ಗುಡ್‌ಬಾಯ್‌ ಹೇಳಿ ಟ್ರಾಫಿಕ್‌ ಜಾಮ್‌ಗೆ, ಹಾಯ್‌ ಹೇಳಿ ಪಾಡ್‌ ಟ್ಯಾಕ್ಸಿಗೆ

Written By:

ದೊಡ್ಡ ದೊಡ್ಡ ನಗರಗಳಿಗೆ ಕಾಲಿಡುತ್ತಿದಂತೆಯೇ ಯಾವ ಅನುಭವ ಆಗುತ್ತೋ ಬಿಡುತ್ತೋ ಆದ್ರೆ ನಗರಗಳು ಹತ್ತಿರ ಬರುತ್ತಿದಂತೆಯೇ ಟ್ರಾಫಿಕ್‌ ಅನುಭವವಂತು ಖಂಡಿತ ಆಗುತ್ತೆ. ಹಾಗೆ ತಲೆನೋವು ಪ್ರಾರಂಭವಾಗುತ್ತೆ. ಟ್ರಾಫಿಕ್‌ ಕಡಿಮೆ ಮಾಡಲೆಂದೆ ಬೆಂಗಳೂರಿನಂತ ದೊಡ್ಡ ನಗರಗಳು ಈಗಾಗಲೇ ಮೆಟ್ರೊ ರೈಲು ಸೇವೆಯನ್ನು ಒದಗಿಸಿರುವುದು ಗೊತ್ತೇ ಇದೆ. ಆದ್ರೂ ಸಹ ಬೆಂಗಳೂರಿನಲ್ಲಿ ಟ್ರಾಫಿಕ್‌ ಎನ್‌ ಕಡಿಮೆ ಇದಿಯೇನ್ರಿ ಖಂಡಿತ ಇಲ್ಲ. ಇಂತಹ ಸಮಸ್ಯೆಯನ್ನು ಹಾಗೆ ಕಣ್ಣಾಡಿಸುತ್ತಿದ್ದ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಾಡ್ ಟ್ಯಾಕ್ಸಿಗಳ ಪೈಲಟ್‌ ಯೋಜನೆಯನ್ನು ಜಾರಿಗೆ ತಂದಿದೆ. ಟೆಕ್ನಾಲಜಿ ಆಧಾರಿತವಾದ ಈ ಯೋಜನೆಯಿಂದ ಟ್ರಾಫಿಕ್‌ಗೆ ಗುಡ್‌ಬಾಯ್‌ ಹೇಳಬಹುದಾಗಿದೆ. ಇದು ಆಕಾಶದಲ್ಲಿ ಹಾರುವ ಟ್ಯಾಕ್ಸಿ ಎಂಬುದನ್ನು ಮರೆಯಬೇಡಿ ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೈಯಕ್ತಿಕ ಕ್ಷಿಪ್ರ ಪ್ರಯಾಣ

1

ಇದೇ ಮೊದಲ ಬಾರಿಗೆ ಟೆಕ್ನಾಲಜಿ ಆಧಾರಿತವಾಗಿ ''ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ'ವು 'ವೈಯಕ್ತಿಕ ಕ್ಷಿಪ್ರ ಪ್ರಯಾಣ' (personal rapid transit-PRT) ಜಾಲಬಂಧವನ್ನು ಇನ್ನು ಕೇವಲ 15 ದಿನಗಳಲ್ಲಿ ಜಾರಿಗೆ ತರಲಿದೆ.

 13 ಕಿ.ಮೀ ಉದ್ದ ಮತ್ತು 850 ಕೋಟಿ ವೆಚ್ಚ

2

ಟೆಕ್ನಾಲಜಿ ಆಧಾರಿತವಾದ ಈ ಪೈಲಟ್‌ ಯೋಜನೆಯನ್ನು 13 ಕಿಲೋ ಮೀಟರ್‌ ವಿಸ್ತರಿಸುತ್ತಿದ್ದು, ಇದಕ್ಕೆ 850 ಕೋಟಿ ವೆಚ್ಚತಗುಲಲಿದೆ. ಅಂದಹಾಗೆ ಇದನ್ನು ಗುರಗಾಂವ್ -ದೆಹಲಿಯಿಂದ ಬಾದ್‌ಶಾಪುರ್‌ ಮಾಡ್ ಸೊನ್ಹಾ ರಸ್ತೆವರೆಗೆ ಪಾಡ್‌ ಟ್ಯಾಕ್ಸಿ ವ್ಯವಸ್ಥೆ ಇರಲಿದೆ.

ಮೆಟ್ರಿನೊ

3

ಪಾಡ್‌ ಟ್ಯಾಕ್ಸಿ ಯೋಜನೆಯನ್ನು "ಮೆಟ್ರಿನೊ" ಎಂದು ಕರೆಯಲಾಗಿದೆ. ವೈಯಕ್ತಿಕ ಕ್ಷಿಪ್ರ ಪ್ರಯಾಣವು ಉದ್ದನೆಯ ರೈಲಿನ ಬದಲಾಗಿ ಪಾಡ್‌ಗಳು ಎಂದು ಅನುಮತಿಸಲಾಗಿದೆ. ಈ ಪಾಡ್‌ಗಳು 5 ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯಹೊಂದಿವೆ.

16 ಸ್ಟೇಷನ್‌ಗಳು

4

ಪಾಡ್‌ ಯೋಜನೆಯ ಮಾರ್ಗದಲ್ಲಿ 16 ಸ್ಟೇಷನ್‌ಗಳನ್ನು ಇರಿಸಲು ಯೋಜಿಸಲಾಗಿದೆ. ಟೆಕ್ನಾಲಜಿ ಆಧಾರಿತ ವೈಯಕ್ತಿಕ ಕ್ಷಿಪ್ರ ಪ್ರಯಾಣದ ಜಾಲಬಂಧವು ಸಣ್ಣ ಆಟೋಮೆಟೆಡ್ ವಾಹನವಾಗಿದ್ದು ನಿಕಟ ಅಂತರದಲ್ಲಿ ಚಲಿಸುತ್ತವೆ. ಪ್ರಯಾಣಿಕರು ತಮ್ಮ ಸ್ಥಳ ತಲುಪುವವರೆಗೆ ಬುಕ್‌ ಮಾಡಿಕೊಂಡು ಯಾವ ಸ್ಟೇಷನ್‌ಗಳನ್ನು ಸಹ ನಿಲ್ಲಿಸದ ಹಾಗೆ ಹೋಗಬಹುದು. ಅಲ್ಲದೇ ಪಾಡ್‌ ಟ್ಯಾಕ್ಸಿಗಳ ಕನಿಷ್ಠ ವೇಗ 60 kmph ಆಗಿದೆ.

 ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

5

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ'ದ ಅಧಿಕಾರಿಗಳು "ಈ ಯೋಜನೆಯನ್ನು 1 ವರ್ಷದಲ್ಲಿ ನಿರ್ಮಿಸುವುದಾಗಿ ಹೇಳಿದೆ. ಪಾಡ್ ಟ್ಯಾಕ್ಸಿ ಉತ್ತಮ ಟ್ರಾಫಿಕ್‌ ನಿಯಂತ್ರಿಸಲು ಉತ್ತಮ ವ್ಯವಸ್ಥೆ ಎಂದು ಹೇಳಿದ್ದಾರೆ." ಅಲ್ಲದೇ ಇನ್ನೊಂದು ಆಯ್ಕೆ ಇದ್ದು Skyrail ವ್ಯವಸ್ಥೆಯನ್ನು ಖಾಸಗಿ ಒಡೆತನದವರು ತರಬಹುದು ಎಂದು ಹೇಳಿದ್ದಾರೆ. Skyrail ಕ್ರಿಪ್ರ ಪ್ರಯಾಣವಾಗಿದ್ದು ರೋಪ್‌ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ.

ಹೂಡಿಕೆ ಬಂಡವಾಳ 25 ವರ್ಷಗಳಲ್ಲಿ ಮರಳಿಪಡೆಯುವುದು

6

ಪಾಡ್‌ ಟ್ಯಾಕ್ಸಿ ವೈಯಕ್ತಿಕ ಪ್ರಯಾಣ ಯೋಜನೆಗೆ ಸ್ಥಳವನ್ನು ಹರಿಯಾಣ ಸರ್ಕಾರಿ ಏಜೆನ್ಸಿಯೊಂದಿಗೆ ಲಭ್ಯವಿದೆ. ಈ ಯೋಜನೆಗೆ ಯಾವುದೇ ಅರಣ್ಯ ಮತ್ತು ಪರಿಸರದ ನಾಶವಾಗುವುದಿಲ್ಲ ಎಂದು ಹೇಳಲಾಗಿದೆ. ಅಲ್ಲದೇ ಬಂಡವಾಳ ಹೂಡಿಕೆಯು ಖಾಸಗಿ ಕಂಪನಿಗಳಿಂದ ಬರಲಿದ್ದು, ಒಪ್ಪಂದಗಳ ನಿಯಮದ ಪ್ರಕಾರ ಕಂಪನಿ ಟಿಕೆಟ್‌ ಮೂಲಕ 25 ವರ್ಷಗಳಲ್ಲಿ ಹಣ ಮರುಪಡೆಯಲಿದೆಯಂತೆ.

ಟ್ರಾಫಿಕ್‌ ನಿಯಂತ್ರಣ ಸಾಧ್ಯವೇ?

7

ಪಾಡ್‌ ಟ್ಯಾಕ್ಸಿಗಳ ಆರಂಭದಿಂದ ವೈಯಕ್ತಿಕವಾಗಿ ಕ್ಷಿಪ್ರ ಪ್ರಯಾಣ ಮಾಡವವರು ಕಾರುಗಳಲ್ಲಿ ಸಂಚರಿಸುವ ಬದಲು ಇದರಲ್ಲಿ ವೈಯಕ್ತಿಕವಾಗಿ ಶೀಘ್ರವಾಗಿ ತಮ್ಮ ಸ್ಥಳ ತಲುಪಲು ಪಾಡ್‌ ಟ್ಯಾಕ್ಸಿಗಳನ್ನು ಬಳಸಬಹುದಾಗಿದೆ. ಇಂತಹ ವ್ಯವಸ್ಥೆಯಿಂದ ಅರಣ್ಯ ಮತ್ತು ಪರಿಸರವನ್ನು ರಸ್ತೆಗಳಿಗಾಗಿ ನಾಶ ಮಾಡುವ ಅಗತ್ಯ ಇರುವುದಿಲ್ಲ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಭಾರತೀಯರಿಗಾಗಿ ಬಜೆಟ್ ಬೆಲೆಯ ಜನೋಪಯೋಗಿ ಅನ್ವೇಷಣೆಗಳು

ಮಂಗಳನಲ್ಲಿ ಮಾನವನ ವಾಸ- ಸಾಧ್ಯತೆಗಳು ಅಸಾಧ್ಯತೆಗಳು

ಮನರಂಜನೀಯ ಫೋಟೋಶಾಪ್ಡ್ ಫೋಟೋಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Goodbye Traffic Jams, India's First 'Pod Taxis' To Debut In Gurgaon Soon! Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot