ಗಾರ್ಮಿನ್‌ ಸಂಸ್ಥೆಯಿಂದ ಎರಡು ಹೊಸ ಸ್ಮಾರ್ಟ್‌ವಾಚ್‌ ಬಿಡುಗಡೆ!

|

ಟೆಕ್‌ ವಲಯದಲ್ಲಿ ಈಗಾಗ್ಲೆ ವಿವಿಧ ಕಂಪೆನಿಗಳ ಸ್ಮಾರ್ಟ್‌ವಾಚ್‌ಗಳು, ಪಿಟ್ನೆಸ್‌ ಬ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡ್ತಿವೆ. ಹೊಸ ಮಾದರಿಯ ವಿನ್ಯಾಸದ ಜೊತೆಗೆ ಮನುಷ್ಯನ ರಕ್ತ ಶುದ್ದತೆಯ ಮಟ್ಟ, ಆಮ್ಲಜನಕದ ಗುಣಮಟ್ಟ ಅಳೆಯುವ ಸ್ಮಾರ್ಟ್‌ವಾಚ್‌ಗಳು ಕೂಡ ಲಭ್ಯವಿವೆ. ಅಲ್ಲದೆ ಯುವಜನತೆಯ ಆಸಕ್ತಿಗೆ ತಕ್ಕಂತೆ ವಿವಿಧ ಬಗೆಯ ವಿನ್ಯಾಸದ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಗೆ ಬಂದಿವೆ. ಸದ್ಯ ಇದೀಗ ಸ್ಮಾರ್ಟ್ ವೇರಬಲ್ಸ್ ತಯಾರಕ ಕಂಪೆನಿ ಆದ ಗಾರ್ಮಿನ್ ಸಂಸ್ಥೆ ತನ್ನ ವೆನು ಸರಣಿಯಲ್ಲಿ ಭಾರತದಲ್ಲಿ ಎರಡು ಹೊಸ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆ ಮಾಡಿದೆ.

ಸ್ಮಾರ್ಟ್ ವೇರಬಲ್ಸ್

ಹೌದು, ಸ್ಮಾರ್ಟ್ ವೇರಬಲ್ಸ್ ತಯಾರಕ ಕಂಪೆನಿ ಗಾರ್ಮಿನ್ ತನ್ನ ವೆನು ಸರಣಿಯಲ್ಲಿ ಗಾರ್ಮಿನ್‌ ವೆನು(Venu)Sq , ಗಾರ್ಮಿನ್‌ ವೆನು(Venu) Sq ಮ್ಯೂಸಿಕ್‌ ಅನ್ನುವ ಎರಡು ಹೊಸ ಸ್ಮಾರ್ಟ್‌ವಾಚ್‌ಗಳನ್ನ ಬಿಡುಗಡೆ ಮಾಡಿದೆ. ಇನ್ನು ಈ ಎರಡು ಸ್ಮಾರ್ಟ್‌ವಾಚ್‌ಗಳು ಇಮಟರ್‌ಬಿಲ್ಟ್‌ GPS ಮತ್ತು 14 ಗಂಟೆಗಳ ಬ್ಯಾಟರಿ ಅವಧಿಯೊಂದಿಗೆ ಬರುತ್ತದೆ. ಇನ್ನು ಈ ಎರಡು ಸ್ಮಾರ್ಟ್‌ವಾಚ್‌ಗಳು ಹೃದಯ ಬಡಿತ ಮಾನಿಟರ್‌ ಹಾಗೂ ಒತ್ತಡದ ಟ್ರ್ಯಾಕಿಂಗ್‌ ಅನ್ನು ಹೊಂದಿವೆ. ಇನ್ನುಳಿದಂತೆ ಈ ಎರಡು ಸ್ಮಾರ್ಟ್‌ವಾಚ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗಾರ್ಮಿನ್

ಇನ್ನು ಗಾರ್ಮಿನ್ ವೆನು Sq ಸ್ಮಾರ್ಟ್‌ವಾಚ್‌ 240 x 240 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 1.3 ಇಂಚಿನ ಎಲ್ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಅನ್ನು ಹೊಂದಿದೆ. ಇದು ನೀರಿನ ಪ್ರತಿರೋಧ, ಹೃದಯ ಬಡಿತ ಮಾನಿಟರ್, Spo2 ಸೆನ್ಸಾರ್‌ ಹೊಂದಿದ್ದು, 5 ಎಟಿಎಂ ರೇಟಿಂಗ್‌ನೊಂದಿಗೆ ಬರುತ್ತದೆ. ಅಲ್ಲದೆ ಇದು ಒತ್ತಡದ ಟ್ರ್ಯಾಕಿಂಗ್ ಅನ್ನು ಸಹ ನೀಡುತ್ತದೆ. ಇನ್ನು ಈ ಸ್ಮಾರ್ಟ್ ವಾಚ್ ವಿಶ್ರಾಂತಿ ಜ್ಞಾಪನೆಗಳು, ಸ್ಲೀಪ್ ಟ್ರ್ಯಾಕಿಂಗ್ ಮತ್ತು ಹೈಡ್ರೇಶನ್ ಟ್ರ್ಯಾಕಿಂಗ್ ಅನ್ನು ಸಹ ಹೊಂದಿದೆ.

ಗಾರ್ಮಿನ್

ಇದಲ್ಲದೆ ಗಾರ್ಮಿನ್ ವೆನು Sq ಸ್ಮಾರ್ಟ್‌ವಾಚ್‌ ಅಧಿಸೂಚನೆಗಳು, ಹವಾಮಾನ, ಕರೆಗಳು, ಮ್ಯೂಸಿಕ್‌ ಕಂಟ್ರೋಲ್‌, ಸರ್ಚ್‌ ಮೈ ಫೋನ್‌ ಮತ್ತು ಸರ್ಚ್‌ ಮೈ ವಾಚ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಅಲ್ಲದೆ ಆಂಡ್ರಾಯ್ಡ್‌ನಲ್ಲಿ ಫೋನ್ ಕರೆಗಳನ್ನು ತಿರಸ್ಕರಿಸಲು ಮತ್ತು ಪಠ್ಯಗಳಿಗೆ ಪ್ರತಿಕ್ರಿಯಿಸಲು ಈ ಸ್ಮಾರ್ಟ್ ವಾಚ್ ಅನ್ನು ಬಳಸಬಹುದಾಗಿದೆ. ಇದು ಬಿಳಿ, ನೆರಳು ಬೂದು, ಆರ್ಕಿಡ್, ಕಪ್ಪು, ತಿಳಿ ಮರಳು, ನೌಕಾಪಡೆ ಮತ್ತು ಪಾಚಿಯ ಅನೇಕ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಇನ್ನು ಗಾರ್ಮಿನ್ ವೇನು Sq ಸ್ಮಾರ್ಟ್ ವಾಚ್ ಮೋಡ್ ಮತ್ತು ಮ್ಯೂಸಿಕ್‌ ಜಿಪಿಎಸ್ ಮೋಡ್‌ನಲ್ಲಿ ಆರು ದಿನಗಳವರೆಗೆ ಮತ್ತು ಮ್ಯೂಸಿಕ್‌ ಇಲ್ಲದೆ ಜಿಪಿಎಸ್ ಮೋಡ್ನಲ್ಲಿ 14 ಗಂಟೆಗಳವರೆಗೆ ಇರುತ್ತದೆ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ಗಳು ಪವರ್, ಕಾರ್ಡಿಯೋ ಮತ್ತು ಎಲಿಪ್ಟಿಕಲ್ ತರಬೇತಿ, ಒಳಾಂಗಣ ರೋಯಿಂಗ್, ಯೋಗ, ಪೈಲೇಟ್ಸ್ ಮತ್ತು ಉಸಿರಾಟದ ಕೆಲಸಕ್ಕಾಗಿ ತಾಲೀಮು ವಿಧಾನಗಳನ್ನು ಬೆಂಬಲಿಸುತ್ತದೆ. ಜೊತೆಗೆ ಗಾರ್ಮಿನ್ ವೆನು Sq ಮ್ಯೂಸಿಕ್‌ ಆವೃತ್ತಿಯು ಮ್ಯೂಸಿಕ್‌ ಮತ್ತು ಪ್ಲೇಬ್ಯಾಕ್‌ ಸ್ಟೋರೇಜ್‌ನೊಂದಿಗೆ ಬರಲಿದೆ. ಸದ್ಯ ಗಾರ್ಮಿನ್ ವೇನು Sq ಬೆಲೆ 21,090,ರೂ ಮತ್ತು ಗಾರ್ಮಿನ್ ವೇನು Sq ಮ್ಯೂಸಿಕ್‌ ಬೆಲೆ 26,090. ರೂ ಆಗಿದೆ. ಈ ಹೊಸ ಸ್ಮಾರ್ಟ್ ವಾಚ್‌ಗಳನ್ನು ಅಮೆಜಾನ್ ಇಂಡಿಯಾ, ಮೈಂಟ್ರಾ, ಫ್ಲಿಪ್‌ಕಾರ್ಟ್, ಟಾಟಾ ಕ್ಲಿಕ್ ಮತ್ತು ಪೇಟಿಎಂ ಮಾಲ್ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಬಹುದು. ಇದು ಗಾರ್ಮಿನ್ ಬ್ರಾಂಡ್ ಮಳಿಗೆಗಳು, ಲೈಫ್‌ಸ್ಟೈಲ್‌ ಮಳಿಗೆಗಳು ಮತ್ತು ಆಫ್‌ಲೈನ್‌ ಮಾರುಕಟ್ಟೆಯಲ್ಲಿ ಖರೀದಿಸಲು ಲಭ್ಯವಿದೆ.

Best Mobiles in India

English summary
Garmin has launched two new smartwatches in India under its Venu series. Garmin Venu Sq and Venu Sq come with built-in GPS, and up to 14 hours of battery life.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X