ಜಿಯೋನಿಯಿಂದ 'ಜಿಯೋನಿ ಸ್ಟೀಲ್‌5' ಸ್ಮಾರ್ಟ್‌ಫೋನ್‌ ಲಾಂಚ್‌!

|

ಬಹುದಿನಗಳಿಂದ ತೆರೆಮರೆಗೆ ಸರಿದಿದ್ದ ಜಿಯೋನಿ ಮೊಬೈಲ್ ಕಂಪೆನಿ ಇದೀಗ ಜಿಯೋನಿ ಸ್ಟೀಲ್ 5 ಸ್ಮಾರ್ಟ್‌ಫೋನ್ ಮೂಲಕ ಮತ್ತೆ ಚೀನಾ ಮೊಬೈಲ್ ಮಾರುಕಟ್ಟೆಗೆ ಪ್ರವೇಶಿಸಿದೆ. 2018ರಲ್ಲಿ ತನ್ನನ್ನ ದಿವಾಳಿ ಎಂದು ಘೋಷಿಸಿಕೊಂಡಿದ್ದ, ಹೆಚ್ಚು ಕಡಿಮೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಿಂದಲೆ ಮರೆಯಾಗಿತ್ತು ಜಿಯೋನಿ ಕಂಪೆನಿ. ಆದರೆ ಇದೀಗ 6.21 ಇಂಚಿನ ಫುಲ್‌ವೀವ್ ಡಿಸ್‌ಪ್ಲೇ, 5000mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಮತ್ತೆ ಚೀನಾ ಮಾರುಕಟ್ಟೆಯಲ್ಲಿ ಕಮಾಲ್‌ ಮಾಡುವ ಸೂಚನೆ ನೀಡಿದೆ.

ಹೌದು

ಹೌದು, 2018ರಲ್ಲಿ ತನ್ನನ್ನ ದಿವಾಳಿ ಎಂದು ಘೋಷಿಸಿ ಅಂತಾ ನ್ಯಾಯಾಲಯದ ಮೊರೆ ಹೋಗಿ ದೀವಾಳಿ ಆಗಿದ್ದ ಜಿಯೋನಿ ಸದ್ದಿಲ್ಲದೆ ಮತ್ತೆ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಮೂಲಕ ಮತ್ತೆ ಸ್ಮಾರ್ಟ್‌ಫೋನ್‌ ಪ್ರಿಯರ ಮನಗೆಲ್ಲಲು ಬಂದಿದೆ. 2017ರಲ್ಲಿಯೇ ಸಾಕಷ್ಟು ಕಮಾಲ್‌ ಮಾಡಿದ್ದ ಜಿಯೋನಿ ಕಂಪೆನಿ ಈ ಬಾರಿ ಶಿಯೋಮಿ ಮತ್ತು ರೆಡ್ಮಿ ಕಂಪೆನಿಗಳಿಗೆ ಟಕ್ಕರ್‌ ನೀಡಲಿದೆ ಎಂದು ಹೇಳಲಾಗ್ತಿದೆ. ತನ್ನ ಡಿಸ್‌ಪ್ಲೇ ಮತ್ತು ಬ್ಯಾಟರಿ ಪ್ಯಾಕಪ್‌ ಮೂಲಕವೇ ಸ್ಮಾರ್ಟ್‌ಪೋನ್‌ ಪ್ರಿಯರ ಫೇವರಿಟ್‌ ಆಗಿದ್ದ ಜಿಯೋನಿಯ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳಿವೆ ಅನ್ನೊದನ್ನ ಈ ಲೇಖನದಲ್ಲಿ ಓದಿ

ಡಿಸ್‌ಪ್ಲೇ

ಡಿಸ್‌ಪ್ಲೇ

ಜಿಯೋನಿ ಕಂಪೆನಿಯ ಈ ಹೊಸ ಸ್ಮಾರ್ಟ್‌ಫೋನ್‌ 1520×720 ಪಿಕ್ಸೆಲ್‌ ಸ್ಕ್ರೀನ್‌ ರೆಶಲ್ಯೂಶನ್‌ ಹೊಂದಿರುವ 6.21 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನ ಹೊಂದಿದೆ. ಡಿಸ್‌ಪ್ಲೇ ವಿನ್ಯಾಸ ಸಖತ್‌ ಸ್ಟೈಲಿಶ್‌ ಆಗಿದ್ದು, ಫುಲ್‌ ವೀವ್‌ ಡಿಸ್‌ಪ್ಲೇ ಆಗಿದೆ. ಇದರಿಂದಾಗಿ ವಿಡಿಯೋ ವಿಕ್ಷಣೆಯಲ್ಲಿ ಉತ್ತಮ ಅನುಭವವನ್ನು ನೀಡಲಿದೆ ಅಂತಾ ಕಂಪೆನಿ ಹೇಳಿಕೊಂಡಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಜಿಯೋನಿ ಸ್ಟೀಲ್ 5 ಸ್ಮಾರ್ಟ್‌ಫೋನ್‌ನ ಪ್ರೊಸೆಸರ್‌ ಆಕ್ಟಾ-ಕೋರ್ ಚಿಪ್‌ಸೆಟ್ ಪ್ರೊಸೆಸರ್‌ ಹೊಂದಿದ್ದು, 2.0GHz ನಲ್ಲಿ ನಾಲ್ಕು ಕೋರ್‌ಗಳನ್ನು ಮತ್ತು 1.5GHz ನಲ್ಲಿ ಇತರೆ ನಾಲ್ಕು ಕೋರ್‌ಗಳನ್ನು ಹೊಂದಿದೆ. ಇದು ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಅಮಿಗೊ ಓಎಸ್ ಬೆಂಬಲವನ್ನು ಸಹ ಹೊಂದಿದೆ. ಜೊತೆಗೆ 6GB RAM ಮತ್ತು 128GB ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ

ಕ್ಯಾಮೆರಾ

ಈ ಸ್ಮಾರ್ಟ್‌ಫೋನ್‌ ಎರಡು ಎಲ್‌ಇಡಿ ಪ್ಲ್ಯಾಶ್‌ ಲೈಟ್‌ ಹೊಂದಿರುವ, ಡ್ಯಯೆಲ್‌ ಕ್ಯಾಮೆರಾ ರಿಯರ್‌ಸೆಟ್‌ಆಪ್‌ ಅನ್ನು ಹೊಂದಿದೆ. ಎರಡು ಕ್ಯಾಮೆರಾ ಗಳಲ್ಲಿ ಮುಖ್ಯ ಕ್ಯಾಮೆರಾ 12ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ಹೊಂದಿದ್ದು, ಈ ಕ್ಯಾಮೆರಾಗಳು ಫೆಸ್‌ ಡಿಟೆಕ್ಷನ್‌ ಆಟೋಫೋಕಸ್‌ ಟೆಕ್ನಾಲಜಿಯನ್ನ ಹೊಂದಿದೆ. ಅಲ್ಲದೆ 13ಮೆಗಾಪಿಕ್ಸೆಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾವನ್ನ ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಜಿಯೋನಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸದ್ದು ಮಾಡಿದ್ದದೆ, ಬ್ಯಾಟರಿ ಪ್ಯಾಕ್‌ಆಪ್‌ನಿಂದ. ಸದ್ಯ ಬಿಡುಗಡೆಯಾಗಿರುವ ಜಿಯೋನಿ ಸ್ಟೀಲ್‌5 ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದ್ದು, ಇಂಟೆಲಿಜೆಂಟ್‌ ಪವರ್‌ ಮ್ಯಾನೆಜ್‌ಮೆಂಟ್‌ ಸಿಸ್ಟಮ್‌ ಅನ್ನ ಒಳಗೊಂಡಿದೆ. ಅಲ್ಲದೆ 5V/2A ಚಾರ್ಜಿಂಗ್‌ ಸಪೋರ್ಟ್‌ಅನ್ನ ಹೊಂದಿದೆ. ಸದ್ಯ ಜಿಯೋನಿ ಕಂಪೆನಿಯಿಂದ 2020ರಲ್ಲಿ ಬಿಡಗಡೆಯಾದ ಮೊದಲ ಸ್ಮಾರ್ಟ್‌ಫೋನ್‌ ಇದಾಗಿದ್ದು, ಇದರ ಲಭ್ಯತೆ ಹಾಗೂ ಬೆಲೆಯ ಬಗ್ಗೆ ಕಂಪೆನಿ ಇನ್ನು ಯಾವುದೇ ಮಾಹಿತಿಯನ್ನ ನೀಡಿಲ್ಲ.

Most Read Articles
Best Mobiles in India

English summary
Gionee may be down, but it certainly doesn’t seem to be out. Despite declaring bankruptcy, the Chinese company continues to quietly launch smartphones. The latest to launch is the Gionee Steel 5, an entry-level device. The last smartphone Gionee launched in this series was the Steel 3 back in 2017.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X