ಇನ್ಮುಂದೆ ಆಂಡ್ರಾಯ್ಡ್‌ನಲ್ಲೂ ಜಿಮೇಲ್‌ನಲ್ಲಿ ಅನ್‌ಡೂ ಸೆಂಡ್ ಮಾಡಬಹುದು..!
ಗೂಗಲ್ ಗೆ ಧನ್ಯವಾದ ಸಲ್ಲಿಸಲು ಹಲವು ಕಾರಣಗಳಿದೆ. ಅದರಲ್ಲಿ ಒಂದು ಕಾರಣವೆಂದರೆ, ಜಿಮೇಲ್ ನಲ್ಲಿ ನೀಡಲಾಗಿರುವ ಅಂಡೂ ಸೆಂಡ್ ಇಮೇಲ್ ಆಯ್ಕೆ. ವೆಬ್ ವರ್ಷನ್ ನಲ್ಲಿ ಈ ಆಯ್ಕೆಯು ಈಗಾಗಲೇ ಲಭ್ಯವಿದ್ದು, ಟೈಪಿಂಗ್ ಎರರ್, ಗ್ರಾಮರ್ ಮಿಸ್ಟೇಕ್, ಇತ್ಯಾದಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದೀಗ ಈ ವೈಶಿಷ್ಟ್ಯವು ಆಂಡ್ರಾಯ್ಡ್ ಜಿಮೇಲ್ ಆಪ್ ನಲ್ಲೂ ಕೂಡ ಲಭ್ಯವಿದೆ.
ಆಂಡ್ರಾಯ್ಡ್ ಪೋಲೀಸ್ ವರದಿಯ ಪ್ರಕಾರ ಜಿಮೇಲ್ ಆಪ್ ನ 8.7 ವರ್ಷನ್ ನಲ್ಲಿ ಈ ವೈಶಿಷ್ಟ್ಯತೆಯು ಲಭ್ಯವಾಗಲಿದೆ.2015 ರಲ್ಲಿ ಈ ಅಂಡೂ ಸೆಂಡ್ ಇಮೇಲ್ ವೈಶಿಷ್ಟ್ಯತೆಯ ಬಗ್ಗೆ ಡೆಸ್ಕ್ ಟಾಪ್ ವೆಬ್ ವರ್ಷನ್ ನಲ್ಲಿ ಚರ್ಚಿಸಲಾಯಿತು.

ವಾಟ್ಸ್ ಆಪ್ ನಲ್ಲಿನ ಡಿಲೀಟ್ ಫಾರ್ ಎವೆರಿವನ್ ಆಯ್ಕೆಯಂತೆಯೇ ಇದೂ ಕೂಡ ಕೆಲಸ ಮಾಡುತ್ತದೆ. 30 ಸೆಕೆಂಡ್ ಒಳಗೆ ನೀವು ಕಳಿಸಿದ ಇಮೇಲ್ ನ್ನು ರೀಕಾಲ್ ಮಾಡಲು ಇದು ನೆರವಾಗುತ್ತದೆ. ಒಂದು ವೇಳೆ ನೀವು ಕಳಿಸಿದ ಇಮೇಲ್ ತಪ್ಪಾಗಿದ್ದಲ್ಲಿ ಅಥವಾ ಕಳಿಸಬೇಕಾದವರಿಗೆ ಕಳಿಸದೇ ಬೇರೆ ಯಾರಿಗೋ ತಪ್ಪಾಗಿ ಸೆಂಡ್ ಮಾಡಿದರೆ ರೀಕಾಲ್ ಮಾಡಲು ಇದು ಸಹಕಾರಿ.
ಗೂಗಲ್ ಇನ್ ಬಾಕ್ಸ್ ಆಪ್ ನ ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಇದು ಲಭ್ಯವಿದೆ. ಈಗ ಜಿಮೇಲ್ ಆಪ್ ನಲ್ಲೂ ಕೂಡ ಲಭ್ಯವಾಗುತ್ತಿದೆ.
ಈ ಸೌಲಭ್ಯಕ್ಕಾಗಿ ನೀವು ಮೊದಲು ಅಂಡೂ ಸೆಂಡ್ ಜಿಮೇಲ್ ಸೆಟ್ಟಿಂಗ್ಸ್ ನಲ್ಲಿ ಆನ್ ಮಾಡಬೇಕಾಗುತ್ತದೆ. ಇದಕ್ಕಾಗಿ ಮೊದಲು ಜಿಮೇಲ್ ಆಪ್ ನ ಸೆಟ್ಟಿಂಗ್ಸ್ ನ್ನು ಕ್ಲಿಕ್ಕಿಸಿ. ಅಂಡೂಸೆಂಡ್ ಸೆಕ್ಷನ್ ನಲ್ಲಿ Enable Undo Send" ಆಯ್ಕೆಯನ್ನು ಚೆಕ್ ಮಾಡಿ.

"Send cancellation period" ವಿಭಾಗದಲ್ಲಿ ನೀವು ಮೇಲ್ ಸೆಂಡ್ ಆಗಿರುವುದನ್ನು ಕ್ಯಾನ್ಸಲೇಷನ್ ಮಾಡುವುದಕ್ಕೆ ಸಮಯವನ್ನೂ ಫಿಕ್ಸ್ ಮಾಡಬಹುದು. 5 ಸೆಕೆಂಡ್, 10 ಸೆಕೆಂಡ್, 20 ಸೆಕೆಂಡ್ ಮತ್ತು 30 ಸೆಕೆಂಡ್ ಹೀಗೆ..ಒಮ್ಮೆ ನೀವು ಸಮಯ ಸೆಲೆಕ್ಟ್ ಮಾಡಿದ ಮೇಲೆ ಅದನ್ನು ಸೇವ್ ಮಾಡಿ..ಒಮ್ಮೆ ನೀವು ಈ ಫೀಚರ್ ನ್ನು ಆಕ್ಟಿವೇಡ್ ಮಾಡಿದ ನಂತರ ನೀವು ಕಳಿಸಿದ ಇಮೇಲ್ ನ್ನು ಕ್ಯಾನ್ಸಲ್ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.ಒಮ್ಮೆ ನೀವು ಮೇಲ್ ಕಳಿಸಿದ ಕೂಡಲೇ ನಿಮಗೆ "Your message has been sent" ಎಂಬ ಮೆಸೇಜ್ ಕಾಣಿಸುತ್ತದೆ ಆದರೆ ಅದನ್ನು ಕೂಡಲೇ ಅಂಡೂ ಮಾಡುವುದಕ್ಕೆ ನಿಮಗೆ ಅವಕಾಶವಿರುತ್ತದೆ.
ಇದಿಷ್ಟೇ ಅಲ್ಲದೇ ಇನ್ನಷ್ಟು ವೈಶಿಷ್ಟ್ಯತೆಗಳು ಇದಕ್ಕೆ ಸೇರಿಕೊಳ್ಳುವ ಸಾಧ್ಯತೆಗಳಿವೆ. ಕಾನ್ಫಿಡೆನ್ಸಿಷಿಯಲ್ ಮೋಡ್ ಆಯ್ಕೆಯೂ ಸೇರುವ ಸಾಧ್ಯತೆ ಇದ್ದು ನಿಮ್ಮ ಮೇಲ್ ಗಳ ಭದ್ರತಾ ದೃಷ್ಟಿಯಿಂದ ಸೇರ್ಪಡೆಯಾಗಿರುವ ವೈಶಿಷ್ಟ್ಯಗಳಲ್ಲಿ ಇದೂ ಕೂಡ ಒಂದಾಗಿದೆ.


Click it and Unblock the Notifications








