ಭಾರತದಲ್ಲಿ ಗಾರ್ಮಿನ್‌ನಿಂದ ಎರಡು ಹೊಸ ಸ್ಮಾರ್ಟ್‌ವಾಚ್‌ ಬಿಡುಗಡೆ!

|

ಈಗಾಗ್ಲೆ ವಿವಿಧ ಕಂಪೆನಿಗಳ ಸ್ಮಾರ್ಟ್‌ವಾಚ್‌ಗಳು, ಪಿಟ್ನೆಸ್‌ ಬ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡ್ತಿವೆ. ಯುವಜನತೆಯ ಆಸಕ್ತಿಗೆ ತಕ್ಕಂತೆ ವಿವಿಧ ಬಗೆಯ ವಿನ್ಯಾಸದ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಗೆ ಬಂದಿವೆ. ವರ್ಷದಿಂದ ವರ್ಷಕ್ಕೆ ಸ್ಮಾರ್ಟ್‌ ಆಗುತ್ತಾ ಬರುತ್ತಿರೋ ಸ್ಮಾರ್ಟ್‌ವಾಚ್‌ಗಳು ಮನುಷ್ಯನ ದೇಹದ ರಕ್ತದ ಶುದ್ದತೆಯನ್ನು ಸಹ ಅಳೆಯುವಷ್ಟರ ಮಟ್ಟಿಗೆ ಸ್ಮಾರ್ಟ್‌ ಆಗಿವೆ. ಇದೀಗ ಸ್ಮಾರ್ಟ್ ವೇರಬಲ್ಸ್ ತಯಾರಕ ಕಂಪೆನಿ ಆದ ಗಾರ್ಮಿನ್ ತನ್ನ ಹೊಸ ಆವೃತ್ತಿಯ ಸ್ಮಾರ್ಟ್ ವಾಚ್ ಅನ್ನು ಲಾಂಚ್‌ ಮಾಡಿದೆ.

ಗಾರ್ಮಿನ್

ಹೌದು, ಗಾರ್ಮಿನ್ ಕಂಪೆನಿ ತನ್ನ ಹೊಸ ಸ್ಮಾರ್ಟ್‌ವಾಚ್ ಅನ್ನ ಭಾರತದಲ್ಲಿ ಲಾಂಚ್‌ ಮಾಡಿದೆ. ಅಮೋಲೆಡ್ ಡಿಸ್‌ಪ್ಲೇ ಹೊಂದಿರೋ ಈ ಸ್ಮಾರ್ಟ್‌ವಾಚ್‌ ಎರಡು ವಿಭಿನ್ನ ಮಾದರಿಯಲ್ಲಿ ಬಿಡುಗಡೆಯಾಗಿದೆ. ಇನ್ನು ಗಾರ್ಮಿನ್‌ ವೆನು(Venu) ಹಾಗೂ ವಿವೋಆಕ್ಟಿವ್4‌ ಹೆಸರಿನ ಈ ಸ್ಮಾರ್ಟ್‌ವಾಚ್‌ಗಳು ಈಗಾಗ್ಲೆ ಸ್ಮಾರ್ಟ್‌ವಾಚ್‌ ಪ್ರಿಯರನ್ನ ಸೆಳೆಯುತ್ತಿದೆ. ಅಷ್ಟೇ ಅಲ್ಲ ಈ ಎರಡು ಸ್ಮಾರ್ಟ್‌ವಾಚ್‌ಗಳಲ್ಲಿ ಜಿಪಿಎಸ್‌+ ಮ್ಯೂಸಿಕ್‌ ಮೋಡ್‌ ನೀಡಲಾಗಿದ್ದು ಯುವಜನತೆಯನ್ನ ಆಕರ್ಷಿಸುತ್ತಿವೆ.

ವಿವೋಆಕ್ಟಿವ್

ಸದ್ಯ ವೇಣು ಮತ್ತು ವಿವೋಆಕ್ಟಿವ್ 4 ಈ ಎರಡೂ ಸ್ಮಾರ್ಟ್‌ವಾಚ್‌ಗಳಲ್ಲಿ ಪಲ್ಸ್‌ಆಕ್ಸ್‌ ತಂತ್ರಾಂಶವನ್ನ ಅಳವಡಿಸಲಾಗಿದ್ದು ಇದರಿಂದ ನಿದ್ರೆ, ಉಸಿರಾಟದ ಟ್ರ್ಯಾಕಿಂಗ್, ಅಸಹಜ ಹೃದಯ ಬಡಿತದ ಎಚ್ಚರಿಕೆಗಳು, ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್, ವಿಶ್ರಾಂತಿ, ಮಾನಸಿಕ ಒತ್ತಡ ಟ್ರ್ಯಾಕಿಂಗ್, ಹೈಡ್ರೇಶನ್ ಟ್ರ್ಯಾಕಿಂಗ್, ದೈನಂದಿನ ದೈಹಿಕ ಚಟುವಟಿಕೆಗಳ ಆರೋಗ್ಯ ಮೇಲ್ವಿಚಾರಣಾ ವೈಶಿಷ್ಟ್ಯಗಳನ್ನ ಒಳಗೊಂಡಿದೆ. ಅಷ್ಟೇ ಅಲ್ಲ ವಾತಾವರಣದಲ್ಲಿ ಸೂರ್ಯನ ಬೆಳಕಿನ ಪ್ರಮಾಣವನ್ನ ತಿಳಿಸಲು "ಗಾರ್ಮಿನ್ ಕ್ರೋಮಾ ಡಿಸ್ಪ್ಲೇ" ತಂತ್ರಜ್ಞಾನವನ್ನ ಅಳವಡಿಸಲಾಗಿದೆ.

ರನ್ನಿಂಗ್‌

ಇನ್ನು ಗಾರ್ಮಿನ್‌ ಕಂಪೆನಿ ಬಳಕೆದಾರರ ಟ್ರಕಿಂಗ್‌, ಬೈಕಿಂಗ್, ಗಾಲ್ಫಿಂಗ್, ರನ್ನಿಂಗ್‌ , ಶಿಕಾರಿ ಮತ್ತು ಡೈವಿಂಗ್‌ನಂತಹ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವ ಸೌಲಭ್ಯವನ್ನ ನೀಡಿದ್ದು ಬಳಕೆದಾರರ ಸ್ನೇಹಿಯಾಗಿ ಸ್ಮಾರ್ಟ್‌ವಾಚ್‌ಗಳನ್ನ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಈ ಸ್ಮಾರ್ಟ್ ವಾಚ್‌ಗಳು ಹೆಚ್ಚಿನ ಅವಧಿಯವರೆಗೂ ಕಾರ್ಯನಿರ್ವಹಿಸಲು ಪವರ್ ಮ್ಯಾನೇಜರ್ ಅನ್ನು ಸಹ ಹೊಂದಿವೆ. ಜೊತೆಗೆ ಸೌರಶಕ್ತಿ ಮೂಲಕವೇ ಈ ವಾಚ್‌ಗಳು ಕಾರ್ಯನಿರ್ವಹಣೆ ಮಾಡುತ್ತವೆ. ಹಾಗೇ ನೋಡಿದ್ರೆ ಇದು ಗಾರ್ಮಿನ್‌ ಕಂಪನಿಯ ಮೊದಲ ಸೌರಶಕ್ತಿ ಚಾಲಿತ ವಾಚ್ ಸಹ ಆಗಿದೆ.

ಸ್ಮಾರ್ಟ್‌ವಾಚ್‌

ಅಲ್ಲದೆ ಗಾರ್ಮಿನ್ ವೆನು ಸ್ಮಾರ್ಟ್‌ವಾಚ್‌ 1.2 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದ್ದು , ಸ್ಮಾರ್ಟ್ ವಾಚ್ ಮೋಡ್‌ನಲ್ಲಿ ಐದು ದಿನಗಳವರೆಗೆ ಮತ್ತು ಜಿಪಿಎಸ್ + ಮ್ಯೂಸಿಕ್ ಮೋಡ್‌ನಲ್ಲಿ ಆರು ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ . ಸದ್ಯ ವೇಣು ಸ್ಮಾರ್ಟ್‌ ವಾಚ್‌ ಭಾರತದಲ್ಲಿ 37,490 ರೂ.ಬೆಲೆಯನ್ನ ಹೊಂದಿದ್ದರೆ, ವಿವೋಆಕ್ಟಿವ್ 4ಜಿಪಿಎಸ್ ಸ್ಮಾರ್ಟ್ ವಾಚ್ 32,590 ರೂ.ಬೆಲೆಯನ್ನ ಹೊಂದಿದೆ.

ಅಮೆಜಾನ್

ಇನ್ನು ಗಾರ್ಮಿನ್ ವಿವೊಆಕ್ಟಿವ್ 4 ಸ್ಮಾರ್ಟ್‌ವಾಚ್‌ ಸ್ಮಾರ್ಟ್ ವಾಚ್ ಮೋಡ್‌ನಲ್ಲಿ ಎಂಟು ದಿನಗಳವರೆಗೆ ಮತ್ತು ಜಿಪಿಎಸ್ + ಮ್ಯೂಸಿಕ್ ಮೋಡ್‌ನಲ್ಲಿ 6 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಹೊಂದಿದೆ. ಸದ್ಯ ಅಮೆಜಾನ್, ಟಾಟಾ ಸಿಲಿಕ್, ಮೈಂಟ್ರಾ, ಫ್ಲಿಪ್‌ಕಾರ್ಟ್, ಮತ್ತು ಪೇಟಿಎಂ ಮಾಲ್ ಆನ್‌ಲೈನ್ ಮೂಲಕ ಹಾಗೂ ಆಫ್‌ಲೈನ್ ಮಳಿಗೆಗಳಲ್ಲಿ ಲಭ್ಯವಿದೆ. ಗಾರ್ಮಿನ್ ವೇಣುಸ್ಮಾರ್ಟ್‌ವಾಚ್ ಗ್ರಾನೈಟ್ ಬ್ಲೂ ವಿತ್ ಸಿಲ್ವರ್ ಹಾರ್ಡ್‌ವೇರ್, ಬ್ಲ್ಯಾಕ್ ವಿಥ್ ಸ್ಲೇಟ್ ಹಾರ್ಡ್‌ವೇರ್, ಲೈಟ್ ಸ್ಯಾಂಡ್ ವಿಥ್ ರೋಸ್ ಗೋಲ್ಡ್ ಹಾರ್ಡ್‌ವೇರ್, ಜೊತೆಗೆ ಬ್ಲ್ಯಾಕ್ ವಿಥ್ ಗೋಲ್ಡ್ ಹಾರ್ಡ್‌ವೇರ್ನಲ್ಲಿ ಲಭ್ಯವಿದೆ. ಸಿಲ್ವರ್ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

Best Mobiles in India

Read more about:
English summary
Smart wearables maker Garmin India on Friday launched Venu, its first smartwatch with AMOLED screen in India, at Rs. 37,490. The company also launched Vivoactive 4 GPS smartwatch at Rs. 32,590. The Garmin Venu smartwatch will be an Amazon exclusive until December 15, after which it will be made available via Tata CliQ, Myntra, Flipkart, and Paytm Mall. It is also available via offline stores.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X