ಗೋಲ್ಡ್ ಸೀಟ್ ನಿಂದ ಆನ್ ದ ಗೋ ಆಫ್ ಲೈನ್ ಎಂಟರ್ಟೈನ್ ಮೆಂಟ್ ಆಪ್ಲಿಕೇಷನ್

Written By: Lekhaka

ಗೋಲ್ಡ್ ಸೀಟ್ ಆನ್ ದ ಗೋ ಆಫ್ ಲೈನ್ ಎಂಟರ್ಟೈನ್ ಮೆಂಟ್ ಆಪ್ಲಿಕೇಷನ್ ವೊಂದನ್ನು ಡೆಲವಲಪ್ ಮಾಡಲು ಪರವಾನಗಿಯನ್ನು ಪಡೆದುಕೊಂಡಿದ್ದು, ಏರ್, ಬಸ್ ಮತ್ತು ರೈಲ್ವೆ ನೆಟ್ವಕ್ ಗಳಲ್ಲಿ ಟ್ರಾವಲ್ ಸೇವೆಯನ್ನು ನೀಡಲು ಅನುಮತಿಯನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಗೋಲ್ಡ್ ಸೀಟ್ ಕಂಪನಿಯ ಕೇಂದ್ರ ಕಛೇರಿಯೂ ದೆಹಲಿಯಲ್ಲಿದ್ದು, ಇದು ಯಾವುದೇ ಡೇಟಾ ಕಾಸ್ಟ್ ಇಲ್ಲದೇ ಇಂಟರ್ನೆಟ್ ಕೆನೆಕಷನ್ ಇಲ್ಲದೆಯೂ ಉತ್ತಮ ಎಂಟರ್ ಟೈನ್ ಮೆಂಟ್ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಗೋಲ್ಡ್ ಸೀಟ್ ನಿಂದ ಆನ್ ದ ಗೋ ಆಫ್ ಲೈನ್ ಎಂಟರ್ಟೈನ್ ಮೆಂಟ್ ಆಪ್ಲಿಕೇಷನ್

ಈಗಾಗಲೇ ಗೋಲ್ಡ್ ಸೀಟ್ ಸಂಸ್ಥೆಯೂ ಉತ್ತರ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಲಕ್ಸುರಿ ಬಸ್ ಗಳಲ್ಲಿ ಸೇವೆಯನ್ನು ಮೊದಲಿಗೆ ಆರಂಭಿಸಿತ್ತು ಎನ್ನಲಾಗಿದೆ. ಇದಾದ ನಂತರದಲ್ಲಿ ಈಗ ಎಲ್ಲಾ ಕಡೆಗಳಲ್ಲೂ ತನ್ನ ಸೇವೆಯನ್ನು ವಿಸ್ತರಿಸಲು ಮುಂದಾಗಿದೆ ಎನ್ನಲಾಗಿದೆ. ಶೀಘ್ರವೇ ದಕ್ಷಿಣ ಭಾರತದಲ್ಲಿಯೂ ತನ್ನ ಸೇವೆಯನ್ನು ಆರಂಭಸಲಿದೆ. ಇದಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸಿದೆ.

ಗೋಲ್ಡ್ ಸೀಟ್ ಸಂಸ್ಥೆಯೂ ರಸ್ತೆ, ರೈಲು ಮತ್ತು ವಾಯು ಮಾರ್ಗವಾಗಿ ಓಡಾಡುವ ಗ್ರಾಹಕರನ್ನು ಮನದಲ್ಲಿ ಇಟ್ಟುಕೊಂಡು ಮನರಂಜನೆಯನ್ನು ನೀಡುವ ಸೇವೆಯನ್ನು ಮಾಡುತ್ತಿದೆ. ಈ ಮೂಲಕ ಹೆಚ್ಚಿನ ಲಾಭವನ್ನು ಗಳಿಸಿಕೊಳ್ಳುತ್ತಿದೆ ಎನ್ಲಲಾಗಿದೆ. ಶೀಘ್ರವೇ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ ಎನ್ನುವ ಮಾಹಿತಿಯೂ ಇದೆ.

ಇದಲ್ಲದೇ ಗೋಲ್ಡ್ ಸೀಟ್ ಹೊಸ ಮಾದರಿಯಲ್ಲಿ ಇಂಟರ್ನೆಟ್ ಕನೆಕ್ಷನ್ ಇಲದ ಪ್ರದೆಶಗಳಲ್ಲಿ ನೆಟ್ ವರ್ಕ್ ಬಳಕೆ ಮಾಡಿಕೊಳ್ಳುವ ಹೊಸದೊಂದು ಸೇವೆಯನ್ನು ನೀಡಲು ಮುಂದಾಗಿದೆ. ಹೊಸ ತಂತ್ರಜ್ಞಾನವು ಹೆಚ್ಚಿನ ಪ್ರಮಾಣದ ಸಿಗ್ನಲ್ ಅನ್ನು ಸೆಳೆಯಲು ಸಹಾಯಕಾರಿಯಾಗಿದೆ.

ಬಣ್ಣದಲ್ಲಿ ಮೋಡಿ ಮಾಡಿರುವ "ಒನ್‌ಪ್ಲಸ್ 5ಟಿ" ಮಾರಾಟ ಇಂದು 12 ಗಂಟೆಯಿಂದ!!..ಎಲ್ಲೆಲ್ಲಿ?

2020 ಒಳಗೆ ದೇಶದ ಮೂಲೆ ಮೂಲೆಗೆ ಇಂಟರ್ನೆಟ್ ಇಲ್ಲವಾದರೂ ಸಹ ಮನರಂಜನೆಯನ್ನು ಒದಗಿಸಬೇಕು ಎನ್ನುವ ಯೋಜನೆಯನ್ನು ರೂಪಿಸಿಕೊಂಡಿದೆ. ಇದು ತನ್ನ ಯೋಜನೆಯಲ್ಲಿ ಯಶಸ್ವಿಯಾಗದರೆ ದೇಶದಲ್ಲಿ ಹೊಸ ಕ್ರಾಂತಿಯ ಅಲೆಯೆ ಸೃಷ್ಠಿಯಾಗಲಿದೆ ಎನ್ನುವ ಮಾತು ಕೇಳಿಬಂದಿದೆ.

Read more about:
English summary
GoldSeat is based on the technology of serving offline media content to consumers on their devices without the need of any internet connectivity. Once the device is installed on a bus, passengers can connect to GoldSeat Device using Wi-Fi.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot