Subscribe to Gizbot

ಕಂಪ್ಯೂಟರ್‌ನಲ್ಲೇ ಕುಳಿತು ಗಾಂಧೀಜಿ ಸಮಾಧಿಗೆ ಭೇಟಿ ನೀಡಿ

Posted By:

ಇಂದು ದೇಶದೆಲ್ಲೆಡೆ ಗಾಂಧಿ ಜಯಂತಿಯನ್ನು ಆಚರಿಸುತ್ತಿದ್ದೇವೆ. ಈ ದಿನ ಗಾಂಧೀಜಿಯವರ ಸಮಾಧಿ ಇರುವ ಸ್ಥಳ ರಾಜ್‌ಘಾಟ್‌ಗೆ ದೇಶದ ಪ್ರಧಾನಿ ತೆರಳಿ ಪುಷ್ಪನಮನ ಸಲ್ಲಿಸುವುದು ಸಂಪ್ರದಾಯ.

ಗಾಂಧೀಜಿ ಹತ್ಯೆಯಾದ ನಂತರ ಅವರ ಅಂತ್ಯ ಸಂಸ್ಕಾರವನ್ನು ರಾಜ್‌ಘಟ್‌ನಲ್ಲಿ ಮಾಡಲಾಯಿತು. ಇದು ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದು, ಈಗ ಎಲ್ಲಾ ವಿದೇಶಿ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಿದಾಗ ರಾಜ್ ಘಾಟ್ ಗೂ ಭೇಟಿ ನೀಡಿ ಮಹಾತ್ಮ ಗಾಂಧಿಗೆ ಗೌರವ ಸೂಚಿಸುವುದು ಕಡ್ಡಾಯವಾಗಿದೆ.

ಕಂಪ್ಯೂಟರ್‌ನಲ್ಲೇ ಕುಳಿತು ಗಾಂಧೀಜಿ ಸಮಾಧಿಗೆ ಭೇಟಿ ನೀಡಿ

ಯಮುನಾ ನದಿ ದಡದಲ್ಲಿರುವ ಮಹಾತ್ಮ ಗಾಂಧಿ ಮಾರ್ಗದಲ್ಲಿ ರಾಜ್ ಘಾಟ್ ನಿರ್ಮಿಸಲಾಗಿದೆ. ಇದೊಂದು ದೆಹಲಿಯ ಪ್ರಮುಖವಾದ ಪ್ರವಾಸಿ ತಾಣವಾಗಿದ್ದು, ಪ್ರತಿದಿನ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.ಈ ಸ್ಮಾರಕವನ್ನು ಕಪ್ಪು ಅಮೃತಶಿಲೆಯಿಂದ ನಿರ್ಮಿಸಲಾಗಿದೆ.

ಆದರೆ ಇಂದಿನ ಇಂಟರ್‌ನೆಟ್‌ ಯುಗದಲ್ಲಿ ದೆಹಲಿಗೆ ಭೇಟಿ ನೀಡದೇ ರಾಜ್‌ಘಾಟ್‌ಗೆ ಭೇಟಿ ನೀಡಬಹುದು. www.p4panorama.comನವರು ಪನೋರಮಾ ಮೂಡ್‌‌ನಲ್ಲಿ ರಾಜ್‌ಘಾಟ್‌‌ನ ಚಿತ್ರವನ್ನು ತೆಗೆದು ಅಪ್‌ಲೋಡ್‌ ಮಾಡಿದ್ದಾರೆ. ರಾಜ್‌ಘಾಟ್‌ ಹತ್ತಿರ ಸ್ಥಳ ಹೇಗಿದೆ ಎನ್ನುವುದು ಮೌಸ್‌ ಮೂಲಕವೇ ಸುಲಭವಾಗಿ ನೋಡಬಹುದು.

ಹಾಗಾದ್ರೆ ಮತ್ಯಾಕೆ ತಡ ರಾಜ್‌ಘಾಟ್‌ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ: www.p4panorama.com

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot