ಗಾರ್ಮಿನ್‌ನಿಂದ ಹೊಸ ಸ್ಮಾರ್ಟ್‌ವಾಚ್ ಪರಿಚಯ! ಜಬರ್ದಸ್ತ್ ಫೀಚರ್ಸ್!
ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಗಾರ್ಮಿನ್ ಕಂಪೆನಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳಿಗೆ ಹೆಸರುವಾಸಿಯಾಗಿರುವ ಗಾರ್ಮಿನ್ ಇದೀಗ ಭಾರತದಲ್ಲಿ ಎರಡು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದೆ. ಇವುಗಳನ್ನು ಗಾರ್ಮಿನ್ ಫೋರ್‌ರನ್ನರ್ 965 ಮತ್ತು ಫೋರ್‌ರನ್ನರ್ 265 ಎಂದು ಹೆಸರಿಸಲಾಗಿದೆ.
ಹೌದು, ಗಾರ್ಮಿನ್ ಕಂಪೆನಿ ತನ್ನ ಹೊಸ ಗಾರ್ಮಿನ್ ಫೋರ್‌ರನ್ನರ್ 965 ಮತ್ತು ಫೋರ್‌ರನ್ನರ್ 265 ಸ್ಮಾರ್ಟ್‌ವಾಚ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ವಾಚ್‌ಗಳು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿವೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ವಾಚ್ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗಾರ್ಮಿನ್ ಫೋರ್‌ರನ್ನರ್ 965 ಮತ್ತು ಫೋರ್‌ರನ್ನರ್ 265 ಫೀಚರ್ಸ್ ಹೇಗಿದೆ!
ಗಾರ್ಮಿನ್ ಫೋರ್‌ರನ್ನರ್ 965 ಸ್ಮಾರ್ಟ್‌ವಾಚ್ 1.4 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 454 x 454-ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಆದರೆ ಗಾರ್ಮಿನ್ ಫೋರ್‌ರನ್ನರ್ 265 ಸ್ಮಾರ್ಟ್‌ವಾಚ್ 416 x 416 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 1.3 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಎರಡೂ ಡಿಸ್‌ಪ್ಲೇಗಳು ಕೂಡ ಗೊರಿಲ್ಲಾ ಗ್ಲಾಸ್ 3 DX ಮತ್ತು 4 ಸ್ಕ್ರೀನ್ ಪ್ರೊಟೆಕ್ಷನ್ ಪಡೆದುಕೊಂಡಿವೆ.
ಇನ್ನು ಸ್ಮಾರ್ಟ್‌ವಾಚ್‌ಗಳಲ್ಲಿ ಹೆಲ್ತ್ ಫೀಚರ್ಸ್‌ಗಳಿಗೆ ಪ್ರಮುಖ ಆಧ್ಯತೆ ನೀಡಲಾಗಿದೆ. ಅದರಂತೆ ಈ ವಾಚ್‌ಗಳಲ್ಲಿ ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್, VO2 ಮ್ಯಾಕ್ಸ್, ಮಹಿಳೆಯರ ಆರೋಗ್ಯ ಟ್ರ್ಯಾಕರ್, ಸ್ಲಿಪಿಂಗ್ ಮತ್ತು ಒತ್ತಡ ಟ್ರ್ಯಾಕರ್ ಅನ್ನು ಹೊಂದಿದೆ. ಇದಲ್ಲದೆ ಟ್ರೈನಿಂಗ್ ಪ್ರಿಪೇರ್ ಸ್ಕೋರ್, ಚೇತರಿಕೆಯ ಸಮಯ, ಲೋಡ್ ಅನುಪಾತ, ವರ್ಕೌಟ್ ಎಫೆಕ್ಟ್ ಮತ್ತು ಕಾರ್ಯಕ್ಷಮತೆಯ ಸ್ಟೆಟಸ್‌ನಂತಹ ಫಿಟ್‌ನೆಸ್ ಫೀಚರ್ಸ್‌ಗಳನ್ನು ಒಳಗೊಂಡಿವೆ. ಹಾಗೆಯೇ ಮ್ಯಾರಥಾನ್ ಮತ್ತು ಟ್ರಯಥ್ಲಾನ್ ಉತ್ಸಾಹಿಗಳಿಗಾಗಿ ಕ್ಯಾಡೆನ್ಸ್, ಸ್ಟ್ರೈಡ್ ಲೆಂತ್, ಗ್ರೌಂಡ್ ಕಾಂಟ್ಯಾಕ್ಟ್ ಟೈಮ್ ನಂತಹ ರನ್ನಿಂಡ್ ಮೆಟ್ರಿಕ್‌ಗಳೊಂದಿಗೆ ಡಿಸೈನ್ ಮಾಡಲಾಗಿದೆ.
ಇದರೊಂದಿಗೆ ಗಾರ್ಮಿನ್ ತನ್ನ ಸ್ಮಾರ್ಟ್‌ವಾಚ್‌ಗಳಲ್ಲಿ ಇನ್‌ಬಿಲ್ಟ್ GPS ಅನ್ನು ಹೊಂದಿದೆ. ಇನ್ನು ವಾಚ್‌ಗಳಲ್ಲಿ ಕ್ರಮವಾಗಿ 32GB ಮತ್ತು 8GB ಆನ್‌ಬೋರ್ಡ್ ಸ್ಟೋರೇಜ್ ಕ್ಯಾಪಸಿಟಿ ನೀಡಲಾಗಿದೆ. ಜೊತೆಗೆ ಸ್ಮಾರ್ಟ್ ವಾಚ್‌ಗಳು ಗಾರ್ಮಿನ್ ಪೇ, ಸ್ಮಾರ್ಟ್ ನೋಟಿಫಿಕೇಶನ್‌ಗಳು, ಲೈವ್ ಟ್ರ್ಯಾಕಿಂಗ್‌ನಂತಹ ಅನುಕೂಲಕರ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಇದಲ್ಲದೆ ಗಾರ್ಮಿನ್ ಫೋರ್‌ರನ್ನರ್ 965 ವಾಚ್ 23 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಹಾಗೆಯೇ ಗಾರ್ಮಿನ್ ಫೋರ್‌ರನ್ನರ್ 265 ಸಿಂಗಲ್ ಚಾರ್ಜ್‌ನಲ್ಲಿ 13 ದಿನಗಳ ಬಾಳಿಕೆಯನ್ನು ನೀಡಲಿದೆ.

ಗಾರ್ಮಿನ್ ಫೋರನ್ನರ್ 965 ಸ್ಮಾರ್ಟ್‌ವಾಚ್ 67,490ರೂ. ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ ಕಪ್ಪು ಮತ್ತು ಹಳದಿ ಬಣ್ಣಗಳಲ್ಲಿ ಲಭ್ಯವಾಗಲಿದೆ. ಇನ್ನು ಗಾರ್ಮಿನ್ ಫೋರ್‌ರನ್ನರ್ 265 ಸ್ಮಾರ್ಟ್‌ವಾಚ್ ಬೆಲೆ 50,490ರೂ. ಆಗಿದೆ. ಈ ಸ್ಮಾರ್ಟ್‌ವಾಚ್ ಕಪ್ಪು ಮತ್ತು ಆಕ್ವಾ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಈ ಎರಡೂ ಸ್ಮಾರ್ಟ್‌ವಾಚ್‌ಗಳನ್ನು ನೀವು ದೇಶಾದ್ಯಂತ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸಬಹುದಾಗಿದೆ.
ಇದಲ್ಲದೆ ಗಾರ್ಮಿನ್ ಕಂಪೆನಿ ಇತ್ತೀಚಿಗೆ ಹೊಸ MARQ (Gen2) ಸರಣಿಯಲ್ಲಿ ಐದು ವಾಚ್‌ಗಳನ್ನು ಅನಾವರಣಗೊಳಿಸಿದೆ. ಇವುಗಳನ್ನು ಮಾರ್ಕ್ ಅಥ್ಲೀಟ್, ಮಾರ್ಕ್ ಅಡ್ವೆಂಚರ್, ಮಾರ್ಕ್ ಗಾಲ್ಫರ್, ಮಾರ್ಕ್ ಕ್ಯಾಪ್ಟನ್ ಮತ್ತು ಮಾರ್ಕ್ ಏವಿಯೇಟರ್ ಎಂದು ಹೆಸರಿಸಲಾಗಿದೆ. ಗಾರ್ಮಿನ್ ಕಂಪೆನಿಯ MARQ ಸ್ಮಾರ್ಟ್‌ವಾಚ್‌ಗಳು ಸೂಪರ್ ಪ್ರೀಮಿಯಂ ಗುಣಮಟ್ಟವನ್ನು ಹೊಂದಿವೆ. ಈ ಸ್ಮಾರ್ಟ್‌ವಾಚ್‌ಗಳು ಬಳಕೆದಾರರಿಗೆ ವಿಶ್ವಾಸಾರ್ಹತೆಯೊಂದಿಗೆ ಐಷಾರಾಮಿ ಅನುಭವವನ್ನು ಒದಗಿಸಲಿವೆ. MARQ ಕಲೆಕ್ಷನ್‌ನಲ್ಲಿ ಬಂದಿರುವ ಎಲ್ಲಾ ಸ್ಮಾರ್ಟ್‌ವಾಚ್‌ಗಳು ಕೂಡ ಸುಂದರವಾದ ವಿನ್ಯಾಸವನ್ನು ಪಡೆದುಕೊಂಡಿದ್ದು, ಸ್ಮಾರ್ಟ್‌ವಾಚ್ ಅನುಭವ ನೀಡಲಿದೆ. ಇನ್ನು ಈ MARQ ಸರಣಿಯನ್ನು ನೀಲಮಣಿ ಸ್ಫಟಿಕ, ಸೆರಾಮಿಕ್ ಮತ್ತು ಜಾಕ್ವಾರ್ಡ್-ನೇಯ್ಗೆ ನೈಲಾನ್‌ನಂತಹ ವಸ್ತುಗಳೊಂದಿಗೆ ಬಿಲ್ಟ್ ಮಾಡಲಾಗಿದೆ.


Click it and Unblock the Notifications








