Home
ಸುದ್ದಿಜಾಲ

GB WhatsApp ಬಳಸುತ್ತಿದ್ದರೆ ಈ ಕೂಡಲೇ ಡಿಲೀಟ್‌ ಮಾಡಿ! ಕಾರಣ ಏನ್‌ ಗೊತ್ತಾ?

ಭಾರತದಲ್ಲಿ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಸಾಕಷ್ಟು ಜನಪ್ರಿಯತೆ ಪಡೆದಿದೆ. ಇದನ್ನೇ ಬಂಡವಾಳಮಾಡಿಕೊಮಡಿರುವ ವಂಚಕರು ವಾಟ್ಸಾಪ್‌ ತದ್ರೂಪಿ ನಕಲಿ ಅಪ್ಲಿಕೇಶನ್‌ಗಳ ಮೂಲಕ ವಂಚಿಸುತ್ತಿರೋದು ಪತ್ತೆಯಾಗಿದೆ. ವಾಟ್ಸಾಪ್‌ನ ತದ್ರೂಪಿ, ಥರ್ಡ್‌ ಪಾರ್ಟಿಯ ಅನಧಿಕೃತ ಆವೃತ್ತಿ ದೇಶದಲ್ಲಿ ಸಾಕಷ್ಟು ಜನರ ಡೇಟಾವನ್ನು ಕದಿಯುತ್ತಿವೆ ಎಂದು ವರದಿಯಾಗಿದೆ. ದೇಶದಲ್ಲಿ ಜನರ ಚಾಟ್‌ಗಳ ಮೇಲೆ ಈ ಮಾದರಿಯ ಅಪ್ಲಿಕೇಶನ್‌ಗಳು ಬೇಹುಗಾರಿಕೆಮಾಡುತ್ತಿವೆ ಎಂದು ಹೊಸ ವರದಿಯೊಂದು ಎಚ್ಚರಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನ ತದ್ರೂಪಿ ಅಪ್ಲಿಕೇಶನ್‌ ಬಳಸುವ ಬಳಕೆದಾರರು ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ಏಕೆಂದರೆ ಈ ಮಾದರಿಯ ಅಪ್ಲಿಕೇಶನ್‌ಗಳು ನಿಮ್ಮ ಚಾಟ್‌ ಡೇಟಾವನ್ನು ಕದಿಯುತ್ತಿದ್ದು, ನಿಮ್ಮ ಪ್ರೈವೆಸಿಗೆ ದಕ್ಕೆ ತರಲಿವೆ ಎನ್ನಲಾಗಿದೆ. 'ಸೈಬರ್-ಸೆಕ್ಯುರಿಟಿ ಸಂಸ್ಥೆ ESET ವರದಿಯ ಪ್ರಕಾರ, ಕಳೆದ ನಾಲ್ಕು ತಿಂಗಳುಗಳಲ್ಲಿ ವಾಟ್ಸಾಪ್‌ನ ತದ್ರೂಪಿ ಆವೃತ್ತಿ 'GB WhatsApp'ನಲ್ಲಿ ಸಾಕಷ್ಟು ಡೇಟಾವನ್ನು ಕದಿಯಲಾಗಿದೆ. ಹಾಗಾದ್ರೆ ವಾಟ್ಸಾಪ್‌ ಬಳಕೆದಾರರ ಚಾಟ್‌ ಮೇಲೆ ಬೇಹುಗಾರಿಕೆ ಹೇಗೆ ನಡೆಯುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಅನ್ನೇ ಹೋಲುವ GB WhatsApp ಅನ್ನು ಬಳಸುತ್ತಿರುವವರು ಕೂಡಲೇ ಡಿಲೀಟ್‌ ಮಾಡುವುದು ಉತ್ತಮ. ಯಾಕೆಂದರೆ GB WhatsApp ಭಾರತದ ಬಳಕೆದಾರರ ಮೇಲೆ ಬೇಹುಗಾರಿಕೆಯನ್ನು ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಅಪ್ಲಿಕೇಶನ್‌ ಭಾರತದ ಬಳಕೆದಾರರ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಅನ್ನು ಕದಿಯುತ್ತಿದೆ ಎನ್ನಲಾಗಿದೆ. ಇನ್ನು ಇದೇ ರೀತಿಯ ಕ್ಲೋನ್ ಮಾಡಲಾದ ಅಪ್ಲಿಕೇಶನ್ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿಲ್ಲ, ಆದರೆ ವಿವಿಧ ವೆಬ್‌ಸೈಟ್‌ಗಳಲ್ಲಿ ಡೌನ್‌ಲೋಡ್‌ಗೆ ಲಭ್ಯವಿದೆ. ಈ ರೀತಿಯ ಡೌನ್‌ಲೋಡ್ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಆವೃತ್ತಿಗಳು ಮಾಲ್‌ವೇರ್‌ನಿಂದ ಕೂಡಿರುತ್ತವೆ ಎಂದು ವರದಿ ಹೇಳಿದೆ.

ಪ್ರೈವೆಸಿ

ವೆಬ್‌ಸೈಟ್‌ಗಳಿಂದ ಡೌನ್‌ಲೋಡ್‌ ಮಾಡುವ ಅಪ್ಲಿಕೇಶನ್‌ಗಳಲ್ಲಿ ಯಾವುದೇ ರೀತಿಯ ಪ್ರೈವೆಸಿ ಸೆಟ್ಟಿಂಗ್ಸ್‌ಗಳಿರುವುದಿಲ್ಲ. ಆದರೆ ಸಾಮಾನ್ಯ ಆವೃತ್ತ ವಾಟ್ಸಾಪ್‌ಗಿಂತಲೂ ಹೆಚ್ಚು ಆಕರ್ಷಕವಾದ ಫೀಚರ್ಸ್‌ಗಳನ್ನು ನೀಡಲಿವೆ. ಈ ರೀತಿಯ ಸ್ಟೈಲಿಶ್‌ ಫೀಚರ್ಸ್‌ಗಲಿಗತೆ ಮನಸೋತು GB WhatsApp ಅನ್ನು ಬಳಸಿದರೆ ನಿಮ್ಮ ಡೇಟಾ ಬೇರೆಯವರ ಕೈ ಸೇರೋದು ಪಕ್ಕಾ. ಈ ರೀತಿ ಬೇಹುಗಾರಿ ನಡೆಸುತ್ತಿರುವ ಅಪ್ಲಿಕೇಶನ್‌ಗಳ ಪ್ರಮಾಣ ಭಾರತದಲ್ಲಿ 35% ಇದೆ ಎಂದು ವರದಿಯಾಗಿದೆ. ಬಾಟ್‌ಗಳಿಗೆ ಒಂದು ರೀತಿಯಲ್ಲಿ ಜಿಯೋಲೊಕೇಶನ್ ಆಗಿದೆ. ಆದರಿಂದ ನೀವು ಸಾಮಾನ್ಯ ವಾಟ್ಸಾಪ್‌ ಆವೃತ್ತಿ ಬಳಸುವುದು ಉತ್ತಮ. ಇದರಲ್ಲಿ ನಿಮ್ಮ ಪ್ರೈವೆಸಿ ಕಾಪಾಡಬಲ್ಲ ಅನೇಕ ಫೀಚರ್ಸ್‌ಗಳನ್ನು ನೀಡಲಾಗಿದೆ.

ವಾಟ್ಸಾಪ್‌ನಲ್ಲಿ ನಿಮ್ಮ ಪ್ರೈವೆಸಿ ಕಾಪಾಡುವ ಫೀಚರ್ಸ್‌ಗಳು!

ವಾಟ್ಸಾಪ್‌ನಲ್ಲಿ ನಿಮ್ಮ ಪ್ರೈವೆಸಿ ಕಾಪಾಡುವ ಫೀಚರ್ಸ್‌ಗಳು!

ಎನ್‌ಕ್ರಿಪ್ಟೆಡ್‌ ಚಾಟ್ಸ್‌
ವಾಟ್ಸಾಪ್‌ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಹೊಂದಿರುವುದರಿಂದ ವಾಟ್ಸಾಪ್‌ ಕರೆಗಳು, ಟೆಕ್ಸ್ಟ್‌ ಮೆಸೇಜ್‌, ಫೋಟೋಗಳು, ವೀಡಿಯೊಗಳು, ಧ್ವನಿ ಸಂದೇಶಗಳು, ಡಾಕ್ಯುಮೆಂಟ್ಸ್‌ ಅನ್ನು ಬೇರೆಯವರು ಪ್ರವೇಶಿಸದಂತೆ ತಡೆಯಲಿದೆ. ನಿಮ್ಮ ವಾಟ್ಸಾಪ್‌ ಚಾಟ್‌ ಅನ್ನು ಬೇರೆ ಯಾರು ಕೂಡ ಹ್ಯಾಕ್‌ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ವಾಟ್ಸಾಪ್‌ ಹೇಳಿದೆ. ಪ್ರತಿಯೊಂದು ಸಂದೇಶವನ್ನು ಕಳುಹಿಸುವವರು ಮತ್ತು ಉದ್ದೇಶಿತ ಸ್ವೀಕರಿಸುವವರ ನಡುವೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ವಾಟ್ಸಾಪ್‌ ಮತ್ತು ಥರ್ಡ್‌ ಪಾಟಿ ಕೂಡ ನೀವು ಮಾಡಿರುವ ಸಂದೇಶಗಳನ್ನು ಪ್ರವೇಶಿದಂತೆ ಎನ್‌ಕ್ರಿಪ್ಟ್ ಮಾಡಲಾಗಿದೆ.

ಡಿಸ್‌ಅಪಿಯರಿಂಗ್‌ ಮೆಸೇಜಸ್‌

ಡಿಸ್‌ಅಪಿಯರಿಂಗ್‌ ಮೆಸೇಜಸ್‌

ವಾಟ್ಸಾಪ್‌ ಡಿಸ್‌ಅಪಿಯರಿಂಗ್‌ ಮೆಸೇಜಸ್‌ ಫೀಚರ್ಸ್‌ ಬಳಕೆದಾರರಿಗೆ ಸಂದೇಶಗಳನ್ನು ಅಳಿಸಲು ಡೀಫಾಲ್ಟ್ ಟೈಮರ್ ಅನ್ನು ಸೆಟ್‌ ಮಾಡಲು ಅನುಮತಿಸುತ್ತದೆ. ಈ ಟೈಮರ್ ಅನ್ನು 24 ಗಂಟೆಗಳು, 7 ದಿನಗಳು ಅಥವಾ 90 ದಿನಗಳ ಅವಧಿಗೆ ಸೆಟ್‌ ಮಾಡಬಹುದು. ನೀವು ಸೆಟ್‌ ಮಾಡಿದ ದಿನದಂದು ಆ ಸಂದೇಶಗಳು ಆಟೋಮ್ಯಾಟಿಕ್‌ ಕಣ್ಮರೆಯಾಗಲಿದೆ. ಈ ಫೀಚರ್ಸ್‌ ಅನ್ನು ಬಳಕೆದಾರರು ವೈಯಕ್ತಿಕ ಚಾಟ್‌ಗಳು ಮತ್ತು ಗುಂಪು ಚಾಟ್‌ಗಳಲ್ಲಿ ಬಳಸಬಹುದಾಗಿದೆ.

ವ್ಯೂ ಒನ್ಸ್‌

ವ್ಯೂ ಒನ್ಸ್‌

'ವ್ಯೂ ಒನ್ಸ್‌' ಫೀಚರ್ಸ್‌ ನೀವು ಸೆಂಡ್‌ ಮಾಡುವ ಫೋಟೋಗಳು ಮತ್ತು ವೀಡಿಯೊಗಳನ್ನು ಚಾಟ್‌ ತೆರೆದ ನಂತರ ಅವುಗಳನ್ನು ಚಾಟ್‌ನಿಂದ ಕಣ್ಮರೆಯಾಗುವಂತೆ ಸಕ್ರಿಯಗೊಳಿಸುತ್ತದೆ. ಇದರಿಂದ ಬಳಕೆದಾರರಿಗೆ ಅವರ ಗೌಪ್ಯತೆಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ.

ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಬ್ಯಾಕಪ್

ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಬ್ಯಾಕಪ್

ಮೆಸೇಜ್‌ ಬ್ಯಾಕಪ್‌ನಲ್ಲಿ ವಾಟ್ಸಾಪ್‌ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನೀಡುತ್ತದೆ. ಬ್ಯಾಕ್‌ಅಪ್‌ಗಳಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಎಂದರೆ ಗೂಗಲ್ ಡ್ರೈವ್ ಅಥವಾ ಐಕ್ಲೌಡ್‌ನಲ್ಲಿ ಸ್ಟೋರೇಜ್‌ ಆಗಿರುವ ಮೀಡಿಯಾ ಮತ್ತು ಮೆಸೇಜ್‌ಗಳನ್ನು ಯಾದೃಚ್ಛಿಕ ಎನ್‌ಕ್ರಿಪ್ಶನ್ ಕೀಲಿಯೊಂದಿಗೆ ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ಇದನ್ನು ಬಳಕೆದಾರರು ಪಾಸ್‌ವರ್ಡ್ ಮೂಲಕ ಕೂಡ ಬ್ಯಾಕಪ್‌ ಮಾಡಬಹುದಾಗಿದೆ.

Best Mobiles in India

English summary
GB WhatsApp spying on Indians via recording video, audio: Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+