Subscribe to Gizbot

ಯೂಟ್ಯೂಬ್‌ನಲ್ಲಿ ಗ್ಯಾಂಗ್ನಂ ಸ್ಟೈಲ್‌ ದರ್ಬಾರು

Posted By: Super
<ul id="pagination-digg"><li class="next"><a href="/news/gangnam-style-now-most-viewed-youtube-video-of-all-time-2.html">Next »</a></li></ul>
ಯೂಟ್ಯೂಬ್‌ನಲ್ಲಿ ಗ್ಯಾಂಗ್ನಂ ಸ್ಟೈಲ್‌ ದರ್ಬಾರು

ಆನ್‌ಲೈನ್‌ನ ವಿಡಿಯೋ ವೆಬ್‌ಸೈಟ್‌ ಆದಂತಹ ಯೂಟ್ಯೂಬ್‌ನಲ್ಲಿ ಹಲವು ನೂತನ ದಾಖಲೆಗಳನ್ನು ಬರೆಯಲಾಗುತ್ತದೆ. ಅದರಲ್ಲಿಯೂ ಅತಿಹೆಚ್ಚು ಬಾರಿ ವೀಕ್ಷಿಸಲಾದ ವಿಡಿಯೋ ದಾಖಲೆಯನ್ನು ಇದೀಗತಾನೆ ದಕ್ಷಿಣ ಕೊರಿಯಾ ಮೂಲದ ಪಾಪ್‌ ಗಾಯಕನಾದ ಸಯೀ (PSY) ಅವರ ನೂತನ ವಿಡಯೋ ಆದಂತಹ ಗ್ಯಾಂಗ್ನಂ ಸ್ಟೈಲ್‌ ಮುರಿದು ಹಾಕಿದೆ. ಅಂದಹಾಗೆ ವಿಶ್ವದಾದ್ಯಂತ ಗ್ಯಾಂಗ್ನಂ ಸ್ಟೈಲ್‌ ಹಾಡನ್ನು ಬರೊಬ್ಬರಿ 80 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಸಯೀ ತನ್ನಯ ವಿಭಿನ್ನ ರೀತಿಯ ನೃತ್ಯ ಶೈಲಿಯಿಂದಾಗಿ ವೀಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾನೆ ಆದ್ದರಿಂದಲೇ ನೋಡುಗರಿಂದಾಗಿ ಭಾರೀ ಮೆಚ್ಚುಗೆಯನ್ನು ಪಡೆದಿದೆ. ಅಂದಹಾಗೆ ಈ ವಿಡಿಯೋದ ಜನಪ್ರಿಯತೆ ಯಾವಮಟ್ಟಿಗೆ ಹೆಚ್ಚಿದೆ ಎಂದರೆ ಇತ್ತೀಚೆಗೆ ಮುಗಿದಂತಹ ಟಿ-20 ವಿಶ್ವಕಪ್‌ ಮುಡಿಗೇರಿಸಿದ ವೆಸ್ಟ್‌ಇಂಡೀಸ್‌ ತಂಡವು ಕ್ರೀಡಾಂಗಣದಲ್ಲಿಯೇ ವಿಜಯೋತ್ಸವವನ್ನು ಗ್ಯಾಂಗ್ನಂ ಸ್ಟೈಲ್‌ ಹಾಡಿನ ಸ್ಟೆಪ್‌ಗಳನ್ನು ಹಾಕಿ ಸಂಭ್ರಮಿಸಿದ್ದರು.

ಗ್ಯಾಂಗ್ನಂ ಸ್ಟೈಲ್‌ ಮುನ್ನ ಮತ್ತೊರ್ವ ಯುವ ಪಾಪ್‌ ಗಾಯಕ ಜಸ್ಟಿನ್‌ ಬೀಬರ್‌ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು. 2010 ರಲ್ಲಿ ಬಿಡುಗಡೆಯಾದ ಜಸ್ಟಿನ್‌ ಬೀಬರ್‌ನ ವಿಡಿಯೋ ಆಲ್ಬಂ ಯೂಟ್ಯೂಬ್‌ನಲ್ಲಿ ಈ ವರೆಗಿನ ಅತಿ ಹೆಚ್ಚು ವೀಕ್ಷಿಸಲಾದ ವಿಡಿಯೋ ಎಂಬ ಕಿರೀಟ ಪಡೆದಿತ್ತು. ಆದರೆ ಈ ಎಲ್ಲಾ ದಾಖಲೆಗಳನ್ನು ಗ್ಯಾಂಗ್ನಂ ಸ್ಟೈಲ್‌ ಮುರಿದು ಹಾಕಿದ್ದು ಯೂಟ್ಯೂಬ್‌ನಲ್ಲಿ ಅಧಿಪತ್ಯ ಸಾಧಿಸಿದ್ದಾರೆ.

<ul id="pagination-digg"><li class="next"><a href="/news/gangnam-style-now-most-viewed-youtube-video-of-all-time-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot