ಎರಡು ತಿಂಗಳ ಉಚಿತ 'ಪೋಸ್ಟ್ಪೇಯ್ಡ್' ಸೇವೆ ನೀಡಿದ ಜಿಯೋ!!
ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಡೇಟಾದ ಹೊಳೆಯನ್ನೇ ಹರಿಸುತ್ತಿರುವ ರಿಲಯನ್ಸ್ ಜಿಯೋ ತನ್ನ ಹೊಸ ಆಫರ್ ಒಂದರಲ್ಲಿ ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಎರಡು ತಿಂಗಳ ಕಾಲ ಉಚಿತ ಸೇವೆಯನ್ನು ನೀಡಲು ತೀರ್ಮಾನಿಸಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಎರಡು ತಿಂಗಳ ಕಾಲ ಉಚಿತ ಜಿಯೋ ಪೋಸ್ಟ್‌ಪೇಡ್ ಸೇವೆ ಈಗ ಲಭ್ಯವಿದೆ.
ರಿಲಯನ್ಸ್ ಜಿಯೋ ಮತ್ತು ಐಸಿಐಸಿಐ ಬ್ಯಾಂಕ್ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಎರಡು ತಿಂಗಳ ಕಾಲ ಉಚಿತ ಜಿಯೋ ಪೋಸ್ಟ್‌ಪೇಡ್ ಸೇವೆ ಸಿಗಲಿದೆ. ಇದಕ್ಕಾಗಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 12 ತಿಂಗಳ ಜಿಯೋ ಪೋಸ್ಟ್‌ಪೇಡ್ ರಿಚಾರ್ಜ್ ಮಾಡಿಸಬೇಕಾಗುತ್ತದೆ.

ಜಿಯೋ ನೀಡಿರುವ ಆಫರ್ ಈ ರಿತಿಯಲ್ಲಿದ್ದು, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು, ಮೊದಲ ಆರು ತಿಂಗಳ ರಿಚಾರ್ಜ್ ಮಾಡಿಕೊಂಡರೆ ಏಳನೇ ತಿಂಗಳಿನ ಬಿಲ್ಗೆ ಯಾವುದೇ ಮೊತ್ತ ಪಾವತಿಸುವ ಅಗತ್ಯವಿಲ್ಲ. ಹಾಗೆಯೇ, ನೀವು 12 ತಿಂಗಳ ಜಿಯೋ ಪೋಸ್ಟ್‌ಪೇಡ್ ರಿಚಾರ್ಜ್ ಮಾಡಿಸಿದರೆ ಹದಿಮೂರು ಮತ್ತು ಹದಿನಾಲ್ಕನೇ ತಿಂಗಳು ಮೊತ್ತ ಪಾವತಿಸುವಂತಿಲ್ಲ.
ಈ ಆಫರ್ನ್ನು ನೀವು ಪಡೆಯಬೇಕಾದರೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು "My Jio " ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು, ಬಳಿಕ " JioPay" ಎಂಬ ಆಯ್ಕೆಯ ಮೂಲಕ ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ ನಿರಂತರವಾಗಿ ಪಾವತಿಯಾಗುವಂತೆ "Jio Auto Pay" ಆಯ್ಕೆಯನ್ನು ಉಪಯೋಗಿಸಿ ಈ ಪೋಸ್ಟ್‌ಪೇಡ್ ಆಫರ್ ಅನ್ನು ಪಡೆಯಬಹುದಾಗಿದೆ.

ಇನ್ನು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಆಫರ್ ಪಡೆಯಲು 199 ರೂ. ಅಧಿಕ ಪಾವತಿಸಬೇಕಿದೆ. ಜಿಯೋ ತಿಳಿಸಿರುವಂತೆ ಈ ಆಫರ್ನಲ್ಲಿ ಜಿಯೋ ಟಿವಿ, ಜಿಯೋ ಮ್ಯೂಸಿಕ್ ಮತ್ತು ಜಿಯೊ ಸೇವೆಗಳಿಗೆ ಉಚಿತ ಅವಕಾಶ ನೀಡಲಾಗಿದೆ. ಎರಡು ತಿಂಗಳ ಬಿಲ್ ಅನ್ನು ಜಿಯೋ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಸೇರಿ ಕಾರ್ಡ್‌ಗೆ ಮರು ಪಾವತಿ ಮಾಡುತ್ತವೆ.


Click it and Unblock the Notifications








