Home
ಸುದ್ದಿಜಾಲ

ಟೆಕ್‌ ವಲಯದಲ್ಲಿ ದೂಳೆಬ್ಬಿಸಿದ ಗಾರ್ಮಿನ್‌ MARQ! ಅಚ್ಚರಿಯ ಡಿಸೈನ್‌!

ಗಾರ್ಮಿನ್‌ ಕಂಪೆನಿ ಸ್ಮಾರ್ಟ್‌ವಾಚ್‌ ವಲಯದ ಪ್ರಮುಖ ಬ್ರಾಂಡ್‌ ಎನಿಸಿಕೊಂಡಿದೆ. ತನ್ನ ಆಕರ್ಷಕ ವಿನ್ಯಾಸ ಹಾಗೂ ಡಿಸೈನ್‌ನಿಂದಾಗಿ ಎಲ್ಲಾ ವರ್ಗದ ಜನರಿಂದಲೂ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಮಾರ್ಕ್‌ (MARQ) ಸರಣಿಯಲ್ಲಿ ಐದು ಹೊಸ ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ಗಳು ನವೀನ ಮಾದರಿಯ ಟೆಕ್ನಾಲಜಿಯನ್ನು ಪಡೆದುಕೊಂಡಿವೆ.

ಹೌದು, ಗಾರ್ಮಿನ್‌ ಕಂಪೆನಿ ತನ್ನ ಹೊಸ MARQ (Gen2) ಸರಣಿಯಲ್ಲಿ ಐದು ವಾಚ್‌ಗಳನ್ನು ಅನಾವರಣಗೊಳಿಸಿದೆ. ಇವುಗಳನ್ನು ಮಾರ್ಕ್ ಅಥ್ಲೀಟ್, ಮಾರ್ಕ್ ಅಡ್ವೆಂಚರ್, ಮಾರ್ಕ್ ಗಾಲ್ಫರ್, ಮಾರ್ಕ್ ಕ್ಯಾಪ್ಟನ್ ಮತ್ತು ಮಾರ್ಕ್ ಏವಿಯೇಟರ್ ಎಂದು ಹೆಸರಿಸಲಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಕ್‌ ವಲಯದಲ್ಲಿ ದೂಳೆಬ್ಬಿಸಿದ ಗಾರ್ಮಿನ್‌ MARQ! ಅಚ್ಚರಿಯ ಡಿಸೈನ್‌!

ಗಾರ್ಮಿನ್‌ ಕಂಪೆನಿಯ MARQ ಸ್ಮಾರ್ಟ್‌ವಾಚ್‌ಗಳು ಸೂಪರ್ ಪ್ರೀಮಿಯಂ ಗುಣಮಟ್ಟವನ್ನು ಹೊಂದಿವೆ. ಈ ಸ್ಮಾರ್ಟ್‌ವಾಚ್‌ಗಳು ಬಳಕೆದಾರರಿಗೆ ವಿಶ್ವಾಸಾರ್ಹತೆಯೊಂದಿಗೆ ಐಷಾರಾಮಿ ಅನುಭವವನ್ನು ಒದಗಿಸಲಿವೆ. MARQ ಕಲೆಕ್ಷನ್‌ನಲ್ಲಿ ಬಂದಿರುವ ಎಲ್ಲಾ ಸ್ಮಾರ್ಟ್‌ವಾಚ್‌ಗಳು ಕೂಡ ಸುಂದರವಾದ ವಿನ್ಯಾಸವನ್ನು ಪಡೆದುಕೊಂಡಿದ್ದು, ಸ್ಮಾರ್ಟ್‌ವಾಚ್‌ ಅನುಭವ ನೀಡಲಿದೆ. ಇನ್ನು ಈ MARQ ಸರಣಿಯನ್ನು ನೀಲಮಣಿ ಸ್ಫಟಿಕ, ಸೆರಾಮಿಕ್ ಮತ್ತು ಜಾಕ್ವಾರ್ಡ್-ನೇಯ್ಗೆ ನೈಲಾನ್‌ನಂತಹ ವಸ್ತುಗಳೊಂದಿಗೆ ಬಿಲ್ಟ್‌ ಮಾಡಲಾಗಿದೆ.

ಇನ್ನು ಈ ವಾಚ್‌ಗಳನ್ನು "ಗ್ರೇಡ್ -5 ಟೈಟಾನಿಯಂ" ನೊಂದಿಗೆ ನಿರ್ಮಿಸಲಾಗಿದೆ. ಇದರಿಂದ ಸ್ಟೇನ್‌ಲೆಸ್ ಸ್ಟೀಲ್‌ಗೆ ಹೋಲಿಸಿದರೆ ಈ ವಾಚ್‌ ಸಾಕಷ್ಟು ಹಗುರವಾಗಿದೆ ಎಂದು ಕಂಪೆನಿ ಹೇಳಿದೆ. ಈ ವಾಚ್‌ಗಳು ಸ್ಮಾರ್ಟ್‌ವಾಚ್‌ ಮೋಡ್‌ನಲ್ಲಿ 16 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಅಲ್ಲದೆ ಜಿಪಿಎಸ್ ಮೋಡ್‌ನಲ್ಲಿ 42 ಗಂಟೆಗಳ ಬ್ಯಾಕ್‌ಅಪ್‌ ಅನ್ನು ನೀಡಲಿದೆ ಎಂದು ಗಾರ್ಮಿನ್‌ ಕಂಪೆನಿ ಹೇಳಿಕೊಂಡಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಸರಣಿಯು ಮಲ್ಟಿ-ಬ್ಯಾಂಡ್ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಮತ್ತು ಮಲ್ಟಿ-ಫ್ರೀಕ್ವೆನ್ಸಿ GPS ಗೆ ಬೆಂಬಲವನ್ನು ನೀಡಲಿದೆ.

ಟೆಕ್‌ ವಲಯದಲ್ಲಿ ದೂಳೆಬ್ಬಿಸಿದ ಗಾರ್ಮಿನ್‌ MARQ! ಅಚ್ಚರಿಯ ಡಿಸೈನ್‌!

ಇದಲ್ಲದೆ MARQ ಕಲೆಕ್ಷನ್‌ ಮಣಿಕಟ್ಟಿನ ಆಧಾರಿತ ಹಾರ್ಟ್‌ಬೀಟ್‌, ಉಸಿರಾಟ ಮತ್ತು ಒತ್ತಡದ ಟ್ರ್ಯಾಕಿಂಗ್ ಅನ್ನು ಒಳಗೊಂಡಿದೆ. ಇದಲ್ಲದೆ ಅಡ್ವಾನ್ಸ್‌ ಸ್ಲಿಪಿಂಗ್‌ ಒಳನೋಟಗಳು, ಬಾಡಿ-ಬ್ಯಾಟರಿ ಎನರ್ಜಿ ಮಾನಿಟರಿಂಗ್ ಮತ್ತು ಹೊಸ ಜೆಟ್ ಲ್ಯಾಗ್ ಅಡ್ವೈಸರ್‌ನಂತಹ 24/7 ಆರೋಗ್ಯ ವನ್ನು ಟ್ರ್ಯಾಕ್‌ ಮಾಡುವ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂದು ಗಾರ್ಮಿನ್‌ ಕಂಪೆನಿ ಸ್ಪಷ್ಟಪಡಿಸಿದೆ.

ಗಾರ್ಮಿನ್‌ MARQ ವಾಚ್‌ ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಗಾರ್ಮಿನ್‌ MARQ ಅಥ್ಲೀಟ್ ಬೆಲೆ 1,94,990ರೂ. ಆಗಿದೆ. ಇದರ MARQ ಅಡ್ವೆಂಚರ್ ಬೆಲೆ 2,15,490ರೂ.ಆಗಿದೆ. ಇನ್ನು MARQ ಗಾಲ್ಫರ್ ಬೆಲೆ 2,35,990ರೂ.ಆಗಿದೆ. ಇದಲ್ಲದೆ MARQ ಕ್ಯಾಪ್ಟನ್ ಬೆಲೆ 2,25,990ರೂ ಮತ್ತು MARQ ಏವಿಯೇಟರ್ ಬೆಲೆ 2,46,490 ರೂ.ಆಗಿದೆ. ಇನ್ನು ಈ ವಾಚ್‌ಗಳನ್ನು ಗಾರ್ಮಿನ್ ಬ್ರಾಂಡ್ ಸ್ಟೋರ್ ಮತ್ತು ಜಸ್ಟ್ ಇನ್ ಟೈಮ್ ವಾಚ್ ಸ್ಟೋರ್‌ಗಳಿಂದ ಆಫ್‌ಲೈನ್‌ನಲ್ಲಿ ಖರೀದಿಸಬಹುದಾಗಿದೆ.

ಟೆಕ್‌ ವಲಯದಲ್ಲಿ ದೂಳೆಬ್ಬಿಸಿದ ಗಾರ್ಮಿನ್‌ MARQ! ಅಚ್ಚರಿಯ ಡಿಸೈನ್‌!

ಇನ್ನು ಗಾರ್ಮಿನ್‌ ಕಂಪೆನಿ ಇತ್ತೀಚಿಗೆ ಗಾರ್ಮಿನ್‌ ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್ ಮತ್ತು ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್ ಸೋಲಾರ್ ಎಂಬ ಎರಡು ವಾಚ್‌ಗಳನ್ನು ಅನಾವರಣ ಮಾಡಿದ್ದು, ಈ ವಾಚ್‌ಗಳಲ್ಲಿ ಇನ್ಸ್ಟಿಂಕ್ಟ್ ಕ್ರಾಸ್ಓವರ್ ಸೋಲಾರ್ ವಾಚ್‌ ಸೌರ ಚಾರ್ಜಿಂಗ್ ಜೊತೆಗೆ ಬ್ಯಾಟರಿ ಸೇವರ್ ಮೋಡ್ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಈ ಮೂಲಕ ಬರೋಬ್ಬರಿ 70 ದಿನಗಳ ಬ್ಯಾಟರಿ ಬ್ಯಾಕಪ್‌ ಲಭ್ಯವಾಗಲಿದೆ. ಸೌರ ಚಾರ್ಜಿಂಗ್ ಇಲ್ಲದ ಸ್ಮಾರ್ಟ್ ವಾಚ್ ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್ ಸುಮಾರು ಒಂದು ತಿಂಗಳ ಬ್ಯಾಟರಿ ಅವಧಿಯನ್ನು ಮತ್ತು ಜಿಪಿಎಸ್ ಮೋಡ್‌ನಲ್ಲಿ 110 ಗಂಟೆಗಳಿಗಿಂತ ಹೆಚ್ಚು ಸಮಯದ ಬ್ಯಾಕಪ್‌ ನೀಡಲಿದೆ.

Best Mobiles in India

English summary
The MARQ collection is a true testament to Garmin’s commitment to providing a luxury experience with super premium quality.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+