+591 ನಂಬರ್‌ನಿಂದ ಶುರುವಾಗುವ ಕರೆಗಳನ್ನು ಸ್ವೀಕರಿಸಬೇಡಿ!..ಪೊಲೀಸರ ಎಚ್ಚರಿಕೆ!!

|

ನಿಮಗೆ +591 ಈ ಅಂತರ್ ರಾಷ್ಟ್ರೀಯ ಸಂಖ್ಯೆಯಿಂದ ಸತತವಾಗಿ ಮಿಸ್‌ಕಾಲ್‌ಗಳು ಬಂದರೆ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ. ಯಾವುದೋ ಮಿಸ್‌ಕಾಲ್ ಬಂದಿದೆ ಎಂದು ತಿಳಿದು ಆ ನಂಬರ್‌ಗೆ ಮತ್ತೆ ಕಾಲ್ ಮಾಡಿದರೆ ನಿಮ್ಮ ಸಿಮ್‌ನನಲ್ಲಿರುವ ಕರೆನ್ಸಿ ಭಾರೀ ಮಟ್ಟದಲ್ಲಿ ಕಡಿತಗೊಳ್ಳುತ್ತಿದೆ. ಪೋಸ್ಟ್‌ಪೇಡ್ ಗ್ರಾಹಕರಾದರೇ ನಿಮ್ಮ ಕಥೆ ಮುಗಿಯಿತು ಎಂದರ್ಥ.

ಹೌದು, ಕೇರಳದಲ್ಲಿ ಈಗ ಹೊಸ ಸ್ಕ್ಯಾಮ್ ಒಂದನ್ನು ಅಂತರಾಷ್ಟ್ರೀಯ ಖದೀಮರು ನಡೆಸುತ್ತಿದ್ದು, ಜನರಿಗೆ ವಿದೇಶಿ ನಂಬರ್ ಗಳಿಂದ ಸತತವಾಗಿ ಕರೆಗಳು ಬರುತ್ತಿದೆ. ಖದೀಮರು ಮೊಬೈಲ್ ನಂಬರ್‌ಗಳಿಗೆ ಸತತವಾಗಿ ಮಿಸ್‌ಕಾಲ್ ಕೊಡುತ್ತಿದ್ದು, ಆ ನಂಬರ್‌ಗೆ ವಾಪಸ್ ಕರೆ ಮಾಡಿದರವರ ಮೊಬೈಲ್ ಬ್ಯಾಲೆನ್ಸ್ ಕೆಲವೇ ಕ್ಷಣಗಳಲ್ಲಿ ಖಾಲಿಯಾಗುತ್ತಿದೆ ಎಂದು ವರದಿಯಾಗಿದೆ.

+591 ನಂಬರ್‌ನಿಂದ ಶುರುವಾಗುವ ಕರೆಗಳನ್ನು ಸ್ವೀಕರಿಸಬೇಡಿ!..ಪೊಲೀಸರ ಎಚ್ಚರಿಕೆ!!

ಈ ಸ್ಕ್ಯಾಮ್ ಕುರಿತು ಕೇರಳ ಪೊಲೀಸರು ಎಚ್ಚರಿಕೆಯಿಂದ ಇರುವಂತೆ ಸೂಚನೆಯನ್ನು ನೀಡುತ್ತಿದ್ದು, ನಿಮಗೆ +5 ಸಂಖ್ಯೆಯಿಂದ ಶುರುವಾಗುವ ನಂಬರ್‌ ಮೂಲಕ ಕರೆಗಳು ಬರುತ್ತಿದ್ದಲ್ಲಿ ಅದನ್ನು ಸ್ವೀಕರಿಸದಿರಿ. ಮಿಸ್‌ಕಾಲ್ ಬಂದರೆ ಆ ನಂಬರ್‌ಗೆ ಮತ್ತೆ ಕಾಲ್ ಮಾಡದಿರಿ ಎಂದು ತಿಳಿಸಿದ್ದಾರೆ. ಈ ಸ್ಕ್ಯಾಮ್‌ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಈ ಸ್ಕ್ಯಾಮ್ ನ ಬಗ್ಗೆ ಕೇರಳ ಪೊಲೀಸರಿಗೆ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದು, ಇಂತಹ ಅಪರಿಚಿತ ಕರೆಗಳು ಬೊಲಿವಿಯಾ ಎಂಬ ರಾಷ್ಟ್ರದಿಂದ ಬರುತ್ತಿವೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಈ ರಾಷ್ಟ್ರದಿಂದ ಬರುತ್ತಿರುವ ನಂಬರ್‌ಗೆ ಮತ್ತೆ ಕಾಲ್ ಮಾಡಿದ್ದಲ್ಲಿ ಗ್ರಾಹಕರ ಸಿಮ್ ನಲ್ಲಿರುವ ಹಣ ಭಾರೀ ರೀತಿಯಲ್ಲಿ ಕಡಿತಗೊಳ್ಳುತ್ತಿದೆ ಎಂದು ತಿಳಿದುಬಂದಿದೆ.

+591 ನಂಬರ್‌ನಿಂದ ಶುರುವಾಗುವ ಕರೆಗಳನ್ನು ಸ್ವೀಕರಿಸಬೇಡಿ!..ಪೊಲೀಸರ ಎಚ್ಚರಿಕೆ!!

ಆದರೆ, ಈ ರೀತಿ ಅಪರಿಚಿತರಿಗೆ ಕರೆ ಮಾಡುವ ಮೂಲಕ ಖದೀಮರು ಏಕೆ ಮಾಡುತ್ತಿದ್ದಾರೆ ಎಂಬ ಸುಳುವು ಈ ವರೆಗೂ ಸಿಕ್ಕಿಲ್ಲ. ಇತರರ ಮೊಬೈಲ್‌ನಲ್ಲಿನ ಹಣವನ್ನು ಖಾಲಿ ಮಾಡಿಸಿದರೆ ಆ ದೇಶದ ಟೆಲಿಕಾಂಗೆ ಆದಾಯ ಸಿಗಬಹುದು ಎಂದು ಹೇಳಲಾಗಿದೆ. ಆದರೆ, ಖದೀಮರಿಗೆ ಇದರಿಂದ ಆಗಬಹುದಾದ ಲಾಭವೇನು ಎಂಬ ಸುಳಿವನ್ನು ಪೊಲೀಸರು ಈಗ ಹುಡುಕುತ್ತಿದ್ದಾರೆ.

ಹಾಗಾಗಿ, ಒಂದು ವೇಳೆ ಇಂತಹ ಕರೆಗಳನ್ನು ಸ್ವೀಕಾರ ಮಾಡದೇ, ಜನರು +59 ರಿಂದ ಬರುತ್ತಿರುವ ಕರೆಗಳನ್ನು ನಿರ್ಲಕ್ಷಿಸಿ ಅಥವಾ ಆ ನಂಬರ್ ಗಳನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿ ಎಂದು ಸಲಹೆ ನೀಡಿದ್ದಾರೆ. ಇನ್ನು +591 ನಿಂದ ಶುರುವಾಗುವ ಕರೆಗಳಲ್ಲಿ ಯಾವುದೇ ಬ್ಯಾಂಕ್ ಡೀಟೇಲ್ಸ್ ಕೇಳಿ ಪಡೆದು ಮೋಸಗೊಳಿಸಿರುವ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

Best Mobiles in India

English summary
The scammer leaves a missed call and when the call is returned the victim gets charged at premium rates. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X