Home
ಸುದ್ದಿಜಾಲ

ಹೊಸ ವರ್ಷಕ್ಕೆ ಜಿಯೋನಿಯಿಂದ ನಾಲ್ಕು ಕ್ಯಾಮೆರಾದ ಸ್ಮಾರ್ಟ್ ಫೋನ್ ಲಾಂಚ್..!

By Lekhaka

ಚೀನಾ ಮೂಲದ ಸ್ಮಾರ್ಟ್ ಫೋನ್ ಕಂಪನಿ ಜಿಯೋನಿ ನವೆಂಬರ್ ನಲ್ಲಿ ಚೀನಾ ಮಾರುಕಟ್ಟೆಗೆ ಲಾಂಚ್ ಮಾಡಿದ್ದ ಜಿಯೋನಿ S11 ಸ್ಮಾರ್ಟ್ ಫೋನ್ ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ ಎನ್ನಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಜಿಯೋನಿ ಫೋನ್ ಗಳಿಗೆ ಭಾರೀ ಬೇಡಿಕೆ ಇದೆ ಎನ್ನಲಾಗಿದೆ. ಈ ಕಾರಣಕ್ಕೆ ಜಿಯೋನಿ ಭಾರತದಲ್ಲಿ ಜಿಯೋನಿ S11 ಸ್ಮಾರ್ಟ್ ಫೋನ್ ಮಾರಾಟ ಮಾಡಲಿದೆ.

ಹೊಸ ವರ್ಷಕ್ಕೆ ಜಿಯೋನಿಯಿಂದ ನಾಲ್ಕು ಕ್ಯಾಮೆರಾದ ಸ್ಮಾರ್ಟ್ ಫೋನ್ ಲಾಂಚ್..!


ಹೊಸ ವರ್ಷದ ಅಂಗವಾಗಿ ಮೊದಲ ತಿಂಗಳಿನಲ್ಲಿ ಈ ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ ಎನ್ನಲಾಗಿದೆ. ಚೀನಾ ಮಾರುಕಟ್ಟೆಯಲ್ಲಿ ಈ ಫೋನ್ ರೂ.17,600 ಆಸುಪಾಸಿನಲ್ಲಿ ಲಾಂಚ್ ಆಗಿತ್ತು. ಆದರೆ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡುವ ಸಂದರ್ಭದಲ್ಲಿ ಬೆಲೆಯಲ್ಲಿ ಹೆಚ್ಚು ಕಡಿಮೆಯಾಗಲಿದೆ.

ಜಿಯೋನಿ S11 ಸ್ಮಾರ್ಟ್ ಫೋನ್ ನಲ್ಲಿ 5.99 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. FHD ಪ್ಲಸ್ ಗುಣಮಟ್ಟದ ಡಿಸ್ ಪ್ಲೇ ಇದಾಗಿದೆ. 18:9 ಅನುಪಾತದಿಂದ ಕೂಡಿರಲಿದೆ. ಇದಲ್ಲದೇ 2.5GHz ಆಕ್ಟಾ ಕೋರ್ ಮೀಡಿಯಾ ಟೆಕ್ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. 4GB RAM ಮತ್ತು 64GB ಇಂಟರ್ನಲ್ ಮೊಮೆರಿಯನ್ನು ಹೊಂದಿರಲಿದೆ.

ಜಿಯೋನಿ S11 ಸ್ಮಾರ್ಟ್ ಫೋನ್ ನಲ್ಲಿ ಒಟ್ಟು ನಾಲ್ಕು ಕ್ಯಾಮೆರಾವನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಹಿಂಭಾಗದಲ್ಲಿ 16MP + 5MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 16MP + 8MP ಕ್ಯಾಮೆರಾವನ್ನು ಸೆಲ್ಪಿಗಾಗಿ ನೀಡಲಾಗಿದೆ. ಅಲ್ಲದೇ ವಿಡಿಯೋ ಕಾಲಿಂಗ್ ಮಾಡಲು ಇದು ಸಹಾಯಕವಾಗಿದೆ.

ಇದಲ್ಲದೇ 3410mAh ಬ್ಯಾಟರಿಯನ್ನು ನೀಡಲಾಗಿದೆ. ಇದರಲ್ಲಿ 4G VoLTE ಸೇವೆಯನ್ನು ಪಡೆಯಬಹುದಾಗಿದೆ. ಇದಲ್ಲದೇ ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ 3410mAh ಬ್ಯಾಟರಿಯನ್ನು ಇದರಲ್ಲಿ ಕಾಣಬಹುದಾಗಿದೆ.

Best Mobiles in India

English summary
Gionee announced a slew of smartphones back in November in its home market China. Now, it looks like the company is gearing up to launch these devices in the Indian market starting with the Gionee S11. Gionee S11 with quad cameras is expected to be launched in India in January 2018, claims a recent report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+