ಜಿ-ಮೇಲ್‌ಗೂ ಬಂತು ಬ್ಲೂ ವೆರಿಫೈಡ್ ಚೆಕ್ ಮಾರ್ಕ್! ಇದನ್ನು ಪಡೆಯಲು ಏನು ಮಾಡಬೇಕು?
ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ವೆರಿಫೈಡ್ ಟಿಕ್ ಮಾರ್ಕ್‌ಗಳಿಗೆ ಹೆಚ್ಚಿನ ಗಮನವನ್ನು ನೀಡುತ್ತಿವೆ. ಇದೀಗ ಗೂಗಲ್‌ನ ಜನಪ್ರಿಯ ಸೇವೆಯಾದ ಜಿ-ಮೇಲ್ ಕೂಡ ಸೇರಿಕೊಂಡಿದೆ. ಜಿ-ಮೇಲ್ ಕೂಡ ಮೇಲ್ ಸೆಂಡ್ ಮಾಡುವವರ ಹೆಸರಿನ ಪಕ್ಕದಲ್ಲಿ ಬ್ಲೂ ವೆರಿಫೈಡ್ ಚೆಕ್‌ಮಾರ್ಕ್ ಅನ್ನು ನೀಡಲು ಮುಂದಾಗಿದೆ.
ಹೌದು, ಗೂಗಲ್‌ನ ಜಿ-ಮೇಲ್ ಬಳಕೆದಾರರಿಗೆ ಬ್ಲೂ ವೆರಿಫೈಡ್ ಚೆಕ್‌ಮಾರ್ಕ್ ಅನ್ನು ನೀಡಲಿದೆ. ಇದರಿಂದ ಇಮೇಲ್‌ಗಳ ದೃಡೀಕರಣ ಸಾಧ್ಯವಾಗಲಿದೆ ಎನ್ನಲಾಗಿದೆ. ಇನ್ನು ಈ ಹೊಸ ಫೀಚರ್ಸ್ ಮೇಲ್ ಸೆಂಡರ್ ಮತ್ತು ರಿಸಿವರ್ ನಡುವೆ ಪರಿಣಾಮ ಬೀರಲಿದೆ ಎಂದು ಹೇಳಿದೆ. ಹಾಗಾದ್ರೆ ಜಿ-ಮೇಲ್‌ನ ಹೊಸ ಬ್ಲೂ ವೆರಿಫೈಡ್ ಚೆಕ್‌ಮಾರ್ಕ್ ಹೇಗೆ ಕಾರ್ಯನಿರ್ವಹಿಸಲಿದೆ ಅ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿ-ಮೇಲ್ ಇಮೇಲ್‌ಗಳ ದೃಢೀಕರಣಕ್ಕಾಗಿ ಬ್ಲೂ ವೆರಿಫೈಡ್ ಚೆಕ್‌ಮಾರ್ಕ್ ಅನ್ನು ಪರಿಚಯಿಸಿದೆ. ಇದರಿಂದ ಸ್ಪ್ಯಾಮ್ ಮೇಲ್‌ಗಳ ಹಾವಳಿಯನ್ನು ತಡೆಗಟ್ಟಬಹುದಾಗಿದೆ. ಸದ್ಯ ಈ ಹೊಸ ಫೀಚರ್ಸ್ ಜಿ-ಮೇಲ್‌ನಲ್ಲಿ ಸೇರ್ಪಡೆಯಾಗಿದ್ದು, ಎಲ್ಲಾ ಗೂಗಲ್ ವರ್ಕ್‌ಸ್ಪೇಸ್ ಗ್ರಾಹಕರಿಗೆ ಮತ್ತು ಲೆಗಸಿ G Suite Basic ಮತ್ತು ವ್ಯಾಪಾರ ಗ್ರಾಹಕರಿಗೆ ಲಭ್ಯವಾಗಲಿದೆ. ಜೊತೆಗೆ ಪರ್ಸನಲ್ ಗೂಗಲ್ ಅಕೌಂಟ್ ಪಡೆದಿರುವವರಿಗೆ ಕೂಡ ಲಭ್ಯವಾಗಲಿದೆ.
ಜಿ-ಮೇಲ್‌ನಲ್ಲಿ ಮೇಲ್ ಐಡೆಂಟಿಫೈಗಾಗಿ (BIMI) ಬ್ರ್ಯಾಂಡ್ ಇಂಡಿಕೆಟರ್ಸ್ ಅಳವಡಿಸಿಕೊಂಡ ಬ್ಯುಸಿನೆಸ್ ಅಕೌಂಟ್‌ಗಳಿಗೆ ಈ ಚೆಕ್ ಮಾರ್ಕ್ ಲಭ್ಯವಾಗಲಿದೆ. ಇದರಿಂದ ಬಳಕೆದಾರರ ಇನ್‌ಬಾಕ್ಸ್‌ಗಳಲ್ಲಿ ಬ್ರ್ಯಾಂಡ್‌ನ ಹೆಸರಿನ ಮುಂದಿನ ಚೆಕ್‌ಮಾರ್ಕ್ ಆಟೋಮ್ಯಾಟಿಕ್ ಆಗಿ ಕಾಣಿಸಲಿದೆ. ಇದಕ್ಕಾಗಿ ಬಳಕೆದಾರರು ಜಿ-ಮೇಲ್‌ನಲ್ಲಿ ಹೊಸದಾಗಿ ಸೆಟ್ಟಿಂಗ್ಸ್‌ನಲ್ಲಿ ಬದಲಾವಣೆ ಮಾಡುವ ಅಗತ್ಯವಿಲ್ಲ.

ಇನ್ನು ಬ್ಲೂ ವೆರಿಫೈಡ್ ಚೆಕ್‌ಮಾರ್ಕ್ ಇಮೇಲ್‌ನಲ್ಲಿ ಕಾಣಿಸಿಕೊಂಡಾಗ ಇಮೇಲ್ ಕಳುಹಿಸುವವರು ಪ್ರೊಫೈಲ್ ಚಿತ್ರದಲ್ಲಿ ಡೊಮೇನ್ ಮತ್ತು ಲೋಗೋವನ್ನು ಹೊಂದಿದ್ದಾರೆ ಎಂದು ಪರಿಶೀಲಿಸಿದ್ದಾರೆ ಎಂದು ಹೇಳುವ ಪ್ರಾಂಪ್ಟ್ ತೆರೆಯಲಿದೆ. ಇದರಿಂದ ಚೆಕ್‌ಮಾರ್ಕ್ ಬಳಕೆದಾರರಿಗೆ ಮತ್ತು ಇಮೇಲ್ ಭದ್ರತಾ ವ್ಯವಸ್ಥೆಗಳಿಗೆ ಸ್ಪ್ಯಾಮ್ ಅನ್ನು ಗುರುತಿಸಲು ಸಹಾಯ ಮಾಡಲಿದೆ. ಇದು ಇಮೇಲ್ ಮೂಲಗಳಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಓದುಗರಿಗೆ ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ ಎಂದು ಗೂಗಲ್ ಹೇಳಿದೆ.
ಗೂಗಲ್‌ನ ಈ ಹೊಸ ಫೀಚರ್ಸ್ ಪ್ರಯೋಜನವನ್ನು ಬ್ಯುಸಿನೆಸ್ ಅಕೌಂಟ್‌ಗಳು ಪಡೆದುಕೊಳ್ಳಬೇಕಾದರೆ DMARC ಅನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದು ಡೊಮೇನ್-ಆಧಾರಿತ ಸಂದೇಶ ದೃಢೀಕರಣ, ವರದಿ ಮಾಡುವಿಕೆ ಮತ್ತು ಅನುಸರಣೆಯನ್ನು ಸೂಚಿಸಲಿದೆ. ಇದರಿಂದ ಹ್ಯಾಕರ್‌ಗಳು ಮತ್ತು ಇತರ ಸ್ಪ್ಯಾಮರ್ ಮೇಲ್‌ಗಳನ್ನು ತಡೆಯಲು ಸಹಾಯ ಮಾಡಲಿದೆ. ಜೊತೆಗೆ ಬ್ಯುಸಿನೆಸ್ ಅಕೌಂಟ್‌ಗಳು ತಮ್ಮ ಲೋಗೋವನ್ನು ವೆರಿಫೈಡ್ ಮಾರ್ಕ್ ಸೆರ್ಟಿಫಿಕೆಟ್‌ನೊಂದಿಗೆ ಮೌಲ್ಯೀಕರಿಸುವ ಅಗತ್ಯವಿದೆ. ಇದಾದ ನಂತರ Gmail ನಲ್ಲಿ ಪರಿಶೀಲಿಸಿದ ಚೆಕ್‌ಮಾರ್ಕ್ ಪಡೆಯಲು BIMI ಅನ್ನು ಸೆಟ್‌ಮಾಡಬೇಕಾಗುತ್ತದೆ.

ಏನಿದು BIMI? ಇದರ ಕಾರ್ಯವೈಖರಿ ಏನು?
Gmail ನಲ್ಲಿ BIMI ಅನ್ನು ಕಳೆ ಎರಡು ವರ್ಷಗಳ ಹಿಂದೆಯೇ ಪರಿಚಯಿಸಲಾಗಿದೆ. ಇದು ಇಮೇಲ್‌ಗಳಲ್ಲಿ ಬ್ರ್ಯಾಂಡ್ ಲೋಗೋ ಡಿಸ್‌ಪ್ಲೇ ಮಾಡುವುದಕ್ಕೆ ಸಹಾಯ ಮಾಡಲಿದೆ. ಅಂದರೆ ನಿಮ್ಮ ಬ್ರ್ಯಾಂಡ್ ಲೋಗೋ ಡಿಸ್‌ಪ್ಲೇ ಆಗಬೇಕದಾರೆ ದೃಢೀಕರಣವನ್ನು ಹೊಂದಿರಬೇಕಾಗುತ್ತದೆ. ಇದಕ್ಕಾಗಿ BIMI DMARC ಭದ್ರತಾ ತಪಾಸಣೆಗಳನ್ನು ನಿಯಂತ್ರಿಸುತ್ತದೆ. BIMI ಯೊಂದಿಗೆ, ಬಳಕೆದಾರರು ಇಮೇಲ್‌ಗಳಲ್ಲಿ ತಮ್ಮ ಲೋಗೋಗಳನ್ನು ಸಹ ಕಂಟ್ರೋಲ್ ಮಾಡಬಹುದಾಗಿದೆ.
ಇನ್ನು ಗೂಗಲ್ ಇತ್ತೀಚಿನ ಸುದ್ದಿಗಳನ್ನು ಗಮನಿಸುವುದಾದರೆ ಇತ್ತೀಚಿಗೆ ಗೂಗಲ್ ತನ್ನ ವಾರ್ಷಿಕ ಗೂಗಲ್ ಪ್ಲೇ ಪ್ರೊಟೆಕ್ಟ್ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಜೊತೆಗೆ ಮಾಲ್‌ವೇರ್ ಮತ್ತು ಅನಗತ್ಯ ಸಾಫ್ಟ್‌ವೇರ್‌ನಂತಹ ಬೆದರಿಕೆಗಳಿಂದ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಶತಕೋಟಿ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಈ ಕ್ಷಣಕ್ಕೂ ಸಹ ಸ್ಕ್ಯಾನ್ ಮಾಡುವುದನ್ನು ಮುಂದುವರಿಸಿದೆ.


Click it and Unblock the Notifications








