ಜಿಯೋನಿ M12 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ!ಟ್ರಿಪಲ್ ರಿಯರ್ ಕ್ಯಾಮೆರಾ ವಿಶೇಷತೆ!
ಪ್ರಾರಂಭಿಕ ಹಂತದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಜಿಯೋನಿ ಕೆಲವೇ ವರ್ಷಗಳಲ್ಲಿ ತಾನು ದಿವಾಳಿ ಎಂದು ಘೊಷಿಸಿಕೊಂಡಿತ್ತು. ಆದರೆ ಕಳೆದ ಜನವರಿಯಲ್ಲಿ ಮತ್ತೆ ಮಾರುಕಟ್ಟೆಗೆ ರಿ ಎಂಟ್ರಿ ನೀಡಿದ್ದ ಜಿಯೋನಿ ಇದೀಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಜಿಯೋನಿ ಕಂಪನಿಯ ತನ್ನ ಹೊಸ ಜಿಯೋನಿ M12 ಪ್ರೊ ಅನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ವಾಟರ್ ಡ್ರಾಪ್-ಸ್ಟೈಲ್ ನಾಚ್ ವಿನ್ಯಾಸವನ್ನ ಹೊಂದಿದೆ.

ಹೌದು, ಜಿಯೋನಿ ಸಂಸ್ಥೆ ತನ್ನ ಹೊಸ ಜಿಯೋನಿ M12 ಪ್ರೊ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಅಲ್ಲದೆ ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ. ಇದಲ್ಲದೆ ಇದು ಮೀಡಿಯಾ ಟೆಕ್ ಹಿಲಿಯೊ ಪಿ 60 SoC ಪ್ರೊಸೆಸರ್ ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೆಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್ಪ್ಲೇ
ಜಿಯೋನಿ M12 ಪ್ರೊ ಸ್ಮಾರ್ಟ್‌ಫೋನ್ 720x1520 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.2-ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಸ್ಕ್ರೀನ್-ಟು-ಬಾಡಿ ನಡುವಿನ ಅನುಪಾತ 90.3% ಅನ್ನು ಹೊಂದಿದೆ.ಇನ್ನು ಜಿಯೋನಿ M12 ಪ್ರೊ ಸ್ಮಾರ್ಟ್‌ಫೋನ್ ವಾಟರ್‌ಡ್ರಾಪ್-ಸ್ಟೈಲ್ ನಾಚ್ ಶೈಲಿಯನ್ನು ಹೊಂದಿದೆ.

ಪ್ರೊಸೆಸರ್
ಇದು ಮೀಡಿಯಾ ಟೆಕ್ ಹಿಲಿಯೊ P60 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್ 6GB RAM + 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ವಿನ್ಯಾಸ
ಜಿಯೋನಿ M12 ಪ್ರೊ ಸ್ಮಾರ್ಟ್‌ಫೋನ್ ಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್, ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಈ ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ.ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ಹಾಟ್‌ಸ್ಪಾಟ್, ವೈಫೈ, 3.5mm ಆಡಿಯೊ ಜ್ಯಾಕ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಫೋನ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಬೆಂಬಲಿಸುತ್ತದೆ. ಅಲ್ಲದೆ ಇದು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಜಿಯೋನಿ M12 ಪ್ರೊ ಸಿಂಗಲ್ 6GB RAM + 128GB ಶೇಖರಣಾ ಮಾದರಿಗೆ CNY 700 (ಸುಮಾರು 7,500 ರೂ.) ಬೆಲೆಯನ್ನು ಹೊಂದಿದೆ. ಇದು ವೈಟ್ ಮತ್ತು ಬ್ಲೂ ಗ್ರೇಡಿಯಂಟ್ ಬ್ರೈಟ್‌ನೆಶ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications