Home
ಸುದ್ದಿಜಾಲ

ಭಾರತದಲ್ಲಿ ಕೈ ಗೆಟಕುವ ಬೆಲೆಯ ಜಿಯೋನಿ F8 ಸ್ಮಾರ್ಟ್‌ಫೋನ್‌ ಬಿಡುಗಡೆ!

ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಪ್ರಾರಂಭಿಕ ಹಂತದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಜಿಯೋನಿ ಕೆಲವೇ ವರ್ಷಗಳಲ್ಲಿ ತಾನು ದಿವಾಳಿ ಎಂದು ಘೊಷಿಸಿಕೊಂಡಿತ್ತು. ಆದರೆ ಕಳೆದ ಜನವರಿಯಲ್ಲಿ ಮತ್ತೆ ಮಾರುಕಟ್ಟೆಗೆ ರಿ ಎಂಟ್ರಿ ನೀಡಿದ್ದ ಜಿಯೋನಿ ಇದೀಗ ಮತ್ತೊಂದು ಹೊಸ ಬಜೆಟ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಸದ್ಯ ಜಿಯೋನಿ ಎಫ್ 8 ನಿಯೋ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 5,499 ರೂಗಳ ಬೆಲೆಯಲ್ಲಿ, 'ಉಡಾನ್' ಸಹಭಾಗಿತ್ವದಲ್ಲಿ ಲಭ್ಯವಾಗಲಿದೆ.

ಜಿಯೋನಿ F8 ನಿಯೋ

ಹೌದು, ಜಿಯೋನಿ ಸಂಸ್ಥೆ ತನ್ನ ಹೊಸ ಜಿಯೋನಿ F8 ನಿಯೋ ಸ್ಮಾರ್ಟ್‌ಫೋನ್‌ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು 5.45 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಐ ಕಂಫರ್ಟ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದು ಆಕ್ಟಾ ಕೋರ್‌ ಪ್ರೊಸೆಸರ್‌ ಹೊಂದಿದೆ. ಸದ್ಯ ಜಿಯೋನಿ ಉಡಾನ್‌ನೊಂದಿಗಿನ ಸಹಭಾಗಿತ್ವದ ಮೂಲಕ ಭಾರತ್‌ನ ಜಿಂದಗಿ ಸ್ಮಾರ್ಟರ್ ಅನ್ನು ಎಂದಿಗಿಂತಲೂ ಚುರುಕಾಗಿಸುವಲ್ಲಿ ಒಂದು ಹೆಜ್ಜೆ ಮುಂದಿದೆ ಎಂದು ಜಿಯೋನಿ ಸಂಸ್ಥೆ ಹೇಳಿಕೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಜಿಯೋನಿ F8 ಸ್ಮಾರ್ಟ್‌ಫೋನ್‌ 1440 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 5.4-ಇಂಚಿನ ಹೆಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇಯಲ್ಲಿ ಐ ಕಂಫರ್ಟ್ ಫೀಚರ್ಸ್‌ ಅನ್ನು ಅಳವಡಿಸಲಾಗಿದೆ. ಇದು ಪರದೆಯನ್ನು ನೋಡಲು ಅಥವಾ ಮಂದ ಬೆಳಕಿನಲ್ಲಿ ಓದುವುದನ್ನು ಸುಲಭಗೊಳಿಸುತ್ತದೆ.

ಪ್ರೊಸೆಸರ್‌

ಪ್ರೊಸೆಸರ್‌

ಇದು ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 2GB RAM + 32GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಈ ಸ್ಮಾರ್ಟ್‌ಫೋನ್‌ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಫೇಸ್ ಅನ್ಲಾಕ್, ಸ್ಲೋ ಮೋಷನ್, ಪನೋರಮಾ, ನೈಟ್ ಮೋಡ್, ಟೈಮ್ ಲ್ಯಾಪ್ಸ್, ಬರ್ಸ್ಟ್ ಮೋಡ್, ಕ್ಯೂಆರ್ ಕೋಡ್, ಫೇಸ್ ಬ್ಯೂಟಿ ಫೀಚರ್ಸ್‌ಗಳನ್ನ ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಜಿಯೋನಿ F8 ಸ್ಮಾರ್ಟ್‌ಫೋನ್‌ 3,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು ಸ್ಟ್ಯಾಂಡರ್ಡ್ 10W ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ವೈಫೈ, ಹಾಟ್‌ಸ್ಪಾಟ್‌ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಜಿಯೋನಿ ಎಫ್ 8 ನಿಯೋ ಸ್ಮಾರ್ಟ್‌ಫೋನ್‌ ಭಾರತದಲ್ಲಿ 5,499 ರೂ.ಬೆಲೆಯನ್ನು ಹೊಂದಿದ್ದು, ಇದು ದೇಶದ ಆಫ್‌ಲೈನ್ ಮಳಿಗೆಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ ಕಪ್ಪು, ನೀಲಿ ಮತ್ತು ಕೆಂಪು ಸೇರಿದಂತೆ ಮೂರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ.

Best Mobiles in India

English summary
Priced at Rs 5,499, the Gionee F8 Neo will be made available across company's powerful distribution network in partnership with 'Udaan'.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+