Subscribe to Gizbot

ಗಿಜ್‌ಬಾಟ್ ಗಿವ್‌ಅವೇ: ಒನ್‌ಪ್ಲಸ್ 2 ಫೋನ್‌ಗಾಗಿ ಉಚಿತ ಆಹ್ವಾನಗಳು

Posted By:

ಒನ್ ಪ್ಲಸ್ 2 ಆಹ್ವಾನಕ್ಕಾಗಿ ಕಾಯುತ್ತಿದ್ದೀರಾ? ಇಂದಿಲ್ಲಿ ಗಿಜ್‌ಬಾಟ್ ನಿಮಗಾಗಿ 25 ಒನ್ ಪ್ಲಸ್ 2 ಆಹ್ವಾನಗಳನ್ನು ತರುತ್ತಿದೆ.

ಗಿಜ್‌ಬಾಟ್ ಗಿವ್‌ಅವೇ ಒದಗಿಸುತ್ತಿರುವ ರಾಫಲ್‌ಕೋಪ್ಟರ್ ಮೂಲಕ ಸುಲಭವಾಗಿ ಇದರಲ್ಲಿ ಭಾಗವಹಿಸಿ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್, ಟ್ವಿಟ್ಟರ್ ಮತ್ತು ಜಿಪ್ಲಸ್‌ನಲ್ಲಿ ಸ್ಪರ್ಧೆಯನ್ನು ಬಿರುಸಾಗಿಸಿ.

ಗಿಜ್‌ಬಾಟ್ ಓದುಗರೇ, ಸ್ಪರ್ಧೆಯಲ್ಲಿ ಭಾಗವಹಿಸುವ ಸುವರ್ಣ ಸಮಯ ನಿಮ್ಮದಾಗಿದೆ. ನಿಮ್ಮ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯನ್ನು ತೋರಿಸುವ ಸಮಯ ಇದಾಗಿದ್ದು, ಅತ್ಯುತ್ತಮ ಬ್ರ್ಯಾಂಡ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳುವ ಸುವರ್ಣವಕಾಶ ನಿಮಗಾಗಿ ಕಾಯುತ್ತಿದೆ. ಈ ಫೋನ್ ಗೆಲ್ಲಲು ಕೆಳಗಿನ ಹಂತಗಳನ್ನು ಅನುಸರಿಸಿದರೆ ಸಾಕು ವಿಜಯಶ್ರೀ ನಿಮಗೊಲಿದಂತೆಯೇ!

ಆಡುವುದು ಹೇಗೆ?
ಹಂತ 1: ನಿಮ್ಮ ಫೇಸ್‌ಬುಕ್‌ನೊಂದಿಗೆ ಲಾಗಿನ್ ಮಾಡಿ
ಹಂತ 2: ರಾಫಲ್‌ಕೋಪ್ಟರ್ ವಿಜೆಟ್‌ನಲ್ಲಿ ನೀಡಿರುವ ಪ್ರತೀ ಹಂತವನ್ನು ಅನುಸರಿಸಿ ಇದರಿಂದ ಗರಿಷ್ಟ ಅಂಕಗಳನ್ನು ನಿಮಗೆ ಗಳಿಸಿಕೊಳ್ಳಬಹುದು.
ಹಂತ 3: ಗಿಜ್‌ಬಾಟ್ ಮತ್ತು ಒನ್‌ಪ್ಲಸ್ ಅನ್ನು ಫೇಸ್‌ಬುಕ್‌, ಟ್ವಿಟ್ಟರ್ ಮತ್ತು ಗೂಗಲ್ + ಪುಟದಲ್ಲಿ ಅನುಸರಿಸಿ
ಹಂತ 4: ಹೆಚ್ಚಿನ ನಮೂದುಗಳು ಮತ್ತು ಸ್ಕೋರ್ ಅನ್ನು ಗಳಿಸಲು ಟ್ವಿಟ್ಟರ್, ಫೇಸ್‌ಬುಕ್, ಇಮೇಲ್ ಹಾಗೂ ಲಿಂಕ್ ಮೂಲಕ 'ಈ ಗಿವ್‌ಅವೇ ಹಂಚಿಕೊಳ್ಳಿ'.

ಒನ್ ಪ್ಲಸ್ 2 ವಿಶೇಷತೆ
ಒನ್ ಪ್ಲಸ್ 2 ಸ್ಮಾರ್ಟ್‌ಫೋನ್ 5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಪಿಕ್ಸೆಲ್ ರೆಸಲ್ಯೂಶನ್ 1080x1920 ಆಗಿದೆ. ಸ್ನ್ಯಾಪ್‌ಡ್ರಾಗನ್ 810 ಚಿಪ್‌ಸೆಟ್ ಇದರಲ್ಲಿದ್ದು ಅಡ್ರೆನೊ 330 ಜಿಪಿಯು ಮತ್ತು LPDDR4 ನ 4ಜಿಬಿ RAM ಅನ್ನು ಇದು ಹೊಂದಿದೆ. ಇನ್ನು ಫೋನ್ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದೆ. ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಮತ್ತು ಓಐಎಸ್ ಇದರಲ್ಲಿದೆ.

3300mAh ಬ್ಯಾಟರಿಯನ್ನು ಡಿವೈಸ್ ಹೊಂದಿದ್ದು, ಯುಎಸ್‌ಬಿ ಟೈಪ್-ಸಿ ಕನೆಕ್ಟಿವಿಟಿ ಇದರಲ್ಲಿದೆ. ಅಮೆಜಾನ್‌ನಲ್ಲಿ ಫೋನ್ ರೂ 24,999 ಕ್ಕೆ ದೊರೆಯುತ್ತಿದೆ.

ಗಿವ್‌ಅವೇ ನಿಯಮಗಳು
ಸೂಚನೆ: ನಿಜವಾದ ಸ್ಮಾರ್ಟ್‌ಫೋನ್ ಅಲ್ಲದೆ ಒನ್‌ಪ್ಲಸ್ 2 ಗಾಗಿ ನಾವು 25 ಆಹ್ವಾನಗಳನ್ನು ನೀಡುತ್ತಿದ್ದೇವೆ.

ಜಯಶಾಲಿಗಳನ್ನು ಯಾದೃಚ್ಛಿಕವಾಗಿ ಆರಿಸಲಾಗುತ್ತದೆ
ಇಲ್ಲಿ 25 ಒಬ್ಬರು ಜಯಶಾಲಿಗಳಿದ್ದು ಸ್ಪರ್ಧೆಯ ಬಹುಮಾನದಂತೆ ಒನ್‌ಪ್ಲಸ್ 2 ಸ್ಮಾರ್ಟ್‌ಫೋನ್ ಖರೀದಿಸಲು ಒಂದು ಆಹ್ವಾನವನ್ನು ಸ್ವೀಕರಿಸುತ್ತಾರೆ. ಮೇಲೆ ಕಾಣಿಸಿರುವ ರಾಫ್ಲಿಕೋಪ್ಟರ್ ವಿಜೆಟ್ ಮೂಲಕ ಜಯಶಾಲಿಗಳನ್ನು ಆರಿಸಲಾಗುತ್ತದೆ. ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೂಲಕ ನೀವು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದ್ದೀರಿ ಎಂದಾದಲ್ಲಿ ಹೆಚ್ಚುವರಿ ಪಾಯಿಂಟ್‌ಗಳಿಗಾಗಿ ನಾವು ಅವಕಾಶಗಳನ್ನು ಒದಗಿಸುತ್ತೇವೆ. ನಕಲಿ ಐಡಿಗಳನ್ನು ಪರಿಗಣಿಸುವುದಿಲ್ಲ. ನಿಮ್ಮ ಇಮೇಲ್ ವಿಳಾಸವು ನಿಮ್ಮೊಂದಿಗೆ ಸಂಪರ್ಕದಲ್ಲಿರಲು ನಮಗೆ ಅಗತ್ಯವಿದ್ದು, ಇದನ್ನು ಮೂರನೇ ವ್ಯಕ್ತಿಗಳಿಗೆ ನೀವು ನೀಡುವಂತಿಲ್ಲ.

ಕಡ್ಡಾಯ ಆಯ್ಕೆಯಂತೆ ನೀವು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಗಿಜ್‌ಬಾಟ್ ಹಾಗೂ ಒನ್ ಪ್ಲಸ್ ಸೋಶಿಯಲ್ ಅನ್ನು 'ಲೈಕ್' ಮತ್ತು 'ಫಾಲೋ' ಮಾಡುವುದು ಅಗತ್ಯವಾಗಿದೆ. ನೀವು ಆಟವನ್ನು ಆಡುತ್ತಿರುವಾಗ ಇದು ನಿಮಗೆ ಹೆಚ್ಚುವರಿ ಹತ್ತು ಅಂಕಗಳನ್ನು ನೀಡುತ್ತದೆ. ಹ್ಯಾಶ್‌ಟ್ಯಾಗ್ #GizbotGiveaway ಆಗಿದೆ.

ನೀವು ಆಯ್ಕೆಗೊಂಡಲ್ಲಿ ನಿಮಗೆ ಇಮೇಲ್ ಮೂಲಕ ತಿಳಿಸಲಾಗುತ್ತದೆ. ಸಂಪರ್ಕ ಮಾಡಿದ ಏಳು ದಿನಗಳೊಳಗಾಗಿ ಜಯಶಾಲಿಗಳು ಪ್ರತ್ಯುತ್ತರಿಸಬೇಕು. ಈ ಸಮಯದಲ್ಲಿ ನೀವು ಉತ್ತರಿಸದಿದ್ದಲ್ಲಿ, ಅಥವಾ ಸಂಪರ್ಕಕ್ಕೆ ಒಳಪಡದಿದ್ದಲ್ಲಿ ಮತ್ತೊಬ್ಬ ವಿಜಯಿಯನ್ನು ಆರಿಸಲಾಗುತ್ತದೆ. ನೀವು ಸ್ಪರ್ಧೆಯಲ್ಲಿ ನೀವು ಬಳಸುವ ಖಾತೆಯು ಒಳಗೊಂಡಿರುವ ಹೆಸರು ನಿಮ್ಮ ನಿಜವಾದ ಹೆಸರಾಗಿರಬೇಕು ಮತ್ತು ಇದೇ ನಿಯಮ ನಿಮ್ಮ ಫೇಸ್‌ಬುಕ್ ಲಾಗಿನ್ ಅಥವಾ ಇಮೇಲ್ ಸಂಪರ್ಕಕ್ಕೆ ಕೂಡ ಅನ್ವಯಿಸುತ್ತದೆ.

ಈ ಘಟಕ ಗಿವ್ಅವೇಯ ಪ್ರಚಾರಕ್ಕಾಗಿ ಮಾತ್ರವಾಗಿದೆ ಒನ್‌ಪ್ಲಸ್ ಅಥವಾ ಅಥವಾ ಗಿಜ್‌ಬಾಟ್ ವಿನಿಮಯ ಇಲ್ಲವೇ ಗ್ರಾಹಕ ಸೇವಾ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಜವಬ್ದಾರರಾಗಿಲ್ಲ. ಈ ಸ್ಪರ್ಧೆಯು ಮುಂದಿನ 7 ದಿನಗಳಿಗೆ ತೆರೆದಿರುತ್ತದೆ.

English summary
Looking for OnePlus 2 invite? Here at GizBot we have got 25 OnePlus 2 invites just for you. What you need to do is simply participate via Rafflecopter in GizBotGiveaway and make the contest viral on social media platforms including Facebook, Twitter and G+.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot