ಮಾಲಿಕನ ಜೂಜು ಚಟದಿಂದಾಗಿ ಪ್ರಖ್ಯಾತ ಮೊಬೈಲ್ ಕಂಪೆನಿ ದಿವಾಳಿ!!?
ಕೇವಲ ಎರಡು ವರ್ಷಗಳ ಹಿಂದೆ ಭಾರತದ ಹಾಗೂ ಚೀನಾ ಸ್ಮಾರ್ಟ್‌ಫೋನ್ ಮಾರುಕಟ್ಟೆಗಳಲ್ಲಿ ಭಾರೀ ಹೆಸರುಗಳಿಸಿದ್ದ ಚೈನೀಸ್ ಬ್ರ್ಯಾಂಡ್ ಮೊಬೈಲ್ ಕಂಪೆನಿ ಜಿಯೋನಿ ಈಗ ದಿವಾಳಿಯ ಹಂತಕ್ಕೆ ತಲುಪಿದೆ ಎಂಬ ಸುದ್ದಿ ಹೊರಬಿದ್ದಿದೆ. ವಿಚಿತ್ರವೆಂದರೆ, ಜಿಯೋನಿ ಕಂಪೆನಿ ದಿವಾಳಿಯಾಗಲು ಮೊಬೈಲ್ ಮಾರುಕಟ್ಟೆಯಲ್ಲಿನ ಪೈಪೋಟಿ ಕಾರಣವಲ್ಲ ಎಂಬ ವರದಿ ಹೊರಬಿದ್ದಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಜಿಯೋನಿ ಕಂಪೆನಿ ಮೊಬೈಲ್ ಮಾರುಕಟ್ಟೆಯಿಂದ ಕಣ್ಮರೆಯಾಗುವ ಲಕ್ಷಣ ಕಂಡುಬರುತ್ತಿದ್ದು, ಜಿಯೋನಿಯ ಚೇರ್ಮ್ಯಾನ್ ಲಿಯು ಲಿರೋನ್ನ ಜೂಜಿನ ಚಟ ಬ್ರ್ಯಾಂಡ್ ಹಳ್ಳಹಿಡಿಯಲು ಕಾರಣವಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಚೈನೀಸ್ ವೆಬ್ಸೈಟ್ ಜೈಮಿಯನ್(jiemian) ತನ್ನ ಬ್ಲಾಗ್ನಲ್ಲಿ ಜಿಯೋನಿ ಪತನವಾಗುವ ಮನ್ಸೂಚನೆ ನೀಡಿದೆ.

ಜಿಯೋನಿಯ ಚೇರ್ಮ್ಯಾನ್ ಲಿಯು ಲಿರೋನ್ನ ಅವರು ಈಗಾಗಲೇ ಜೂಜಿನ ಕಾರಣ ಲಿಯು 1.4 ಬಿಲಿಯನ್ ಡಾಲರ್ನ್ನು ಕಳೆದುಕೊಂಡಿದ್ದಾರೆ ಎಂದು ಆಂಡ್ರಾಯ್ಡ್ ವ್ಯವಸ್ಥಾಪನಾ ಮಂಡಳಿ ವರದಿ ಮಾಡಿದೆ. ಆದರೆ, ಲಿರೋನ್ ಅವರು ಜಿಯೋನಿ ಕಂಪನಿಯ ಹಣವನ್ನು ಜೂಜಿಗೆ ಬಳಕೆ ಮಾಡಿಲ್ಲ, ಬದಲಾಗಿ ಕಂಪನಿಯಿಂದ ಸಾಲ ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಸ್ಮಾರ್ಟ್‌ಫೋನ್ ತಯಾರಿಕಾ ದಿಗ್ಗಜ ಕಂಪೆನಿಗಳ ಸಾಲಿನಲ್ಲಿ ನಿಂತಿದ್ದ ಜಿಯೋನಿ ಕಂಪೆನಿ ಹಂಚಿಕೆದಾರರಿಗೆ ಬಿಲ್ ಪಾವತಿ ಮಾಡಲಾಗದೇ, ಪ್ರತ್ಯೇಕ್ ಡೀಲ್ಗೆ ಹುಡುಕಾಟ ನಡೆಸುತ್ತಿದೆ. ಸುಮಾರು 20 ಮಾರಾಟಗಾರರು ದಿವಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಜೈಮಿಯನ್(jiemian) ತನ್ನ ಬ್ಲಾಗ್ನಲ್ಲಿ ಜಿಯೋನಿ ಪತನನದ ಬಗ್ಗೆ ವರದಿಯನ್ನು ನೀಡಿದೆ.

ಇತ್ತೀಚಿಗೆ ಜಿಯೋನಿ ಕಂಪನಿ ಟಾಪ್ 5 ಬ್ರ್ಯಾಂಡ್ ಹೆಸರು ಪಡೆಯಲು 650 ಕೊಟಿಯನ್ನು 2018ರಲ್ಲಿ ಹೂಡಿಕೆ ಮಾಡಲಿದೆ ಹಾಗೂ ಹಿಂದಿನ ವರ್ಷಕ್ಕಿಂತ ಈ ವರ್ಷ 30% ಹೆಚ್ಚು ಮಾರ್ಕೆಟಿಂಗ್ಗೆ ಹಣ ಹಾಕಲಿದೆ ಎಂದು ವರದಿಯಾಗಿತ್ತು. ಜೊತೆಗೆ 8000-20,000 ಬೆಲೆಯ ಸ್ಮಾರ್ಟ್ಫೋನ್ಗಳ 20% ಶೇರ್ನ್ನು ಕೊಂಡುಕೊಳ್ಳಲಿದೆ ಎಂದು ಕಂಪನಿಯ ಅಧಿಕಾರಿಗಳು ಹೇಳಿಕೊಂಡಿದ್ದರು.


Click it and Unblock the Notifications