ರುಪಾಯಿಗಳು. ಯಾವುದೇ ನಿಯಮಗಳು ಮತ್ತು ಷರತ್ತು ರಹಿತ ರಿಯಾಯಿತಿಗಳಿವು..
  • ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್ Nxt 64ಜಿಬಿ ಮತ್ತು 16ಜಿಬಿ ವೇರಿಯಂಟ್ ನ ಬೆಲೆ ಕ್ರಮವಾಗಿ 10,900 ಮತ್ತು 8,990 ರುಪಾಯಿಗಳಾಗಿದ್ದು, ಷರತ್ತು ರಹಿತವಾಗಿ ಕ್ರಮವಾಗಿ 7,000 ಮತ್ತು 2,009 ರುಪಾಯಿಗಳ ರಿಯಾಯಿತಿ ಲಭ್ಯವಾಗುತ್ತಿದೆ.

  ಸ್ಯಾಮ್ ಸಂಗ್ ಟಿವಿಗಳು, ಸ್ಮಾರ್ಟ್ ಬ್ರ್ಯಾಂಡ್ ಗಳು ಮತ್ತು ಇತರೆ ಪ್ರೊಡಕ್ಟ್ ಗಳು

  • ಸ್ಯಾಮ್ ಸಂಗ್ 32-ಇಂಚಿನ 32J4003 Flat HD TV 10,901 ರುಪಾಯಿಯ ಆಫರ್ ಬೆಲೆಗೆ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ, ಇದರ ನಿಜವಾದ ಮಾರಾಟದ ಬೆಲೆ 16,999 ರುಪಾಯಿಗಳಾಗಿದೆ.
  • ಸ್ಯಾಮ್ ಸಂಗ್ ಬೇಸಿಕ್ ಸ್ಮಾರ್ಟ್ 80 cm (32-inch) ಫುಲ್ HD LED TV ಬೆಲೆ 23,999 ರುಪಾಯಿಗಳಾಗಿದ್ದು ಷರತ್ತು ರಹಿತವಾಗಿ ಸುಮಾರು 6,000 ರುಪಾಯಿಯ ರಿಯಾಯಿತಿ ಲಭ್ಯವಾಗುತ್ತಿದೆ.
  • ಸ್ಯಾಮ್ ಸಂಗ್ ಸೀರೀಲ್ 6 123 cm (49-inch) ಫುಲ್ HD Curved LED ಸ್ಮಾರ್ಟ್ TV ರಿಯಾಯಿತಿ ಬೆಲೆಯಲ್ಲಿ ಮಾರಾಟಕ್ಕಿಡಲಾಗಿದ್ದು ಅದರ ಬೆಲೆ 57,999 ರುಪಾಯಿಗಳಾಗಿದೆ.

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 7 Edge ಗೆ 9,090 ರೂ. ರಿಯಾಯಿತಿ

  • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 7 Edge ಗೆ 9,090 ರುಪಾಯಿಯ ರಿಯಾಯಿತಿ ಲಭ್ಯವಾಗುತ್ತಿದ್ದು ಇದು ನಿಮಗೆ ಕೇವಲ 32,900 ರುಪಾಯಿ ಮಾರಾಟದ ಬೆಲೆಯಲ್ಲಿ ಲಭ್ಯವಿದೆ.
  • ಗ್ಯಾಲಕ್ಸಿ ಜೆ3 ಪ್ರೋ ಮಾರಾಟದ ಬೆಲೆ 6,690 ರುಪಾಯಿಗಳು ಇದರಲ್ಲಿ ನಿಮಗೆ ಷರತ್ತು ರಹಿತವಾಗಿ 1,800 ರಿಯಾಯಿತಿ ಲಭ್ಯವಾಗುತ್ತಿದೆ. ಇನ್ನು ಗ್ಯಾಲಕ್ಸಿ ಆನ್5 ಷರತ್ತು ರಹಿತ 2,991 ರುಪಾಯಿ ರಿಯಾಯಿತಿಯೊಂದಿಗೆ 5,999 ರುಪಾಯಿ ಬೆಲೆಯಲ್ಲಿ ಲಭ್ಯವಾಗುತ್ತೆ.

  ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
  ಬೇಸಿಕ್ ಸ್ಮಾರ್ಟ್ ಟಿವಿ

  ಬೇಸಿಕ್ ಸ್ಮಾರ್ಟ್ ಟಿವಿ

  ಸ್ಯಾಮ್ ಸಂಗ್ ಬೇಸಿಕ್ ಸ್ಮಾರ್ಟ್ 100cm (40-inch) ಫುಲ್ HD LED TV ಬೆಲೆಯಲ್ಲಿ 35,999 ರುಪಾಯಿ ಕಡಿಮೆ ಇದ್ದು ಅದರ ಬೆಲೆ 47,900ರುಪಾಯಿಗಳಾಗಿದೆ.
  Samsung Gear Fir Pro ಗೆ ಭಾರೀ ರಿಯಾಯಿತಿ ಇದ್ದು ಇದರ ಮಾರಾಟದ ಬೆಲೆ 10,990 ರುಪಾಯಿಗಳಾಗಿದೆ.
  ಫ್ಲಿಪ್ ಕಾರ್ಟ್ ನಲ್ಲಿ ಸ್ಯಾಮ್ ಸಂಗ್ ಮೊಬೈಲ್ ಆಕ್ಸಸರೀಸ್ ಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ಇದೆ.
  ಮಾನಿಟರ್ ಮತ್ತು ಇತ್ಯಾದಿ ಗೇಮಿಂಗ್ ವಸ್ತುಗಳ ಮೇಲೆ ಶೇಕಡಾ 40 ರಷ್ಟು ರಿಯಾಯಿತಿ ಇದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Galaxy S8 sells with Rs 12,000 discount, others Samsung phones too get cheaper as Flipkart starts Carnival Sale. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more