ಈ ವರ್ಷದ ಬೆಸ್ಟ್‌ ಸಿಇಒ ಪಟ್ಟಿ ಪ್ರಕಟ:ಲಿಕ್ಡಿಂನ್‌ ಸಿಇಒಗೆ ಪಟ್ಟ

Posted By:

ಲಿಂಕ್ಡಿನ್‌‌ ಸಿಇಒ ಜೆಫ್ ವೀನರ್‌ಗೆ ಈ ವರ್ಷದ ಬೆಸ್ಟ್‌ ಸಿಇಒ ಪಟ್ಟ ಲಭಿಸಿದೆ.ಉದ್ಯೋಗ ಮತ್ತು ಉದ್ಯೋಗ ಸ್ಥಳಗಳನ್ನು ಅಧ್ಯಯನ ಮಾಡುವ ಆನ್‌ಲೈನ್‌ ತಾಣ ಗ್ಲಾಸ್‌ಡೂರ್‌ (Glassdoor)ಜೆಫ್ ವೀನರ್‌ಗೆ ಈ ಪಟ್ಟವನ್ನು ನೀಡಿದ್ದು,ಲಿಂಕ್ಡಿನ್‌ ಉದ್ಯೋಗಿಗಳು ಕಂಪೆನಿ ನಿರ್ವ‌ಹಿಸಲು ನೂರಕ್ಕೆ ನೂರು ಸಮರ್ಥ ವ್ಯಕ್ತಿ ಎಂದು ಜೆಫ್ ವೀನರ್‌ನ್ನು ಹೊಗಳಿದ್ದಾರೆ.

ಗ್ಲಾಸ್‌ಡೂರ್‌ ವಿವಿಧ ಕಂಪೆನಿಗಳ ಉದ್ಯೋಗಿಗಳನ್ನು ಸಂದರ್ಶಿಸಿ ಈ ರ್‍ಯಾಂಕ್‌ಗಳನ್ನು ಸಿಇಒಗಳಿಗೆ ನೀಡುತ್ತಿದ್ದು ಬೆಸ್ಟ್‌ ಸಿಇಒ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಫೋರ್ಡ್ ಕಂಪೆನಿಯ ಅಲನ್‌ ಮುಲಲೆ ಪಡೆದುಕೊಂಡಿದ್ದಾರೆ. ಕಳೆದ ವರ್ಷ‌ದ ಪಟ್ಟಿಯಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದ್ದ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ಗೆ ಈ ಬಾರಿ ಹತ್ತನೇ ಸ್ಥಾನಕ್ಕೆ ಜಾರಿದ್ದಾರೆ.ಕ್ವಾಲಕಂನ ಪಾಲ್ ಜೇಕಬ್ಸ್ ಐದನೇ ಸ್ಥಾನ, ಗೂಗಲ್‌ನ ಲಾರಿ ಪೇಜ್ 11ನೇ ಸ್ಥಾನ ಪಡೆದುಕೊಂಡಿದ್ದರೆ,ಯಾಹೂ ಸಿಇಒ ಮರಿಸ್ಸಾ ಮೇಯರ್‌ 50ನೇ ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷ‌ದ ಪಟ್ಟಿಯಲ್ಲಿ ಭಾರತದ ಮೂವರು ಸ್ಥಾನ ಪಡೆಯವಲ್ಲಿ ಯಶಸ್ವಿಯಾಗಿದ್ದರು.ಟಾಟಾ ಕನ್ಸಲ್ಟೆಂಟ್ ಸರ್ವಿಸಸ್‌‌ನ ನಟರಾಜನ್‌ ಚಂದ್ರಶೇಖರನ್‌ 25 ಸ್ಥಾನ, ಮೈಂಡ್‌ ಟ್ರೀ ಕೃಷ್ಣಕುಮಾರ್‌ ನಟರಾಜನ್‌ 28, ವಿಪ್ರೋ ಟಿ.ಕೆ ಕುರಿಯನ್‌ 44 ಸ್ಥಾನ ಪಡೆದುಕೊಂಡಿದ್ದರು.ಈ ವರ್ಷದ ಗ್ಲಾಸ್‌ಡೂರ್‌‌ ಪಟ್ಟಿಯಲ್ಲಿ ಇವರು ಸ್ಥಾನ ಉಳಿಸಿಕೊಳ್ಳುವಲ್ಲ್ಲಿ ವಿಫಲರಾಗಿದ್ದಾರೆ. ಮುಂದಿನ ಪುಟದಲ್ಲಿ ಗ್ಲಾಸ್‌ಡೂರ್‌ ವರದಿಯಲ್ಲಿ ಸ್ಥಾನಪಡೆದ ಈ ವರ್ಷದ ಬೆಸ್ಟ್‌ ಸಿಇಒಗಳ ಪಟ್ಟಿಯನ್ನು ನೀಡಲಾಗಿದೆ.

ಇದನ್ನೂ ಓದಿ: ಹೊಸದಾಗಿ ನೇಮಕವಾದ ಟೆಕ್ಕಿಗಳಿಗೆ ಹೆಚ್ಚು ಸಂಬಳ ನೀಡುವ ಕಂಪೆನಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ವಿಶ್ವದ ಬೆಸ್ಟ್‌ 50 ಸಿಇಒಗಳು

ವಿಶ್ವದ ಬೆಸ್ಟ್‌ 50 ಸಿಇಒಗಳು

1

ಮಾಹಿತಿ: ಗ್ಲಾಸ್‌ಡೂರ್‌

ವಿಶ್ವದ ಬೆಸ್ಟ್‌ 50 ಸಿಇಒಗಳು

ವಿಶ್ವದ ಬೆಸ್ಟ್‌ 50 ಸಿಇಒಗಳು

2


ಮಾಹಿತಿ: ಗ್ಲಾಸ್‌ಡೂರ್‌

 ವಿಶ್ವದ ಬೆಸ್ಟ್‌ 50 ಸಿಇಒಗಳು

ವಿಶ್ವದ ಬೆಸ್ಟ್‌ 50 ಸಿಇಒಗಳು

3

ಮಾಹಿತಿ: ಗ್ಲಾಸ್‌ಡೂರ್‌

 ವಿಶ್ವದ ಬೆಸ್ಟ್‌ 50 ಸಿಇಒಗಳು

ವಿಶ್ವದ ಬೆಸ್ಟ್‌ 50 ಸಿಇಒಗಳು

4


ಮಾಹಿತಿ: ಗ್ಲಾಸ್‌ಡೂರ್‌

 ವಿಶ್ವದ ಬೆಸ್ಟ್‌ 50 ಸಿಇಒಗಳು

ವಿಶ್ವದ ಬೆಸ್ಟ್‌ 50 ಸಿಇಒಗಳು

4

ಮಾಹಿತಿ: ಗ್ಲಾಸ್‌ಡೂರ್‌

2013 ಗ್ಲಾಸ್‌ಡೂರ್‌ ಸಿಇಒ ಪಟ್ಟಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot