Home
ಸುದ್ದಿಜಾಲ

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್‌ಲೆಸ್‌ ಚಾರ್ಜಿಂಗ್‌ ಬೆಂಬಲಿಸುವ ಸ್ಮಾರ್ಟ್‌ವಾಚ್‌!

ಜನಪ್ರಿಯ ಸ್ಮಾರ್ಟ್‌ವಾಚ್‌ ತಯಾರಕ ಗಾರ್ಮಿನ್‌ ಮತ್ತೊಂದು ಹೊಸ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಇದನ್ನು ಗಾರ್ಮಿನ್‌ ವಿವೋಮೋವ್‌ ಟ್ರೆಂಡ್‌ ಸ್ಮಾರ್ಟ್‌ವಾಚ್‌ ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ವಾಚ್‌ ವಾಯರ್‌ಲೆಸ್‌ ಚಾರ್ಜಿಂಗ್‌ ಬೆಂಬಲಿಸುವುದು ಇದರ ಮೇನ್‌ ಹೈಲೈಟ್‌ ಆಗಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ 5 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದರೊಂದಿಗೆ ಸ್ಮಾರ್ಟ್ ಹೆಲ್ತ್ ಮಾನಿಟರ್‌ಗಳು ಮತ್ತು ಆಕ್ಟಿವಿಟಿ ಟ್ರ್ಯಾಕರ್ ಫೀಚರ್ಸ್‌ಗಳನ್ನು ಕೂಡ ಒಳಗೊಂಡಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್‌ಲೆಸ್‌ ಚಾರ್ಜಿಂಗ್‌ ಬೆಂಬಲಿಸುವ ವಾಚ್‌!

ಹೌದು, ಗಾರ್ಮಿನ್‌ ಕಂಪೆನಿ ಹೊಸದಾಗಿ ಗಾರ್ಮಿನ್‌ ವಿವೋಮೋವ್‌ ಟ್ರೆಂಡ್‌ ಸ್ಮಾರ್ಟ್‌ವಾಚ್‌ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ ಫುಲ್‌ ಡಯಲ್‌ ಹಿಡನ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ಸಿಲಿಕೋನ್ ಬ್ಯಾಂಡ್‌ ಹೊಂದಿದ್ದು, ಇದು ಕಪ್ಪು, ಚಿನ್ನ ಮತ್ತು ದಂತ, ಕೆನೆ ಮತ್ತು ಬೂದು, ಮತ್ತು ಬೆಳ್ಳಿ ಮತ್ತು ಬೂದು ಸೇರಿದಂತೆ ಹಲವು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗಾರ್ಮಿನ್ ವಿವೋಮೋವ್ ಟ್ರೆಂಡ್ ಸ್ಮಾರ್ಟ್ ವಾಚ್ ವಿಶೇಷತೆ ಏನು?
ಗಾರ್ಮಿನ್ ವಿವೋಮೋವ್ ಟ್ರೆಂಡ್ ಸ್ಮಾರ್ಟ್ ವಾಚ್ 254 x 346 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಬೆಂಬಲಿಸುವ ಫುಲ್‌ ಡಯಲ್‌ ಹಿಡನ್‌ ಡಿಸ್‌ಪ್ಲೇ ಹೊಂದಿದ್ದು, ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೇ ಇದಾಗಿದೆ. ಇನ್ನು ಸ್ಮಾರ್ಟ್‌ವಾಚ್‌ ಸ್ಟೇನ್‌ಲೆಸ್-ಸ್ಟೀಲ್ ಎಡ್ಜ್‌, ಗುಮ್ಮಟದ ಗಾಜು ಮತ್ತು ಆರಾಮದಾಯಕ ಸಿಲಿಕೋನ್ ಬ್ಯಾಂಡ್ ಪಡೆದಿದೆ. ಈ ಸ್ಮಾರ್ಟ್‌ವಾಚ್‌ನಲ್ಲಿ ಸ್ಮಾರ್ಟ್‌ ನೋಟಿಫಿಕೇಶನ್‌ಗಳನ್ನು ಕೂಡ ಕಾಣಬಹುದಾಗಿದೆ. ಅಲ್ಲದೆ ಟೆಕ್ಸ್ಟ್‌ ಮೆಸೇಜ್‌ಗಳನ್ನು ಕೂಡ ಸ್ವೀಕರಿಸುವುದಕ್ಕೆ ಅನುವು ಮಾಡಿಕೊಡಲಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್‌ಲೆಸ್‌ ಚಾರ್ಜಿಂಗ್‌ ಬೆಂಬಲಿಸುವ ವಾಚ್‌!

ಇನ್ನು ಸ್ಮಾರ್ಟ್‌ವಾಚ್‌ ಹೆಸರಿಗೆ ತಕ್ಕಂತೆ ಸಾಕಷ್ಟು ಟ್ರೆಂಡಿ ಆಗಿದ್ದು, ಸ್ಮಾರ್ಟ್‌ ಹೆಲ್ತ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಹಾರ್ಟ್‌ ಬೀಟ್‌ ಸೆನ್ಸಾರ್‌, ಸ್ಲಿಪ್‌ ಮಾನಿಟರ್‌, ಪಲ್ಸ್‌ ಆಕ್ಸಿಮೀಟರ್‌, ಸ್ಟ್ರೇಸ್‌ ಟ್ರ್ಯಾಕರ್‌ ಮತ್ತು ಮಹಿಳೆಯರ ಆರೋಗ್ಯ ಸಂಬಂಧಿತ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಬ್ಯಾರೊಮೆಟ್ರಿಕ್‌ ಆಲ್ಟಿಮೀಟರ್‌, ಅಕ್ಸಿಲೆರೊಮೀಟರ್‌ ಮತ್ತು ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ನೀರು ಮತ್ತು ದೂಳಿನಿಂದ ರಕ್ಷಣೆ ಪಡೆಯುವುದಕ್ಕಾಗಿ 5 ಎಟಿಎಂ ರೇಟಿಂಗ್ ಅನ್ನು ಸಹ ಹೊಂದಿದೆ.

ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಯೋಗ, ಎನರ್ಜಿ, ಕಾರ್ಡಿಯೋ, ರನ್ನಿಂಗ್‌ ಮತ್ತು ಇನ್‌ಬಿಲ್ಟ್‌ ಆಕ್ಟಿವಿಟಿ ಪ್ರೊಫೈಲ್‌ಗಳೊಂದಿಗೆ ಆಕ್ಟಿವಿಟಿ ಟ್ರ್ಯಾಕರ್‌ಗಳನ್ನು ಸಹ ಒಳಗೊಂಡಿದೆ. ಇದು 5 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ ಮತ್ತು ಜಿಪಿಎಸ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಲೈವ್ GPS ಲೊಕೇಶನ್‌ ಅನ್ನು ಆಯ್ದ ಕಂಟ್ಯಾಕ್ಟ್‌ಗಳಿಗೆ ಸೆಂಡ್‌ ಮಾಡುವುದಕ್ಕೆ ಅವಕಾಶವನ್ನು ಸಹ ನೀಡಲಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್‌ಲೆಸ್‌ ಚಾರ್ಜಿಂಗ್‌ ಬೆಂಬಲಿಸುವ ವಾಚ್‌!

ಗಾರ್ಮಿನ್ ವಿವೋಮೋವ್ ಟ್ರೆಂಡ್ ಸ್ಮಾರ್ಟ್ ವಾಚ್ ಬೆಲೆ ಮತ್ತು ಲಭ್ಯತೆ
ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಗಾರ್ಮಿನ್ ವಿವೋಮೊವ್ ಟ್ರೆಂಡ್ ಸ್ಮಾರ್ಟ್‌ವಾಚ್‌ ಬೆಲೆ $299 (ಸುಮಾರು 24,000ರೂ)ಆಗಿದೆ. ಇದು US ನಲ್ಲಿನ ಗಾರ್ಮಿನ್ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಸ್ಲೇಟ್/ಬ್ಲ್ಯಾಕ್, ಪೀಚ್ ಗೋಲ್ಡ್/ಐವರಿ, ಕ್ರೀಮ್ ಗೋಲ್ಡ್/ಫ್ರೆಂಚ್ ಗ್ರೇ ಮತ್ತು ಸಿಲ್ವರ್/ಮಿಸ್ಟ್ ಗ್ರೇ ಸೇರಿದಂತೆ ವಿವಿಧ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡುವ ಸೂಚನೆಯನ್ನು ನೀಡಿದೆ.

Best Mobiles in India

English summary
Garmin Vivomove Trend smartwatch features an analogue design with a real ticking watch hands and a full-dial hidden display.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+