Subscribe to Gizbot

ಫೇಸ್‌ಬುಕ್‌ನಲ್ಲಿ 1 ಸಾವಿರ ಲೈಕ್ ಪಡೆದರೆ 1.ಲಕ್ಷ ನೀಡಲಿದೆ ಟಾಟಾ ಕಂಪೆನಿ!!..ಹೇಗೆ ಗೊತ್ತಾ?

Written By:

ಫೇಸ್‌ಬುಕ್ ಲೈಕ್‌ಗಳಿಗೂ ಸಾಲ ಕೊಡುತ್ತಾರೆ ಎಂಬುದನ್ನು ನೀವು ಎಂದಾದರೂ ಕೇಳಿದ್ದೀರಾ?..ಇಲ್ಲ ಎಂದರೆ ಇಲ್ಲೊಂದು ವಿಚಿತ್ರ ಮಾನದಂಡವನ್ನು ಬಳಸಿಕೊಂಡು ಸಾಲ ನೀಡುವ ಪ್ರತಿಷ್ಠಿತ ಕಂಪೆನಿಯ ವೆಬ್‌ಸೈಟ್‌ ಬಗ್ಗೆ ನಿಮಗೆ ಪರಿಚಯ ಮಾಡುತ್ತೇವೆ. ಈ ಪ್ರತಿಷ್ಠಿತ ವೆಬ್‌ಸೈಟ್ ನೀವು ಪಡೆಯುವ ಲೈಕ್‌ಗಳಿಗೆ ಸಾಲ ಕೊಡಲು ಮುಂದೆ ಬಂದಿದೆ.!!

ಹೌದು, ಪ್ರತಿಷ್ಠಿತ ಟಾಟಾ ಕ್ಯಾಪಿಟಲ್‌ಗೆ ಸೇರಿದ ವೆಬ್‌ಸೈಟ್‌ ಇದಾಗಿದ್ದು, www.doright.in ವೆಬ್‌ಸೈಟ್‌ನಲ್ಲಿ ನಿಮ್ಮ ಕಷ್ಟಕಥೆಗಳನ್ನು ಪೋಸ್ಟ್ ಮಾಡಿ ಜನರಿಂದ ನಂಬಿಕೆ ಪಡೆದರೆ(ಹೆಚ್ಚು ಲೈಕ್ ಪಡೆದರೆ) ವೆಬ್‌ಸೈಟ್‌ ನಿಮಗೆ ಒಂದು ಲಕ್ಷದವರೆಗೂ ಸಾಲನೀಡುತ್ತದೆ.!! ಅಂದರೆ ನಿಮ್ಮ ಕಥೆಗೆ ಸಾವಿರಕ್ಕಿಂತಲೂ ಹೆಚ್ಚಿಗೆ ಲೈಕ್ಸ್ ಬಂದರೆ ರೂ.1 ಲಕ್ಷ ಸಾಲ ನೀಡುತ್ತದೆ ಟಾಟಾ ಕ್ಯಾಪಿಟಲ್.!!

ಫೇಸ್‌ಬುಕ್‌ನಲ್ಲಿ 1 ಸಾವಿರ ಲೈಕ್ ಪಡೆದರೆ 1.ಲಕ್ಷ ನೀಡಲಿದೆ ಟಾಟಾ ಕಂಪೆನಿ!!.ಹೇಗೆ?

ಹಾಗಾದರೆ, ನೀವು ವೆಬ್‌ಸೈಟ್‌ನಲ್ಲಿ ಹೇಗೆ ಪೋಸ್ಟ್ ಮಾಡಬೇಕು? ಇದಕ್ಕೆ ಇರುವ ಷರತ್ತುಗಳು ಯಾವುವು? ಈ ರೀತಿಯ ಆರ್ಥಿಕ ಸಹಾಯ ಪಡೆದುಕೊಂಡಿರುವವರು ಯಾರು? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಪಡೆಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಸಾಮಾಜಿಕ ಜವಾಬ್ದಾರಿಯ ಭಾಗ!!

ಸಾಮಾಜಿಕ ಜವಾಬ್ದಾರಿಯ ಭಾಗ!!

ಸಾಲ ಪಡೆಯಲು ಬಡವರು ಮತ್ತು ಬಹಳ ಕಷ್ಟದ ಪರಿಸ್ಥಿತಿಯಲ್ಲಿರುವವರು, ಖಾಸಗಿ ಬಡ್ಡಿ ವ್ಯಾಪಾರಿಗಳ ಬಲೆಗೆ ಬೀಳದೆ ಜೀವನವನ್ನು ಉತ್ತಮಗೊಳಿಸಿಕೊಳ್ಳಲು ಟಾಟಾ ಕ್ಯಾಪಿಟಲ್ ವಿನೂತನ ಸಾಲ ಪ್ರಕ್ರಿಯೆಯನ್ನು ಆರಂಭಿಸಿದೆ . ಟಾಟಾ ಕ್ಯಾಪಿಟಲ್ ವೆಬ್‌ಸೈಟ್‌ನಲ್ಲಿ ತನ್ನ ನೋವುಗಳಿಗೆ ಅಕ್ಷರ ರೂಪ ಕೊಟ್ಟು ಅವರ ಬಳಿ ಸಾಲ ಪಡೆಯಬಹುದು.!!

ಇದು ಸಲಾಮ್ ಲೋನ್ಸ್!!

ಇದು ಸಲಾಮ್ ಲೋನ್ಸ್!!

ನಿಮ್ಮ ಕಥೆಯ ಪೋಸ್ಟ್‌ಗೆ ಸಾವಿರಕ್ಕೂ ಅಧಿಕ ಲೈಕ್ಸ್ ಬಂದರೆ ಕ್ಯಾಪಿಟಲ್ ವೆಬ್‌ಸೈಟ್‌ ಲಕ್ಷ ರೂಪಾಯಿ ಆರ್ಥಿಕ ಸಹಾಯ ನೀಡಲಿದೆ.!! ಇದಕ್ಕೆ ಕಂಪೆನಿಯೂ ಸಲಾಮ್ ಲೋನ್ಸ್ ಎಮದು ಹೆಸರಿಟ್ಟಿದ್ದು, . ಸಾಲ ಸಂಬಂಧಿ ಅರ್ಜಿಯನ್ನು ಪೂರೈಸುವುದು, ಅಡಮಾನ ಪತ್ರಗಳಂತಹ ಅಂಶಗಳಲ್ಲಿ ಸಾಲಗಾರರಿಗೆ ಸಹಾಯ ಮಾಡುವುದಾಗಿ ಹೇಳುತ್ತಿದೆ ಕಂಪೆನಿ!!

ಎಷ್ಟು ಜನರಿಗೆ ಸಾಲ ಸೌಲಭ್ಯ?

ಎಷ್ಟು ಜನರಿಗೆ ಸಾಲ ಸೌಲಭ್ಯ?

700-800 ಜನ ಬಡವರು ಸಾಲಕ್ಕಾಗಿ ತಮ್ಮ ದೀನಗಾಥೆಗಳನ್ನು ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿರುವುದಾಗಿ ಕ್ಯಾಪಿಟಲ್ ವೆಬ್‌ಸೈಟ್‌ ತಿಳಿಸಿದೆ. ಮತ್ತು 100ರಿಂದ 150 ಜನರಿಗೆ ಈಗಾಗಲೇ ಸಾಲಸೌಲಭ್ಯ ನೀಡುವುದಾಗಿ ಈ ಕಂಪೆನಿ ಹೇಳಿಕೊಂಡಿದೆ.!!

ಷರತ್ತುಗಳು ಸಹ ಇವೆ.!!

ಷರತ್ತುಗಳು ಸಹ ಇವೆ.!!

21ರಿಂದ 60 ವರ್ಷ ವಯಸ್ಸಿನ ಆರ್ಥಿಕವಾಗಿ ಹಿಂದುಳಿದವರು ಮಾತ್ರ ಈ ಸಾಲದ ಅಭಿಯಾನಕ್ಕೆ ಅರ್ಹರಾಗಿರುತ್ತಾರೆ. ವಾರ್ಷಿಕ ಆದಾಯ 3 ಲಕ್ಷದ ಒಳಗೆ ಇದ್ದರೆ ಈ ಕಂಪೆನಿ ಸಾಲ ನೀಡುತ್ತದೆ.!! ಜೊತೆಗೆ ಸಾಲಪಡೆಯುವವರ ಕಥೆಗೆ ಸಾವಿರ ಲೈಕ್ಸ್ ಸಹ ಪಡೆಯಬೇಕಿದೆ.!!

ಬಡ್ಡಿ ಎಷ್ಟು?

ಬಡ್ಡಿ ಎಷ್ಟು?

ವೆಬ್‌ಸೈಟ್‌ ಮೂಲಕ ಸಾಲ ಪಡೆದವರು 25 ಸಾವಿರದಿಂದ ಒಂದು ರೂ. ಸಾಲ ಪಡೆಯಬಹುದು.!! ವೆಬ್‌ಸೈಟ್ ನೀಡುವ ಹಣಕ್ಕೆ ಕೇವಲ 0.25% ಪೈಸೆಯಷ್ಟು ಬಡ್ಡಿಯನ್ನು ಕ್ಯಾಪಿಟಲ್ ವೆಬ್‌ಸೈಟ್‌ ನೀಡಲಿದೆ.!!

ಇದು ಕೂಡ ಬ್ಯುಸಿನೆಸ್!!

ಇದು ಕೂಡ ಬ್ಯುಸಿನೆಸ್!!

ಕಡಿಮೆ ಬಡ್ಡಿಯಲ್ಲಿ ಬಡವರಿಗೆ ಸಹಾಯ ಮಾಡಲು ಮುಂದಾಗಿರುವ ಈ ವೆಬ್‌ಸೈಟ್ ಈ ಮೂಲಕ ತನ್ನ ಆನ್‌ಲೈನ್ ಮಾಧ್ಯಮವನ್ನು ಬೆಳೆಸಿಕೊಳ್ಳಲು ಮುಂದಾಗಿದೆ.!! ಜೊತೆಗೆ ಬಡವರಿಗೂ ಕಡಿಮೆ ಬಡ್ಡಿಯಲ್ಲಿ ದೀರ್ಘಾವದಿ ಸಾಲ ಸೌಲಭ್ಯ ನೀಡಲು ಕಂಪೆನಿ ಉತ್ಸುಕವಾಗಿದೆ.!!

ಓದಿರಿ:ಇನ್ನು ಆಧಾರ್ -ಪ್ಯಾನ್‌ ಕಾರ್ಡ್ ಲೀಂಕ್ ಮಾಡಿಲ್ಲವೇ?..ಹಾಗಾದ್ರೆ ಇಲ್ಲಿ ನೋಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Access to credit is a critical ingredient to fulfill one's dreams and unfortunately the same is often denied to certain sections of the society who need it the most.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot