Home
ಸುದ್ದಿಜಾಲ

ಒನ್ಇಂಡಿಯಾ ಕೂಪನ್ ಕೋಡ್ ಬಳಸಿ, ಆನ್‌ಲೈನ್‌ ಶಾಪಿಂಗ್‌ನಲ್ಲಿ ಹಣ ಉಳಿಸಿ!

By Ashwath

ಇಂದು ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀರಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಭಾರತದ ನಂಬರ್‌ ಒನ್‌ ಪ್ರಾದೇಶಿಕ ನ್ಯೂಸ್‌ ವೆಬ್‌ಸೈಟ್‌ ಒನ್‌ಇಂಡಿಯಾ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗೆ ವಿಶೇಷ ಕೂಪನ್‌ಗಳನ್ನು ಆರಂಭಿಸಿದೆ.

ಆನ್ ಲೈನ್ ಗ್ರಾಹಕರಿಗೆ ಹೆಚ್ಚಿನ ಲಾಭ ದೊರಕಿಸಿಕೊಡುವ ಉದ್ದೇಶದಿಂದ ಒನ್‌ಇಂಡಿಯಾ ಹೊಸ ಪ್ರೊಡಕ್ಟ್‌ನ್ನು ಲಾಂಚ್ ಮಾಡಿದೆ. ಅದೇ, ಒನ್ಇಂಡಿಯಾ ಕೂಪನ್ ಸರ್ವೀಸ್. ಈ ಕೂಪನ್ ಗಳನ್ನು ಬಳಸಿ ಸರಳವಾಗಿ, ಸುರಕ್ಷಿತವಾಗಿ ಮಾತ್ರವಲ್ಲ ಕೊಳ್ಳುವುದನ್ನು ಕೂಡ ಆನಂದಿಸುವಂಥ ಅನುಭವ ಗ್ರಾಹಕರದಾಗಲಿದೆ. coupons.oneindia.com ನೀಡುತ್ತಿರುವ ಕೂಪನ್ ಬಳಸಿ ಸಾವಿರಕ್ಕೂ ಹೆಚ್ಚು ಆನ್ ಲೈನ್ ಅಂಗಡಿಗಳಲ್ಲಿ, ಇಷ್ಟವಾದ ಬ್ರಾಂಡ್‌ನ ಉತ್ಪನ್ನಗಳನ್ನು ಕೊಂಡು ನಮ್ಮ ಅಮೂಲ್ಯವಾದ ಸಮಯ ಮತ್ತು ಹಣವನ್ನು ಉಳಿಸಬಹುದು. ಇದು ಗ್ರಾಹಕರಿಗೆ ಮಾತ್ರವಲ್ಲ ರಿಟೇಲ್ ಪಾಲುದಾರರಿಗೂ ಅನುಕೂಲವಾಗಿದೆ. ಅವರು ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯಲು, ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಲು ಮತ್ತು ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಿದೆ.

ಒನ್ಇಂಡಿಯಾ ಕೂಪನ್ ಕೋಡ್ ಬಳಸಿ, ಆನ್‌ಲೈನ್‌ ಶಾಪಿಂಗ್‌ನಲ್ಲಿ ಹಣ ಉಳಿಸಿ!

ಏನಿದು coupons.oneindia.com?

ಈ ಡಿಸ್ಕೌಂಟ್ ಕೂಪನ್ನಿಗೂ ನೀವು ಬಳಸುವ ಪೇಪರ್ ಕೂಪನ್ನುಗಳಿಗೆ ಯಾವುದೇ ವ್ಯತ್ಯಾಸವಿಲ್ಲ. ಆದರೆ, ಈ ಕೂಪನ್ನುಗಳನ್ನು ಆನ್ ಲೈನ್ ನಲ್ಲಿ ಮಾತ್ರ ಬಳಸಬಹುದು. ಕೂಪನ್ ಗಳ ಮೌಲ್ಯಗಳ ಆಧಾರದ ಮೇಲೆ ಉತ್ಪನ್ನಗಳನ್ನು ಕೊಳ್ಳುವಾಗ ರಿಯಾಯಿತಿಗಳು ದೊರೆಯುತ್ತವೆ. ಜೊತೆಗೆ, ವೋಚರ್ ಕೋಡ್‌ಗಳನ್ನು ಬಳಸಿ ಉಚಿತ ಕೊಡುಗೆಗಳನ್ನು ಕೂಡ ಪಡೆಯಬಹುದು. ಇವನ್ನು ಬಳಸಿದರೆ ಇದಕ್ಕಿಂತ ಅತ್ಯುತ್ತಮವಾದ ಆಫರುಗಳು ಬೇರೆಲ್ಲೂ ದೊರೆಯುವುದಿಲ್ಲ.

ಕೂಪನ್ ಮತ್ತು ವೋಚರ್ ಗಳನ್ನು ಹೇಗೆ ಪಡೆಯಬಹುದು?

ಸರ್ಚ್ ಬಾಕ್ಸ್ ನಲ್ಲಿ ನಮ್ಮ ಆಯ್ಕೆಯ ಅಂಗಡಿ, ಉತ್ಪನ್ನ ಅಥವಾ ವಿಭಾಗವನ್ನು ಹುಡುಕಿದಾಗ, ಇದಕ್ಕೆ ಸಂಬಂಧಿಸಿದ ಇತ್ತೀಚಿನ ವೋಚರ್ ಕೋಡ್‌ಗಳು ದೊರೆಯುತ್ತವೆ. ಭಾರತದ ನಂಬಿಗಸ್ತ ರಿಟೇಲರುಗಳಾದ ಇನ್ಫಿಬೀಮ್, ಟ್ರೇಡಸ್, ಹೋಮ್ ಶಾಪ್18, ಮೈನ್‌ಟ್ರಾ, ಜಬಾಂಗ್ ಮತ್ತಿತರ ಕಂಪನಿಗಳು ಉತ್ಪನ್ನಗಳಿಗೆ ಸಂಬಂಧಿಸಿದ ಕೂಪನ್ ಗಳು ಇಲ್ಲಿ ಲಭ್ಯ.

ಕೂಪನ್ ಕೋಡ್ (ಸಂಕೇತಾಕ್ಷರ) ಎಂದರೇನು?

ಉತ್ಪನ್ನ ಕೊಳ್ಳುವ ಅಂತಿಮ ಹಂತದಲ್ಲಿ ಭರ್ತಿ ಮಾಡಬೇಕಾದ ಅಂಕಿ ಮತ್ತು ಅಕ್ಷರಗಳ ಸರಣಿಯೇ ಕೂಪನ್ ಕೋಡ್.

coupons.oneindia.comನಲ್ಲಿ ಕೂಪನ್ ಕೊಳ್ಳುವುದು ಹೇಗೆ?
ಉತ್ಪನ್ನ ಕೊಳ್ಳುವ ಕೊನೆಯ ಹಂತದಲ್ಲಿ ಕೋಡ್ ಮೇಲೆ ಕ್ಲಿಕ್ ಮಾಡಿದಾಗ, ಆನ್ ಲೈನ್ ರಿಟೇಲರ್‌ನ ಬಿಲ್ಲಿಂಗ್ ಸೆಕ್ಷನ್‌ನಲ್ಲಿ ಕೂಪನ್ ಕಾಣಿಸಿಕೊಳ್ಳುತ್ತದೆ. ಉತ್ಪನ್ನದ ದರದಿಂದ ಡಿಸ್ಕೌಂಟ್ ದೊರೆಯುವಷ್ಟು ಹಣ ಕಡಿತವಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ. ಈ ಪ್ರಮೋಷನಲ್ ಕೋಡ್‌ಗಳು coupons.oneindia.comನಲ್ಲಿ ಸಂಪೂರ್ಣ ಉಚಿತವಾಗಿರುತ್ತವೆ.

ಕೂಪನ್ ಕೋಡ್ಸ್ ಬಳಸುವ ಸರಳ ಮಾರ್ಗ
1. ಕೊಳ್ಳಬೇಕಾದ ಅಂಗಡಿಯ ಕೂಪನ್ ಗಳಿಗಾಗಿ ಸರ್ಚ್ ಮಾಡಿರಿ.
2. ವ್ಯೂ ಕೋಡ್ ಅಥವಾ ವ್ಯೂ ಡೀಲ್ ಮೇಲೆ ಕ್ಲಿಕ್ಕಿಸಿ.
3. ರಿಟೇಲರ್ ಸೈಟ್ ಶಾಪಿಂಗ್ ಮಾಡಿರಿ.
4. ಚೆಕೌಟ್ ಹಂತದಲ್ಲಿ ಕೂಪನ್ ಕೋಡ್ ಭರ್ತಿ ಮಾಡಿರಿ.
5. ಉಳಿಸಿ.

coupons.oneindia.comದಲ್ಲಿ ನಿಮಗೇನು ಸಿಗುತ್ತದೆ?
coupons.oneindia.comನಲ್ಲಿ ದೊರೆಯುವ ಕೂಪನ್ ಮತ್ತು ವೋಚರ್‌ಗಳನ್ನು ಆದ್ಯಂತವಾಗಿ ಪರಿಶೀಲಿಸಲಾಗಿದ್ದು, ಗೊತ್ತುಪಡಿಸಲಾದ ಲಾಭ ಖಂಡಿತ ದೊರೆಯುತ್ತದೆ. ಎಲೆಕ್ಟ್ರಾನಿಕ್ಸ್, ಪುಸ್ತಕ, ಬಟ್ಟೆ, ಹೂವು, ಉಡುಗೊರೆ, ಸಿನೆಮಾ ಮತ್ತಿತರ ವಸ್ತುಗಳ ಮೇಲೆ ಶೇ.60ರಷ್ಟು ರಿಯಾಯಿತಿ ದೊರೆಯುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಇಷ್ಟು ಅದ್ಭುತವಾದ ಡಿಸ್ಕೌಂಟ್ ಜೊತೆಗೆ ಅತ್ಯುತ್ತಮವಾಗಿ ಉತ್ಪನ್ನಗಳು ಕೂಡ ಆನ್ ಲೈನ್ ನಲ್ಲಿ ದೊರೆಯುತ್ತವೆ. ಹಾಗಾದ್ರೆ ಇನ್ನೇಕೆ ತಡ, ಗೋ ಶಾಪಿಂಗ್, ಕೂಪನ್ ಕೋಡ್ ಬಳಸಿರಿ, ಹಣ ಉಳಿಸಿರಿ!

ಇದನ್ನೂ ಓದಿ: ಒನ್ಇಂಡಿಯಾದಿಂದ ಬಸ್ ಟಿಕೆಟ್ ಬುಕ್ಕಿಂಗ್ ಸೇವೆ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+