Home
ಸುದ್ದಿಜಾಲ

GB WhatsApp ಇನ್‌ಸ್ಟಾಲ್‌ ಮಾಡುವ ಮೊದಲು ಈ ಸ್ಟೋರಿ ಓದಿರಿ!

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಈಗಾಗಲೇ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಆದರೂ ವಾಟ್ಸಾಪ್‌ ಅಪ್ಲಿಕೇಶನ್ ಸ್ವತಃ ಕೆಲವು ಮಿತಿಗಳನ್ನು ಹೊಂದಿದೆ. ಇದೇ ಕಾರಣಕ್ಕೆ ಆನ್‌ಲೈನ್‌ನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್‌ನ ಮಾರ್ಪಡಿಸಿದ ಆವೃತ್ತಿಗಳಿವೆ. ಇದು ಬಳಕೆದಾರರಿಗೆ ಅವರ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸುಧಾರಿಸಲು, ಇನ್ನೂ ಹೆಚ್ಚಿನ ಫೀಚರ್ಸ್‌ಗಳನ್ನು ನೀಡುತ್ತದೆ. ಇದರಲ್ಲಿ ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಜಿಬಿ ವಾಟ್ಸಾಪ್ ಕೂಡ ಸೇರಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನ ಅಧಿಕೃತ ಆವೃತ್ತಿಯಲ್ಲಿ ದೊರೆಯದ ಕೆಲವು ಫೀಚರ್ಸ್‌ಗಳು ಜಿಬಿ ವಾಟ್ಸಾಪ್‌ ಆವೃತ್ತಿಯಲ್ಲಿ ದೊರೆಯಲಿದೆ. ಆದರಿಂದ ಕೆಲವರು ಜಿಬಿ ವಾಟ್ಸಾಪ್‌ ಅನ್ನು ಬಳಸುತ್ತಾರೆ. ಇದೀಗ ಜಿಬಿ ವಾಟ್ಸಾಪ್ 2021 ಹೊಸ ಆವೃತ್ತಿಯನ್ನು ಈಗ ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಆದರೂ ಈ ಅಪ್ಲಿಕೇಶನ್‌ ಅನ್ನು ಉಪಯೋಗಿಸುವುದು ಗೌಪ್ಯತೆಯ ದೃಷ್ಟಿಯಿಂದ ಸಮಂಜಸವಲ್ಲ. ಹಾಗಾದ್ರೆ ಜಿಬಿ ವಾಟ್ಸಾಪ್‌ 2021 ವಿಶೇಷತೆ ಏನು ಅದನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

GB ವಾಟ್ಸಾಪ್ 2021 ಹೊಸ ಫೀಚರ್ಸ್‌ಗಳು

GB ವಾಟ್ಸಾಪ್ 2021 ಹೊಸ ಫೀಚರ್ಸ್‌ಗಳು

GB ವಾಟ್ಸಾಪ್ ವಾಟ್ಸಾಫ್‌ ಸಂಸ್ಥೆಯ ಅಧಿಕೃತ ಭಾಗವಲ್ಲ. ಇದು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಆಗಿದೆ. ಇದರಲ್ಲಿರುವ ಹೆಚ್ಚಿನ ಫೀಚರ್ಸ್‌ಗಳು ವಾಟ್ಸಾಪ್‌ಗೆ ಹೋಲುತ್ತವೆಯಾದರೂ, ಹೆಚ್ಚುವರಿ ಥೀಮ್‌ಗಳು ಮತ್ತು ವಿಶೇಷ ಫೀಚರ್ಸ್‌ಗಳನ್ನು ಇದು ಒಳಗೊಂಡಿದೆ. GB ವಾಟ್ಸಾಪ್‌ನ ವಿವಿಧ ಆವೃತ್ತಿಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಇದೀಗ ಹೊಸ ಆವೃತ್ತಿಯಲ್ಲಿ ಸ್ವಯಂ ಕ್ರಿಯೆಟ್‌ ಥೀಮ್‌ಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಜೊತೆಗೆ 100MB ವರೆಗೆ ಹಂಚಿಕೊಳ್ಳುವ ಆಡಿಯೊ ಫೈಲ್‌ಗಳು, ಶಾರ್ಟ್‌ ವೀಡಿಯೊ ಸ್ಟೇಟಸ್‌ ಅನ್ನು ಏಳು ನಿಮಿಷಗಳವರೆಗೆ ಶೇರ್‌ ಮಾಡುವ ಅವಕಾಶವಿದೆ. ಅಲ್ಲದೆ ಥರ್ಡ್‌ ಪಾರ್ಟಿ ವೀಡಿಯೊ ಪ್ಲೇಯರ್ ಬೆಂಬಲವನ್ನು ಸಹ ಪಡೆದುಕೊಂಡಿದೆ.

ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ GB ವಾಟ್ಸಾಪ್ 2021 ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ GB ವಾಟ್ಸಾಪ್ 2021 ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಂತ 1: ನೀವು ಅಧಿಕೃತ ವೆಬ್‌ಸೈಟ್‌ನಿಂದ GB ವಾಟ್ಸಾಪ್ 2021 ಎಪಿಕೆ ಫೈಲ್ ಅನ್ನು ಡೌನ್‌ಲೋಡ್ ಮಾಡಬಹುದು.

ಹಂತ 2: ನೀವು ಇನ್‌ಸ್ಟಾಲ್‌ ಮಾಡುವ ಮುನ್ನ ಸೆಟ್ಟಿಂಗ್ಸ್‌ ಟ್ಯಾಬ್‌ನಿಂದ 'Unknown Sources' ಆಯ್ಕೆಯನ್ನು ಸಕ್ರಿಯಗೊಳಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಹಂತ 3: ಎಪಿಕೆ ಫೈಲ್ ಡೌನ್‌ಲೋಡ್ ಆದ ನಂತರ, ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಹಂತ 4: ನೀವು ಸಾಮಾನ್ಯವಾಗಿ ವಾಟ್ಸಾಪ್‌ನಲ್ಲಿರುವಂತೆ ಸೆಟಪ್ ಅನ್ನು ಪೂರ್ಣಗೊಳಿಸಬಹುದಾಗಿದೆ.

ವಾಟ್ಸಾಪ್

GB ವಾಟ್ಸಾಪ್ ಬಳಸಿದರೆ ಅಧಿಕೃತ ವಾಟ್ಸಾಪ್‌ ಖಾತೆ ನಿಷೇಧ?
ಹೌದು, ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ನೀವು GB ವಾಟ್ಸಾಪ್ ಅಪ್ಲಿಕೇಶನ್ ಬಳಸಿದರೆ ನಿಮ್ಮ ಖಾತೆಗೆ ಪ್ರವೇಶವನ್ನು ಕಳೆದುಕೊಳ್ಳಬಹುದು. ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳ ಬಳಕೆಯನ್ನು ವಾಟ್ಸಾಪ್ ಅನುಮತಿಸುವುದಿಲ್ಲ. ಇದರಿಂದಾಗಿ ನೀವು ನಿಮ್ಮ ಖಾತೆಗೆ ಪ್ರವೇಶವನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಹೆಚ್ಚುವರಿಯಾಗಿ, ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಯಾವುದೇ ಪ್ರಸಿದ್ಧ ಮೂಲಗಳಿಲ್ಲದ ಕಾರಣ ಈ ಅಪ್ಲಿಕೇಶನ್‌ಗಳು ನಿಮ್ಮ ಗೌಪ್ಯತೆಗೆ ಧಕ್ಕೆಯುಂಟುಮಾಡಬಹುದು.

Best Mobiles in India

English summary
Here’s what you need to know about the third-party app GB WhatsApp, the features it offers and why you should be careful while using the app.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+