ಜಿಯೋನಿ ಸಂಸ್ಥೆಯಿಂದ ಹೊಸ ಮಾದರಿಯ ಮೂರು ಹೊಸ ವಾಚ್‌ ಬಿಡುಗಡೆ!

|

ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳ ಮೂಲಕ ಒಂದು ಸಮಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಜಿಯೋನಿ ಸಂಸ್ಥೆ ಇದೀಗ ಮತ್ತೇ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಮುಂದಾಗಿದೆ. ಅದು ಕೂಡ ತನ್ನ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ಗಳ ಮೂಲಕ ಅನ್ನೊದು ಇಂಟ್ರೆಸ್ಟಿಂಗ್‌ ವಿಷಯವಾಗಿದೆ. ಸದ್ಯ ಈಗಾಗಲೇ ಹಲವು ಕಂಪೆನಿಗಳು ಸ್ಮಾರ್ಟ್‌ವಾಚ್‌ಗಳನ್ನ ಬಿಡುಗಡೆ ಮಾಡಿ ಸೈ ಎನಿಸಿಕೊoಡಿವೆ. ಇದರಲ್ಲಿ ಜಿಯೋನಿ ಕೂಡ ಒಂದಾಗಿದ್ದು, ಇದೀಗ ತನ್ನ ಹೊಸ ವೈವಿಧ್ಯಮಯವಾದ ಮೂರು ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆ ಮಾಡಿದೆ.

ಜಿಯೋನಿ

ಹೌದು, ಜಿಯೋನಿ ಸಂಸ್ಥೆ ತನ್ನ ಹೊಸ ಜಿಯೋನಿ ವಾಚ್ 5 (GSW5), ಜಿಯೋನಿ ವಾಚ್ 4 (GSW4), ಮತ್ತು ಜಿಯೋನಿ ಸೆನೊರಿಟಾ (GSW3) ವಾಚ್‌ಗಳನ್ನ ಬಿಡುಗಡೆ ಮಾಡಿದೆ. ಇನ್ನು ಈ ಮೂರು ಹೊಸ ವಾಚ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಇನ್ನು ಇದರಲ್ಲಿ ಜಿಯೋನಿ ವಾಚ್ 5 ಆಯತಾಕಾರದ ಆಕಾರವನ್ನು ಹೊಂದಿದೆ, ಜಿಯೋನಿ ವಾಚ್ 4 ವೃತ್ತಾಕಾರದ ಡಯಲ್ ಹೊಂದಿದ್ದರೆ, ಸೆನೊರಿಟಾ ವಾಚ್‌ ಮಹಿಳೆಯರನ್ನೇ ಪ್ರಧಾನವಾಗಿಟ್ಟುಕೊಂಡು ಸಣ್ಣ ವೃತ್ತಾಕಾರದ ವಿನ್ಯಾಸದಲ್ಲಿ ಬರುತ್ತದೆ ಎಂದು ಜಿಯೋನಿ ಹೇಳಿದೆ. ಹಾಗಾದ್ರೆ ಈ ಮೂರು ಸ್ಮಾರ್ಟ್‌ವಾಚ್‌ಗಳ ವಿಶೇಷತೆ ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಜಿಯೋನಿ ವಾಚ್ 5

ಜಿಯೋನಿ ವಾಚ್ 5

ಜಿಯೋನಿ ವಾಚ್ 5 240x240 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 1.3 ಇಂಚಿನ TFT ಟಚ್ ಡಿಸ್ಪ್ಲೇ ಹೊಂದಿದೆ. ಇದು ಮೃದುವಾದ ಗಾಜಿನ ಸ್ಕ್ರೀನ್‌ ಜೊತೆಗೆ ಪ್ಲಾಸ್ಟಿಕ್ ಕೇಸ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌24x7 ರಿಯಲ್‌ ಟೈಂ ಹಾರ್ಟ್‌ಬೀಟ್‌ ಮಾನಿಟರ್, ಬ್ಲಡ್ ಆಕ್ಸಿಜನ್ ಮಾನಿಟರ್, ಆಟೋ ಆಕ್ಟಿವಿಟಿ ಟ್ರ್ಯಾಕರ್, ವರ್ಕ್ ಔಟ್ ಮಾನಿಟರ್, ಸ್ಲೀಪ್ ಮಾನಿಟರ್ ಮತ್ತು ಪೆಡೋಮೀಟರ್ ಫೀಚರ್ಸ್‌ಗಳನ್ನ ಹೊಂದಿದೆ ಇದಲ್ಲದೆ ಜಿಯೋನಿ ವಾಚ್ 5 ವಾಕಿಂಗ್, ರನ್ನಿಂಗ್‌, ಸೈಕ್ಲಿಂಗ್, ಕ್ಲೈಂಬಿಂಗ್ ನಂತಹ ಅನೇಕ ಕ್ರೀಡಾ ವಿಧಾನಗಳ ಟ್ರ್ಯಾಕಿಂಗ್‌ನೊಂದಿಗೆ ಬರುತ್ತದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ 160mAh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು 15 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ. ಇದಲ್ಲದೆ ಇದು ಬ್ಲೂಟೂತ್ ವಿ 4.0 ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ನ ಜಿ ಬಡ್ಡಿ ಅಪ್ಲಿಕೇಶನ್ ಆಂಡ್ರಾಯ್ಡ್ ಆವೃತ್ತಿ 5.1 ಅಥವಾ ಐಒಎಸ್ ಆವೃತ್ತಿ 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಜಿಯೋನಿ ವಾಚ್ 4

ಜಿಯೋನಿ ವಾಚ್ 4

ಇನ್ನು ಜಿಯೋನಿ ವಾಚ್ 4 240x240 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರುವ 1.2 ಇಂಚಿನ ಟ್ರಾನ್ಸ್‌ಫ್ಲೆಕ್ಟಿವ್ ಆಲ್ವೇಸ್ ಆನ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು IP68 ನಿಂದ ಪ್ರಮಾಣೀಕರಿಸಲ್ಪಟ್ಟಿದ್ದು, ಇದು ಅಲಾಯ್ ಮೆಟಲ್ ಬಾಡಿ ಹೊಂದಿದೆ ಎಂದು ಕಂಪೆನಿ ಹೇಳಿದೆ. ಇನ್ನು ಈ ವಾಚ್‌ ಕೂಡ 24x7 ರಿಯಲ್‌ ಟೈಂ ಹೃದಯ ಬಡಿತ ಮಾನಿಟರಿಂಗ್, ಜಿಯೋ-ಮ್ಯಾಗ್ನೆಟಿಕ್ ಕಂಪಾಸ್ ನ್ಯಾವಿಗೇಷನ್, ಉತ್ತಮ ನಿಖರತೆಯೊಂದಿಗೆ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಗುರುತ್ವ ಸಂವೇದಕ, ವರ್ಕ್ ಮಾನಿಟರ್, ಸ್ಲೀಪ್ ಮಾನಿಟರ್, ಪೆಡೋಮೀಟರ್ ಮತ್ತು ಮಲ್ಟಿ-ಸ್ಪೋರ್ಟ್ಸ್ ಮೋಡ್ ಟ್ರ್ಯಾಕಿಂಗ್ ಅನ್ನು ಒಳಗೊಂಡಿದೆ. ಇನ್ನು ಈ ವಾಚ್‌ನಲ್ಲಿ 350mAh ನಲ್ಲಿ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ನೀಡಲಾಗಿದ್ದು, ಇದು 12 ದಿನಗಳವರೆಗೆ ಇರುತ್ತದೆ ಮತ್ತು 20 ದಿನಗಳ ಸ್ಟ್ಯಾಂಡ್‌ಬೈ ಹೊಂದಿದೆ ಎಂದು ಜಿಯೋನಿ ಹೇಳಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಜಿಯೋನಿ ವಾಚ್ 4 ಬ್ಲೂಟೂತ್ ವಿ 5.0 ಅನ್ನು ಹೊಂದಿದೆ.

ಜಿಯೋನಿ ಸೆನೊರಿಟಾ

ಜಿಯೋನಿ ಸೆನೊರಿಟಾ

ಸೆನೊರಿಟಾ ವಾಚ್‌ 240x198 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರುವ 1.04-ಇಂಚಿನ TFT ಟಚ್ ಡಿಸ್‌ಪ್ಲೇಯನ್ನ ಹೊಂದಿದೆ. ಇದು IP68 ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಇನ್ನು ಈ ಸ್ಮಾರ್ಟ್‌ವಾಚ್‌ಹಾರ್ಟ್‌ಬಿಟ್‌ ಮೇಲ್ವಿಚಾರಣೆ, ನಿದ್ರೆಯ ಮೇಲ್ವಿಚಾರಣೆ, ಮಹಿಳೆಯರ ಆರೋಗ್ಯ ಮೇಲ್ವಿಚಾರಣೆ, ನೀರು ಕುಡಿಯುವ ಜ್ಞಾಪನೆಗಳು, ಬದಲಾಯಿಸಬಹುದಾದ ವಾಲ್‌ಪೇಪರ್‌ಗಳು ಮತ್ತು ಪೆಡೋಮೀಟರ್‌ ಫೀಚರ್ಸ್‌ ಅನ್ನು ಹೊಂದಿದೆ. ಅಲ್ಲದೆ ಇದು ಓಟ, ಸೈಕ್ಲಿಂಗ್, ಈಜು ಮತ್ತು ಹೆಚ್ಚಿನ ವಿಭಿನ್ನ ಕ್ರೀಡೆಗಳನ್ನು ಸಹ ಟ್ರ್ಯಾಕ್ ಮಾಡಬಹುದಾಗಿದೆ. ಅಷ್ಟೇ ಅಲ್ಲ ಸೆನೊರಿಟಾದಲ್ಲಿಯೇ ನೀವು ವಿವಿಧ ಅಪ್ಲಿಕೇಶನ್‌ಗಳಿಗೆ ಅಧಿಸೂಚನೆಗಳನ್ನು ಪಡೆಯಬಹುದಾಗಿದೆ. ಇನ್ನು ಈ ವಾಚ್‌ 130mAh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು 3 ದಿನಗಳವರೆಗೆ ಇರುತ್ತದೆ ಮತ್ತು 12 ದಿನಗಳವರೆಗೆ ಸ್ಟ್ಯಾಂಡ್‌ಬೈ ಹೊಂದಿದೆ ಎಂದು ಕಂಪನಿ ಹೇಳಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಜಿಯೋನಿ ವಾಚ್ 5ರ ಬೆಲೆ ರೂ. 2,499 ಆಗಿದ್ದು, ಇದು ಮ್ಯಾಟ್ ಗ್ರೇ, ಪರ್ಫೆಕ್ಟ್ ಬ್ಲ್ಯಾಕ್, ರೋಸ್ ಪಿಂಕ್ ಮತ್ತು ವಿವಿದ್ ಬ್ಲೂ ಎಂಬ ನಾಲ್ಕು ಫಿನಿಶ್‌ಗಳಲ್ಲಿ ಲಭ್ಯವಿದೆ. ಇನ್ನು ಜಿಯೋನಿ ವಾಚ್ 4 ಬೆಲೆ ರೂ. 4,599 ಆಗಿದ್ದು, ಇದು ಪ್ರೀಮಿಯಂ ಚರ್ಮದ ಪಟ್ಟಿಯೊಂದಿಗೆ ಬರುತ್ತದೆ. ಅಲ್ಲದೆ ಜಿಯೋನಿ ಸೆನೊರಿಟಾ ವಾಚ್‌ ಬೆಲೆ ರೂ. 3,499 ಆಗಿದ್ದು, ಮೆಟಾಲಿಕ್ ಗೋಲ್ಡನ್ + ಕಪ್ಪು ಚರ್ಮದ ಪಟ್ಟಿ ಮತ್ತು ಲೋಹೀಯ ಸಿಲ್ವರ್ + ಬಿಳಿ ಚರ್ಮದ ಪಟ್ಟಿಯ ರೂಪಾಂತರದಲ್ಲಿ ಲಭ್ಯವಾಗಲಿದೆ.

Best Mobiles in India

English summary
Gionee has launched three smartwatches in India, the Gionee Watch 5, Gionee Watch 4, and Gionee Senorita.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X