ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

Posted By:

ಐಸ್ ಬಕೇಟ್ ಚಾಲೆಂಜ್ ಹೆಚ್ಚು ಟ್ರೆಂಡಿಯಾಗಿರುವ ಒಂದು ಸಾಮಾಜಿಕ ಚಟುವಟಿಕೆ. ಐಸ್‌ನಿಂದ ಕೂಡಿರುವ ತಂಪಾದ ನೀರನ್ನು ತಾವೇ ಸ್ವಯಂ ಸುರಿದು ಅಥವಾ ಮತ್ತೊಬ್ಬರ ಮೂಲಕ ಸುರಿಸಿಕೊಳ್ಳುವ ಈ ಸಾಮಾಜಿಕ ಆಟ ದೊಡ್ಡಣ್ಣನಿಂದ ಹಿಡಿದು ಈಗ ಭಾರತದಲ್ಲೂ ಹೆಚ್ಚು ಜನಪ್ರಿಯವಾಗುತ್ತಿದೆ. 2013 ರ ಮಧ್ಯಭಾಗದಿಂದ 2014 ರ ಆರಂಭದಲ್ಲಿ ಅಮೇರಿಕಾದ ಉತ್ತರ ಭಾಗಗಳಲ್ಲಿ "ಕೋಲ್ಟ್ ವಾಟರ್ ಚಾಲೆಂಜ್" ಜನಪ್ರಿಯವಾಯಿತು. ಈ ಆಟದ ಅಥವಾ ಚಟುವಟಿಕೆಯ ಮುಖ್ಯ ನಿಯಮವೆಂದರೆ ಕ್ಯಾನ್ಸರ್ ಸಂಶೋಧನಗೆ ದೇಣಿಗೆ ನೀಡುವುದು ಇಲ್ಲವೇ ಮಂಜುಗಡ್ಡೆಯ ನೀರಿಗೆ ಹಾರುವುದು.

ಸಾಮಾಜಿಕ ಮಾಧ್ಯಮದಲ್ಲಿ ಈ ಆಟವನ್ನು ಒಂದು ಸಾಧನೆ ಎಂದೇ ಪರಿಗಣಿಸಲಾಗುತ್ತದೆ. ಈ ಬಾರಿಯಂತೂ ಐಸ್ ಬಕೇಟ್ ಚಾಲೆಂಜ್ ಅನ್ನು ಸ್ವೀಕರಿಸಿದವರ ಪಟ್ಟಿಯಲ್ಲಿ ಬಿಲ್ ಗೇಟ್ಸ್, ಸತ್ಯನ್ ನಡೇಲಾ, ಟಿಮ್ ಕುಕ್ ಹೀಗೆ ಗಣ್ಯಾತಿ ಗಣ್ಯರ ಹೆಸರೇ ಇದೆ. ಬಾಲಿವುಡ್ ಹಾಲಿವುಡ್ ಹೀಗೆ ಸಿನಿಮಾ ತಾರೆಯರೂ ಕೂಡ ಐಸ್ ಬಕೇಟ್ ಚಾಲೆಂಜ್ ಅನ್ನು ಸವಾಲಾಗಿ ಸ್ವೀಕರಿಸಿ ಪೂರ್ಣಗೊಳಿಸಿದ್ದಾರೆ.

ಮುಖ್ಯವಾಗಿ ಈ ಸವಾಲನ್ನು ಜಾರಿಗೆ ತಂದಿರುವ ಉದ್ದೇಶ ಕ್ಯಾನ್ಸರ್ ಸಂಶೋಧನೆಗೆ ವಂತಿಕೆಯನ್ನು ಸಂಗ್ರಹಿಸುವುದಕ್ಕಾಗಿದೆ. ಐಸ್ ಬಕೇಟ್ ಸವಾಲನ್ನು ಸ್ವೀಕರಿಸುವ ವ್ಯಕ್ತಿ ಇಪ್ಪತ್ತನಾಲ್ಕು ಗಂಟೆಗಳ ಒಳಗಾಗಿ ಈ ಕ್ರಿಯೆಯನ್ನು ಪೂರ್ಣಗೊಳಿಸಬೇಕು ಇಲ್ಲವೇ ವಂತಿಕೆಯನ್ನು ನೀಡಲು ಒಪ್ಪಬೇಕು.

ಐಸ್‌ನಿಂದ ಕೂಡಿರುವ ತಣ್ಣೀರನ್ನು ಬಕೇಟ್‌ನಲ್ಲಿ ತುಂಬಿ ಅದನ್ನು ತಲೆಯ ಮೇಲೆ ಸುರಿದುಕೊಂಡು ಆ ಆಹ್ಲಾದವನ್ನು ಅನುಭವಿಸುವ ಈ ಮೋಜಿನ ಆಟ ಯೂಟ್ಯೂಬ್‌ನಲ್ಲಿ ಓತಪ್ರೋತವಾಗಿ ಹರಿದಾಡುತ್ತಿದೆ. ಹೆಚ್ಚಿನ ಮೋಜು ಅಪಾಯಕ್ಕೆ ಕಾರಣ ಎಂಬ ಮಾತಿನಂತೆ ಕೆಲವೊಂದು ಮಾರಕ ರೋಗಗಳನ್ನು ದೇಹದಲ್ಲಿ ಉತ್ಪತ್ತಿ ಮಾಡುತ್ತದೆ. ಈ ಐಸ್ ವಾಟರ್ ಚಾಲೆಂಜ್ ಮಾನವನಲ್ಲಿ ನರ ಸಂಬಂಧಿ ರೋಗಕ್ಕೆ ಕಾರಣವಾಗುತ್ತದೆ. ಮಾನವನ ಸ್ಲೈನಲ್ ಕಾರ್ಡ್, ಧ್ವನಿ ಪೆಟ್ಟಿಗೆ ಮತ್ತು ಸ್ನಾಯುಗಳ ಮೇಲೆ ಇದು ದುಷ್ಪರಿಣಾಮವನ್ನು ಬೀರುತ್ತದೆ.

ಆದರೂ ಆಟದ ಮಜವೇ ಈಗ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅಪಾಯವನ್ನು ಯಾರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಸವಾಲನ್ನು ನಮ್ಮ ಗಿಜ್‌ಬಾಟ್ ತಂಡ ಕೂಡ ಸ್ವೀಕರಿಸಿದ್ದು ಕಚೇರಿಯಲ್ಲಿ ಐಸ್ ಬಕೇಟ್ ಚಾಲೆಂಜ್ ಕಾರ್ಯಕ್ರಮವನ್ನು ಆಯೋಜಿಸಿ ಭೇಷ್ ಅನ್ನಿಸಿಕೊಂಡಿತು. ಒಂಭತ್ತು ವಿವಿಧ ಸ್ಪರ್ಧಾಳುಗಳು ಸ್ವಯಂಪ್ರೇರಿತರಾಗಿ ಈ ಐಸ್ ಬಕೇಟ್‌ನಲ್ಲಿ ಭಾಗವಹಿಸಿ ತಮ್ಮನ್ನು ಐಸ್ ತುಂಬಿದ ನೀರಿನಿಂದ ತೋಯಿಸಿಕೊಂಡು ಮನರಂಜನೆಯನ್ನು ಆಹ್ಲಾದತೆಯನ್ನೂ ನೀಡಿದರು.

ಇದರ ಕೆಲವೊಂದು ನೋಟವನ್ನು ಕೆಳಗಿನ ವೀಡಿಯೊದಲ್ಲಿ ನಾವು ನೀಡಿದ್ದು ನಮ್ಮೊಂದಿಗೆ ನೀವೂ ಆನಂದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

#1

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

#2

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

#3

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

#4

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

#5

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

#6

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

#7

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

#8

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

#9

ಗಿಜ್‌ಬಾಟ್ ಆಯೋಜಿತ ಐಸ್‌ಬಕೇಟ್ ಚಾಲೆಂಜ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about GizBot Steps Up to the ALS Ice Bucket Challenge; And Absolutely Nails it.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot