ಗಾರ್ಮಿನ್‌ನಿಂದ ಮತ್ತೊಂದು ಆಕರ್ಷಕ ಸ್ಮಾರ್ಟ್‌ವಾಚ್ ಬಿಡುಗಡೆ!..23 ದಿನಗಳ ಬ್ಯಾಟರಿ ಬ್ಯಾಕ್‌ಅಪ್!
ಗಾರ್ಮಿನ್ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇದೆ. ತನ್ನ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ವಾಚ್‌ಗಳ ಮೂಲಕ ಗ್ರಾಹಕರ ನೆಚ್ಚಿನ ಬ್ರ್ಯಾಂಡ್ ಎನಿಸಿಕೊಂಡಿದೆ. ಇದರ ಮುಂದುವರೆದ ಭಾಗವಾಗಿ ಇದೀಗ ಹೊಸ ಗಾರ್ಮಿನ್ ಫೋರನ್ನರ್ 965 ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್ 23 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಅನ್ನು ನೀಡಲಿದೆ.
ಹೌದು, ಗಾರ್ಮಿನ್ ಸಂಸ್ಥೆ ಹೊಸ ಗಾರ್ಮಿನ್ ಫೋರನ್ನರ್ 965 ಸ್ಮಾರ್ಟ್‌ವಾಚ್ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ವಾಚ್ ಹೆಲ್ತ್ ಮತ್ತು ಫಿಟ್‌ನೆಸ್ ಸೆನ್ಸಾರ್‌ಗಳನ್ನು ಒಳಗೊಂಡಿದ್ದು, ಹಲವು ಆಯ್ಕೆಯ ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗಾರ್ಮಿನ್ ಫೋರನ್ನರ್ 965 ಸ್ಮಾರ್ಟ್‌ವಾಚ್ ಫೀಚರ್ಸ್ ಹೇಗಿದೆ?
ಗಾರ್ಮಿನ್ ಫೋರನ್ನರ್ 965 ಸ್ಮಾರ್ಟ್‌ವಾಚ್ 46 ಎಂಎಂ ಚಾಸಿಸ್ ಮತ್ತು 1.4 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 454 x 454 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಡಿಸ್‌ಪ್ಲೇ MIP ಪ್ಯಾನಲ್ ಅನ್ನು ಹೊಂದಿರುವುದರಿಂದ ಹೆಚ್ಚಿನ ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ ಆಲ್‌ವೇಸ್ ಆನ್ ಡಿಸ್‌ಪ್ಲೇ ಕಾರ್ಯವನ್ನು ಬೆಂಬಲಿಸಲಿದೆ.

ಗಾರ್ಮಿನ್ ಫೋರ್‌ರನ್ನರ್ 965 ಸ್ಮಾರ್ಟ್‌ವಾಚ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಕಾರ್ಯನಿರ್ವಹಿಸಲಿದೆ. ಹಾಗೆಯೇ 32GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್ ಹೆಲ್ತ್ ಮತ್ತು ಫಿಟ್‌ನೆಸ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಅಲ್ಲದೆ ಅನೇಕ ಸ್ಪೋರ್ಟ್ಸ್ ಮೋಡ್‌ಗಳನ್ನು ಕೂಡ ಬೆಂಬಲಿಸಲಿದೆ. ಈ ಸ್ಮಾರ್ಟ್‌ವಾಚ್ 23 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಜೊತೆಗೆ ಎಲ್ಲಾ GNSS ವ್ಯವಸ್ಥೆಗಳು ಸಕ್ರಿಯವಾಗಿರುವಾಗ ಬ್ಯಾಟರಿ ಬಾಳಿಕೆ ಸುಮಾರು 8.5 ಗಂಟೆಗಳವರೆಗೆ ಕಡಿಮೆಯಾಗಲಿದೆ ಎನ್ನಲಾಗಿದೆ.

ಇದಲ್ಲದೆ ಗಾರ್ಮಿನ್ ಫೋರ್‌ರನ್ನರ್ 965 ಸ್ಮಾರ್ಟ್‌ವಾಚ್ ಜಾಗತಿಕ ಮಾರುಕಟ್ಟೆಯಲ್ಲಿ $599.99 (ಅಂದಾಜು 49,077ರೂ) ಬೆಲೆಯನ್ನು ಪಡೆದಿದೆ. ಈ ಸ್ಮಾರ್ಟ್‌ವಾಚ್ ಹಳದಿ ವಾಚ್ ಬ್ಯಾಂಡ್‌ನೊಂದಿಗೆ ಬಿಳಿ ಅಥವಾ ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.
ಇನ್ನು ಗಾರ್ಮಿನ್ ಕಂಪೆನಿ ಇತ್ತೀಚಿಗೆ ಹೊಸ MARQ (Gen2) ಸರಣಿಯಲ್ಲಿ ಐದು ವಾಚ್‌ಗಳನ್ನು ಅನಾವರಣಗೊಳಿಸಿದೆ. ಇವುಗಳನ್ನು ಮಾರ್ಕ್ ಅಥ್ಲೀಟ್, ಮಾರ್ಕ್ ಅಡ್ವೆಂಚರ್, ಮಾರ್ಕ್ ಗಾಲ್ಫರ್, ಮಾರ್ಕ್ ಕ್ಯಾಪ್ಟನ್ ಮತ್ತು ಮಾರ್ಕ್ ಏವಿಯೇಟರ್ ಎಂದು ಹೆಸರಿಸಲಾಗಿದೆ. ಗಾರ್ಮಿನ್ ಕಂಪೆನಿಯ MARQ ಸ್ಮಾರ್ಟ್‌ವಾಚ್‌ಗಳು ಸೂಪರ್ ಪ್ರೀಮಿಯಂ ಗುಣಮಟ್ಟವನ್ನು ಹೊಂದಿವೆ. ಈ ಸ್ಮಾರ್ಟ್‌ವಾಚ್‌ಗಳು ಬಳಕೆದಾರರಿಗೆ ವಿಶ್ವಾಸಾರ್ಹತೆಯೊಂದಿಗೆ ಐಷಾರಾಮಿ ಅನುಭವವನ್ನು ಒದಗಿಸಲಿವೆ. MARQ ಕಲೆಕ್ಷನ್‌ನಲ್ಲಿ ಬಂದಿರುವ ಎಲ್ಲಾ ಸ್ಮಾರ್ಟ್‌ವಾಚ್‌ಗಳು ಕೂಡ ಸುಂದರವಾದ ವಿನ್ಯಾಸವನ್ನು ಪಡೆದುಕೊಂಡಿದ್ದು, ಸ್ಮಾರ್ಟ್‌ವಾಚ್ ಅನುಭವ ನೀಡಲಿದೆ. ಇನ್ನು ಈ MARQ ಸರಣಿಯನ್ನು ನೀಲಮಣಿ ಸ್ಫಟಿಕ, ಸೆರಾಮಿಕ್ ಮತ್ತು ಜಾಕ್ವಾರ್ಡ್-ನೇಯ್ಗೆ ನೈಲಾನ್‌ನಂತಹ ವಸ್ತುಗಳೊಂದಿಗೆ ಬಿಲ್ಟ್ ಮಾಡಲಾಗಿದೆ.

ಇನ್ನು ಈ ವಾಚ್‌ಗಳನ್ನು "ಗ್ರೇಡ್ -5 ಟೈಟಾನಿಯಂ" ನೊಂದಿಗೆ ನಿರ್ಮಿಸಲಾಗಿದೆ. ಇದರಿಂದ ಸ್ಟೇನ್‌ಲೆಸ್ ಸ್ಟೀಲ್‌ಗೆ ಹೋಲಿಸಿದರೆ ಈ ವಾಚ್ ಸಾಕಷ್ಟು ಹಗುರವಾಗಿದೆ ಎಂದು ಕಂಪೆನಿ ಹೇಳಿದೆ. ಈ ವಾಚ್‌ಗಳು ಸ್ಮಾರ್ಟ್‌ವಾಚ್ ಮೋಡ್‌ನಲ್ಲಿ 16 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಅಲ್ಲದೆ ಜಿಪಿಎಸ್ ಮೋಡ್‌ನಲ್ಲಿ 42 ಗಂಟೆಗಳ ಬ್ಯಾಕ್‌ಅಪ್ ಅನ್ನು ನೀಡಲಿದೆ ಎಂದು ಗಾರ್ಮಿನ್ ಕಂಪೆನಿ ಹೇಳಿಕೊಂಡಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್ ಸರಣಿಯು ಮಲ್ಟಿ-ಬ್ಯಾಂಡ್ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಮತ್ತು ಮಲ್ಟಿ-ಫ್ರೀಕ್ವೆನ್ಸಿ GPS ಗೆ ಬೆಂಬಲವನ್ನು ನೀಡಲಿದೆ. ಇದಲ್ಲದೆ MARQ ಕಲೆಕ್ಷನ್ ಮಣಿಕಟ್ಟಿನ ಆಧಾರಿತ ಹಾರ್ಟ್‌ಬೀಟ್, ಉಸಿರಾಟ ಮತ್ತು ಒತ್ತಡದ ಟ್ರ್ಯಾಕಿಂಗ್ ಅನ್ನು ಒಳಗೊಂಡಿದೆ.


Click it and Unblock the Notifications