ಮಾಲಿಕನ ಜೂಜಿನ ಚಟಕ್ಕೆ 'ಚಟ್ಟ' ಹತ್ತಿತು ಜಿಯೋನಿ ಮೊಬೈಲ್ ಕಂಪೆನಿ!

|

ವಿಶ್ವ ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯಂತೆ ಪ್ರಖ್ಯಾತ ಮೊಬೈಲ್ ಕಂಪೆನಿ 'ಜಿಯೋನಿ' ಈಗ ದಿವಾಳಿಯಾಗಿದೆ. ಭಾರತ ಮತ್ತು ಚೀನಾ ಸ್ಮಾರ್ಟ್‌ಫೋನ್ ಮಾರುಕಟ್ಟೆಗಳಲ್ಲಿ ಭಾರೀ ಹೆಸರುಗಳಿಸಿದ್ದ 'ಜಿಯೋನಿ' ದಿವಾಳಿ ಕೋರಿ ಅರ್ಜಿ ಸಲ್ಲಿಸಿ ಸಲ್ಲಿಸಿದ್ದು, ನನ್ನನ್ನು ದಿವಾಳಿ ಎಂದು ಪರಿಗಣಿಸುವಂತೆ ಕೋರಿ ಕಂಪೆನಿ ಸಲ್ಲಿಸಿದ ಅರ್ಜಿಯನ್ನು ಕೋರ್ಟ್‌ ಮಾನ್ಯ ಮಾಡಿದೆ.

ಜಿಯೋನಿ ಕಂಪೆನಿಯ ಚೇರ್​ಮ್ಯಾನ್​ ಲಿಯು ಲಿರೋನ್​ನ ಅವರು ಜೂಜಿನ ಕಾರಣ 1.4 ಬಿಲಿಯನ್​ ಡಾಲರ್​ನ್ನು ಕಳೆದುಕೊಂಡಿದ್ದಾರೆ ಎಂದು​ ಜೈಮಿಯನ್ ಇತ್ತೀಚಿನ ವರದಿಯೊಂದರಲ್ಲಿ ಹೇಳಿತ್ತು. ಅದರಂತೆಯೇ ಈಗ ಈ ಸುದ್ದಿ ಹೊರಬಿದ್ದಿದ್ದು, ತನ್ನನ್ನು ದಿವಾಳಿ ಎಂದು ಪರಿಗಣಿಸುವಂತೆ ಕೋರಿ ಜಿಯೋನಿ ಕಂಪೆನಿ ಸಲ್ಲಿಸಿದ ಅರ್ಜಿಯನ್ನು ಸೆಶೆನ್ಸ್ ಕೋರ್ಟ್‌ ಮಾನ್ಯ ಮಾಡಿದೆ.

ಮಾಲಿಕನ ಜೂಜಿನ ಚಟಕ್ಕೆ 'ಚಟ್ಟ' ಹತ್ತಿತು ಜಿಯೋನಿ ಮೊಬೈಲ್ ಕಂಪೆನಿ!

ಸರಿಸುಮಾರು 20 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲದ ಸುಳಿಗೆ ಸಿಲುಕಿದ್ದ ಕಂಪನಿ ವಿರುದ್ಧ 'ಹಾಕ್ಸಿಂಗ್' ಬ್ಯಾಂಕ್‌ ಪ್ರಕರಣ ದಾಖಲಿಸಿತ್ತು. ಬ್ಯಾಂಕ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ತನ್ನನ್ನು ದಿವಾಳಿ ಎಂದು ಪರಿಗಣಿಸುವಂತೆ ಕೋರಿ ಜಿಯೋನಿ ಸಲ್ಲಿಸಿದ ಅರ್ಜಿಯನ್ನು ಸೆಶೆನ್ಸ್ ಕೋರ್ಟ್‌ ಮಾನ್ಯ ಮಾಡಿದ್ದು, ನಿರೀಕ್ಷೆಯಂತೆಯೇ ಈಗ ಜಿಯೋನಿ ಕಂಪೆನಿ ಕಣ್ಮರೆಯಾಗಿದೆ.

ಆದರೆ, ಪ್ರಖ್ಯಾತವಾಗಿರುವ ಜಿಯೋನಿ ಕಂಪನಿಯನ್ನು ಮರು ಸಂಘಟಿಸಲು ನ್ಯಾಯಾಲಯ ಆದೇಶಿಸಬಹುದಾಗಿದೆ ಎಂದು ಹೇಳಲಾಗಿದೆ. ಜೂಜಿನ ಕಾರಣ 1.4 ಬಿಲಿಯನ್​ ಡಾಲರ್ ಹಣವನ್ನು ಕಳೆದುಕೊಂಡಿರುವ ಲಿರೋನ್ ಅವರು ಜಿಯೋನಿ ಕಂಪನಿಯ ಹಣವನ್ನು ಜೂಜಿಗೆ ಬಳಕೆ ಮಾಡಿಲ್ಲ, ಬದಲಾಗಿ ತನ್ನದೇ ಕಂಪನಿಯಿಂದ ಸಾಲ ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಮಾಲಿಕನ ಜೂಜಿನ ಚಟಕ್ಕೆ 'ಚಟ್ಟ' ಹತ್ತಿತು ಜಿಯೋನಿ ಮೊಬೈಲ್ ಕಂಪೆನಿ!

ಇತ್ತೀಚಿಗೆ ಜಿಯೋನಿ ಕಂಪನಿ ಟಾಪ್​ 5 ಬ್ರ್ಯಾಂಡ್​ ಹೆಸರು ಪಡೆಯಲು 650 ಕೊಟಿಯನ್ನು 2018ರಲ್ಲಿ ಹೂಡಿಕೆ ಮಾಡಲಿದೆ ಹಾಗೂ ಹಿಂದಿನ ವರ್ಷಕ್ಕಿಂತ ಈ ವರ್ಷ 30% ಹೆಚ್ಚು ಮಾರ್ಕೆಟಿಂಗ್​ಗೆ ಹಣ ಹಾಕಲಿದೆ ಎಂದು ವರದಿಯಾಗಿತ್ತು. ಜೊತೆಗೆ 8000-20,000 ಬೆಲೆಯ ಸ್ಮಾರ್ಟ್​ಫೋನ್​ಗಳ 20% ಶೇರ್​ನ್ನು ಕೊಂಡುಕೊಳ್ಳಲಿದೆ ಎಂದು ಕಂಪನಿಯ ಅಧಿಕಾರಿಗಳು ಹೇಳಿಕೊಂಡಿದ್ದರು.

Best Mobiles in India

English summary
Gionee is said to owe CNY 20.2 billion to 648 creditors. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X