ಎಟಿಎಂ ಮಷಿನಿನಲ್ಲೇ ''ಎಟಿಎಂ ಪಿನ್'' ಜನರೇಟ್ ಮಾಡುವುದು ಹೇಗೆ?!

|

ಇಂದಿನ ದಿನಗಳಲ್ಲಿ ಪ್ರತಿಯೋರ್ವರು ಎರಡು ಮತ್ತು ಅದಕ್ಕಿಂತ ಹೆಚ್ಚು ಬ್ಯಾಂಕ್‌ ಅಕೌಂಟ್‌ಗಳನ್ನು ಹೊಂದಿರುತ್ತಾರೆ. ಇನ್ನು ಒಂದೊಂದು ಬ್ಯಾಂಕ್ ಅಕೌಂಟ್‌ಗೂ ಒಂದೊಂದು ಎಟಿಎಂ ಕಾರ್ಡ್ ಇದ್ದೇ ಇರುತ್ತದೆ. ಹೀಗೆ ಹಲವು ಎಟಿಎಂ ಕಾರ್ಡ್‌ಗಳಿದ್ದರೆ ಆಗುವ ದೊಡ್ಡ ತೊಂದರೆ ಏನು ಅಂದರೆ ಎಲ್ಲಾ ಎಟಿಎಂ ಕಾರ್ಡ್‌ಗಳ ಪಿನ್‌ ಸಂಖ್ಯೆ ನೆನಪಿಟ್ಟುಕೊಳ್ಳುವುದು.

ಮರೆವು ಅನ್ನುವುದು ಎಲ್ಲರಲ್ಲಿಯೂ ಸಾಮಾನ್ಯವಾಗಿರುವುದರಿಂದ ಕೆಲವೊಮ್ಮೆ ಪ್ರಮುಖವಾದ ಎಟಿಎಂ ಪಿನ್‌ಗಳನ್ನು ಸಹ ನಾವು ಮರೆತು ಬಿಡುತ್ತೇವೆ. ಇದು ಕೆಲವೊಮ್ಮೆ ಸಮಸ್ಯೆಗಳನ್ನು ಸಹ ತರುತ್ತದೆ. ಆದರೂ, ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು.! ಇಲ್ಲದಿದ್ದರೆ ಅದನ್ನು ತೆಗೆದುಕೊಳ್ಳಲು ಬ್ಯಾಂಕ್‌ಗೆ ಹೋಗಬೇಕು ಎಂದು ಯೋಚಿಸುತ್ತೇವೆ.

ಎಟಿಎಂ ಮಷಿನಿನಲ್ಲೇ ''ಎಟಿಎಂ ಪಿನ್'' ಜನರೇಟ್ ಮಾಡುವುದು ಹೇಗೆ?!

ಆದರೆ, ಆ ಚಿಂತೆ ಬಿಡಿ. ನಿಮ್ಮ ಎಟಿಎಂ ಪಾಸ್‌ವರ್ಡ್‌ ಮರೆತರೆ ಪಿನ್‌ ಸಂಖ್ಯೆ ಪಡೆಯಲು ನೀವುಬ್ಯಾಂಕ್‌ಗೆ ಹೋಗಬೇಕಿಲ್ಲ. ನಿಮ್ಮ ಹತ್ತಿರದ ಯಾವುದಾದರೂ ಎಟಿಎಂ ಮಷಿನ್ ಮೂಲಕ ನೀವು ಬೇರೊಂದು ಪಿನ್ ನಂಬರ್ ಪಡೆಯಬಹುದು. ಇದಕ್ಕಾಗಿ ನಿಮ್ಮ ಬ್ಯಾಂಕ್‌ ಅಕೌಂಟ್ ನಂಬರ್‌ಗೆ ನಿಮ್ಮ ಮೊಬೈಲ್ ನಂಬರ್‌ ರಿಜಿಸ್ಟರ್ ಆಗಿದ್ದರೆ ಸಾಕಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

#1 ಬ್ಯಾಂಕಿಂಗ್ ಐಕಾನ್ ಆಯ್ಕೆ ಮಾಡಿ

ನಿಮ್ಮ ಹತ್ತಿರದ ಯಾವುದಾದರೂ ಎಟಿಎಂಗೆ ಹೋಗಿ ನಿಮ್ಮ ಕಾರ್ಡ್‌ ಹಾಕಿರಿ. ನಂತರ "ಬ್ಯಾಂಕಿಗ್" ಆಯ್ಕೆಯನ್ನು ಒತ್ತಿರಿ. ನಂತರ " ಪಿನ್‌ ಜನರೇಟ್" ಅಥವಾ "ಎಟಿಎಂ ಪಿನ್ ರೀಸೆಟ್" ಐಕಾನ್‌ಗಳನ್ನು ಸೆಲೆಕ್ಟ್ ಮಾಡಿ.

#2 ಅಕೌಂಟ್ ನಂಬರ್‌ ಎಂಟರ್ ಮಾಡಿ

"ಪಿನ್‌ ಜನರೇಟ್" ಅಥವಾ "ಎಟಿಎಂ ಪಿನ್ ರೀಸೆಟ್"ಎಂದು ಕ್ಲಿಕ್ ಮಾಡಿದ ನಂತರ ಎಟಿಎಂನಲ್ಲಿ ನಿಮ್ಮ ಅಕೌಂಟ್‌ ನಮೂದಿಸಲು ಸೂಚಿಸುತ್ತದೆ. ನಿಮ್ಮ ಅಕೌಂಟ್ ನಂಬರ್‌ ನಮೂದಿಸಿ.

#3 ಫೋನ್‌ ನಂಬರ್ ನಮೂದಿಸಿ.

ಅಕೌಂಟ್ ನಂಬರ್‌ ನಮೂದಿಸಿದ ನಂತರ ನಿಮ್ಮ ಫೋನ್‌ ನಂಬರ್‌ ನಮೂದಿಸಲು ರಿಕ್ವೆಸ್ಟ್‌ ಬರುತ್ತದೆ. ನಂತರ ನಿಮ್ಮ ಫೋನ್ ನಂಬರ್‌ ಎಂಟರ್ ಮಾಡಿ.

#4 OTP ಎಂಟರ್ ಮಾಡಿ.

ನಿಮ್ಮ ಫೋನ್‌ ನಂಬರ್ ನಮೂದಿಸಿದ ನಂತರ ನಿಮ್ಮ ಮೊಬೈಲ್‌ಗೆ ಒಂದು ಬಾರಿಯ ಪಾಸ್‌ವರ್ಡ್ (OTP) ಬರುತ್ತದೆ ಅದನ್ನು ತುಂಬಿರಿ

#5 ಪಿನ್ ಬದಲಾಯಿಸಿ

OTP ಎಂಟರ್ ಮಾಡಿದ ನಂತರ ನೂತನ ಪಿನ್‌ ಸಂಖ್ಯೆಯನ್ನು ಬದಲಾಯಿಸುವಂತೆ ಕೆಳುತ್ತದೆ. ನಿಮ್ಮಿಷ್ಟದ ನಾಲ್ಕು ಸಂಖ್ಯೆಯನ್ನು ನಮೂದಿಸಿ ಹೊಸ ಪಿನ್‌ ಸಂಖ್ಯೆ ಪಡೆಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

Read more about:
English summary
How do I generate an ATM PIN through an ATM machine?. to know more visit to kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more