ಆಂಡ್ರಾಯ್ಡ್ ಫೋನ್‌ಗಾಗಿ ಅತ್ಯುತ್ತಮ ಟಾಪ್ 10 ಟಿಪ್ಸ್‌ಗಳು
ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ನಿಧಾನಕ್ಕೆ ಮಾರುಕಟ್ಟೆಯನ್ನು ಆಳುತ್ತಿದ್ದು ಪ್ರತಿಯೊಬ್ಬರೂ ಆಂಡ್ರಾಯ್ಡ್ ಫೋನ್‌ಗಳನ್ನೇ ತಮ್ಮದಾಗಿಸಿಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿ. ಇದರ ನಿರ್ವಹಣೆ ಸುಲಭವಾಗಿರುವುದು, ಉಚಿತವಾಗಿರುವ ಹೆಚ್ಚಿನ ಅಪ್ಲಿಕೇಶನ್‌ಗಳು ಮತ್ತು ಕಡಿಮೆ ದರದಲ್ಲಿ ಆಂಡ್ರಾಯ್ಡ್ ಫೋನ್‌ಗಳು ದೊರಕುತ್ತಿರುವುದು ಆಂಡ್ರಾಯ್ಡ್‌ನ ಗ್ರೇಸ್ ಅನ್ನು ಮೇಲಕ್ಕೆ ಕೊಂಡೊಯ್ಯುತ್ತಿದೆ. ಇಂದಿನ ಲೇಖನದಲ್ಲಿ ನಿಮ್ಮ ಆಂಡ್ರಾಯ್ಡ್ ಫೋನ್‌ನೊಂದಿಗೆ ನೀವು ಏನೆಲ್ಲಾ ವಿಶಿಷ್ಟತೆಗಳನ್ನು ಮಾಡಬಹುದು ಎಂಬುದನ್ನು ಅರಿತುಕೊಳ್ಳೋಣ.
ಇದನ್ನೂ ಓದಿ: ಗೂಗಲ್ ನೆಕ್ಸಸ್ 6 ಫೋನ್ ಅದ್ಭುತ ಟಾಪ್ 10 ವಿಶೇಷತೆಗಳು

ಸ್ವಯಂಚಾಲಿತ ಅಪ್‌ಡೇಟ್‌ಗಳು
ಆಟೊ ಅಪ್‌ಡೇಟ್ ಮಾಡಲು
1. ಗೂಗಲ್ ಪ್ಲೇ ಅಪ್ಲಿಕೇಶನ್‌ಗೆ ಹೋಗಿ
2. ಮೆನು ಬಟನ್‌ಗೆ ಹೋಗಿ
3. ಸೆಟ್ಟಿಂಗ್ಸ್‌ಗೆ ಹೋಗಿ
4. ಆಟೊ ಅಪ್‌ಡೇಟ್ ಆಪ್ಸ್ ಗಾಗಿ ಬಾಕ್ಸ್ ಕ್ಲಿಕ್ ಮಾಡಿ

ಆಂಡ್ರಾಯ್ಡ್ ಫೋನ್‌ಗಾಗಿ ಟಾಪ್ ಸಲಹೆಗಳು
ನೀವು ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದೀರಿ ಎಂದಾದಲ್ಲಿ, ಗೆಸ್ಚರ್ ಕೀಬೋರ್ಡ್ ಬಳಸುವುದನ್ನು ನೀವು ತಿಳಿದುಕೊಳ್ಳಲೇಬೇಕು. ಗೂಗಲ್ ಪ್ಲೇನಲ್ಲಿ ಈ ಕೀಬೋರ್ಡ್‌ಗಳು ದೊರೆಯುತ್ತಿದ್ದು ಬಳಸಲು ಸರಳವಾಗಿದೆ.

ಆಂಡ್ರಾಯ್ಡ್ ಫೋನ್‌ಗಾಗಿ ಟಾಪ್ ಸಲಹೆಗಳು
ಗೂಗಲ್ ನೌ ಎಂಬ ಧ್ವನಿ ಸಹಕಾರಿ ಆಂಡ್ರಾಯ್ಡ್‌ನಲ್ಲಿ ಲಭ್ಯವಿದ್ದು, ಆಪಲ್‌ಗಾಗಿ ಸಿರಿ ಇರುವಂತೆ ಆಂಡ್ರಾಯ್ಡ್‌ಗಾಗಿ ಗೂಗಲ್ ನೌ ಇದೆ.

ಆಂಡ್ರಾಯ್ಡ್ ಫೋನ್‌ಗಾಗಿ ಟಾಪ್ ಸಲಹೆಗಳು
ಗೂಗಲ್ ಕ್ರೋಮ್ ಅಪ್ಲಿಕೇಶನ್ ಮೂಲಕ ಅಂತರ್ಜಾಲ ಬಳಕೆಯನ್ನು ಮಾಡಿ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಕ್ರೋಮ್‌ನೊಂದಿಗೆ ಬರುತ್ತಿದ್ದು ಹುಡುಕಾಡುವ ನಿಮ್ಮ ಸಮಯವನ್ನು ಇದು ಸದುಪಯೋಗಪಡಿಸಲಿದೆ.

ಆಂಡ್ರಾಯ್ಡ್ ಫೋನ್‌ಗಾಗಿ ಟಾಪ್ ಸಲಹೆಗಳು
ಆಫ್‌ಲೈನ್‌ನಲ್ಲಿದ್ದಾಗ ಕೂಡ ನಿಮ್ಮ ಫೋನ್‌ನ ನಕ್ಷೆಗಳನ್ನು ಉಳಿಸಬಹುದಾಗಿದೆ ನೀವು ಇದಕ್ಕೆ ಮೆನುವಿನಲ್ಲಿ "ಮೇಕ್ ಅವೈಲೇಬಲ್ ಆಫ್‌ಲೈನ್" ಅನ್ನು ಆಯ್ಕೆಮಾಡಬೇಕಾಗುತ್ತದೆ. ಇದು 100 ಮಿಲಿಯನ್‌ಗಿಂತಲೂ ಹೆಚ್ಚಿನ ಸ್ಥಳಗಳು ಜೊತೆಗೆ ಲೈವ್ ಟ್ರಾಫಿಕ್ ಪರಿಸ್ಥಿತಿಗಳು, ವರದಿಗಳನ್ನು ನಿಮಗೆ ಒದಗಿಸುತ್ತದೆ.

ಆಂಡ್ರಾಯ್ಡ್ ಫೋನ್‌ಗಾಗಿ ಟಾಪ್ ಸಲಹೆಗಳು
ನಿಮ್ಮ ಆಂಡ್ರಾಯ್ಡ್ ಡಿವೈಸ್‌ಗಳಿಂದ ನಿಮ್ಮ ಕಂಪ್ಯೂಟರ್ ಅನ್ನು ಈ ಅಪ್ಲಿಕೇಶನ್ ಬಳಸಿ ಪ್ರವೇಶಿಸಬಹುದಾಗಿದೆ. ಕ್ರೋಮ್ ರಿಮೋಟ್ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ನಿಮ್ಮ ಪಿಸಿಯಲ್ಲಿ ಡೌನ್‌ಲೋಡ್ ಮಾಡಿ.

ಆಂಡ್ರಾಯ್ಡ್ ಫೋನ್‌ಗಾಗಿ ಟಾಪ್ ಸಲಹೆಗಳು
ಫೋನ್ ಅನ್ನು ಎಲ್ಲಾದರೂ ಕಳೆದುಕೊಂಡಿದ್ದೀರಾ? ಈ ಅಪ್ಲಿಕೇಶನ್ ನಿಮ್ಮ ಫೋನ್ ಅನ್ನು ಮರಳಿ ನಿಮಗೆ ದೊರಕುವಂತೆ ಮಾಡುತ್ತದೆ. ಅಪ್ಲಿಕೇಶನ್‌ನಲ್ಲಿರುವ ನ್ಯಾವಿಗೇಶನಲ್ ಅಸಿಸ್ಟೆಂಟ್ ನಿಮಗೆ ಮಾರ್ಗದರ್ಶನವನ್ನು ನೀಡುತ್ತದೆ.

ಆಂಡ್ರಾಯ್ಡ್ ಫೋನ್‌ಗಾಗಿ ಟಾಪ್ ಸಲಹೆಗಳು
ನಿಮ್ಮ ಗೂಗಲ್ ಪ್ಲಸ್ ಖಾತೆಯಲ್ಲಿ ಫೋಟೋಗಳನ್ನು ಉಳಿಸಬಹುದಾದ ಉತ್ತಮ ಆಯ್ಕೆಯೊಂದಿಗೆ ಆಂಡ್ರಾಯ್ಡ್ ಫೋನ್‌ಗಳು ಬಂದಿವೆ. ಜಿ ಪ್ಲಸ್ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಳ್ಳಿ ನಂತರ ಸೆಟ್ಟಿಂಗ್ಸ್‌ಗೆ ಹೋಗಿ "ಇನ್‌ಸ್ಟಾಂಟ್ ಅಪ್‌ಲೋಡ್" ಸ್ಪರ್ಶಿಸಿ. ಇದು ನಿಮಗೆ ಅನಿಯಮಿತ ಫೋಟೋಗಳನ್ನು ಬ್ಯಾಕಪ್ ಮಾಡಲು ಅನುಮತಿಸುತ್ತದೆ.

ಆಂಡ್ರಾಯ್ಡ್ ಫೋನ್‌ಗಾಗಿ ಟಾಪ್ ಸಲಹೆಗಳು
ನಿಮ್ಮ ಖಾಲಿಯಾಗಿರುವ ಮುಖ್ಯ ಪರದೆಯನ್ನು ಕೆಲವೊಂದು ವಿಜೆಟ್‌ಗಳನ್ನು ಸೇರಿಸುವ ಮೂಲಕ ಸುಂದರಗೊಳಿಸಿ. ಈ ವಿಜೆಟ್‌ಗಳು ನಿಮಗೆ ತಕ್ಷಣದ ಮಾಹಿತಿಯನ್ನು ನಿಮ್ಮ ಪರದೆಯಲ್ಲೇ ತಂದುಕೊಡುತ್ತವೆ.

ಆಂಡ್ರಾಯ್ಡ್ ಫೋನ್‌ಗಾಗಿ ಟಾಪ್ ಸಲಹೆಗಳು
ಆಂಡ್ರಾಯ್ಡ್ ಫೋನ್ ಭದ್ರತೆಗಾಗಿ ನೀವು ಉತ್ತಮ ಆಂಟಿವೈರಸ್ ಅನ್ನು ಇನ್‌ಸ್ಟಾಲ್ ಮಾಡುವುದು ಅತೀ ಅಗತ್ಯವಾಗಿದೆ. ಅವಾಸ್ತ್, ಎವಿಜಿ, ಮೆಕಾಫೆ ಮೊದಲಾದ ಆಂಟಿವೈರಸ್ ಅನ್ನು ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ.


Click it and Unblock the Notifications








