ಜಿ-ಮೇಲ್, ಯಾಹೂ ಗಳ ಮೇಲ್ ಇನ್ನುಮೇಲೆ ಭಾರತದ ಸರ್ವರ್ ಗಳಿಂದ ಹೋಗಬೇಕು:ಸರ್ಕಾರ

Posted By: Varun
ಜಿ-ಮೇಲ್, ಯಾಹೂ ಗಳ ಮೇಲ್ ಇನ್ನುಮೇಲೆ ಭಾರತದ ಸರ್ವರ್ ಗಳಿಂದ ಹೋಗಬೇಕು:ಸರ್ಕಾರ

ಹಾಗಂತ ಕೇಂದ್ರ ಸರ್ಕಾರ ಜಿ-ಮೇಲ್ , ಯಾಹೂ ಇಂಡಿಯಾ ಹಾಗು ಮೈಕ್ರೋಸಾಫ್ಟ್ ಕಂಪನಿಗಳಿಗೆ ಮನವಿ ಮಾಡಲಿದೆಯಂತೆ.

ಇತ್ತೀಚಿಗೆ ಇ-ಮೇಲ್ ನಲ್ಲಿ ಭಯೋತ್ಪಾದಕರ ಚಟುವಟಿಕೆಗಳು ಇಂಟರ್ನೆಟ್ ನಲ್ಲಿ ಹೆಚ್ಚುತ್ತಿದ್ದು, ಗೂಡಾಚಾರ ಇಲಾಖೆ, ಸಂಶಯಾಸ್ಪದ ಇ-ಮೇಲ್ ಗಳು ವಿದೇಶೀ ಸರ್ವರ್ ಗಳಿಂದ ಬಂದರೆ ಅವುಗಳ ಮಾಹಿತಿ ಕಲೆಹಾಕಲು ಕಷ್ಟವಾಗಿದ್ದು, ಇ-ಮೇಲ್ ಗಳ ಸರ್ವರ್ ವಿದೇಶದಲ್ಲಿದ್ದರೆ, ಆ ದೇಶದ ಸರ್ಕಾರದ ಅನುಮತಿ ಬೇಕಾಗಿದ್ದು, ಭಯೋತ್ಪಾದಕ ಚಟುವಟಿಕೆ ಹತ್ತಿಕ್ಕಲು ಇದು ದೊಡ್ಡ ಅಡಚಣೆ ಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ.

ಇತ್ತೀಚಿಗೆ ತಾನೇ ಇಂಡಿಯನ್ ಮುಜಾಹಿದ್ದೀನ್ ನ ಭಯೋತ್ಪಾದಕನ ಮೇಲ್ ಗಳ ಮೂಲ ಯೂರೋಪ್ ದೇಶದ ಸರ್ವರ್ ನಲ್ಲಿದ್ದ ಪರಿಣಾಮ, ಮೇಲ್ ನಲ್ಲಿದ್ದ ಮಾಹಿತಿ ಪಡೆಯಲು ಯುರೋಪಿಯನ್ ಒಕ್ಕೂಟದ ಅನುಮತಿ ಪಡೆಯಬೇಕಾಗಿ ಬಂದಿತ್ತು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot