ಇಂದು 20ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಗೂಗಲ್'!..ನಿಮ್ಮ ತಲೆತಿರುಗುವ 10 ಸಂಗತಿಗಳು!!

By Bhaskar N J

    ಇಂಟರ್‌ನೆಟ್ ಬಳಸುವ ವಿಶ್ವದ ಪ್ರತಿಯೋರ್ವ ವ್ಯಕ್ತಿಗೂ ಚಿರಪರಿಚಿತವಾಗಿರುವ ಗೂಗಲ್ ಎಂಬ ಅಂತರ್ಜಾಲ ಮಾರ್ಗದರ್ಶಕನಿಗೆ ಇಲ್ಲಿಗೆ ಕೇವಲ 20 ವರ್ಷಗಳು ತುಂಬಿವೆ ಎಂದರೆ ನೀವು ಆಶ್ಚರ್ಯಪಡಲೇಬೇಕು. ಏಕೆಂದರೆ. ಸೆಪ್ಟೆಂಬರ್ 4 1998 ರಂದು ಜನಿಸಿದ ಗೂಗಲ್‌ ಇಂದು 20 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಈ ಸ್ವಲ್ಪ ಕಾಲದಲ್ಲಿಯೇ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ನೆಲೆಯೂರಿದೆ.

    ಅಂತರ್ಜಾಲ ಜಗತ್ತಿನ ಬಹುದೊಡ್ಡ ಸರ್ಚ್ ಎಂಜಿನ್‌ ಜಗತ್ತಿಗೆ ಪರಿಚಯಗೊಂಡ ಭರ್ತಿ ಇಪ್ಪತ್ತು ವರ್ಷಗಳಲ್ಲಿಯೇ ಗೂಗಲ್‌ ಅನ್ನು ಕೇಳಿ ಜನರು ಮುಂದಿನ ಕೆಲಸ ಮಾಡುವ ಹಂತಕ್ಕೆ ತಂದುನಿಲ್ಲಿಸಿದೆ. ಅಂದು ಕೇವಲ ಮಾಹಿತಿಯ ಕೊಂಡಿಯನ್ನು ತೋರಿಸುವ ಗುರುವಾಗಿ ಹುಟ್ಟಿಕೊಂಡ ಗೂಗಲ್‌ ಇಂದು, ಜನರಿಗೆ ಏನುಬೇಕು ಬೇಡಗಳೆಲ್ಲವನ್ನೂ ಅರಿತುಕೊಂಡಿದೆ. ಏನೇ ಗೊತ್ತಿಲ್ಲದಿದ್ದರೂ ಗೂಗಲ್ ಮಾಡಿ ಎಂಬ ನಾಣ್ಣುಡಿ ಈಗ ಸಾಮಾನ್ಯವಾಗಿದೆ.

    ಇಂದು 20ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಗೂಗಲ್'!..ತಲೆತಿರುಗುವ 10 ಸಂಗತಿಗಳು!!

    ಹಾಗಾಗಿ, ನಾವಿಂದು ಈ ಇಪ್ಪತ್ತು ವರ್ಷಗಳ ಹಾದಿಯಲ್ಲಿ ಗೂಗಲ್‌ ಜಗತ್ತಿನ ಒಂದು ಸಣ್ಣ ಇತಿಹಾಸ ಮತ್ತು ಬೆಳವಣಿಗೆಗೆಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಇಂಟರ್ನೆಟ್ ಎಂಬ ಜಗದ್‌ವ್ಯಾಪಿ ಜಾಲದಲ್ಲಿ ಗೂಗಲ್ ಎಂಬ ಕಂಪೆನಿ ಈ ವರೆಗಿನ ಹಾದಿಯನ್ನು ಹೇಗೆ ಸಾಗಿತು? ಮಾರುಕಟ್ಟೆಯಲ್ಲಿ ಚಕ್ರಾಧಿಪತ್ಯವನ್ನು ಹೇಗೆ ಸಾಧಿಸಿತು? ಗೂಗಲ್ ಭವಿಷ್ಯದಲ್ಲಿ ಏನೆಲ್ಲಾ ಗುರಿಗಳನ್ನು ಹೊಂದಿದೆ ಎಂಬ ಕುತೋಹಲ ಅಂಶಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    ಗೂಗಲ್ ಹುಟ್ಟಿದ್ದು ಹೇಗೆ?

    ಅಮೆರಿಕದ ಪ್ರತಿಷ್ಠಿತ ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್‌ ಹಾಗೂ ಸೆರ್ಗಿ ಬ್ರಿನ್‌ ಅವರು ಗೂಗಲ್ ಎಂಬ ಮಾಯೆಯನ್ನು ಸೆಪ್ಟೆಂಬರ್ 4 1998 ರಂದು ಹುಟ್ಟುಹಾಕಿದರು. ಇಂಟರ್ನೆಟ್ ಜಾಲದಲ್ಲಿನ ಮಾಹಿತಿಯನ್ನು ಸುಲಭವಾಗಿ ವರ್ಗೀಕರಿಸಿಕೊಳ್ಳುವ ಸೌಲಭ್ಯ ನಿರ್ಮಿಸುವ ಹಂಬಲದೊಂದಿಗೆ ಗೂಗಲ್ ಜನ್ಮತಾಳಿತ್ತು. "ಗೂಗಲ್‌' ಎಂದು ಪ್ರಖ್ಯಾತವಾಗುವ ಮುನ್ನ 'ಬ್ಯಾಕ್‌ ರಬ್' ಎಂಬ ವ್ಯವಸ್ಥೆ ಗೂಗಲ್‌ನ ಮೂಲಾಧಾರವಾಗಿತ್ತು.

    ಗೂಗಲ್ ಎಂಬ ಹೆಸರೇಕೆ ಬಂತು?

    ನಿಮಗೆ ಅಕ್ಷಯಪಾತ್ರಯಲ್ಲಿ ಎಂದಿಗೂ ಮುಗಿಯದೇ ಇರುವ ಇಂಕನ್ನು ಕೊಟ್ಟು, ಅಪರಿಮಿತ ಶಕ್ತಿ, ಆಯುಷ್ಯಗಳೆಲ್ಲವನ್ನು ವರವನ್ನು ನೀಡಿ ಸಾಮಾನ್ಯ ಸಂಖ್ಯೆ 1ರ ಮುಂದೆ ಎಷ್ಟು ಸೊನ್ನೆಯಗಳನ್ನು ಬರೆಯುತ್ತಿದ್ದರೆ, ಅಂದರೆ ನಮ್ಮ ಬ್ರಹ್ಮಾಂಡ ಹುಟ್ಟಿ ಸಾಯುವವರೆಗೂ ಬರೆದರೂ ಅದಕ್ಕಿಂತಲೂ ಹೆಚ್ಚು ಪಟ್ಟನ್ನು ಗೂಗಲ್ ಎನ್ನುತ್ತಾರೆ. ಸಿಂಪಲ್ ಆಗಿ `1' ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಯಾವ ಸಂಖ್ಯೆ ಸಿಗುತ್ತದೆ? ಇಷ್ಟು ದೊಡ್ಡ ಸಂಖ್ಯೆಗೆ ಹೆಸರಿದೆಯೆ ಎನ್ನುತ್ತೀರಾ? ಇದೆ. ಅದೇ `ಗೂಗಲ್'!

    ಭವಿಷ್ಯಗಳ ಜನಕ ಗೂಗಲ್!

    ಮಾನವನಿಗೆ ಭವಿಷ್ಯದಲ್ಲಿ ಏನು ಬೇಕು ಎಂದು ಯಾವಾಗಲೂ ಹುಡುಕುವ ಯತ್ನದಲ್ಲಿಯೇ ಗೂಗಲ್ ಗಮನಹರಿಸುತ್ತಿದೆ. ಗೂಗಲ್‌ ಮ್ಯಾಪ್ಸ್, ಗೂಗಲ್ ಕ್ಲೌಡ್, ಗೂಗಲ್ ಡಾಕ್ಟ್, ಜಿಮೇಲ್, ಗೂಗಲ್ ತೇಜ್, ಗೂಗಲ್ ಹೋಸ್ಟ್, ಗೂಗಲ್, ಗೂಗಲ್ ಪ್ಲೇ, ಯೂಟ್ಯೂಬ್, ಗೂಗಲ್ ಡ್ರೈವ್...ಹೀಗೆ ಹತ್ತಾರು ಭವಿಷ್ಯದ ಸೇವೆಗಳನ್ನು ಗೂಗಲ್ ಒದಗಿತ್ತಿದೆ. ಪ್ರಯಾಣಿಸುವ ಸಮಯದಲ್ಲಿ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಇದೆ ಎಂದು ಹೇಳುವಷ್ಟು ಗೂಗಲ್ ಬೆಳೆದುನಿಂತಿದೆ. ನಿಮಗೆ ಬೇಕಾದ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಒದಗಿಸುತ್ತಿದೆ.

    ಗೂಗಲ್ ಶಕ್ತಿಯೇ ಅದರ ಬುದ್ದಿವಂತಿಕೆ.!

    ಇಂದು ನಾವೆಲ್ಲಾ ಕೇಳುತ್ತಿರುವ ಕೃತಕಬುದ್ದಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಪ್ರಪಂಚಕ್ಕೆ ಗೂಗಲ್ ಹತ್ತಾರು ವರ್ಷಗಳ ಹಿಂದೆಯೇ ಕಾಲಿಟ್ಟಿದೆ. ಹುಡುಕಾಟಕ್ಕೆಂದೇ ನಿರ್ಮಿತವಾದ ವಿಶೇಷ ಆಲ್ಗಾರಿದಮ್ ಅನ್ನು ಗೂಗಲ್ ಹೊಂದಿದೆ. ಈ ವಿಶೇಷ ಆಲ್ಗಾರಿದಮ್ ಗೂಗಲ್‌ನ ಮೆದುಳಾಗಿದ್ದು, ಈ ಮಾಹಿತಿಯನ್ನು ಗೂಗಲ್ ಯಾವುದೇ ಕಾರಣಕ್ಕೂ ಇತರರಿಗೆ ಬಿಟ್ಟುಕೊಡುವುದಿಲ್ಲ. ಇದು ಯಕ್ಷಗುಟ್ಟಾಗಿದ್ದು, ಇದೇ ಇದರ ಶಕ್ತಿ. ಇಂತಹ ಕೃತಕ ಬುದ್ಧಿಮತ್ತೆ ಪ್ರೋಗ್ರಾಮ್‌ಗಳೇ ಜನರ ಬೇಡಿಕೆಯನ್ನು ಸರಾಗವಾಗಿ ಪೂರೈಸುತ್ತಿವೆ.

    ಇಂದು ವಿಶ್ವ ದಿಗ್ಗಜ ಗೂಗಲ್!

    ಬ್ರ್ಯಾಂಡ್ ಫೈನಾನ್ಸ್ ಎಂಬ ಫೈನಾನ್ಸ್ ಕನ್ಸಲ್ಟೆನ್ಸಿ ನೀಡಿರುವ ವರದಿ ಪ್ರಕಾರ ಇಂದು ಗೂಗಲ್ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಬೆಲೆಯನ್ನು ಹೊಂದಿರುವ ಮೂರನೇ ಅತಿದೊಡ್ಡ ಕಂಪೆನಿಯಾಗಿದೆ. ಅಂದಾಜೂ $ 120.9 ಬಿಲಿಯನ್‌ಗಿಂತಲೂ ಹೆಚ್ಚು ಒಟ್ಟು ಮೌಲ್ಯವನ್ನು ಗೂಗಲ್ ಒಡೆತನದ ಆಲ್ಫಾಬೀಟ್ ಸಂಸ್ಥೆ ಹೊಂದಿದೆ. ಕೇವಲ 20 ವರ್ಷಗಳಲ್ಲಿಯೇ ವಿಶ್ವದ ಇತರೆ ಕಂಪೆನಿಗಳನ್ನು ಮೀರಿ ಬೆಳೆದ ಗೂಗಲ್ ಭವಿಷ್ಯದಲ್ಲಿ ನಂ.1 ಟೆಕ್ ಕಂಪೆನಿಯಾಗುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಿವೆ ವರದಿಗಳು.

    ಆಗಲೇ ಮಾರಾಟಕ್ಕಿತ್ತು ಗೂಗಲ್!

    ಗೂಗಲ್ ಹುಟ್ಟಿ ಸ್ವಲ್ಪ ಮುನ್ನೆಲೆಗೆ ಬರುತ್ತಿರುವ ಸಮಯದಲ್ಲಿಯೇ ಗೂಗಲ್ ಅನ್ನು ಮಾರಾಟಕ್ಕೆ ಇಡಲಾಗಿತ್ತು. ಆದರೆ, ಗೂಗಲ್ ಬೆಲೆಯನ್ನು ಯಾಹೂ ತಿಳಿಯಲಿಲ್ಲ. 2002ರಲ್ಲಿ ಗೂಗಲ್ ಅನ್ನು ಯಾಹೂ ಖರೀದಿಸಲು ಪ್ರಯತ್ನಿಸಿದಾಗ, ಯಾಹೂ 20ಸಾವಿರ ಕೋಟಿ ರೂಪಾಯಿಗಳ ಪ್ರಸ್ತಾಪನೆ ಇಟ್ಟಿತ್ತು. ಆದರೆ ಗೂಗಲ್ ಕೇವಲ 33ಸಾವಿರ ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿತ್ತು. ನಿಮಗೆ ತಿಳಿದಿರಲಿ. ಒಂದು ಕಾಲದ ದಿಗ್ಗಜ ಯಾಹೂ 2018ರಲ್ಲಿ ಮಾರಾಟವಾಗಿದ್ದು, ಕೇವಲ 20ಸಾವಿರ ಕೋಟಿಗೆ.!

    ಗೂಗಲ್‌ ದಿಗ್ಗಜನಾಗಲು ಕಾರಣವೇನು?

    ಆಗ ಇದ್ದ ಸರ್ಚ್ ಎಂಜಿನ್‌ಗಳು ಕೇವಲ ಪಠ್ಯ ಪುಟಗಳನ್ನಷ್ಟೇ ನೀಡುತ್ತಿದ್ದ ಸಂದರ್ಭದಲ್ಲಿ, ಗೂಗಲ್‌ ಹೆಚ್ಚಿನದನ್ನು ನೀಡಿತು, ನಕಾಶೆಗಳು, ಸುದ್ದಿ ಲೇಖನಗಳು, ಪುಸ್ತಕಗಳಲ್ಲಿನ ಉಲ್ಲೇಖಗಳು, ವಿಡಿಯೋಗಳು, ಪ್ರಬಂಧಗಳು, ಬ್ಲಾಗ್‌ ಬರಹಗಳು, ಆಂಡ್ರಾಯ್ಡ್ ಹೀಗೆ ಹತ್ತಾರು ಸೇವೆಗಳನ್ನು ನೀಡಿತು. ಆಂಡ್ರಾಯ್ಡ್ ಮೂಲಕ ಮಾರುಕಟ್ಟೆ ತಂತ್ರವನ್ನು ಹೆಣೆದು ಪ್ರತಿಯೋರ್ವರ ಕೈಯಲ್ಲೂ ಸೇರಿಕೊಂಡಿತು. ಜಿಮೇಲ್, ಮ್ಯಾಪ್ಸ್, ಯೂಟ್ಯೂಬ್ ಮೂಲಕ ಜನರ ಅವಿಭಾಜ್ಯ ಅಂಗವಾಗಿ, ಅಂತರ್ಜಾಲ ಜಗತ್ತಿನ ದಿಗ್ಗಜನಾಗಿ ಬೆಳೆದುನಿಂತಿತು.

    ಭಾರತದಲ್ಲಿ ಗೂಗಲ್!

    ಭಾರತವು ಅಂತರಾಷ್ಟ್ರೀಯ ಪ್ರಪಂಚಕ್ಕೆ ತೆರೆದುಕೊಂಡ ನಂತರ ಗೂಗಲ್ ಸೇವೆಯನ್ನು ಹೆಚ್ಚಾಗಿಯೇ ಬಳಸಿಕೊಂಡಿದೆ. ಇದಕ್ಕೆ ಪ್ರತಿಫಲವಾಗಿ ಗೂಗಲ್ ಕೂಡ ಸಾವಿರಾರು ಕೊಟಿಗಳಷ್ಟು ಹಣವನ್ನು ದುಡಿದುಕೊಂಡಿದೆ. ಭಾರತದಲ್ಲಿ 2004ರಿಂದ ಕಾರ್ಯನಿರ್ವಹಿಸುತ್ತಿರುವ ಗೂಗಲ್ ಭಾರತ ಸರ್ಕಾರದೊಂದಿಗೆ ಸಾಮರಸ್ಯ ಕಾಪಾಡಿಕೊಂಡು ಬಂದಿದೆ. ಭಾರತದಲ್ಲಿ ಸ್ಥಳೀಯತೆಯನ್ನು ಮುಖ್ಯವಾಹಿನಿಗೆ ತರುವ ಮೂಲಕ ಗೂಗಲ್ ನಮ್ಮವನೇನೋ ಎಂಬಷ್ಟು ನಮಗೆ ಹತ್ತಿರವಾಗಿದೆ.
    ರತವು ಅಂತರಾಷ್ಟ್ರೀಯ ಪ್ರಪಂಚಕ್ಕೆ ತೆರೆದುಕೊಂಡ ನಂತರ ಗೂಗಲ್ ಸೇವೆಯನ್ನು ಹೆಚ್ಚಾಗಿಯೇ ಬಳಸಿಕೊಂಡಿದೆ. ಇದಕ್ಕೆ ಪ್ರತಿಫಲವಾಗಿ ಗೂಗಲ್ ಕೂಡ ಸಾವಿರಾರು ಕೊಟಿಗಳಷ್ಟು ಹಣವನ್ನು ದುಡಿದುಕೊಂಡಿದೆ. ಭಾರತದಲ್ಲಿ 2004ರಿಂದ ಕಾರ್ಯನಿರ್ವಹಿಸುತ್ತಿರುವ ಗೂಗಲ್ ಭಾರತ ಸರ್ಕಾರದೊಂದಿಗೆ ಸಾಮರಸ್ಯ ಕಾಪಾಡಿಕೊಂಡು ಬಂದಿದೆ. ಭಾರತದಲ್ಲಿ ಸ್ಥಳೀಯತೆಯನ್ನು ಮುಖ್ಯವಾಹಿನಿಗೆ ತರುವ ಮೂಲಕ ಗೂಗಲ್ ನಮ್ಮವನೇನೋ ಎಂಬಷ್ಟು ನಮಗೆ ಹತ್ತಿರವಾಗಿದೆ.

    ಗೂಗಲ್ ಮೇಲೆ ಅಪನಂಬಿಕೆ ಸಹ ಇದೆ.!

    ಗೂಗಲ್ ತನ್ನ ಸರ್ಚ್ ಎಂಜಿನ್ ಸೇವೆ ಬಳಸಿದವರ ಅನುಭವವನ್ನು ನೆನಪಿಟ್ಟುಕೊಂಡು ಎಲ್ಲಾ ಮಾಹಿತಿಯನ್ನು ಶೇಖರಿಸಿಟ್ಟುಕೊಂಡಿರುತ್ತದೆ. ಅದರ ಆಧಾರದ ಮೇಲೆ ಪ್ರತೀ ಬಾರಿ ಸುಧಾರಿತ ಫ‌ಲಿತಾಂಶವನ್ನು ಗೂಗಲ್‌ಗೆ ನೀಡಲು ಸಾಧ್ಯವಾಗುತ್ತದೆ ಎನ್ನಲಾಗುತ್ತದೆ. ಆದರೆ, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಗೂಗಲ್ ಅವರ ಒಪ್ಪಿಗೆ ಇಲ್ಲದಿದ್ದರೂ ಪಡೆದುಕೊಳ್ಳುತ್ತದೆ ಮತ್ತು ಗೂಗಲ್ ಜಾಹಿರಾತುಗಳನ್ನು ತೋರಿಸುವಾಗ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ ಎನ್ನುವ ಮಾತುಗಳಿವೆ. ಇವು ಸಾಬೀತಾಗಿವೆ ಕೂಡ.

    ಹಣ ಗಳಿಕೆಯಲ್ಲೂ ಮುಂದು ಗೂಗಲ್!

    ಬಹುತೇಕ ತನ್ನೆಲ್ಲಾ ಸೇವೆ, ಸೌಲಭ್ಯಗಳನ್ನು ಉಚಿತವಾಗಿ ನೀಡುವ ಗೂಗಲ್‌ ಹಣವನ್ನು ಹೇಗೆ ಗಳಿಸುತ್ತದೆ ಎಂದು ಈವರೆಗೂ ಹಲವರಿಗೆ ತಿಳಿದಿಲ್ಲ. ತನ್ನ ಸೇವೆಗಳಲ್ಲಿ ಪ್ರೀಮಿಯಂ ಸೇವೆಗಳನ್ನು ಬಳಕೆ ಮಾಡಲು ಗೂಗಲ್ ಶುಲ್ಕ ವಿಧಿಸುತ್ತದೆ. ಇದು ಸಾಮಾನ್ಯರಿಗೆ ಹೊರೆಯಾಗುವುದಿಲ್ಲ. ಆದರೆ, ಸಾಮಾನ್ಯರಿಗೆ ಜಾಹಿರಾತುಗಳನ್ನು ತೋರಿಸುವ ಮೂಲಕ ಗೂಗಲ್ ಹಣಗಳಿಸುತ್ತದೆ. ಅದು ಕೂಡ ಸಾಮಾನ್ಯರಿಗೆ ಏನು ಬೇಕಾಗಿದೆಯೋ ಅದೇ ಜಾಹಿರಾತನ್ನು ಗೂಗಲ್ ಅವರಿಗೆ ತೋರಿಸುತ್ತದೆ. ಇವೆಲ್ಲವೂ ಸಾಮಾನ್ಯ ವಿಷಯಗಳಲ್ಲ.

    1994ರಲ್ಲಿ ಹುಟ್ಟಿದ್ದು ಯಾಹೂ

    ಆಗಿನ್ನು ಇಂಟರ್‌ನೆಟ್ ಆರಂಭದ ಕಾಲದಲ್ಲಿ ಡೇವಿಡ್ ಫಿಲೋ ಮತ್ತು ಜರ್ರಿ ಯಾಂಗರಿಂದ 1994ರಲ್ಲಿ ಸ್ಥಾಪಿತವಾದ ಯಾಹೂ, ಕೆಲವೇ ವರ್ಷಗಳಲ್ಲಿ ಅಂತರ್ಜಾಲ ಲೋಕದ ಅತ್ಯಂತ ದೈತ್ಯ ಕಂಪೆನಿಯಾಗಿ ಬೆಳೆದಿತ್ತು. ಆಗ ಅಂತರ್ಜಾಲ ಬಳಕೆದಾರರ ಹೋಮ್ಪೇಜ್ ಕೂಡ ಯಾಹೂವಿನದೇ ಆಗಿರುತ್ತಿತ್ತು. ಅಂದರೆ, ಇಂಟರ್‌ನೆಟ್‌ನ ಜಗತ್ತಿನ ಪ್ರವೇಶ ದ್ವಾರ ಯಾಹೂ ಆಗಿತ್ತು.

    ಪ್ರಥಮ ಇ-ಮೇಲ್ ಖಾತೆ?

    90ರ ದಶಕದ ಅಂತ್ಯದಲ್ಲಿ ಮತ್ತು 2000ರ ಪ್ರಾರಂಭದಲ್ಲಿ ಇ-ಮೇಲ್ ಉಪಯೋಗಿಸಲಾರಂಭಿಸಿದ ಬಹು ತೇಕರು ತಮ್ಮ ಪ್ರಥಮ ಇ-ಮೇಲ್ ಖಾತೆ ತೆರೆದಿದ್ದರು. 90 ರ ದಶಕದಲ್ಲಿ ಭಾರತದಲ್ಲಿ ಯಾಹುವಿನ ಬೆಳವಣಿಗೆ ಯಾವಪರಿ ಇತ್ತು ಎಂದರೆ, ಭಾರತದ ಇಂಟರ್‌ನೆಟ್ ಬಳಕೆದಾರರ ಇಂಟರ್‌ನೆಟ್ ಎಂದರೆ ಯಾಹು ಎಂದುಕೊಂಡಿರುತ್ತಿದ್ದನಂತೆ.

    33 ಸಾವಿರ ಕೊಟಿಗೆ ಯಾಹೂ ಮಾರಾಟ!

    2017 ರಲ್ಲಿ ಕೇವಲ 33 ಸಾವಿರ ಕೊಟಿಗೆ ವೇರಿಜೋನ್ ಕೋಟಿಗೆ ಮಾರಾಟವಾದ 'ಯಾಹೂ'ವಿನ ಮಾರುಕಟ್ಟೆ ಬೆಲೆ 2000ನೇ ಇಸವಿಯಲ್ಲಿ ಸರಿಸುಮಾರು 8 ಲಕ್ಷ 30 ಸಾವಿರ ಕೋಟಿ ರೂಪಾಯಿಯಾಗಿತ್ತು! 2002ರಲ್ಲಿ ಗೂಗಲ್ ಅನ್ನು ಖರೀದಿಸಲು ಪ್ರಯತ್ನಿಸಿದಾಗ, ಗೂಗಲ್ ಕೇಳಿದ ಬೆಲೆಗೂ ಮತ್ತು ಯಾಹೂ ಇಂದು ಮಾರಾಟವಾದ ಬೆಲೆಗೂ ವ್ಯತ್ಯಾಸವೇ ಇಲ್ಲ.!

    ಗೂಗಲ್ ಬೆಲೆಯನ್ನು ತಿಳಿಯಲಿಲ್ಲ!

    ಗೂಗಲ್ ಕೇಳಿದ ಬೆಲೆಗೂ ಮತ್ತು ಯಾಹೂ ಇಂದು ಮಾರಾಟವಾದ ಬೆಲೆಗೂ ವ್ಯತ್ಯಾಸವೇ ಇಲ್ಲ ಎಂದು ಹೇಳಿದ್ದು ನಿಮಗೆ ಆಶ್ಚರ್ಯವಾಗಿರಬಹುದು. 2002ರಲ್ಲಿ ಗೂಗಲ್ ಅನ್ನು ಖರೀದಿಸಲು ಪ್ರಯತ್ನಿಸಿದಾಗ, ಯಾಹೂ 20ಸಾವಿರ ಕೋಟಿ ರೂಪಾಯಿಗಳ ಪ್ರಸ್ತಾಪನೆ ಇಟ್ಟಿತ್ತು. ಆದರೆ ಗೂಗಲ್ 33ಸಾವಿರ ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿತ್ತು!

    ಫೇಸ್‌ಬುಕ್ ಖರೀದಿಸದೆ ಮಣ್ಣುಮುಕ್ಕಿತು!

    ದೂರದೃಷ್ಟಿಯ ಕೊರತೆಯಿಂದ ಯಾಹೂ ಗೂಗಲ್ ಅನ್ನು ಖರೀದಿಸಲು ಸಾಧ್ಯವಾಗಿದ್ದು ಸರಿ. ಆದರೆ, 2006ರಲ್ಲಿ ಯಾಹೂಗೆ ಫೇಸ್‌ಬುಕ್ ಅನ್ನು ಖರೀದಿಸುವ ಸುವರ್ಣಾವಕಾಶವಿತ್ತು. ಆದರೆ ಯಾಹೂ ಫೇಸ್‌ಬುಕ್‌ನ ಮೌಲ್ಯವನ್ನು ಗುರುತಿಸುವಲ್ಲಿ ಮತ್ತೆ ಮುಗ್ಗರಿಸಿತ್ತು. ಕೇವಲ ಒಂದು ಬಿಲಿಯನ್‌ ಡಾಲರ್‌ಗಳಿಗೆ ಅಂದು ಫೇಸ್‌ಬುಕ್ ಅನ್ನು ಖರೀದಿಸುವ ಪ್ರಸ್ತಾವನೆ ಇಟ್ಟಿತ್ತು.

    ಮೈಕ್ರೋಸಾಫ್ಟ್ ಆಫರ್ ಸಹ ತಳ್ಳಿಹಾಕಿತು!

    2008ರ ವರೆಗೂ ಇತರೆ ಕಂಪೆನಿಗಳನ್ನು ಖರೀದಿಸುವ ಹಂತದಲ್ಲಿದ್ದ ಯಾಹೂವಿಗೆ 2008ರಲ್ಲಿ ಮೊದಲ ಬಾರಿಗೆ ಮತ್ತೊಂದು ಏಟು ಬಿತ್ತು. 2008 ಐ.ಟಿ. ದಿಗ್ಗಜ ಮೈಕ್ರೋಸಾಫ್ಟ್ ಯಾಹೂವನ್ನು 2.95 ಲಕ್ಷ ಕೋಟಿ ರೂಪಾಯಿಗೆ ಕೊಂಡುಕೊಳ್ಳುವ ಪ್ರಸ್ತಾವ ಇಟ್ಟಿತ್ತು. ಆದರೆ ಯಾಹೂ ಈ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಆದರೆ, 2017ರಲ್ಲಿ 2008ಕಿಂತಲೂ 9ಪಟ್ಟು ಕಡಿಮೆ ಬೆಲೆಗೆ ಮಾರಾಟವಾಯಿತು!

    ಯಾಹೂವಿನ ಪತನ!

    ಫೋರ್ಬ್ಸ್ ಉಲ್ಲೇಖಿಸಿದಂತೆ ಇವತ್ತಿನ ಗೂಗಲ್ನ ಬ್ರ್ಯಾಂಡ್ ವ್ಯಾಲ್ಯು ಯಾಹೂನ ಸುಮಾರು 18 ಪಟ್ಟಿದೆ.! ಸಮಯಕ್ಕನುಗುಣವಾಗಿ ಬದಲಾಗದಿರುವುದೇ ಯಾಹೂವಿನ ಪತನಕ್ಕೆ ಮುಖ್ಯ ಕಾರಣವಾಗಿದೆ. ಇಂಟರ್‌ನೆಟ್ ಜಗತ್ತಿನಲ್ಲಾದ ಬದಲಾವಣೆಯ ವೇಗಕ್ಕೆ ಯಾಹೂ ಹೊಂದಿಕೊಳ್ಳದೆ ನೆಲಕಚ್ಚಿದೆ. ಪುರಾತನ ಶೈಲಿಯ ಕಾರ್ಯನಿರ್ವಹಣೆಗೆ ಇಂದು ಬೆಲೆತೆತ್ತಿದೆ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    English summary
    Today is Google's 20th Birthday. Google's Surprising Plan for Tomorrow. to know more visit to kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more